ಆ ಸದನಮಧ್ಯದಲೆಸೆವ ಸಿಂ
ಹಾಸನವನಳವಡಿಸಿದಳು

[1] ಮೆಲು
ವಾಸಿನಲಿ ಹಚ್ಚಡಿಸಿ ಮಲಗಿನ ಪಟ್ಟಗದ್ದುಗೆಯ
ಓಸರಿಸದಂತಿಕ್ಕಿ ಪಡಿಗವ
ನಾ ಸಮೀಪದಲಿ[2]ರಿಸಿ[3] ಧೂಪದ
ವಾಸನೆಯ ಕೈಗೊಳಿಸುತಿರ್ದಳು ದಾನಪತಿಯರಸಿ                                                     ೩೧

ಕುಸುಮವಾಸಿತ ಜಲವ ಸೋದಿಸಿ
ಮಿಸುಪ ಹೊಂಬಟ್ಟಲಲಿ ತುಂಬಿದ
ಳೆಸೆವ ಸೀಗುರಿ ಚಾಮರಂಗಳ ತಾಳವೃಂತಕವ[4]
ಪಸರಿಸುವ ಘನದೀಪ್ತಿ[5]ಗಳ ನಿ
ರ್ಮಿಸುತನಂತಜ್ಯೊತಿ [6]ಮಧ್ಯ[7]ದೊ
ಳೆಸೆದಳಮಳ [8]ಜ್ಞಾನಶಕ್ತಿಯ ಮೂರ್ತಿಯಂದಲಿ                                                          ೩೨

[9]ಳಿಕ ಫಲತಾಂಬೂಲ ಪುಷ್ಪಾ
ವಳಿ ಸುಗಂಧಾಕ್ಷತೆಯ ಸುಮನಂ
ಗಳ ನಿರಂಜನ ಪಂಚರತ್ನಾರತಿಯನನುಮಾಡಿ[10]
ಪಲತೆರ[11]ದಲ[12]ಮೃತಾನ್ನಪಾನವ
ನೊಳಗಡೆಯಲಳವಡಿಸಿ ತನ್ನಯ
ಕೆಳದಿಯರು ಸಹಿತಿರ್ದಳೀತ[13]ನ ಬರವನೀಕ್ಷಿಸುತ                                                      ೩೩

ಆ ಸಮಯದಲಿ ದಾನಪತಿಯಾ
ವಾಸ ಚೆಲು[14]ವಾಯ್ತೆನುತ ಕಮಳಾ
ಧೀಶನೊಳಪೊಕ್ಕನು ಸಮಸ್ತ ಚಮೂಪಜನಸಹಿತ
ಈಸು ದಿನಕಿಂದೆನ್ನಮನದಾ
ಯಾಸ ಬಯಲಾಯ್ತೆನುತಲಾ ಸಿಂ
ಹಾಸನವನಡರಿದನು ಹಲಧರ ಸಹಿತ ಮುರವೈರಿ                                                       ೩೪

ಓಜೆ ಮಿಗೆ ವಸುದೇವ ನಂದರ
ಯಾಜಮಾನ್ಯದೊಳಿರಿಸಿ ಗೋಪ ಸ
ಮಾಜವನು ಸತ್ಕರಿಸಿ ಬಳಿಕ ಮುರಾರಿಯಂಘ್ರಿಗಳ
ಪೂಜಿಸುತ ತವಕದಲಿ ಪುಳಕಿಸು
ತಾ ಜಗತ್ಪಾವನನ ಮೂರ್ತಿಯ
ತೇಜವನು ತಾ ಕಂಡು ಕೀರ್ತಿಸುತಿರ್ದನಕ್ರೂರ                                                           ೩೫

ಒಂದು ರೋಮದ ಕುಳಿಯ [15]ಮೂಲೆಯೊ[16]
ಳೊಂದಿಹವು ಬ್ರಹ್ಮಾಂಡ ಕೋಟಿಗ
ಳೆಂದು ಶ್ರುತಿಯುಗ್ಗಡಿಸುತಿದೆ ನಿಜನಾಭಿಕಮಲದಲಿ
ಬಂದ ಬಳಿಕೀರೇಳು [17]ಲೋಕಕೆ[18]
ತಂದೆಯಾದನು ಬ್ರಹ್ಮ ನೀನೊಲಿ
ದಿಂದು ಮನೆಗೈತಂದೆ ಮುರಹರ ನಿನಗೆ ನಮೊ ಎಂದ                                                            ೩೬

ಧರೆಯನಳೆದಂ[19]ದೊಮ್ಮೆ ನಿನ್ನಯ
ಚರಣವನು ಚತುರಾಸ್ಯ ತೊಳೆದರೆ
[20]ಸುರನದಿಯು ತಾ ಜನಿಸಿ ನೆಲಸಳೆ ಹರನ ಮಸ್ತಕದಿ[21]
ಮರಳಿ [22]ಶಿವನಾ[23]ಜ್ಞೆಯಲಿ ಲೋಕವ
ಪೊರೆಯಲೆಂದಿಳೆಗಿಳಿದಳಂದಿನ
ಹಿರಿಯ ನೀನಾ[24]ರಾಧ್ಯ[25] ಪೂಜೆಗೆ ಯೋಗ್ಯನಹುದೆಂದ                                                         ೩೭

ಪಾವನದ ನಿಜ ನೀನು ನಿನ್ನಡಿ
ಗಾವ ಜಲದಭಿಷೇಕ ನೀನಿಹ
ಠಾವನಜಭವರರಿಯರೆಂತರ್ಚಿಸುವರುಳಿದವರು
ನಾವು ಹುಲು ಮಾನಿಸರು ಡೊಂಬಿನ
ಗಾವಿಲರು ನಿನಗತಿಥಿ ಪೂಜೆಯ
ನೀವವರೆ ಜಯ ಜಯ ಮುರಾಂತಕ ಕರುಣಿಸುವುದೆಂದ                                               ೩೮

ಎಂದು ನಿಗಮಾರ್ಥಂಗಳಲಿಯರ
ವಿಂದನಾಭನ ಹೊಗಳಿ ಹರುಷದ
ಸಂದಣಿಯಲುಬ್ಬೇಳುತಚ್ಯುತನಂಘ್ರಿಗಳ ತೊಳೆದು
ತಂದೆಯಹ ವಸುದೇವ ಹಲಧರ
ನಂದ ಮೊದಲಾದವರ ಪರಿವಿಡಿ
ಯಿಂದ ಸತ್ಕರಿಸಿದನು ವಿನಯಾತಿಥ್ಯ[26]ನಿಯಮ[27]ದಲಿ                                                           ೩೯

ಬಳಿಕ ದೇವೋತ್ತಮನ ಚರಣದ
ಬಳಿಗೆ ಬಂದು ಸುಗಂಧ ಶೀತಳ
ಮಲಯಜವನಂಗದಲಿ ಲೇಪಿಸಿ ಬಿರಿದ[28] ಮಲ್ಲಿಗೆಯ
ಅಲ[29]ರ್ದ ಜಾಜಿಯ ಮಾಲೆಗಳ ಕೈ
ಗೊಳಿಸಿದನು ದೇವಾಂಗ ಚಿತ್ರಾ
ವಳಿ ಸುವರ್ಣಾವಳಿಯ ವಸನ[30]ಗಳಂ ಸಮರ್ಪಿಸಿದ[31]                                                           ೪೦

ಭುವನ ಭೂಷಣನಪ್ಪ ಕಮಲಾ
ಧವನ ಪೂಜೆಗೆ ರತ್ನ[32]ಕುಂಡಲ
[33]ನವರತುನತಾಟಂಕ[34] ಮೌಕ್ತಿಕ ಕಂಠಮಾ[35]ಲೆಯನು[36]
ರವಿಸಹಸ್ರಪ್ರಭೆಯ ಪದಕವ
ವಿವಿಧ ಮುದ್ರಾಂಗುಲಿಯ ನಿಗಳವ
[37]ರವೆಯದಂದುಗೆಗಳ ನಿವೇದಿಸುತಿರ್ದನಕ್ರೂರ                                                        ೪೧

ಬಂಧುಗಳಿಗೊಲಿದಿತ್ತನಗ್ಗದ
ಸಂ[38]ಧಿರಾಗದ[39] ಜವುಳಿ[40]ಗಳ ಪಳಿ[41]
೧೦[42]ಸಿಂಧುರದ ಝಗೆ ಹಳದಿಯಂಬರ ಬೂದಿ ಪಚ್ಚೆಗಳ೧೦[43]
ಬಂದ ಗೋವಳರಿಗೆ ೧೧[44]ಮದಾಳಿಯ೧೧[45]
ಚಿಂದಿಗಳ ೧೨[46]ತವರಂಜವೊಲ್ಲಿಯ೧೨[47]
ನೊಂದು ನಿಮಿಷದೊಳಿತ್ತು ಬಳಿಕಕ್ರೂರನಿಂತೆಂದ                                                        ೪೨

ದನುಜಹರ ಚಿತ್ತಯಿಸು ಚತುರಾ
ನನ ಪಿನಾಕಿ ಪುರಂದರಾದ್ಯರ
ಮನದ ಬಯಕೆಯ ಸಲಿಸುತಿಪ್ಪ ಸಮಗ್ರ ವೈಭವದ೧೩[48]
ನಿನಗೆ ನಾನೀ ಬಾಹ್ಯವಹ ಧನ-
ಕನಕ ವಸ್ತ್ರಾಭರಣವನು ಲೇ
ಪನವನೀಯೆ ಸಮರ್ಥನೇ ಭ್ರಮೆ ಕವಿದುದೆನಗೆಂದ                                                      ೪೩

ಎನಲದಕೆ ಹರಿ ನಗುತ ಭಕುತನ
ಮನದ ನಿರಂಹಕಾರ[49]ವೃತ್ತಿ[50]
ನೆನೆನೆನೆದು ಪುಳಕಿಸುತ ಕೈವಿಡಿದೆತ್ತಿ ಮೈದಡವಿ
ಎನಗೆ ನೀ ಪರನಲ್ಲ ವಸುದೇ
ವನ ಸಮಾನದ ಹಿರಿಯ ನೀನೆಂ
ದನುನಯದಲುಪಚರಿಸಿದನು ವೈಷ್ಣವಶಿರೋಮಣಿಯ                                                  ೪೪

ಎಲೆ ಯದೂತ್ತಮ ಕೇಳು ನಿನ್ನಯ
ನಿಳಯದುತ್ಸವ ನಿನ್ನ ಮನದ
ಗ್ಗಳಿಕೆ ನಿನ್ನರಸಿಯರ [51]ಪತಿವರ್ತ್ಯಾನುಕೂಲತನ[52]
ಸುಲಲಿತಾಕ್ಷತ ಗಂಧಪುಷ್ಪಾ
ವಳಿಗಳಾಗಿರಲತಿಥಿ ಪೂಜೆಗೆ
ಕಳಶವೆನಿಸಿದುದಧಿಕ ತುಷ್ಟಿಯ ತಾಳ್ದೆ ನಾನೆಂದ                                                        ೪೫

ಮುರಹರನ ಕರುಣಾನುಭಾವದ
ಸಿರಿಗೆ ಹಾರಯಿಸುತ್ತ ಕಮಲೋ
ದರಧರಾಧರ ಲೋಕಪಾಲಕ ಜಯಜಯೆಂದೆನುತ
ಕರಯುಗದ ಮುಗಿದುತ್ತಮಾಂಗದೊ
ಳಿರಿಸಿ ನಗುತಾರೋಗಣೆಯನಾ
ದರಿಸಿ ಚಿತ್ತಯಿಸುವಡೆ ಬಿಜಯಂಗೈಯಬೇಕೆಂದ                                                         ೪೬

ಎದ್ದೆವೆಮ್ಮಿಂ[53]ದೇನು ತಡ ನಾವ[54]
ಬಿದ್ದಿನರೆ[55] ಮನೆಯೊಡೆಯರೈ ಸಲೆ
ಯಿದ್ದ ಸಾಧನ ಸಾಕು ಬೇಗೆಡೆಮಾಡ ಹೇಳೆನುತ
ಗದ್ದುಗೆಯ ಬಿಟ್ಟರಿದಿಶಾಪಟ
ನೆದ್ದು ನಿಂದಿರಲಾಕ್ಷಣದೊ[56]ಳೊಳ
ಗಿರ್ದು[57]ವೆಡೆ ಪಲತರದ [58]ದೀಪ್ತಿಯ ಸಾಲ ಪೀಠಗಳ[59]                                                        ೪೭

ತಂದು ಹೊಂಬರಿವಾ[60]ಣಗಳನಾ
ನಂದ ವಸುದೇವರಿಗೆ[61] ರಾಮ ಮು
ಕುಂದರಿಗೆ ಸಹಿತಿಟ್ಟು ಗೋಪರಿಗುಳಿದ ಭಾಜನವ
ಮುಂದಿರಿಸಿ [62]ಕೀರ್ತಿಸುವ[63] ವೈಷ್ಣವ
ವೃಂದವ[64]ನ್ನುಪಚರಿಸಿ[65] [66]ಶಾಕವ
ಚೆಂದದಿಂ ಬಹುಭಕ್ಷ್ಯ ಸಮಿತಿಯ ಕಳವೆಯನ್ನಗಳ[67]                                                   ೪೮

ಪರಿ[68]ಪರಿ[69]ಯ ವಿವಿಧಾನ್ಯಪಾನದ
ಪರಿಕರದ ಪರಿಪರಿಯ ಶಾಕದ
ಪರಿಪರಿಯ ಬಹು ಭಕ್ಷ್ಯ ಸಮಿತಿಯ ಕಳವೆಯೋಗರವ
ಪರಿಪರಿಯ [70]ಘೃತಶರ್ಕರೆಯ ಪರಿ
ಪರಿಯೆ ಪಾಲ್ಮೊಸರುಗಳು ಬೆಣ್ಣೆಯ[71]
ಪರಿಪರಿಯ ಮೇಲುಪ್ಪುಗಾಯ್ಗಳ ತರಿಸಿ ಗಡಣಿಸಿದ                                                       ೪೯

ಬಳಿಕ ಬಂದಕ್ರೂರ ದೇವನು[72]
ಲಲನೆ ಸಹಿತವೆ ನಿಂದು ತನ್ನಯ
ಕೆಳದಿಯರ ಗಡಣದಲಿ ಬಡಿಸಿದರ[73] ಖಿಳ ವಸ್ತುಗಳ
ನಳಿನನಾಭ ಮಂಕುಂದಯಾದವ
ಕುಲಶಿರೋಮಣಿಯೆಂದು ಪುಷ್ಪಾಂ
ಜಲಿ ಸಹಿತ ಮೆಯ್ಯಿಕ್ಕಿ [74]ನುಡಿದನು[75] ಮಧುರವಚನದಲಿ                                            ೫೦

ಯತಿ ಗುರು ದ್ವಿಜ ದೇವಪೂಜಾ
ಕ್ರತು ಸಮಾರಾಧನೆಯೊಳೀ ಸು೧೦[76]
ವ್ರತ೧೦[77] ಮುಕುಂದಾರ್ಪಣವೆನಲು ೧೧[78]ಸತ್ಪುಣ್ಯ೧೧[79]ವಹುದೈದೆ
ಶ್ರುತಿಗಗೋಚರನಪ್ಪ ಕಮಲಾ
ಪತಿಯೆ ಬಂದಾರೋಗಿಸುವ ಸೌ
ಖ್ಯತೆಯನೆಂತು ನಿವೇದಿಸುವೆನೆನುತಿರ್ದನಕ್ರೂರ                                                        ೫೧

ಲೋಕದುದಯಸ್ಥಿತಿಲಯಕೆ ನೀ
ನಾಕೆವಾಳನು ಸಕಲ ಜೀವಾ
ನೀಕದಂತರ್ಯಾಮಿ ಸಾಕ್ಷಾದ್ವಿಷ್ಣುಮಯ ಮೂರ್ತಿ
ಏಕಮೇವಾದ್ವಿತಿ[80]ಯನೆಂಬುದ
ನೂಕಿ ನರಲೀಲೆಯಲಿ ನಮ್ಮನು
ಸಾಕಬಂದೈ ತಂದೆ ಆರೋಗಣೆಯ ಮಾಡೆಂದ                                                           ೫೨

ಬಂಧುಗಳನುಣಹೇಳಿದನು ಮನ
ಬಂದ ಪರಿಯಲಿ ಹೊಗಳಿ ಕೃಷ್ಣನ
ಮುಂದೆ ಕುಳ್ಳಿರ್ದಗಲನಾರಯ್ದುದಕ ಪಾತ್ರೆಗಳ
ತಂದು ಕೊಡು[81]ತಲಿ ದಾನ[82]ವಸ್ತುವ
ದೊಂ[83]ದುಳಿಯದಿರೆ ಬಡಿಸಿ ಬಳಲಿದಿ
ರೆಂದು ವಿನಯಾದರ ರಸೋಕ್ತಿಯ ನುಡಿದನಕ್ರೂರ                                                      ೫೩

ಆ ನುಡಿಯ ಸನ್ಮಾನ [84]ವಚನಕೆ[85]
ದಾನವಾಂತಕ ನಗುತ ಬಹಳ ಮ
ನೋನುರಾಗಚ್ಛ ವಿಯಲಾರೋಗಣೆಯ [86]ಚಿತ್ತಯಿಸಿ[87]
ದಾನಪತಿ ಕೇಳ್ ಕ್ಷುಧೆಯೊಡನೆ ಸಂ
ಧಾನವಾಯ್ತೆಮಗಿಂದು ತುಷ್ಟಿಯ
ನೇನ ಹೇಳುವೆ ನಿನಗೆ ಹಂಗಿಗನಾದೆ ನಾನೆಂದ                                                          ೫೪

ಅನ್ನದಧಿಪತಿ ನೀನಧಿಕ ಸಂ
ಪನ್ನ ನೀನಮೃತಾತ್ಮ ನೀಂ ಪರಿ
ಪೂರ್ಣನಹ ಪರವಸ್ತು ನೀಂ ವಿವಿಧಾನ್ನಮಯ ನೀನು
ಮನ್ನಿಸುವರಾರೊಡೆಯರಹರದ
ಕಿನ್ನು ಬಯಲುಪಚಾರವೇತಕೆ
ನಿನ್ನ ಭಕ್ತರ ಕೂಡೆಯೆಂದನು ದಾನಪತಿ ನಗುತ                                                          ೫೫

ಬೇಡ ಮಾಣತಿ ಹೊಗಳಿ ನೀ ಮರು
ಳಾಡದಿರು ಸಾಕೆನುತ ಶರಣರ
ಕೂಡ ಸರಸೋಕ್ತಿಗಳನಾಡುತ ನಗುತ ಕೈದೊಳೆದು
ಕೂಡೆ ತಾಪಸರಂತೆ ಭೋಗದ
ವೇಢೆಗೊಳಗಾಗಿಪ್ಪ ಹರಿ ನಲಿ
ದಾಡುತುವೆ ಬಂದಡರಿದನು ಮಣಿಖಚಿತವಿಷ್ಟರವ                                                        ೫೬*[88]

*        *        *        *        *                                                        ೫೭

ಅಂದದಿಂ ಭೋಜನವ ಮಾಡಿಯೆ
ಬಂದ ಗೋಪರಿಗೆಲ್ಲ ಜಗದಾ
ನಂದಿ ತೃಪ್ತಿಯ ಪಡೆದು ತಾಂ ಮುದದಿಂದ ಹಸ್ತದೊಳು
ಗಂಧಲೇಪನವನ್ನು ಮಾಡಿಯೆ
ಚೆಂದದಿಂ ಕೈದೊಳೆದುಕೊಂಡ ಸು
ಗಂಧ ಪುಷ್ಪಾದಿಗಳ ತಂಬುಲದೊಡನೆ ರಾಗದಲಿ                                                         ೫೮

ಕರೆಸಿದನು ಹರಿಯುಗ್ರಸೇನನ
ತೆರಳುವೆನು ಗೋಕುಲಕೆ ಧರ್ಮದಿ
ಧರೆಯ ಪಾಲಿಸುತಧಿಕ ಮೋದದೊಳಿರುವುದವನಿಯೊಳು
ಪರಮ ಭಕ್ತನು ಮಂತ್ರಿ ನಿನಗಾ
ಗಿರುವನಕ್ರೂರನನುದಾರನ
[89]ಮರೆಯದೆನ್ನಂತೆ ವೊಲೆಕಾಣ್ಬುದು ಮೆರೆದು ಸದ್ಗುಣವ[90]                                          ೫೯

ಪತಿತ ಕಂಸನ ಸತಿಯರಿಗೆ ಮನ
ದತುಲದಳಲನು ಕಳೆದು ಮನ್ನಿಪು
ದತಿ ಹಿತವೆನೆ ಹಸಾದವೆನುತವನೆರಗೆ ಹರಿಪದಕೆ
ಮಾತೃಪಿತನಹ ನೀನು ನನಗೀ
ಗೇತಕೈ ವಂದಿಪುದು ಪಾಪವು
ಪ್ರೀತಿಯಾಗದು ಮನೆಗೆ ಪೋಪುದು ತೆರಳ್ವೆ ಗೋಕುಲಕೆ                                               ೬೦*[91]

ಎಂದು ನಂದನು ಹಲಧರನು ಸಹಿ-
ತೊಂದೆ ರಥದಲಿ ಕುಳಿತು ಗೋವರ
ಹಿಂದೆ ಬರಲೆಂದೆನುತ ಲಕ್ಷ್ಮೀನಾಥ ಪೊರಮಟ್ಟು
ಕಂದಿದಾನನದಿಂದ ಸತಿಯೊಡ
ವಂದೆರಗಿದಕ್ರೂರನಿಗೆ ಮನ
ಗುಂದದಭಯವನಿತ್ತು ಬೀಳ್ಕೊಂಡನು ಸರಾಗದಲಿ                                                       ೬೧
ಒಂಬತ್ತನೆಯ ಸಂಧಿ ಮುಗಿದುದು


By |2016-11-26T20:15:20+05:30November 21, 2011|ಕನ್ನಡ|Comments Off on ಸೋಮನಾಥ ಕವಿ ವಿರಚಿತ ಅಕ್ರೂರ ಚರಿತ್ರೆ :ಒಂಬತ್ತನೆಯ ಸಂಧಿ31-61

ಲೇಖಕರ ಬಗ್ಗೆ :