ಅದಕೆ ಕಿಡಿಕಿಡಿಯೋ

[1]ಗಿ ಧರಣಿಯ
ನೊದೆದು ಬಾಹಪ್ಪಳಿಸಿ ಪುಟನೆಗೆ
ದೆದೆಗಿಡದಿರೆಂದಚ್ಯುತನ ಬೋಳಯಿಸಿ ಬೊಬ್ಬಿಡುತ
ಮದಗಜದ ಸಮ್ಮುಖಕೆ ನಡೆ[2]ದತಿ[3]
ಕದುಬಿಸುತ ಕೈ ನೀಡಿ ಕರೆದ
ಗ್ಗದ ಹಲಾಯುಧ ನಿಂದನಮರಪ್ರತತಿ ತಲ್ಲಣಿಸೆ                                                          ೨೬

ಕಂಡು ಹರಿ ನಸುನಗುತ ಮುಸಲಿಯ
ದಂಡೆ[4] ಕರ ಲೇಸೆನುತ ವಿಳಯದ
ಖಂಡಪರಶು ಗಜಾಸುರನ ಸಮ್ಮಖಕೆ ನಡೆವಂತೆ
ದಂಡೆಗೊಂಡಬ್ಬರಿಸುತಳವಿಯ
ಕೊಂಡು ಲಂಘಿಸಿ ತಿವಿದಡಾ ಗಜ
ದಿಂಡುಗೆಡೆದಾ ಕ್ಷಣದೊಳೆದ್ದರೆಯಟ್ಟಿ ತಚ್ಯುತನ                                                           ೨೭

ಅಟ್ಟಿ ಪಿಡಿದೊಡಗಲಸಿ ಪದದಲಿ
ಮೆಟ್ಟಿ ದಾಡೆಯೊಳಿಡಿಕಿ [5]ನಿಜ[6]ಕರ
ಪಟ್ಟಿಯ[7] ದೊಳಪ್ಪಳಿಸಿ ಕೊಡಹುತ ತೊಡೆಯೊಳೆಡೆಯವುಚಿ
ಕಟ್ಟಳಲು ಮಿಗೆ ಬೀಸಿ ಧರಣಿಯೊ
ಳಿಟ್ಟೊರಸಲನುಗೈಯುತಿರೆ ಜಗ
ಜಟ್ಟಿ ಹಲಧರನಡ್ಡ ಹಾಯ್ದಪ್ಪಳಿಸಿದನು ಗಜವ                                                             ೨೮

ಬಲನ ಘಾಯಕೆ ಸೈರಿಸದೆ ಕಳ
ವಳಿಸಿ ತಿರ‍್ರನೆ ತಿರುಗಿ ಘೀಳಿಡು
ತಳಲು[8] ಮಿಗೆ ಡೆಂಡೆಣಿಸಿ ಮೇಲ್ವಾಯ್ದೊದೆದು ಸೊಂಡಲಲಿ
ಸೆಳೆದು ನಭಕೀಡಾಡುತಿರೆ ಕಂ
ಡಳಿದನಗ್ರಜನೆಂದು ಹರಿ ಕ
ಟ್ಟಳಲು ಮಿಗೆ ಬೊಬ್ಬಿಡುತ ತಿವಿದನು ಗಜದ ಮಸ್ತಕವ                                                  ೨೯

ಹೆಕ್ಕಳಿಸಿ ಹರಿ ತಿವಿದ ಘಾಯ[9]ಕೆ
ಕುಕ್ಕುರಿಸಿ ಕೆಡೆದೆದ್ದು ಝಾಡಿಸಿ
ಹೊಕ್ಕು ಹೊಡಕರಿಸುತ್ತ ಮದದಿಭವಿದಿರಲಟ್ಟಿಬರೆ
ಸಿಕ್ಕಿದವರೆಡಬಲಕೆ ಸಿಡಿದೆವೆ
ಯಿಕ್ಕಿವುದರಿಂ ಮುನ್ನ ಹೊಯ್ದಿಳೆ
ಗಿಕ್ಕಿ ಮೆಟ್ಟಿದನೊ[10]ರಲುತಿರ್ದುದು ಕುವಲಯಾಪೀಡ                                                   ೩೦

ಹರಿಬಲರ ಹೋರಟೆಗೆ ಸೈರಿಸ
ಲರಿಯದೊರಗಿತು ದಂತಿ ಬಳಿಕಿವ
ರಿರದೆ ದಾಡೆಯ ಕಿತ್ತು ಸದೆಬಡೆದುಳಿದುದಿಲ್ಲೆನಿಸಿ
ಕೆರಳಿ ಹರಿತಹ ಮಾವುತರನಿ
ಟ್ಟೊರಸಿ ಗೋಪರು ಸಹಿತ ನೃಪ ಮಂ
ದಿರಕೆ ತೆರಳಿದರಗ್ರಜಾನುಜರಧಿಕ ಹರುಷದಲಿ                                                            ೩೧

ಏನಿದದ್ಬುತವಮಮ ನಂದನ
ಸೂನುಗಳು ಬಲು ಗಜವ ಕೆಡಹಿದ
ರೀ ನಿಶಾಚರನುಳಿವುದಿಲ್ಲವರಧಿಕಬಲರೆನುತ
ದಾನವನ ಭೀತಿಯಲಿ ಪೊಗಳದೆ
ಮೋನದಲಿ ಪುರಜನ ಮುಕುಂದ
ಧ್ಯಾನ ತತ್ಪರವಾಗಿ ತಲೆದೂಗಿದರು ತಮತಮಗೆ                                                        ೩೨

ಶೂಲಿ ವಿಷಕಳುಕುವನೆ ವಹ್ನಿ
ಜ್ವಾಲೆ [11]ಹಿಮ[12]ಕಂಜುವುದೆ [13]ಕಶ್ಯಪ[14]
ಬಾಲ ಸರ್ಪನ ಬಗೆವನೇ ದಿನಮಣಿ ತಮೋವ್ರಜವ
ಲಾಲಿಸುವನೇ ಹುಲಿ[15]ಯಧಟ ಮೊಲ[16]
ತಾಳಬಲ್ಲುದೆ ಕೃಷ್ಣನಾನೆಯ
ಸೀಳದಿಹನೇ ಜಯಜಯೆನುತಕ್ರೂರ [17]ನಗುತಿರ್ದ[18]                                                  ೩೩

ದೂರದಲಿ ಕೈಮುಗಿದು ನಿಂದ
ಕ್ರೂರ ಪುಳಕಿಸುತಿರಲು ಕಂಡಸು
ರಾರಿಯಭಯವ ಕೊಡುತ ಬಂದು ನಿಶಾಚರರ[19] ಮನೆಯ
ಭೂರಿ ವಿಭವವ ನೋಡಿ ನಸುನಗು
ತಾರುಭಟಿ ಮಿಗೆ ನಡೆಯಲಿದಿರಲಿ
ವೀ[20]ರದೈತ್ಯಪ್ರತತಿಯಿದ್ದುದು ಖಳನ ಕಾಹಿನಲಿ                                                         ೩೪

ಹರಿದಲೆಯ ಕೆಮ್ಮೀಸೆಗಳ ನಿಡು
ಗೊರಳ ಕಿಡಿಸುರಿವಕ್ಷಿಗಳ ಕಾ-
ರಿರುಳ ದೇಹಚ್ಛವಿಯ ವಿತ[21]ಳಿಸಿ ಹೊಳೆವ ದಾಡೆಗಳ
ಕರದ ಕೂರಸಿಗಳ ಸಿಡಿಲ್ಗಳ
ಜರಿವ ಬೊಬ್ಬೆಯ ವಿಗಡ ದನುಜರ
ನೆರವಿಗಳ ಕಂಡಸುರರಿಪು ಗಹಹಿಸಿ ನಗುತಿರ್ದ                                                          ೩೫

ಗಿರಿಯ ಕಿತ್ತೆತ್ತುವ ಸಮುದ್ರವ
ಸುರಿವ ಗಗನಕೆ ನೆಗೆದು ಸೂರ್ಯನ
ಕರವಿಡಿವ ಜವನೆದೆಯ ಮೆಟ್ಟುವ ನಿರ್ಜರೇಶ್ವರನ[22]
ಕರಿಯ ದಾಡೆಯ ಮುರಿವ ದಿವಿಜರ
ಶಿರವ ಚಂಡಾಡುವ ನಿಶಾ[23]ಚರ
ನೆರವಿ[24]ಯನು ಕಂಡಸುರರಿಪು ಗಹಗಹಿಸಿ[25] ಬೆರಗಾದ                                                           ೩೬

[26]ಳದ[27] ಲೊಲೆ[28] ವಾನೆಗಳ ನಭಕ
ವ್ವಳಿಪ ಕಡುಗುದುರೆಗಳ ನೆರೆದಿ
ಕ್ಕೆಲಕೆ ಚರಿ[29]ಸುವ ತೇರುಗಳ[30] ನಿಟ್ಟಣಿಪ ಕೈದುಗಳ[31]
ಝಳಪಿಸುವ ಬಿಲ್ವಿರುವ ನುಡಿಸುವ
ಕಳಕಳದ ಕಾಲಾಳ ಮೊತ್ತದ
ಚೆಲುವಿಕೆಯ ಕಂಡಸುರರಿಪು ನಸುನಗುತಲೊಳಪೊಕ್ಕ                                                 ೩೭

ಓರಣದೊಳಬ್ಬರಿಸಿ ಮೊಳಗುವ
ಭೇರಿಗಳ ತಂಬಟದ ಪಟಹದ
ವೀರ ದವುಡೆಯ ಗಿಡಿವಿಡಿಯ ನಿಸ್ಸಾಳದಬ್ಬರದ
ಸಾರು ನಡೆ ಎಂದುಗ್ಗಡಿಪ ಪಡಿ
ಹಾರರಬ್ಬರಣೆಗಳ ಬಿರುದಿನ
ಭಾರಣೆಯ ಕಹಳೆಗಳ ರವಕಸುರಾರಿ ನಗುತಿರ್ದ                                                        ೩೮

ನೋಡಲಮ್ಮರು ಮರೆದರಿದು ಕೈ
ಮಾಡಲಮ್ಮರು ದಾನವನ ಭಯ
ಕೋಡಲಮ್ಮರು ನುಡಿಯಲಮ್ಮರು ಜಡಿವ ಬೆರಗಿನಲಿ
ಹೇಡಿಗೊಳುತೊಳಗೊಳಗೆ ಶಂಕಿಸಿ
ಕೂಡೆ [32]ಕೊರಗುತ ನಿಂದು ಸಂಭಟರು
ಬೇಡಿಕೊಳುತಿರ್ದರು ಮುರಾಂತಕ ಕೊರಳ ಸಲಹೆನುತ                                               ೩೯

ಹರಿಬಲರು ಬಹ [33]ಭರ[34]ಕೆ ಸೈರಿಸ
ದುರವಣಿಸಿ ರಾಕ್ಷಸ ಮಹಾಭಟ
ರರರೆ ಗೋವರ ಕೆಡಹು ತಿವಿ ನಿಟ್ಟೆಲುವ ಮುರಿಯೆನುತ
ಮೊರೆದು ತವಕಿಸಿ ಮುಕ್ಕುರಿಕಿ ಬಿಡ
ದೊ[35]ರಸಲೆಂದಪ್ಪಳಿಸುತಿರೆ ಹಲ
ಧರನವರಿಗಿದಿರಾಗಿ ನಿಂದನು ಭುಜವ ಸೂಳಯಿಸಿ                                                       ೪೦

ಖಳರಳಲು ಮಿಗೆ ಹಲಧರನ ತಿವಿ
ಕೆಳೆಯ ಗೋವರನೊದೆದು ಕೆಡಹೆನು
ತುಲಿದಡಾಯುಧದಚ್ಯುತನ ಮೇಲ್ವಾಯ್ದು ಕದುಬುತಿರೆ
ಬಲನಧಿಕ ರೌದ್ರದಲಿ ದೈತ್ಯರ
[36]ಬಲ[37]ವ ಮುರಿದಪ್ಪಳಿಸಿ ತೊತ್ತಳ
ದುಳಿದು ನೆಲಕಿಟ್ಟೊರೆಸಿದನು ನಿಮಿಷಾರ್ಧಮಾತ್ರದಲಿ                                                  ೪೧

ಮತ್ತೆ ಮುಸುಕಿತು ಧೀರ ದೈತ್ಯರ
ಮೊತ್ತ ಬಲನಡಹಾಯ್ದು ಬೊಬ್ಬಿರಿ
ಯುತ್ತ ಮೇಲ್ವಾಯ್ದಧಟಸುಭಟರನಿಳೆಯೊಳಪ್ಪಳಿಸಿ[38]
ಕುತ್ತು ಪಿಡಿ ಕೊಯ್ ಕೊರಳನೆನುತತಿ
ಮತ್ತ ಬಳರಡ್ಡವಿಸಲವದಿರ
ನೆತ್ತಿ ಗಿಜಿಗಿಜಿಯಾಗೆ ತಿವಿದನು ಕಾಮಪಾಲಕನು                                                         ೪೨

ಹಲಧರನ ಕೋಪಾಗ್ನಿಗಿದಿರೇ
ಖಳರ ಸಾಹಸವಳಿದುದಗಣಿತ
ಬಲುಗಡಿಯ ರಕ್ಕಸರು ಮತ್ತುಳಿದವರು ಮೋನದಲಿ
ಚಲಿಸದಿರ್ದರು ರಾಯದಳ ಕಳ
ವಳಿಸಿ ಕಂಪಿಸುತಿರ್ದುದಾ ಗೋ
ವಳರು ಬೊಬ್ಬಿಡುತಿರ್ದರಧಿಕ ಮನೋನುರಾಗದಲಿ                                                     ೪೩

ಕಂಡು ನಗುತ ಮುರಾರಿ ಸುಭಟರ
ತಂಡವನು ಕಡೆಗಣಿಸಿ ಮಾನವ
ಗಂಡುತನದ ಸಗಾಢಿಕೆಯನೀಕ್ಷಿಸುವ ತವಕದಲಿ
ದಂಡಧರನೊಳಹೊಗುವವೊಲು ಗವಿ
ಗೊಂಡ[39]ವರು ಸಹಿತಲ್ಲಿ[40] ಬಂದನು
ಚಂಡರುಚಿಯ ಮಯೂಖ ಹೊದ್ದಿ[41]ದ ಮಲ್ಲಮಂಟಪಕೆ                                                 ೪೪

ಒಪ್ಪಿತಗ್ಗದ ಮಲ್ಲಗಳ ಮಣಿ
ದರ್ಪಣದ ತೋರಣದ ಗುಡಿಗಳ
ಚಪ್ಪರದ ಮೇಲ್ಕಟ್ಟುಗಳ ಪರಿಪರಿಯ ಪೂವಲಿಯ
ಕಪ್ಪುರದ ಪರಿಮಳದ ನವ ಚಂ
ದ್ರಪ್ರಭಾ ಭಿತ್ತಿಗಳ ಕಳಸದ
ಚಪ್ಪರದ ವೀಧಿಯಲಿ ರಾಮ ಮುಕುಂದರಿದಿರಿನಲಿ                                                       ೪೫

ಆ ಮನೋಹರ ಮಲ್ಲರಂಗದ
ಸೀಮೆಯೆಣ್ಣೆಸೆಗಳಲಿ ನೆರೆದಿಹ
ಭೂಮಿಪರ ಮಂತ್ರಿಗಳ ಸಚಿವ ಮಹಾನಿಯೋಗಿಗಳ
ಹೇಮ ಮಕುಟದ ಮನ್ನೆಯರ ಖಳ
ನಾ[42]ಮ ಡಿಂಗರಿಗರ ಧನಾಡ್ಯರ
ಚಾಮರದ ಹಡಪದ ಸುತೇಜವ ಕಂಡನಸುರಾರಿ                                                         ೪೬

ಓರಣಿಸಿ ಭದ್ರದಲಿ ತೋರ್ಪ ಕು
ಮಾರಕರ ಪರಿಪರಿಯ ಮುಸುಕಿನ
ದೋರೆ[43]ವೆಣ್ಗ[44]ಳ ನಗೆಮೊಗದ ಚಲಿಸುವ ದೃಗುತ್ಪಲದ
ಕಾರಿರುಳ ಸೂಚಿಸುವ ಕಬರಿಯ
ಹೇ[45]ರುತಿಹ ಕುಚಯುಗದ ಕಾಹಿನ
ನಾರಿಯರ ವಂಗಡವ ಕಂಡಸುರಾರಿ ನಗುತಿರ್ದ                                                         ೪೭

ದೂರದಲಿ ದಿಟ್ಟಿಸುವ ಮಟ್ಟಿಯ
ಹಾರುವರ ಹರದರ ಸುವೈಶ್ಯರ
ಕಾರುಕರ ಚಿತ್ರಿಕರ ತಂಬುಲಿಗರ ವಿನೋದಿಗಳ
ಚಾರುಪದಗಳ ಗಾಯಕರ ಕೈ
ವಾರಿಗಳ ಯಾಚಕರ ಕೃಪಣರ
ಸೇರುವೆಯ ಕಂಡಸುರರಿಪು ತಲೆದೂಗಿ[46]ದನು ನಗುತ[47]                                                       ೪೮

ಫಲರಹಿತ ಕುಜದಂತೆ ಬತ್ತಿದ
ಕೊಳನ ತಾವರೆಯಂತೆ ಧರ್ಮದ
ನುಳಿದ ಭೂಸುರರಂತೆ ಸತಿಯರಿಗೊಲಿದ ಯತಿಯಂತೆ
ಕಳೆಯರತ ಸಸಿಯಂತೆ ಸಾಹಸ
ವಳಿದ ಪಟುಭಟನಂತೆ ಮಗ್ಗಿದ
ಕಳಕಳದ ವಸುದೇವನಿರೆ ಹರಿ ಕಂಡು ಬಿಸುಸುಯ್ದ                                                      ೪೯

ಆತನೆಡದಲಿ ಮುತ್ತಿ ಮುಸುಕಿದ
ಭೀತಿಯಲಿ ಕೊರಗಿದ ಮುಖಾಬ್ಜದ
ಕಾತರಿಸುವಕ್ಷಿಗಳ ಸಡಿಲಿದ ಮುಡಿಯ ತೊದಳಿಸುವ
ಮಾತುಗಳ ನಡುಗುವ ಲತಾಂಗದ
ಧಾತುಗುಂದಿದ ಮನದ ದೇವಕಿ
ಮಾತೆಯನು ಹರಿ ಕಂಡು ಮಮ್ಮಲ ಮರುಗಿ[48]ದನು ಬಳಿಕ[49]                                      ೫೦

ತಾಯಿ ತಂದೆಗಳಿಬ್ಬರೆನ್ನಿಂ
ದಾಯಸವನನುಭವಿಸುತಸುರನ[50]
ಬಾಯ ತುತ್ತಾಗಿದ್ದಿರೆಂತಕಟೆನುತ ತಲೆದೂಗಿ
ಈಯವಸ್ಥೆಯನೊಂದು ನಿಮಿಷಕೆ
ಬೀಯ ಮಾಡುವೆನೆಂದು ಮಲ್ಲ ವಿ
ಡಾಯಗಳನೀಕ್ಷಿಸುತ ನಿಂದನು ಕಳದ[51] ಮದ್ಯದಲಿ                                                     ೫೧

ಧರೆಗೆ ಮಲ್ಲವ್ರಜಕೆ ನೋಡುವ
ಪರಿಜನಕೆ ಸತಿಯರಿಗೆ ಸುರರಿಗೆ
ತರುಣ ಗೋವಳರಿಗೆ ಯದೂತ್ತಮರಿಗೆ ಯಥಾಕ್ರಮದಿ
ಪರಮಗುರು ಲೀಲಾದ್ರಿ ಮನುಜ
ಸ್ಮರಜಗತ್ಪತಿ ಗೋಪನುರ್ವಿ
ಶ್ವರನೆನಿಪ ಮೂರ್ತಿಯಲಿ ನಿಂದನು ದಾನವಧ್ವಂಸಿ                                                       ೫೨

ಗಂಧಗಜವೀಡಿರಿದ ಗಾಯದ
ಗಂದೆಗಳ[52]ನಾ ಕರಿಯ[53] ರುಧಿರದ
ಬಿಂದುಗಳನಾ ಸಮರಗಜ[54]ವದ[55]ನದ ಗದಾಯುಧದ
ಕಂದದಾಸ್ಯದ ಬಿಗಿದ ಕಬರೀ
ಬಂಧದೋಜೆಯ ಸಡಿಲದುಡುಗೆಯ
ನಂದಸುತದಬ್ಬರಿಸಿ ನಿಂದರು ಮಲ್ಲರಂಗದಲಿ                                                             ೫೩

ಹರಿ ಬಲರು ಬಂದ[56]ವರ[57] ನೀಕ್ಷಿಸಿ
ಕೆರಳಿ ಕಿಡಿಕಿಡಿಯೋ[58]ಗಿ ನೆಗೆದು
ಪ್ಪರಿಸಿ ತಿರ‍್ರನೆ ತಿರುಗಿ ಮಂಡಿಸಿ ನೋಡಿ ದೆಸೆದೆಸಗೆ
ಹರಿ ಹರಿದು ಹಾರೈಸುತುಬ್ಬುತ
ಹಿರಿಯ ಜಗಜಟ್ಟಿಗಳ ಕೆಲದಲ್ಲಿ
ನೆರೆದು ನಿಂದುದು ಮಲ್ಲವಡೆ ಮೇಳಯುವ [59]ನೀಕ್ಷಿಸುತ[60]                                          ೫೪

ಬಿಟ್ಟ ಕೆಂಗಣ್ಣುಗಳ [61]ನಭ್ರವ[62]
ಮುಟ್ಟುತಿಹ ಮೂರ್ತಿಗಳ ಕೈಗಳ
ವಟ್ಟ ಪಿಲ್ಲಣಿಗೆಗಳ ಲೌಡಿಯ ರಭಸದೋಜೆಗಳ
ಕಟ್ಟಳವಿಯಲಿ ನಿಂ[63]ದುದಾ[64] ಜಗ
ಜಟ್ಟಿಗಳು ತರುವಾಯಲಂತರ
ಜಟ್ಟಿಗಳ ನಿಬ್ಬರದ ಬೊಬ್ಬೆಯಲವನಿ ತಲ್ಲಣಿಸೆ                                                                        ೫೫


[1] ೭ ಯಾ (ಮು)

[2] ೮-೮ ದುರೆ (ಮು)

[3] ೮-೮ ದುರೆ (ಮು)

[4] ೯ ಡಿ (ಆ)

[5] ೧-೧ ರಿವ (ಆ), ರಿದ (ಮು)

[6] ೧-೧ ರಿವ (ಆ), ರಿದ (ಮು)

[7] ೨ ಸ (ಆ-ಮು)

[8] ೩ ಲಿ (ಆ)

[9] ೪ ತ (ಮು)

[10] ೫ ಡೊ (ಆ)

[11] ೧-೧ ಸೃಣ (ಆ)

[12] ೧-೧ ಸೃಣ (ಆ)

[13] ೨ ಕಾಶ್ಯಪಿ (ಆ)

[14] ೨ ಕಾಶ್ಯಪಿ (ಆ)

[15] ೩-೩ ಮೊಲದಧಟ (ಮು)

[16] ೩-೩ ಮೊಲದಧಟ (ಮು)

[17] ೪-೪ ಕೈಮುಗಿದ (ಮು)

[18] ೪-೪ ಕೈಮುಗಿದ (ಮು)

[19] ೫ ನ (ಆ)

[20] ೬ ಧೀ (ಆ)

[21] ೭ ಕ (ಮು)

[22] ೧ ರ(ಆ)

[23] ೨ ಚ (ಆ-ಆ)

[24] ೩-೩ ನೆರವಿಯ ಕಂಡು ಕಂಡಸುರಾರಿ (ಆ)

[25] ೩-೩ ನೆರವಿಯ ಕಂಡು ಕಂಡಸುರಾರಿ (ಆ)

[26] ೪ ಗು (ಆ-ಮು)

[27] ೫-೫ ಲುಲಿ (ಆ)

[28] ೫-೫ ಲುಲಿ (ಆ)

[29] ೬ ಲಿ (ಆ-ಮು)

[30] ೭-೭ ನಿಟ್ಟಣಿಪ ಕಾಲಾಳ (ಆ), ಝಗ ಝಗಿಪ ಕರವಾಳ (ಮು)

[31] ೭-೭ ನಿಟ್ಟಣಿಪ ಕಾಲಾಳ (ಆ), ಝಗ ಝಗಿಪ ಕರವಾಳ (ಮು)

[32] ೮ ಕ (ಮು)

[33] ೧-೧ ಬಲ (ಆ)

[34] ೧-೧ ಬಲ (ಆ)

[35] ೨ ಲೊ (ಆ)

[36] ೩-೩ ದಳ (ಆ)

[37] ೩-೩ ದಳ (ಆ)

[38] ೪ ಸೆ (ಮು)

[39] ೧-೧ ಗೋವರು ಸಹಿತ (ಆ)

[40] ೧-೧ ಗೋವರು ಸಹಿತ (ಆ)

[41] ೨ ದ್ದ (ಆ)

[42] ೩ ನೇ (ಮು)

[43] ೪-೪ ವಲ್ಗ (ಆ-ಮು)

[44] ೪-೪ ವಲ್ಗ (ಆ-ಮು)

[45] ೫ ಹೋ (ಆ-ಮು)

[46] ೧-೧ ನಗುತಿರ್ದ (ಮು)

[47] ೧-೧ ನಗುತಿರ್ದ (ಮು)

[48] ೨-೨ ಮನದೊಳಗೆ (ಆ)

[49] ೨-೨ ಮನದೊಳಗೆ (ಆ)

[50] ೩ ರ (ಆ)

[51] ೪ ನ (ಆ)

[52] ೧-೧ ಸಿಂಧುರದ (ಮು)

[53] ೧-೧ ಸಿಂಧುರದ (ಮು)

[54] ೨-೨ ರದ (ಆ-ಮು)

[55] ೨-೨ ರದ (ಆ-ಮು)

[56] ೩-೩ ಳವ (ಮು)

[57] ೩-೩ ಳವ (ಮು)

[58] ೪ ಯಾ (ಮು)

[59] ೫-೫ ನಿಕ್ಕರಿಸಿ (ಆ)

[60] ೫-೫ ನಿಕ್ಕರಿಸಿ (ಆ)

[61] ೬-೬ ನಭವನೆ (ಮು)

[62] ೬-೬ ನಭವನೆ (ಮು)

[63] ೭-೭ ದರಾ (ಮು)

[64] ೭-೭ ದರಾ (ಮು)