*

[1]ಏಳನೆಯ ಸಂಧಿ

ಇಂತು ಹರಿ ಬಲರುಗಳು ಬರುತಿರೆ
ಮುಂತೆ ನಡೆದ ವಿಚಿತ್ರವನುವಾ-
ದ್ಯಂತದಿಂದವೆ ಕಂಡುಮಿರ್ವರು ನಗುತ ಮಾತಾಡಿ
ಪಂಥದಪ್ಪುವ ದಟ್ಟಡಿಯನಿ-
ಟ್ಟಂತೆ ಜಾರುವ ಕೇರಿ ಮಂದಿಯ
ಹಂತಿಗಳ ಕಂಡಸುರರಿಪು ನಸುನಗುತ ಬರುತಿರ್ದ                                                      *[2]

…         ….        ….
…         ….        ….
…         ….        ….        ….
ದಾರಿತಪ್ಪುವ ದಟ್ಟಡಿಯ ಜ-
ರ್ಝಾರತೆಯ ತೇಗುಗಳ ತೊಂಡೆಯ
ಮಾರಿಗಳ ಕಂಡಸುರರಿಪು ನಸುನಗುತ ಬರುತಿರ್ದ                                                     ೭

ಕೂರಲಗ ತಿವಿ ಕಿವಿಯ ಮಟ್ಟಿಯ
ಹಾರುವರ ಹೆಬ್ಬುಲಿಯೆ ಹೆಂಡಿರ
ಸೀರೆಗಳನಣಲೊಳಗೆ ತುರುಬಿರದಿರುಳು ಕಬ್ಬುನದ
ಹೂರಿಗೆಯನೆರೆ ಹೊಗಳ ಸುಟ್ಟವು
ನೀರೊಳಗೆ ಕುರಿ ಸೂಲಗಿತ್ತಿಗೆ
ತೋರಣವ ಹಲ್ಲಣಿಸು-ಎಂಬರ ನೋಡಿ ನಗುತಿರ್ದ                                                      ೮

ಮತ್ತೆ ಮುಂದೊಂದೆಡೆಯಲಿಕ್ಕಿದ
ಮುತ್ತಿನೋಲೆಗಳಲುಗೆ ಸೋರ್ಮುಡಿ
ನರ್ತಿಸಲು ಕುಚವೊಂದನೊಂದಿಟ್ಟಣಿಸಿ ಹಾರುತಿರೆ
ಚಿತ್ತಜನ ಪಾಡುತ ವಿಟೌಘದ
ಚಿತ್ತವನು ಕೋಳಿಡಿ[3]ಯುತಿಂದುವಿ-
ನತ್ತ[4] ಧಾಳಿಟ್ಟುಯ್ಯಲಾಡುವ ವಧುಗಳೊಪ್ಪಿದರು                                                        ೯

ಬರುತ ಕಂಡನು ವಿಟರ ಕಂಗಳ
ಸಿರಿಯನನೃತದ ನಿ[5]ರಿಯನಣಕದ[6]
ಸರವಿಯನು ಪರಿಹಾಸ್ಯದೊಟ್ಟಿಲ ಹುರುಡಿನಾಗರವ
ಕರೆಕರೆವ[7] ತಾಯ್ವನೆಯ ಕಪಟದ
ಕರುವ ಕಟಕದ ಪಂಥದರಣಿಯ
ನರಲ ಸೀಮೆಯ ಚದುರಿನಿಕ್ಕೆಯ ಸೂಳೆಗೇರಿಗಳ                                                        ೧೦

*[8][9]ಅರುಹನಾರಡಿಗೊಳುವ …  …   …
ಪರಹಿತ ….  ….  ….  ….  ….
….  ….  …. ವ್ರತದ ಕೆಡಿಸುವ[10] ಮತಿಯ ಮಗ್ಗಿಸುವ
ಗರುವಿಕೆಯನೋಡಿಸುವ ಲಜ್ಜೆಯ
ಹುರುಳುಗೆಡಿಸುವ ಧರ್ಮ ಕರ್ಮವ
ತೊರೆಯಿಸುವ ವೇಶ್ಯಾಸಮೂಹವ ಕಂಡನಸುರಾರಿ                                                      ೧೧

ನಗುವ ನಗಿಸುವ ವಂಚಿಸುವ ಕ-
ಣ್ಣುಗುವ ಸೆಣಸುವ ಮುಳಿವ ಚಿತ್ತವ
ತೆಗೆವ ತಾಗಿಸುವೆಳಸಿ ಕೂಡುವ ನಗಿಸಿ ಕಾಲ್ವಿಡಿವ
ಸೊಗಸಿ ಸೋಂಕುವ ಮೇಳವಿಸಿ ನಂ-
ಬುಗೆಯ[11]ನೀವ ದೊಠಾ[12]ರಿಸುವ ಜೊ-
ತ್ತುಗಳ ವೇಶ್ಯಾವೀಧಿಗಳೊಳಸುರಾರಿ [13]ಬರುತಿರ್ದ[14]                                                            ೧೨

ಅರಗಿಳಿಯನೋದಿಸುವ ಮದನನ
ಬಿರುದ ಪೊಗಳುವ ಕಾಮಶಾಸ್ತ್ರದ
ಪರಿವಿಡಿಯ ಬಿನ್ನಯಿಸಿ ತೋರುವ ಮನ್ಮಥಾಹವದ
ಪರಿಕರವ ಜಾಗಿಸುವ ಕೂರ್ಮೆಯ
ಗುರುಲಘು[15]ವ ಲೆಕ್ಕಿಸುವ[16] ಚಾಳಿಯ
ಮೆರೆವ ವಾರವಧೂಕದಂಬವ ಕಂಡನಸುರಾರಿ                                                            ೧೩

ಕುರುಳ ತಿದ್ದುವ ಜಡಿವ ಕಬರಿಯ
ಭರವ ಸಂತಯಿಸುವ ವಿಲೇಪನ
[17]ಪರೆಯದಂ ಬೋದಿ[18]ಸುವ ಕರ್ಣಾಭರಣ ಮುದ್ರಿಕೆಯ
ಸರಿದಲುಗದಂತಿಡುವ ಪಣೆಯೊಳು
ಬರೆದು ತಿಲಕವ ದರ್ಪಣವನಾ
ದರಿಸಿ ನೋಡುವ ಬಾಲೆಯರನೀಕ್ಷಿಸಿದನಸುರಾರಿ                                                        ೧೪

ಕರರುಹವ ಸಾಗಿಸುವ ಮೇಲುದ
ವರೆದೆರೆದು ಗುರುಕುಚವ ತೋರುವ
ಕೊರಳಹಾರವನಡಿಗಡಿಗೆ ಸರಿದೋವಿ ನಿಟ್ಟಿಸುವ
ಸರಸ ಮಿಗೆ ಕೈಹೊಯ್ದು ನಾಲ್ವರ
ಬರಿಯನಪ್ಪುವ ನುಡಿದು ಚಿತ್ತವ
ಕರಗಿಸುವ ಯುವತಿಯರ ಕಂಡಸುರಾರಿ ನಗುತಿರ್ದ                                                    ೧೫

ಗಾಳಿ ಸುಳಿದಡೆ ಕರೆದು ನಡೆ ನಡೆ
ವೀಳೆಯವ ತಾರೆಂಬ [19]ವಿಗ[20]ಡರು
ಬಾಲರೆನ್ನದೆ ಪೋಪವರ ಕೈವಿಡಿದುಕೊಂಡೊಯ್ದು
ತೋಳ ತಕ್ಕೆಯಲಿರಿಸಿ ನಿಮಿಷಕೆ
ಮೇಳಯಿಸಿ ಹಣಗೊಂಡು ಸಾರುವ
ಖೂಳರೆಂಬಾಕೆಯರ ಕಂಡಸುರಾರಿ ನಗುತಿರ್ದ                                                           ೧೬

[21]ಇವಳ ಮೃದುಮಾತಿನ ನಗೆಯ[22] ಭು
ಲ್ಲವಣೆ ನಡೆ ವರ್ತನೆ ಕುಚೇ[23]ಷ್ಟೆಯ[24]
ತವಕದಾ[25]ಲಿಂಗನ ವಿಕಾರೇಂಗಿತಗಳುದ್ರೇಕ
[26]ತವಿಲರಿ[27]ದ ಚುಂಬನ ಮನೋಜೋ-
ದ್ಭ[28]ವ ಸರಾಗದ ಲಲ್ಲೆಯಿಂದೆ-
ಲ್ಲವರನೊಮ್ಮೆಗೆ ಹುರುಳುಗೆಡಿಸು[29]ವುದೆಂ[30]ದು ಹರಿ ನುಡಿದ                                       ೧೭

ಸೇರದಿವದಿರ ಸಂಗ ಮತ್ಪದ
ವಾರಿರುಹ ಪೂಜಕರಿಗಾಗನು[31]
ಸಾರಸತ್ಪಥರಿಗೆ ಮಹಾವಂಶಾಭಿಜಾತರಿಗೆ
ಸೇರುವುದು ಯಮಶಾಸ್ತಿಗಂಜದ
ಧೀರರಿಗೆ ಲೋಕಾಪವಾದವ
ಸೈರಿಸುವ ಚೂತು[32]ಗಳಿಗೆನುತಸುರಾರಿ ನಗುತಿರ್ದ                                                   ೧೮

ಆ ವಧುಗಳಚ್ಯುತನ ದರುಶನ
ವೀವುದಿಹಪರ ಸೌಖ್ಯವೆಂದು ಮ-
ಹಾ ವಿಳಾಸದಿಯಿದಿರುವಂದೆವೆಯಿಕ್ಕದೀಕ್ಷಿಸುತ
ಭಾವದಲಿ ವಿಕಳಿಸದೆ ತ್ರಿಜಗ
ತ್ಪಾವನನ ಪದಕೆರಗಿ ತಮ್ಮಯ
ಜೀವನಕೆ ಫಲವಾಯ್ತೆನುತ ಬೀಳ್ಕೊಂಡರಚ್ಯುತನ                                                       ೧೯

ಹರಿ ಹಲಾಯುಧರಿಂತು ಮಥುರಾ
ಪುರದ ವೇಶ್ಯಾವೀಥಿಯನು ಕಳಿ
ದರಸುಮಕ್ಕಳ ಮನ್ನೆಯರ ಮಂತ್ರಿಗಳ ಕರಣಿಕರ
ಧರಣಿಯಮರರ ಮಲ್ಲಮಾವಂ
ತರ ಹಯಾರೋಹಕರ ಹರದರ
ಸರಿಯೆ ಶೂದ್ರರ ಕೇರಿಕೇರಿಗಳೊಳಗೆ [33]ಬರುತಿಹರು[34]                                                           ೨೦

ಬಂದು ಹರಿಬಲರಸುರ ನಿಳಯದ
ಮುಂದೆ ನಿಂದಾ ದ್ವಾರಪಾಲರ
ಸಂದಣಿಯನೀಕ್ಷಿಸುತ ನಸುನಗುತುರವಣಿಸಿ ನಡೆಯೆ
ಪಿಂದುಗಳೆದೆದ್ದ ಖಿಳರವದಿರ
ನೊಂದೆರಡು ಗಾಯದಲಿ ಮಗ್ಗಿಸಿ
ಮುಂದೆ ನಡೆದೈದಿದರು ವಿಲಸಿತ ಶಸ್ತ್ರಮಂಟಪವ                                                       ೨೧

ಕಂಡರಿವರೆಣ್ದೆಸೆಯಲೊಪ್ಪುವ
[35]ಕಂಡಳೆಯ[36] ಮಂಟಪದ ಬಿರುದಿನ
ಗೊಂಡೆಯದ ಚವುರಿಗಳ ಗುಡಿಗಳ ಮಕರತೋರಣದ
ತಂಡತಂಡದ ಕದಳಿಗಳ ಹೂ-
ದೊಂ[37]ಡೆಗಳ ಪಳವಳಿಗೆಗಳ ನನೆ-
ಯಿಂಡೆಗಳ ಶೃಂ[38]ಗರದಲೊಪ್ಪಿಹ ಶಸ್ತ್ರಮಂಟಪವ                                                     ೨೨

ತರವಿಡಿದ ದಶಧಾನ್ಯರಾಶಿಯ
ಸುರೆ ರುಧಿರ [39]ಜಲ[40] ಪಾತ್ರೆಗಳ ಭೀ
ಕರದ ರುಂಡಪ್ರತತಿಗಳ ಬೇತಾಳ ಮೂರ್ತಿಗಳ
ಮೊರೆವ ಹೋಮಾಗ್ನಿಗಳ ಸುತ್ತಲು
ಸುರಿದ ಬಲಿಗೂಳುಗಳ [41]ಗಂಟಲ[42]
[43]ರಿದು ಬಿಸುಟಜಕೋಟಿಯಿಂದೊಪ್ಪಿರಲು ಹರಿ ಕಂಡ                                                           ೨೩

ಧರ್ಮ[44]ವಿಹ ಮಂದಿರದೊಳಿಕ್ಕೆಲ[45]
ಪೆರ್ಮೆಯಿಂದವಲೋಕಿಸುತ ಸುರ
ಕಾರ್ಮುಕದ ಸರಿಸದಲಿ ನಿಂದು ಗೃಹಾಂತರಾಳದಲಿ
ಮಾರ್ಮಲೆವ ರಕ್ಕಸರ ಬಗೆಯದೆ
ಕೂರ್ಮೆಯಿಂದೀಕ್ಷಿಸಿದನಾ ದು-
ಷ್ಕರ್ಮಹರನರ್ಚಿಸಿದ ಭೀಕರಬಾಣವಿಷ್ಟರವ                                                               ೨೪

ಕಂಡನಸುರೇಶ್ವರನ ನಚ್ಚಿನ
ಖಂಡೆಯವ ಬಾಣಗಳನು[46]ದ್ಧತ[47]
ಪಿಂಡಿವಾಳವ ಭಲ್ಲೆಯವನಿಟ್ಟಿಯ ಕಠಾರಿಗಳ
ದಂಡ ಶೂಲ ಮುಸುಂಡಿ ಮುದ್ಗರ
ಚಂಡಪರಶು ಗದಾದಿ ಶಸ್ತ್ರದ
ದಂಡಿಗಳನಾ ಮಂದಿರದ ಬಹು ಚಿತ್ರಪುತ್ರಿಕೆಯ                                                          ೨೫

ಬಳಿಕ ಕಂಸಾಸುರನ ಚಾಪದ
ಬಳಿಗೆ ಬಂದಿದು ವಾಸವಾದ್ಯರ
ಗೆಲಿದ ಧನುವೇ ತಪ್ಪದಲ್ಲದೊಡೀ ಸುವಿಸ್ತಾರ
ಉಳಿದ ಶಸ್ತ್ರಕ್ಕಿಲ್ಲೆನುತ ಮು
ಚ್ಚಳವ ನೆರೆ ಪಿಡಿದೆತ್ತಿ ನೆಟ್ಟನೆ
ನಿಲಿಸಿ ಬಾಗಿಸಿ ತಿರುವ ಕೊಪ್ಪಿಗೆ ತೊಡಿಸಿ ಬೊಬ್ಬಿರಿದ                                                  ೨೬

ಮಂಡಳಿಸಿ ತೆಗೆವೈಸರಲಿ ಬಿಲು
ಖಂಡಿಸಿದುದಾ ಧ್ವನಿಗೆ ಕಮಳ ಭ
ವಾಂಡ ಬಿಕ್ಕನೆ ಬಿರಿದುದಿಳೆ ತಲ್ಲಣಿಸಿದಬ್ಧಿಗಳ
ತಂಡವೊಡೆಗಲಸಿದುವು ಕುಲಗಿರಿ
ದಿಂಡುಗೆಡೆದುವು ಜಾತ[48]ವೇದರ[49]
ದಿಂಡುಹೊಗೆ ದೆಸೆಗೆಟ್ಟುದೇನೆಂಬೆನು ಮಹಾದ್ಭುತವ                                                    ೨೭

ಕೇಳಿ ಖಳನೆದೆಗುಂದಿ ಕಂಪಿಸಿ
ಬೀಳುತೇಳುತ ದೆಸೆಗೆ ಬೆಚ್ಚುತ
ಕಾಲುಗೆಡುತವ್ವಳಿಸುತಳಲುತ ಮಂತ್ರಿಗಳ ಕರಸಿ
ಬಾಲ[50]ಕರನೀ ಉ[51]ದಯಸಮಯಕೆ
ಸೀಳಿಹಾಯ್ಕುವುಪಾಯವಾವುದು
ಮೇಲಣೆಣಿಕೆಯದಾವುದೆಂದೆನುತಿರ್ದನಮರಾರಿ                                                          ೨೮

ಬೇಡ ಹಗೆ ಹರಿಯೊಡನೆ ಸಂಧಿಯ
ಮಾಡುವರೆ ಸಮ್ಮತವೆನಲು ಖಳ
ದಾಡೆಗಡಿದುದ್ರೇಕಿಸುತ ಮಂತ್ರಿಗಳನವಗಡಿಸಿ
ಹೇಡಿಗಳು [52]ನೀವ್[53] ನಿಮಗೆ ತಕ್ಕುದ
ನಾಡಿದಿರಿ ತಪ್ಪೇನೆನುತ ಕುಲ
ಗೇಡಿ ಕರಿ ಶಿಕ್ಷಕರ ಕರೆ ಹೋಗೆಂದು ಗರ್ಜಿಸಿದ                                                            ೨೯

ಬಂದರಾಕ್ಷಣ[54] ದೊಳಗೆಯ[55] ಸುರನ
ಮುಂದೆ ಕೈಗಳ ಮುಗಿದು ಬೆಸನೇ
ನೆಂದು ಬಿನ್ನಯಿಸಿದರೆ ನುಡಿದನು ಕಂಸನವದಿರಿಗೆ
ನಂದತನಯರ ನಮ್ಮ ಪಟ್ಟದ
ಸಿಂಧುರದ ಕೈಯಿಂದ ಸೀಳಿಸಿ
ತಂದು ತೋರುವುದೆನಲವರು ನಗುತೆಂದರೊಡೆಯಂಗೆ                                                ೩೦

ಬಣಗು [56]ಗೋವರ[57] ಬಲ್ಲುದೇ ಕರಿ
ಕೆಣಕುವರೆ ಮಿಗೆ ಶಕ್ರ ಸಮವೇ[58]
ಕೆಣಿಕೆಗೊಂಡೇಕಕಟ ಬಲುಗಾಳೆಗವ ಬೆಸಸಿದಿರಿ
ರಣಮುಖದೊ[59]ಳೇನಾದಡೊಂ[60]ದೇ
ಕ್ಷಣಕೆ ಗೆಲುವುದು ಶಿವನ ನೀವಾ
ರಣಕೆ ಮಾರ್ಮಲೆತಾರು ಬದುಕುವರೆಂದರವರಂದು                                                    ೩೧

ಆದಡಿನನುದಯದಲಿ ಕೊಲಿಸುವು-
ದಾ ದುರಾತ್ಮರನೆಂದು ನೇಮಿಸಿ
ಸಾಧಕರು ಮಾವುತರು ಮೊದಲಾದವರ ಬೀಳ್ಕೊಟ್ಟು
ಹೋದನಂತಃಪುರಕೆ ಖಳನೀ
ಮಾಧವ ಹಲಾಯುಧರು ಧನುವಿಹ
ವೇದಿಕೆಯೊಳೊರಗಿದರು ಪರಿಕರ ಸಹಿತ ರಜನಿಯಲಿ                                                 ೩೨

ಇತ್ತ ಖಳನೆಡಗಣ್ ಭುಜಂಗಳು
ಕೆತ್ತತೊಡಗಿದುವವನ ಸತಿಯರ
ಚಿತ್ತದಲಿ ವಿಪರೀತ ಚೇಷ್ಟೆಗಳಾದುವಾ ಪುರದ
ಸುತ್ತುವಳಯದ ತರು ಮುರಿಯಲಿಳೆ-
ಗೊತ್ತಿ ಬೀಸಿತು ಗಾಳಿ ನಾಯ್ಗ[61]ಳು
ಮೊತ್ತಗೊಂಡೂಳಿಡುತಲಿ[62]ರ್ದುವು ಕಂಸನಗರಿಯಲಿ                                                 ೩೩

ಕನಸಿನಲಿ ಕಳವಳಿಸಿ ನಂದನ
ತನಯನೊಡನಿ [63]ದಿರೆ[64]ತ್ತಿ ಕಾದುವ
ದನುಜಪತಿಯ ವಿಕಾರ ಚೇಷ್ಟೆಯ ಕಂಡು ನಸುನಗುತ
ನಿನಗೆ ತಪ್ಪದು ಮರಣವೆನುತಾ-
ತನ ದೊಠಾರಿಸಿ ನುಡಿದು ಹಾಯ್ದನು
ವನಧಿಸುತನಪರಾದ್ರಿ ಶಿಖರಸ್ಥಳದ ಚಾವಡಿಗೆ                                                             ೩೪

ಮಾನಸಾಂತದೊಳಚ್ಯುತಾಂಘ್ರಿ –
ಧ್ಯಾನಪರಿಣತಿನಿ[65]ರ್ದು[66] ಹರಿಬಲ –
ರೇನ ಮಾಡಿದರೆಲ್ಲಿ ಮಲಗಿದರಕಟ ! ಪಸಿದರಲಾ
ದಾನವನ ಭಯ ಬಲುಹು ನಾನಿ –
ದ್ಧೇನು ಫಲ ಮಂದಿರಕೆ ತರಲನು –
ಮಾನ [67]ಪುಟ್ಟಿತ[68]ದೆಂದು ಚಿಂತಿಸುತಿರ್ದನಕ್ರೂರ                                                                ೩೫
ಏಳನೆಯ ಸಂಧಿ ಮುಗಿದುದು


[1] * ಒಂದರಿಂದ ಆರೂವರೆ ಪದ್ಯಗಳು ಮೂಲ ಪ್ರತಿಯಲ್ಲಿ ಹೋಗಿ ಬಿಟ್ಟಿವೆ. ಬೇರೆ ಪ್ರತಿಗಳಲ್ಲಿಯೂ ಇಲ್ಲ.

[2] ಇದು ಕೇವಲ ಮುದ್ರಿತ ಪ್ರತಿಯಲ್ಲಿದೆ.

[3] ೧-೧ ದು ಸಲೆ ನಲಿ ೧ ಯುತ್ತೆ (ಮು)

[4] ೧-೧ ದು ಸಲೆ ನಲಿ ೧ ಯುತ್ತೆ (ಮು)

[5] ೨ ಗಿ (ಮು)

[6] ೩ ರ (ಮು)

[7] ೪ ಯ (ಮು)

[8] * ಈ ಪದ್ಯದ ಪೂರ್ವಾರ್ಧವು ನಮಗೆ ಪೂರ್ತಿಯಾಗಿ ದೊರೆತಿಲ್ಲ. ದೊರೆತ ಮುರುಕು ಚರಣಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

[9] ೫-೫ ಅರುಪಲೇನದನಾರಡಿಯನ | ಬ್ಬರದೆ ಪರೆಪುವಸಹ್ಯ ವ್ರತ್ತಿಯ | ಪರಿಚರಿಯ ಸುವ್ರತವ ಕಿಡಿಸುವ (ಮು)

[10] ೫-೫ ಅರುಪಲೇನದನಾರಡಿಯನ | ಬ್ಬರದೆ ಪರೆಪುವಸಹ್ಯ ವ್ರತ್ತಿಯ | ಪರಿಚರಿಯ ಸುವ್ರತವ ಕಿಡಿಸುವ (ಮು)

[11] ೬-೬ ನೆವದೊಳು ವಾ

[12] ೬-೬ ನೆವದೊಳು ವಾ

[13] ೭-೭ ನಡೆತಂದ (ಮು)

[14] ೭-೭ ನಡೆತಂದ (ಮು)

[15] ೧-೧ ತ್ವವ ಗಣಿಪ (ಮು)

[16] ೧-೧ ತ್ವವ ಗಣಿಪ (ಮು)

[17] ೨-೨ ವರೆವದಂ ಸೋದಿ (ಮು)

[18] ೨-೨ ವರೆವದಂ ಸೋದಿ (ಮು)

[19] ೩-೩ ಬರ (ಮು)

[20] ೩-೩ ಬರ (ಮು)

[21] ೧-೧ ಇವರು ಮೃದುನುಡಿ ಮುಗುಳು ನಗೆ (ಮು)

[22] ೧-೧ ಇವರು ಮೃದುನುಡಿ ಮುಗುಳು ನಗೆ (ಮು)

[23] ೨-೨ ಸ್ಟಿತ (ಮು)

[24] ೨-೨ ಸ್ಟಿತ (ಮು)

[25] ೩ ನಾ (ಮು)

[26] ೪-೪ ಕವಲಿಡಿ (ಮು)

[27] ೪-೪ ಕವಲಿಡಿ (ಮು)

[28] ೫ ತ್ಸ (ಮು)

[29] ೬-೬ ವರೆಂ (ಮು)

[30] ೬-೬ ವರೆಂ (ಮು)

[31] ೭ ದು (ಮು)

[32] ೮ ಕ (ಮು)

[33] ೯-೯ ತಿರುಗಿದರು (ಮು)

[34] ೯-೯ ತಿರುಗಿದರು (ಮು)

[35] ೧-೧ ಖಂಡೆಯವ (ಮು)

[36] ೧-೧ ಖಂಡೆಯವ (ಮು)

[37] ೨ ದ(ಮು)

[38] ೩ ಸಿ (ಮು)

[39] ೪-೪ ಗಳ (ಮು)

[40] ೪-೪ ಗಳ (ಮು)

[41] ೫-೫ ಮಂಟಪ (ಮು)

[42] ೫-೫ ಮಂಟಪ (ಮು)

[43] ೬ ವ (ಮು)

[44] ೭-೭ ಮಂದಿರದಿಕ್ಕೆಲುಗಳ (ಮು)

[45] ೭-೭ ಮಂದಿರದಿಕ್ಕೆಲುಗಳ (ಮು)

[46] ೧-೧ ದ್ದದ (ಮು)

[47] ೧-೧ ದ್ದದ (ಮು)

[48] ೨-೨ ದೇವರ (ಮು)

[49] ೨-೨ ದೇವರ (ಮು)

[50] ೩-೩ ರಿವದಿರನು (ಮು)

[51] ೩-೩ ರಿವದಿರನು (ಮು)

[52] ೧-೧ ನೀಂ (ಮು)

[53] ೧-೧ ನೀಂ (ಮು)

[54] ೨-೨ ಕಾಗಳ (ಮು)

[55] ೨-೨ ಕಾಗಳ (ಮು)

[56] ೩-೩ ಗುವರರ (ಮು)

[57] ೩-೩ ಗುವರರ (ಮು)

[58] ೪ನೇ (ಮು)

[59] ೫-೫ ಳಿದಿರಾದರೊಂ (ಮು)

[60] ೫-೫ ಳಿದಿರಾದರೊಂ (ಮು)

[61] ೧-೧ ಳ| ಮೊತ್ತ ಗೋಳ್ಗೊಂಡಳುತುಮಿ (ಮು)

[62] ೧-೧ ಳ| ಮೊತ್ತ ಗೋಳ್ಗೊಂಡಳುತುಮಿ (ಮು)

[63] ೨-೨ ದರ (ಮು)

[64] ೨-೨ ದರ (ಮು)

[65] ೩-೩ ನೆದ್ದು (ಮು)

[66] ೩-೩ ನೆದ್ದು (ಮು)

[67] ೪-೪ ಘಟಿಸುವು (ಮು)

[68] ೪-೪ ಘಟಿಸುವು (ಮು)