ಸೂಚನೆ : ಕಾಳೆಗಕೆ ಬಂದಸುರನಾನೆಯ
ಸೀಳಿ ಮಲ್ಲರ ಮುರಿದು ಬಲ ವನ
ಮಾಲಿಗಳು ಕಂಸಾಸುರನ ಕಳುಹಿದರು ಯಮಪುರಿಗೆ |

ಪದನು :
ಬಿಲ್ಲುಡಿದ ವೃತ್ತಾಂತ ಪುರದೊಳ
ಗೆಲ್ಲ ಹರೆದುದು

[1] ಕಂಡು ಚಂದ್ರಿಕೆ
ನಿಲ್ಲದೋಡಿತು ದಾನವನ [2]ಸಿರಿ[3] ಮಸುಳುವಂದದಲಿ
ಇಲ್ಲಿಹುದು ಮತವಲ್ಲೆನುತ ನಿಶಿ
ತಲ್ಲಣಿಸಿತಸತಿಯರು ಬಳಿಕುಪ
ವಲ್ಲಭರ ಬಿಟ್ಟೋ[4]ಡಿದರು ತಮ್[5]ತಮ್ಮ ಮಂದಿರಕೆ                                                    ೧

ಜಡಿವ ಬಿಡುಮುಡಿ ಪರೆದಳಕ ಕೆಂ-
ಪಡರಿದಂಬಕ ನೊಂದಧರ ದಡ
ದಡಿಸುವಂಘ್ರಿ ಜಗುಳ್ದ[6] ಕುಚಯುಗ ನಡುಗುವಂಗಲತೆ
ಕಡುಹಳಿದ ಮನ [7]ಸುಯ್ವ ಬಾಯ್ಪುಡಿ
ಯಿಡುವ ತಂಬುಲದಾ ಗುಟಿ[8]ಕೆ ನೇರ್
ಪಡದ ತನುರುಹವೆಸೆಯಲೋಡಿತು [9]ಅಸತಿಯರ[10] ನಿವಹ                                         ೨

ಏಳಿ ಬೆಳಗಾಯ್ತೆಂದು ಬಲ ವನ
ಮಾಲಿಗಳನೆಬ್ಬಿಸುವೋಲ್ ಖಳ
ರೂ[11]ಳಿಗಕೆ ಕಡೆಯಾದುದಿಂದಿನಲೆಂದು ಯದುಕುಲಕೆ
ಹೇಳುವಂತೆ ಕವೀಂದ್ರರೋದುವ
ಕೇಳುವೆಯನೋದಿಸುವ ತೆರದಲಿ
ಕೋಳಿಗಳು ಕೂಗಿದುವು ರವಿಯುದಯಿಸುವ ಸಮಯದಲಿ                                            ೩

ನೈದಿಲುರೆ ಸಿಗ್ಗಾಗಿ ದುಗುಡವ
ನೈದಿದುವು ಭಂಗಂಗಳಿಂದುವ
ನೈದಿದುವು ಮರಿದುಂಬಿಯೈದಿದುವಂಬುಜಾತದಲಿ
[12]ಐದಿಯಸುರರ್[13] ನದಿತಟಾಕ[14]ಕೆ
ಯೈ[15]ದಿದರು ದುರ್ಬುದ್ಧಿಯಸುರನ
ನೈ[16]ದಲಾ[17] ಸರಸಿರುಹಸಖನುದಯಿಸುವ ಸಮಯದಲಿ                                            ೪

ವಿರಹದಲಿ ಬಳಲಿದ ರಥಾಂಗದ
ನೆರವಿಗಭಯವ ಕೊಟ್ಟು[18] ಕಂಸನ
ತರುಣಿಯರಿಗತ್ಯಂತ ಚಿಂತಾನಲನ ಹೆಚ್ಚಿಸುತ
ಹರಿಪದಕೆ ಪುಷ್ಪಾಂಜಲಿಯನಾ
ದರಿಸಿ ನೀಡುತ ಚಂದ್ರಕಾಂತವ
ಕೊರಗಿಸುತ ರವಿ ಬಂದನಿಂದ್ರ ದಿಶಾಗ್ರ[19] ಶಿಖರದಲಿ                                                  ೫

ತರಣಿಯುದಯದಲೆದ್ದು ಶೌರಿಯ
ಚರಣವನು [20]ಸಂಸ್ಮ[21]ರಿಸಿ ನಾ[22]ಮೋ[23]
ಚ್ಚ [24]ರಣೆಗಳನಾದರಿಸಿ ಸಂಧ್ಯಾವಿಹಿತ ಕೃತ್ಯದಲಿ
ಕರಣಶುದ್ಧಿಯನೈದಿ ಧರಣೀ
ಸುರರ ಮನ್ನಿಸಿ ಸಚಿವ ಜನಸಹಿ
ತಿರದೆ ಬಳಿಕಕ್ರೂರ ಬಂದನು ಕಂಸನರಮನೆಗೆ                                                           ೬

ಇರುಳು ನಿದ್ರೆಯ ತೊರೆದು ಬಿಂಬಾ
ಧರೆಯರಿಚ್ಛೆಯನುಳಿದು ಚಿಂತಾ
ತರುಣಿಯೊಡ[25]ನಸಮಾನ[26] ರಾಗದೊಳಿದ್ದು ಮೂರ್ಛೆಯಲಿ
ಕರುಣರಸವ[27]ಳಿದಳಲುತುರೆ ಸೀ
ವರಿಸುತುಪ್ಪ ವಡಿಸಿದನಾ ಹಲ
ಧರ ಮುಕುಂದರ ಕೊಲುವುಪಾಯವನೆಣಿಸುತಮರಾರಿ                                                 ೭

ಜಾಳೆಲೆಯ ಧೈರ್ಯದಲಿ ಸರ್ಪನ
ಹೇಳಿಗೆಯ ಶಾಂತಿಯಲಿ ಠಕ್ಕಿನ
ಕೌಳಿ[28]ಕದ[29] ರೀತಿಯಲಿ ಸದ್ಗುರು ಮುಖವನರಿಯದಿಹ
ಬೀ[30]ಳುವೆಯ [31]ಬುದ್ಧಿ[32]ಯಲಿ ಬೀದಿಯ
ಸೂಳೆಯರ ಮು[33]ರುಕದಲಿ ಖಳ ತ
ನ್ನೋಲಗಕೆ ನಡೆತಂದು ಮಂತ್ರಿಪ್ರತತಿಗಿಂತೆಂದ                                                         ೮

ನಿನ್ನಿರುಳು ನಾ ನುಡಿದ ಕಾರ್ಯವ
ಮನ್ನಿಸದೆ ಮರುಳಾಡಿ ಕೃಷ್ಣನೊ
ಳೆನ್ನ ಸಂಧಿಯ ಮಾಡೆ ಹೇಳಿದಿರಿನ್ನು ಹೇಳಿದೊಡೆ
ಮನ್ನಿಸುವ ಕಾಳೆಗದ[34]ಗಡುತನ[35]
ವಿನ್ನು ಕೊಳ್ಳದುಪಾಯವೆಂ[36]ಬಿರೊ[37]
ಗನ್ನ[38]ಕಾರರು ನೀವೆನುತ ಬಿಸುಸುಯ್ದನಮರಾರಿ                                                       ೯

ಚಿತ್ತಯಿಸು ದನುಜೇಂದ್ರ ನಿನ್ನಯ
ಚಿತ್ತದಲಿ ಖತಿ ಮೊಳೆತೊಡಿಂದೇ
ಸತ್ತವರು ನಾ[39]ವ್ ನೀಂ ನಿರೂಪಿಸಿದಂತೆ ಮಾಳ್ಪೆವೆನೆ
ಮತ್ತೆಯದಕತಿ ಮೆಚ್ಚಿ ನಿಮ್ಮವೊ
ಲುತ್ತಮೋತ್ತಮ ಸಚಿವರಾರೆನ
ಲಿತ್ತ ಕೈಮುಗಿದೆದ್ದು ಪತಿಗಕ್ರೂರನಿಂತೆಂದ                                                                 ೧೦

ಹಿಂದೆ ಗೋಕುಲದೊಳಗೆ ರಾಕ್ಷಸ
ವೃಂದವನು ನೆರೆ ಕೊಂ[40]ದು ಬಳಿಕೈ
ತಂ[41]ದು ರಜಕನ ಸೀಳಿದರು ನೆಗ್ಗಿದರು ಕಾರ್ಮುಕವ
ಇಂದು ಹರಿಬಲ್ಲರಿಲ್ಲಿಗೀಗಲೆ
ಬಂದರಲ್ಲದೆ ಮಾಣರಿದಕೇ
ನೊಂ೧೦[42]ದುಪಾಯವ ಬೆಸಸಿ ನೀಂ ತೆರಳೆಂದನಕ್ರೂರ                                                            ೧೧

ತಪ್ಪಿ ನುಡಿವವನಲ್ಲ ಮುರಹರ
ಬಪ್ಪುದಾದೊಡೆ [43]ನಮ್ಮ[44] ದೈತ್ಯರ
ದರ್ಪಕೊಳ್ಳದು ಬಗೆಯನಚ್ಯುತನಾನೆಗೀನೆಗಳ
ಅಪ್ಪು ಪಾಯವ ಬೆಸಸಿ ನೀಂ ತೆರ
ಳುಪ್ಪರಿಗೆಗೆನೆ ಕೇಳಿ ಯದುಕುಲ
ದರ್ಪಣನ ನುಡಿ ತಪ್ಪದೆಂ[45]ತಿಂತೆಂದನಾ ಕಂಸ                                                        ೧೨

ಬೀ[46]ರ ಜಗಜಟ್ಟಿಗಳನಾ ಚಾ
ಣೂರ ಮುಖ್ಯರ ಕರೆಸಿ ಬಹು ವಿ
ಸ್ತಾರವೆನಿಸಿದ ಮಲ್ಲರಂಗದಲಿರಿಸಿ ರಾಕ್ಷಸರ
ಸೇರುವೆಯ ಚತುರಂಗ ಸೇನೆಯೊ
ಳೋರಣದೊಳೊಡ್ಡಿಕ್ಕಿ ಪಟ್ಟದ
ವಾರಣದ ಕೈಯಿಂದ ಕೊಲಿಸುವುದೆನ್ನ ಮತವೆಂದ                                                      ೧೩

ಎಂದು ಖಳನಲ್ಲಿರದೆ[47]ಬಳಿಕರ
ವಿಂದ[48]ಗಳನಂಡಲೆವ ಸೌಧಕೆ
ಬಂದು ಮೇಲಣ ನೆಲೆಯೊಳಸ್ತಿ-ಪ್ರಾಸ್ತಿಯರು ಸಹಿತ
ನಿಂದು ಡಿಳ್ಳಿಸಿ ತಟತಟಿಸಿ ಮನ
ನೊಂದು ಸುಯ್ಯುತ ರಾಜವಿಭವಕೆ
ಕುಂದು ಹೊರದಂದದಲಿ [49]ಚಿಂತಿ[50]ಸುತಿದ್ದನಾ ಕಂಸ                                                            ೧೪

ಇತ್ತ ಮಂತ್ರಿಗಳವ ನಿರೂ[51]ಪಿಸೆ[52]
ಚಿತ್ತವಿಸಿದಂದದಲಿ ಮಲ್ಲರ
ಮೊತ್ತವನು ಕರೆದೊಳವುಗಿಸಿ ಮೇಳೆಯದ ಮಂಟಪದ
ಸುತ್ತುವಳಯದೊಳದಟದೈತ್ಯರ
ಮೊತ್ತವಿಕ್ಕಿ ಬಳಿಕ್ಕೆ ಕಂಸನ
ಮತ್ತದಂತಿಯ ತರಿಸಿ ನಿಲಿಸಿದರಖಿಳ ಬಲಸಹಿತ                                                        ೧೫

ನೀಲಗಿರಿಯೋ ತಿಮಿರರಾಜನ
[53]ಜಾಲವೋ[54] ಮೂಜಗವ ನುಂಗುವ
ಶೂಲಿಯೊಡನಿದಿರೆತ್ತಿನಿಂದ ಮಹಾಗಜಾಸುರನೋ
ಕಾಲಕೂಟದ ಕಡಲೊ ವಿಳಯದ
ಗಾಳಿಯೋ ಪೇಳೆನಲು ಖಳ ಕಂ
ಸಾಲಯದ ಬಾಗಿಲಲಿ ನಿಂದುದು ಕುವಲಯಾಪೀಡ                                                     ೧೬

ನಂದತನಯರನಸುರ ಪತಿ ಕೊಲು
ವಂದವನು ನೋಡುವೆನೆನುತ ಬಳಿ
ಸಂದು ನೆರೆದುದು ಪೌರಜನ ಕೌತುಕದ [55]ಕಾಂತಿಯಲಿ
ಇಂದುಮುಖಿಯರು ರಾಜಸುತರೈ
ತಂದು ನಿಂದರು ಭದ್ರದಲಿ ಬಳಿ
ಕಂದು ದೇವಕಿ ತನ್ನ ಪತಿಸಹಿತಿರ್ದಳವರೊಡನೆ                                                          ೧೭

ಇತ್ತಲಖಿಳಚರಾಚರಂಗಳ
ಹೆತ್ತ ತಂದೆಯ ತಂದೆ ಮಾಯಾ
ನರ್ತಕಿಯನಾಡಿಸುವನಜ[56]ನಾಮ್ನಾಯಕೋಟಿಗಳ
ನೆತ್ತಿಯಲಿ ಪದವಿಡುತಖಿಳ ದೇ
ವೋತ್ತಮೋತ್ತಮ ಶೌರಿ ಗೋಪರ
ಮೊತ್ತಸಹಿತುಪ್ಪವಡಿಸಿದನಾ ಶಸ್ತ್ರಶಾಲೆಯಲಿ                                                            ೧೮

ಹರಿಹಲಾಯುಧರೆದ್ದು ಯಮುನಾ
ಪರಿಸರಕೆ ನಡೆತಂದು ಚರಣಾಂ
ಬುರುಹವದನ[57]ವ ತೊಳೆದು ಸಂಧ್ಯಾವಂದನಾದಿಗಳ[58]
[59]ವಿರಚಿಸುವ ಕಾಲೋಚಿತವನನು
ಕರಿಸಿ ಪರಿಜನವನ್ನು ವಿವಿಧಾ
ದರಣೆಯಲಿ ಮನ್ನಿಸಿದರಧಿಕ ವಿನೋದವಿಭವದಲಿ[60]                                                    ೧೯

ಆರಿ ಬೊಬ್ಬಿಟ್ಟ[61]ಧಟ ಗೋವರ
ಭೂರಿರವವಚ್ಯುತನ ಕೊಳಲ ಮ-
ಹಾರ[62]ವವು[63] ಹಲಧರನ ಬಾಹಾಸ್ಪಾಲನಧ್ವಾನ
ದಾರಿಯಲಿ ಗರ್ಜಿಸುತುಲಿವ ಕೈ
ವಾರಿಗಳ ನಿರ್ಘೋಷ ಮಧುರೆಯ
ಕೇರಿಕೇರಿಯೊಳೆಸೆದುದಮರ ವಿರೋಧಿಯಳವಳಿಯೆ                                                   ೨೦

ಬಂದು ಹರಿಬಲರಮರರಿಪುವಿನ
ಮಂದಿರದ ಬಾಗಿಲಲಿ ನಿಂದ[64]
ದಾಂಧಗಜದ ಮಹೋಗ್ರಮೂರ್ತಿಯ ಕಂಡು ಬೆರಗಾಗಿ
[65]ವಿಂಧ್ಯ[66]ಗಿರಿಯೋ ಮೇಣಿದಸುರನ
ಸಿಂಧುರವೊ ಮಝ ಭಾಪುವೆ[67]ನುತೊಲ
ವಿಂದ ಮಕುಟವನೊಲಿದೊಳಿದು ಕೊಂಡಾಡಿದರು ನಗುತ                                             ೨೧

ದಾಡೆಯಲಿ ಜವನೆದೆಯನಿಬ್ಬಗೆ
ಮಾಡಿ ಸೀಳುವ ಸುರಗಿರಿಯ ಮುಂ
ಡಾಡಿ ಕೆಡಹುವ ರವಿರಥವ ಸುಂಡಿಲಲಿ ಬರಸೆಳೆವ
ನೋಡಿತವಕಿಸುವಾನೆಕಾರರ
ಹೇಡಿಗೊಳಿಸುವ ನೆಳಲ ರಿಪುವೆಂ
ದೀಡಿರಿವ ಕೋಪದಲಿ ಗಜವಿರೆ ಕಂಡನಸುರಾರಿ                                                          ೨೨

ಥಳಥಳಿಪ ದಾಡೆಗಳ ರುಚಿಯಿಂ
ದೆಳವಿಸಿಲ[68] ಮಸುಳಿಸೆ[69] ಕಪೋಲದ
ಲಿಳಿವ ಮದಧಾರೆಯಲಿ ಕೆಸರಾಯ್ತಸುರಪುರವೈದೆ
[70]ಕೆಳರಿಸುವ ದೃಷ್ಟಿಗಳ ಢಾಳಕೆ
ಹೊಳೆವ ನದಿಗಳು ಸರಿಯೆ ಸಿಂಧುರ
ಕಳವು[71] ಪಡಿಯಿಲ್ಲೆಂದು ಕೊಂಡಾಡಿದನು ಹರಿ ನಗುತ                                                            ೨೩

ಘೀಳಿಡುವ ಧ್ವನಿ[72]ಗಳಿಗೊ[73]ಡೆದುವೀ-
ರೇಳು ಜಗವಾ ಕರ್ಣತಾಳದ
ಗಾಳಿಯಲಿ ಹಾರಿದುವು ಪುಷ್ಪಕವಾ[74] ಸುರವ್ರಜದ
ಮೇಲುಲಿವ [75]ಘಂಟಾಧ್ವನಿ[76]ಗೆ ದಿಕ್-
ಪಾಲಕರ ಕಿವಿಗೆಟ್ಟುವಿದ [77]ರ ವಿ[78]
ಕಾ[79]ಳತೆಯ ಕಂಡಾರು ಬದುಕುವರೆಂದು ಹರಿ ನುಡಿದ                                                           ೨೪

ದಾನಗುಣ ನೆಲಸಿರ್ದೊಡಂ ಖಳ
ನಾನೆಯಿದು ಕಡು ಮೂರ್ಖನಿದರಭಿ
ಮಾನಿಯಧಟ ನಿಶಾಟನೆಂದೆನಿಸಿಯು ಮಹಾ[80]ಮತ್ಯ೯
ದಾನವರ ಲೆಕ್ಕಿಸದ ಕರಿ ಹುಲು
ಮಾನಿಸರ ಹೊಗಲೀಯದಿದಕಿ-
ನ್ನೇನು ಹದನೆಂದಸುರರಿಪು ಹಲಧರನ ಬೆಸಗೊಂಡ                                                    ೨೫


[1] ೧ ದ (ಆ)

[2] ೨-೨ ಜಯ (ಆ)

[3] ೨-೨ ಜಯ (ಆ),

[4] ೩-೩ ಡುತಿರ್ದರು (ಮು)

[5] ೩-೩ ಡುತಿರ್ದರು (ಮು)

[6] ೪ ಳ್ವ (ಆ)

[7] ೫-೫ ಸುಯ್ಯುವಾ ಬಾಯ್ | ಪುಡಿಯಿಡುವ ತಂಬುಲದ ಗುಟ (ಅ), ಸುಯ್ವ ಬಾಯ್ಪುಡಿ |ಯಿಡುವ ತಂಬುಲವಾ ಗುಳಿ (ಮು)

[8] ೫-೫ ಸುಯ್ಯುವಾ ಬಾಯ್ | ಪುಡಿಯಿಡುವ ತಂಬುಲದ ಗುಟ (ಅ), ಸುಯ್ವ ಬಾಯ್ಪುಡಿ |ಯಿಡುವ ತಂಬುಲವಾ ಗುಳಿ (ಮು)

[9] ೬-೬ ಬಂಧಕೀ (ಆ)

[10] ೬-೬ ಬಂಧಕೀ (ಆ)

[11] ೭ ನೂ (ಅ)

[12] ೧-೧ ವೈದಿಕರು ಪೆರ್ (ಆ), ಭೂ ದಿವಿಜರಾ (ಮು)

[13] ೧-೧ ವೈದಿಕರು ಪೆರ್ (ಆ), ಭೂ ದಿವಿಜರಾ (ಮು)

[14] ೨-೨ ವ ನೈ (ಆ-ಮು)

[15] ೨-೨ ವ ನೈ (ಆ-ಮು)

[16] ೩-೩ ದಿನವು (ಆ-ಮು)

[17] ೩-೩ ದಿನವು (ಆ-ಮು)

[18] ೪ ಡುತ (ಆ-ಮು)

[19] ೫ ದ್ರಿ (ಆ-ಮು)

[20] ೬-೬ ಸತ್ಕ (ಆ)

[21] ೬-೬ ಸತ್ಕ (ಆ)

[22] ೭-೭ ಮ ಸ್ಮ (ಆ)

[23] ೭-೭ ಮ ಸ್ಮ (ಆ)

[24] ೭-೭ ಮ ಸ್ಮ (ಆ)

[25] ೮-೮ ನೆ ಮನೋನು (ಮು)

[26] ೮-೮ ನೆ ಮನೋನು (ಮು)

[27] ೯ ವು (ಮು)

[28] ೧-೧ ಯರ (ಅ-ಮು)

[29] ೧-೧ ಯರ (ಅ-ಮು)

[30] ೨ ಬೇ (ಆ-ಮು)

[31] ೩-೩ ಬೂದಿ (ಆ)

[32] ೩-೩ ಬೂದಿ (ಆ)

[33] ೪ ಮ (ಮು)

[34] ೫-೫ ಗಟ್ಟತ (ಆ)

[35] ೫-೫ ಗಟ್ಟತ (ಆ)

[36] ೬-೬ ಬೀ (ಆ-ಮು)

[37] ೬-೬ ಬೀ (ಆ-ಮು)

[38] ೭ ನ್ಯ (ಮು)

[39] ೮ ತಾ (ಆ)

[40] ೯-೯ ದರಿಲ್ಲಿಗೆ | ಬಂ (ಮು)

[41] ೯-೯ ದರಿಲ್ಲಿಗೆ | ಬಂ (ಮು)

[42] ೧೦ ನೆ (ಆ)

[43] ೧-೧ ಸತ್ಯ (ಆ-ಮು)

[44] ೧-೧ ಸತ್ಯ (ಆ-ಮು)

[45] ೨ ದೆನು (ಆ-ಮು)

[46] ೩ ವೀ(ಆ)

[47] ೪-೪ ಬೆಳ್ಗದಿ | ರಿಂದು (ಮು)

[48] ೪-೪ ಬೆಳ್ಗದಿ | ರಿಂದು (ಮು)

[49] ೫-೫ ಗರ್ಜಿ (ಆ)

[50] ೫-೫ ಗರ್ಜಿ (ಆ)

[51] ೬-೬ ಪವ (ಆ)

[52] ೬-೬ ಪವ (ಆ)

[53] ೧-೧ ಬಾಲನೋ (ಆ)

[54] ೧-೧ ಬಾಲನೋ (ಆ)

[55] ೨ ಹ (ಮು)

[56] ೩ ಟ (ಆ-ಮು)

[57] ೪-೪ ಕ್ಷಾಲನವನತಿ ಶೀಘ್ರದಲಿ ಮಾಡಿ (ಆ), ತೊಳೆದು ಸಂಧ್ಯಾವಂ

ದನೆಯ ಮಾಡಿ (ಮು)

 

[58] ೪-೪ ಕ್ಷಾಲನವನತಿ ಶೀಘ್ರದಲಿ ಮಾಡಿ (ಆ), ತೊಳೆದು ಸಂಧ್ಯಾವಂ

ದನೆಯ ಮಾಡಿ (ಮು)

[59] ೫-೫ ಪರಿಜನವ ಕರೆ ಕರೆದು ವಿವಿಧಾ | ದರಣೆಯಲಿ ಮನ್ನಿಸುತ ಸೂರ್ಯ | ಸ್ವರದ ಸನ್ನಾಹದಲಿ ಬಂದರು ಮರಳಿ ಪಟ್ಟಣಕೆ || (ಆ), ಪರಿಜನವ ಕರೆ ಕರೆದು ವಿವಿಧಾ | ದರಣೆಯಲಿ ಮನ್ನಿಸುತ ಸೂರ್ಯ | ಸ್ವರ ಮುರ್ಹೂವ ಕಂಡು ಬಂದರು ಮರಳಿ ಪಟ್ಟಣಕೆ (ಮು)

[60] ೫-೫ ಪರಿಜನವ ಕರೆ ಕರೆದು ವಿವಿಧಾ | ದರಣೆಯಲಿ ಮನ್ನಿಸುತ ಸೂರ್ಯ | ಸ್ವರದ ಸನ್ನಾಹದಲಿ ಬಂದರು ಮರಳಿ ಪಟ್ಟಣಕೆ || (ಆ), ಪರಿಜನವ ಕರೆ ಕರೆದು ವಿವಿಧಾ | ದರಣೆಯಲಿ ಮನ್ನಿಸುತ ಸೂರ್ಯ | ಸ್ವರ ಮುರ್ಹೂವ ಕಂಡು ಬಂದರು ಮರಳಿ ಪಟ್ಟಣಕೆ (ಮು)

[61] ೧ ರಿದ (ಆ), ರಿವ (ಮು)

[62] ೨-೨ ಭಸ (ಆ-ಮು)

[63] ೨-೨ ಭಸ (ಆ-ಮು)

[64] ೩ ದು (ಆ)

[65] ೪-೪ ನಿಂಧ (ಮು)

[66] ೪-೪ ನಿಂಧ (ಮು)

[67] ೫ ರೆ (ಆ)

[68] ೬ ಲು (ಮು)

[69] ೭ ತು (ಮು)

[70] ೮-೮ ಕೆಳರಿ ದಿಟ್ಟ ಸುವಕ್ಷಿಗಳ ಕೇ | ಸುರಿಗೆ ಸೀದುದು ಗಗನ ವೀ ಸಿಂ | ಧುರಕೆ (ಆ), ಕೆಳರಿಸುವ ದಿಟ್ಟಗಳ ಡಾಳಕೆ | ಕಳನ ನದಿಗಳು ಸರಿಯೆ, ಸಿಂಧುರ | ಕೆಳೆಯೆ (ಮು)

[71] ೮-೮ ಕೆಳರಿ ದಿಟ್ಟ ಸುವಕ್ಷಿಗಳ ಕೇ | ಸುರಿಗೆ ಸೀದುದು ಗಗನ ವೀ ಸಿಂ | ಧುರಕೆ (ಆ), ಕೆಳರಿಸುವ ದಿಟ್ಟಗಳ ಡಾಳಕೆ | ಕಳನ ನದಿಗಳು ಸರಿಯೆ, ಸಿಂಧುರ | ಕೆಳೆಯೆ (ಮು)

[72] ೧-೧ ಗಿಳೆಯೊ (ಆ)

[73] ೧-೧ ಗಿಳೆಯೊ (ಆ)

[74] ೨ ಗಳು (ಮು)

[75] ೩-೩ ಗಂಟೆಯ ದನಿ (ಮು)

[76] ೩-೩ ಗಂಟೆಯ ದನಿ (ಮು)

[77] ೪-೪ ರಾ (ಆ)

[78] ೪-೪ ರಾ (ಆ)

[79] ೫ ಭೀ (ಆ)

[80] ೬ ಹೋ (ಮು)