ದ–ದಾ–ದಿ–ದೀ
ದಡಿ-ದೊಣ್ಣೆ ೨ ೧
ದಡಿಗ-ಬಲಿಷ್ಠ, ಲಟ್ಠ, ಹುಂಬ ೬ ೨೦
ದಂಡ-ಬಡಿಗೆ ೭ ೨೫
ದಂಡಧರ–ಯಮ ೮ ೪೪
ದಂಡಿ-ಸ್ಥಿತಿ, ರೀತಿ ೩ ೩
ಗುಂಪು ಸಮೂಹ ೭ ೨೫
ದಂಡೆ-ತೋಳು, ರೀತಿ ೮ ೨೭
ಭುಜ ೮ ೫೬
ದಧಿ-ಮೊಸರು ೩ ೨
ದಧ್ಯೋದನ-ಮೊಸರನ್ನ, ಬುತ್ತಿ ೬ ೧೩
ದನುಜ-ದೈತ್ಯ ೩ ೮
ದನುಜಾರಿ-ಅಸುರರ ವೈರಿ ಶ್ರೀ ಕೃಷ್ಣ ೪ ೮೧
ದಂತಿ-ಆನೆ ೩ ೫೩
ದಂದುಗ-ತೊಂದೆ, ದುಃಖ ೩ ೩೧
ದರ-ಶಂಖ ೧ ೧
ದರ್ಪ-ಪ್ರಭಾವ, ಶಕ್ತಿ ೮ ೧೨
ದರ್ಪಣ-ಕನ್ನಡಿ ೭ ೧೪
ದಶಧಾನ್ಯ-ಹತ್ತು ಬಗೆಯ ಕಾಳು ೭ ೨೩
ದಶನ-ಹಲ್ಲು ೨ ೫೩
ದಳ-ಎಸಳು, ಪಕಳೆ ೪ ೧೩
ದಳವುಳಿಸು-ರೊಂದರೆಕೊಡು ೧ ೮
ದಳಿ-ಹಿಂಡುವಾಗ, ತುಂಟತನಮಾಡುವ ಹಸುವಿನ
ಹಿಂಗಾಲುಗಳನ್ನು ಬಿಗಿದು ಕಟ್ಟುವುದು ೨ ೫೨
ಕಳಿತ-ಹಿಟ್ಟು ಹಿಟ್ಟಾದ ೪ ೮೬
ದಾಡಿಮ-ದಾಳಿಂಬ ೬ ೩
ದಾಡೆ-ಕೋರೆಹಲ್ಲು ೮ ೨೨
ದಾಡೆಗಡಿದು-ಹಲ್ಲು ಕಡಿದು ೭ ೨೯
ದಾನ-ಮದೋದಕ, ಕೊಡುಗೆ ೮ ೨೫
ದಾನಪತಿ-ಅಕ್ರೂರನ ಇನ್ನೊಂದು ಹೆಸರು ೨ ೧೧
ದಾನವ-ದನೂ ಎಂಬಾಕೆಯಿಂದ ಜನಿಸಿದವ, ಅಸುರ ೧ ೯
ದಾನವಧ್ವಂಸಿ-ಶ್ರೀಕೃಷ್ಣ ೫ ೧೬
ದಾನವಲ್ಲಭ-ಅಕ್ರೂರ ೯ ೧೮
ದಾನವಾಟವಿ-ರಾಕ್ಷಸರೆಂಬ ಕಾಡು ೬ ೧
ದಾನವಾರಿ-ಶ್ರೀಕೃಷ್ಣ ೫ ೧೮
ದಾವ-ದಾವಾಗ್ನಿ, ಕಾಡಬೇಗೆ ೧ ೨
ದಾವಣಿ-ದನಗಳ ಹಕ್ಕೆ ೨ ೪೬
ದಾವಾಗ್ನಿ-ಕಾಳ್ಗಿಚ್ಚು ೫ ೧೪
ದಿಗಧಿಪ-ದಿಕಪಾಲಕರು ೫ ೪೦
ದಿಗಿಭ-ದಿಗ್ಗಜ, ದಿಕ್ಕುಗಳಲ್ಲಿರುವ ಆನೆ ೫ ೪೨
ದಿಗುವಳಯ-ಸುತ್ತಲೂ ಇರುವ ದಿಕ್ಕುಗಳ ವರ್ತುಲ ೪ ೧೦
ದಿಂಡುಗೆಡೆ-ನೆಲಕ್ಕೆಬೀಳು ೮ ೨೭
ಅಡ್ಡಬೀಳು ೮ ೭೦
ದಿನಮಣಿ-ಸೂರ್ಯ ೮ ೩೩
ದಿವಿಜ-ದೇವತೆ ೨ ೧೨
ದಿವೌಕಸರು-ಸ್ವರ್ಗನಿವಾಸಿಗಳು, ೧ ೧೦
ದೇವತೆಗಳು ೫ ೪೧
ದೀಪ್ತಿ-ಕಾಂತಿ ೯ ೩೨
ದೀರ್ಘ-ಉದ್ದವಾದ, ಉಚ್ಚಸ್ವರದ ೬ ೩೪
ದು–ದೂ–ದೃ
ದುಗುಡ-ಚಿಂತೆ, ನೋವು ೨ ೫
ವ್ಯಥೆ ೪ ೧೪
ದುರಿತ-ಪಾಪ ೧ ೩ ೬ ೧೬
ದುರಿತಕೋಳಾಹಳ-ಪಾತಕಗಳನ್ನು ಬೆದರಿಸುವವನು ೨ ೩೨
ದುರುಕ್ತಿ-ಕೆಟ್ಟಮಾತು ೩ ೨೬
ದುರ್ಗಪತಿ-ಕೋಟೆಯ ಒಡೆಯ,
ಕೋಟೆವಳ ೨ ೪
ದುರ್ಧರ-ಸಂಕಟ, ಆಪತ್ತು,
ಅಸಹನೀಯತೆ ೮ ೮೨
ದುರ್ವೃತ್ತ-ದುರಾಚಾರಿ, ಕೀಳು
ನಡತೆಯವ ೩ ೪೮
ದುಷ್ಕರ್ಮಹರ-ಪಾಪಗಳನ್ನು
ಕಳೆಯುವವ, ಶ್ರೀಕೃಷ್ಣ ೭ ೨೪
ದೂರ್ವಾ-ಕರುಕೆ ೪ ೯
ದೃಕ್ -ಕಣ್ಣು, ದೃಷ್ಟಿ ೬ ೨೮
ದೃಗುಜಲ-ಕಂಬನಿ ೯ ೧೧
ದೃಗುತ್ಪಲ-ನೀಲಕಮಲದಂತಹ ಕಣ್ಣು ೫ ೫೩ ೮ ೪೭
ದೆ–ದೇ–ದೈ
ದೇವಮುನಿ-ನಾರದ ೩ ೧೨
ದೇವರಿಪು-ರಾಕ್ಷಸ, ಅಸುರ ೬ ೧೦
ದೇವಾಂಗ-ನೂಲಿನ, ಬಟ್ಟೆ ೯ ೪೦
ದೇಹಚ್ಛವಿ-ಮೈಯಕಾಂತಿ, ೫ ೩೧
ಮೈಯಮೆರುಗು ೮ ೩೫
ದೈತ್ಯಾನೀಕ-ಅಸುರರ ಸಮೂಹ ೨ ೧೦
ದೊ–ದೋ
ದೊರಾರಿಸು-ನಿಷ್ಕುರ ನುಡಿಯಾಡು, ಬೆದರಿಸು, ೭ ೧೨
ತಿರಸ್ಕರಿಸು ೭ ೩೪
ದೋರೆವೆಣ್ -ತುಂಬು ಜವ್ವನೆ,ತರುಣ ಸ್ತ್ರೀ ೮ ೪೭
ದೋರ್ದಂಡ-ದಂಡದಂತಿರುವ ತೋಳು ೨ ೫೯ ೮ ೫೯
ದೋಷ-ಕಲಂಕ, ಅಪರಾಧ ೩ ೫೪
ದ್ಯೂತಕೇಳಿ-ಜೂಜಾಟ ೩ ೫೦
ದ್ವಯ-ಎರಡು, ಜೊತೆ ೫ ೩೦
ದ್ವಾರಪಾ;-ಬಾಗಿಲ ಕಾಪನವ ೭ ೨೧
ದ್ವಿಜ-ಬ್ರಾಹ್ಮಣ ೯ ೫೧
ದ್ವಿಜರಾಜ-ಚಂದ್ರ, ಬ್ರಾಹ್ಮಣ ಶ್ರೇಷ್ಠ ೨ ೪೧
ಧ–ಧಾ
ಧನಂಜಯ-ಅರ್ಜುನ ೫ ೫೦
ಧನಪ-ಕುಬೇರ ೨ ೧೨
ಧನಾಡ್ಯ-ಸಿರಿವಂತ ೮ ೪೬
ಧನುಪರ್ವ-ಬಿಲ್ಲ ಹಬ್ಬ ೨ ೨೦
ಧನುರ್ಮಹೋತ್ಸವ-ಬಿಲ್ಲ ಹಬ್ಬ ೪ ೮೦
ಧರಣಿರುಹ-ಮರ, ಗಿಡ ೩ ೧
ಧರಣೀಸುರರು-ಬ್ರಾಹ್ಮಣರು ೮ ೬
ಧರಾಧರ-ಭೂಮಿಯನ್ನು ಧರಿಸಿದವನು, ವರಾಹಾವತಾರಿ ೫ ೫೧
ಧವಳಲೋಚನೆ-ಸ್ವಚ್ಛವಾದ ಕಣ್ಣುಗಳುಳ್ಳವಳು ೪ ೭೪
ಧವಳಾತಪತ್ರ-ಬೆಳ್ಗೊಡೆ, ಶ್ವೇತಚ್ಛತ್ರ ೬ ೨೮
ಧವಳಾರ-ಸೌಧ, ಅರಮನೆ ೬ ೨೭
ಧಾತುಗುಂದು-ನಿರ್ಬಲವಾಗು ೩ ೨೬
ಸತ್ತ್ವಹೀನವಾಗು ೮ ೫೦
ಧಾಳಿಡು-ಮುತ್ತಿಗೆಹಾಕು ೭ ೯
ಧುಮ್ಮಿಕ್ಕು-ಒಮ್ಮೆಲೆನುಗ್ಗುಹಾರು ೮ ೮೨
ಧೃತಿ-ಧೈರ್ಯ, ಸ್ಥಿರಭಾವ ೫ ೧
ಧೇನುಕ-ಹಸುವಿನ ರೂಪದಿಂದ ಬಂದ ಒಬ್ಬ ಅಸುರ ೧ ೧೯
ಧ್ವಾನ-ಸಪ್ಪುಳ, ಶಬ್ಧ ೮ ೨೦
ನ, ನಾ, ನಿ, ನೀ,
ನಕ್ರ-ಮೊಸಳೆ ೫ ೨೬
ನಟರಂಗ-ನರ್ತನ ಶಾಲೆ ೬ ೨
ನಂಟು-ಆಪ್ತತ್ವ, ಬಾಂಧವ್ಯ ೩ ೬
ನಂದನ-ಮಗ ೨ ೨೪ ೯ ೧೨
ನಭ-ಆಕಾಶ ೬ ೨೯
ನರಲ್-ನರಳಿಕೆ, ದುಃಖ ೭ ೧೦
ನಲವು-ಸಂತೋಷ, ಪ್ರೀತಿ ೬ ೨
೯ ೨೪
ನಲುಮೆ-ಪ್ರೀತಿ, ಪ್ರೇಮ ೫ ೬
ನವನೀತ-ಬೆಣ್ಣೆ ೨ ೧೯
ನವಾಂಘ್ರಿ-ಎಳೆಯ ಪಾದ ೬ ೩೪
ನವಾಯಿ-ಹೊಸಪರಿ ೨ ೪೮
ಹೊಸ ಹುರುಪು ೯ ೧೦
ನಳ-ಒಂದು ಜಾತಿಯ ಚಿಕ್ಕಮಿನ ೫ ೨೯
ನಳಿದ-ಕೊಂಕಿದ, ಬಾಗಿದ ೨ ೪೫
ನಳಿನಭವ-ಬ್ರಹ್ಮದೇವ ೩ ೭
ನಳಿನರಿಪು-ಚಂದ್ರ ೩ ೫೫
ನಾಕ-ಸ್ವರ್ಗ ೨ ೩೨ ೫ ೪೧
ನಾಭಿ-ಹೊಕ್ಕಳು ೯ ೩೬ ೨ ೩೧
ನಾ ಗಭವನ-ಸರ್ಪಗಳ ರಾಜಧಾನಿ ೬ ೧೭
ನಾನಾಛಂದ-ವಿವಿಧೋಪಾಯ, ಬೇರೆ ಬೇರೆ ಬಗೆ ೨ ೧೩
ನಾರಂಗ-ಕಿತ್ತಿಳೆ, ಸಕ್ಕರೆಗಂಚಿ ೬ ೩
ನಾಸಾಪುಟ-ಮೂಗಿನ ಹೊರಳೆ ೨ ೫೩
ನಿಕರ-ಸಮೂಹ ೫ ೪೧
ನಿಕಾಯ-ಸಮೂಹ ೧ ಸೂ
ನಿಕುರುಂಬ-ಗುಂಪು, ಸಮೂಹ ೨ ೪೩
ನಿಗಡ-ಸರಪಣಿ ೪ ೪೧
ನಿಗಮ-ವೇದ ೧ ೧೯ ೨ ೨೬ ೬ ೫೪
ನಿಗಮಾತೀತ-ವೇದಗಳಿಗೂ ಮೀರಿ ನಿಂತವ ೫ ೩೩
ನಿಗಮಾರ್ಥ-ವೇದಾಂತ ೫ ೫೦
ನಿಗರ್ವಿ-ಹೆಮ್ಮೆಯಿಲ್ಲದವ ೩ ೩೯
ನಿಗಳ-ಕಾಲಸರಪಣಿ ೯ ೪೧
ನಿಚಯ-ಸಮೂಹ, ಗುಂಪು ೬ ೩
ನಿಚ್ಚುಟ-ಧೈರ್ಯಶಾಲಿ, ಗಟ್ಟಿಗ ೮ ೫೬
ನಿಜ-ಸತ್ಯ, ರಹಸ್ಯ ೩ ೧೯
ನಿಜಕೃತ್ಯ-ಸ್ವಕರ್ತವ್ಯ, ಸ್ವಕರ್ಮ ೩ ೪೨
ನಿಟ್ಟೆಲುವು-ಉದ್ದವಾದ ಎಲುವು ೮ ೪೦
ನಿತ್ಯ-ಬಹುಕಾಲ ಬಾಳುವಂತಹ ೩ ೪೨
ನಿಧಿ-ಭಾಗ್ಯ, ಸಂಪತ್ತು ೫ ೫೨
ನಿಧಿಪ-ಕುಬೇರ ೩ ೧೦
ನಿಬ್ಬರ-ಸತ್ವರಹಿತ, ಸವಿಯಿಲ್ಲದ, ೪ ೮೨
ನಿರ್ಭರ, ಗಟ್ಟಿಯಾದ ೮ ೫೫
ನಿಂಬಿಕೆ-ಜಟ್ಟಿಗಳು ಪೂಜಿಸುವ
ಒಂದು ಕ್ಷುದ್ರದೇವತೆ ೮ ೫೯
ನಿಯತ-ನಿಯಮಕ್ಕೆ ಸರಿಯಾದ ೫ ೩೦
ನಿಯೋಗ-ರಾಯಭಾರ,
ರಾಜಸೇವೆ ೨ ೨೦
ನಿಯೋಗಿ-ರಾಯಭಾರಿ, ರಾಜ
ಪ್ರತಿನಿಧಿ ೮ ೪೬
ನಿರಂಜನ-ಕಾಡಿಗೆಯಿಲ್ಲದ ದೀಪ ೬ ೪೨
ನಿರಾಮಯ-ರೋಗವಿಲ್ಲದವನು ೫ ೫೧
ನಿರಾಳಪಥ-ಬಯಲು, ಆಕಾಶ ೫ ೩೩
ನಿರಿ-ನಿರಿಗೆ ೨ ೪೫
ನಿರೂಪ-ಆಜ್ಞೆ, ಹೇಳಿಕೆ ೫ ೩೯
ನಿರೂಪಿಸು-ಹೇಳು, ಅಪ್ಪಣೆ ಮಾಡು ೨ ೬೬ ೮ ೧೦
ನಿರ್ಗುಣಿ-ಪ್ರಾಕೃತಗುಣಗಳು ಇಲ್ಲದವನು ೫ ೩೬
ನಿರ್ಘೋಷ-ಗರ್ಜನೆ ೬ ೨೧
ಸಪ್ಪಳ ೮ ೨೦
ನಿರ್ಜರೇಶ್ವರ-ದೇವತೆಗಳ ಒಡೆಯ, ಇಂದ್ರ ೮ ೩೬
ನಿರ್ಣಯ-ತೀರ್ಮಾನ ೨ ೧೬
ನಿರ್ಭಿನ್ನ-ಭೇದವಿಲ್ಲದಿರುವಿಕೆ ೩ ೩೭
ನಿರ್ಮಳ-ದೋಷರಹಿತ ೪ ೫೦
ನಿರ್ಲೇಪ-ದೋಷರಹಿತ ೫ ೩೫
ನಿವಡಿಸಾರ-ಕುಸ್ತಿಯ ಕ್ರಮ ೮ ೬೫
ನಿವೇದಿಸು-ಬಣ್ಣಿಸಿ ಹೇಳು ೯ ೫೧
ನಿಶಾಚಾರ-ಇರುಳಲ್ಲಿ ತಿರುಗಾಡುವವ, ರಾಕ್ಷಸ ೩ ೭
ನಿಶಾಟ-ರಾಕ್ಷಸ ೮ ೨೫
ನಿಶಾಧಿಪ-ಚಂದ್ರ ೯ ೧೮
ನಿಶಿ-ರಾತ್ರಿ ೮ ೧
ನಿಶ್ಯಂಕ-ಸಂಶಯವಿಲ್ಲದವ, ನಿರ್ಭಿತ ೫ ೩೩
ನಿಷಂಗ-ಬತ್ತಳಿಕೆ ೪ ೧೫
ನಿಷ್ಪಲ-ವ್ಯರ್ಥ, ಪ್ರಯೋಜನವಿಲ್ಲದ ೩ ೪೩
ನಿಸ್ಪೃಹ-ಆಶಾರಹಿತ ೩ ೩೪
ನಿಸ್ಸಾರ-ಸತ್ತ್ವರಹಿತ, ಸವಿಯಲ್ಲದುದು ೩ ೩೫
ನಿಸ್ಸೀಮ-ಎಲ್ಲೆಯಿಲ್ಲದ, ಮೇರೆ ಮೀರಿದ ೫ ೩೮
ನಿಳಯ-ಮನೆ ೨ ೨೨ ೬ ೫೦
ನೀಕು-ನೀಗು, ಕಳೆ ೨ ೧೦
ನೀಗು-ಕಳೆದುಕೊಳ್ಳು ೬ ೧೨
ನೀರಜಾಸನ-ಬ್ರಹ್ಮದೇವ ೧ ೧
ನೀಲಾಂಬರ-ಬಲರಾಮ ೯ ೭
ನುಗ್ಗಾಗು-ಸಣ್ಣಾಗು, ಸೊರಗು ೬ ೩೩
ನೃಪಾಲ-ಅರಸ, ರಾಜ ೩ ೨೯
ನೆ, ನೇ, ನೈ
ನೆಮ್ಮು-ಅತುಕೊಳ್ಳು ೮ ೭೬
ನೆಮ್ಮುಗೆ-ಆಧಾರ, ನಂಬುಗೆ ೯ ೫
ನೆರವಿ-ಸಮೂಹ, ಗುಂಪು ೨ ೬೨ ೬ ೯
ನೆಲೆ-ರಹಸ್ಯ, ಗುಟ್ಟು ೩ ೧೫
ನೆಲೆಗಳಿದ-ತಳವನ್ನು ಕಾಣದ, ಆಳವಾದ ೯ ೧೨
ನೆಲೆಗೊಳಿಸು-ಸ್ಥಿರವಾಗಿಸು ೫ ೩೦
ನೇಮ-ಆಜ್ಞೆ ೮ ೭೬
ನೇಮಿಸು-ಆಜ್ಞೆಮಾಡು ೨ ೨೧
ನೇರ್ ಪಡದ-ಓರಣತಪ್ಪಿದ ೮ ೨
ನೇವುರ-ನೂಪುರ, ಕಾಲಗೆಜ್ಜೆ ೪ ೧೪
ನೇವುಳ-ಉಡೆದಾರ, ಸರ ೪ ೩೫
ನೇಹ-ಸ್ನೇಹ, ಪ್ರೀತಿ ೩ ೫೩
ನೇಹ-ಕಳೆ ೯ ೧೫
ನೈದಿಲು-ಚಂದ್ರಕಮಲ, ಕುಟಜ ೪ ೩೪
ನೊ, ನೋ
ನೊಸಲು-ಹಣೆ ೪ ೧೪
ನೋನ್ – ವ್ರತಮಾಡು, ಪೂಜೆ ಮಾಡು ೪ ೫೨
ನೋಂಪಿ-ವ್ರತ ೪ ೫೨
ಪ, ಪಾ, ಪಿ, ಪೀ
ಪಂಕಜನನ-ಕಮಲದ ತೋಟ ೩ ೨೪
ಪಂಕರುಹ-ಕೆಸರಿನಲ್ಲಿ ಜನಿಸಿದುದು, ಕಮಲ ೨ ೩೨
ಪಟಹ – ಒಂದು ರಣವಾದ್ಯ ೮ ೩೮
ಪಟುಭಟ-ಚತುರನಾದ ಶೂರ ೮ ೪೯
ಪಟ್ಟಾವಳಿ-ರೇಶಿಮೆಯ ಬಟ್ಟೆ ೬ ೨೬
ಪಟ್ಟಿಸ-ಆಯುಧವಿಶೇಷ ೮ ೬೮
ಪಟ್ಟು-ಉಟ್ಟುಕೊಳ್ಳುವ ಬಟ್ಟೆ, ಉಡೆಬಟ್ಟೆ ೮ ೫೬
ಪಟ್ಟೆ-ರೇಶಿಮೆಯ ಬಟ್ಟೆ ೯ ೪೨
ಪಡಿ-ಪ್ರತಿ, ಸಮೂಹ ೮ ೨೩
ಪಡಿಗ-ಅಗಲವಾದ ಪಾತ್ರೆ ೯ ೩೧
ಪಡಿತಳಿಸಿ-ಪ್ರತಿಯಾಗಿ, ಪುನಃ ೮ ೬೧
ಪಡುವಣ-ಪಶ್ಚಿಮದಿಕ್ಕು ೩ ೫೨ ೮ ೯೦
ಪಣೆ-ಹಣೆ ೩ ೧೬
ಪತಂಗ-ಸೂರ್ಯ ೨ ೨೨
ಪತ್ರ-ಎಲೆ ೬ ೮
ಪಥಿಕ-ದಾರಿಕಾರ, ಪಯಣಿಗ ೫ ೪೭
ಪಂಥ-ಜಿದ್ಧು, ಹೇವ ೯ ೧೦
ಪದ-ಹಾಡು ೮ ೪೮
ಪದತಳ-ಅಂಗಾಲು ೪ ೨೦
ಪದನಖ-ಕಾಲಬೆರಳಿನ ಉಗುರು ೫ ೨೨
ಪದವಿ-ಉನ್ನತಿ, ಅಭ್ಯುದಯ ೩ ೩೮
ಪನ್ನಗಾರಿ-ಸರ್ಪಗಳ ವೈರಿ ಗರುಡ ೨ ೬೧
ಪನ್ನಗಾರಿಧ್ವಜ-ಗರುಡಧ್ವಜ, ಶ್ರೀಕೃಷ್ಣ ೧ ೬೧
ಪನ್ನೀರು-ಗಂಧಯುಕ್ತ ಜಲ, ಪರಿಮಳ ಜಲ ೬ ೫೧
ಪಯ-ಪದ, ಅಡಿ ೮ ೬೮
ಪರ-ಮೇಲಿನ, ಶ್ರೇಷ್ಠ ೨ ೨೦
ಪರ-ಮುಕ್ತಲೋಕ ೩ ೨೫
ಪರುಠವಿಸು-ಅಣಿಗೊಳಿಸು ಸಿದ್ಧಗೊಳಿಸು ೪ ೮೫
ಪರದರು-ವರ್ತಕರು ೨ ೪
ಪರರೂಪ-ಶ್ರೇಷ್ಠವಾದ ರೂಪವುಳ್ಳವನು ೫ ೩೫
ಪರಸು-ಗಂಡುಗೊಡಲಿ,ಚಪ್ಪಗೊಡಲಿ ೧ ೩ ೭ ೨೫
ಪರಾತ್ ಪರ – ಶ್ರೇಷ್ಠರಲ್ಲಿ ಶ್ರೇಷ್ಠನು ೩ ೪೧
ಪರಿಕರ-ಪರಿವಾರದ ಜನ ೬ ೧೪
ಜೊತೆಯ ಜನ ೬ ೫೬
ಪರಿತಾಪ-ದುಃಖ, ಚಿಂತೆ ೬ ೩೫
ಪರಿತಾಪಿಸು-ಕುದಿ, ಹೊಟ್ಟೆಕಿಚ್ಚು ಪಡು ೩ ೪೬
ಪರಿದು-ಅಡ್ಡಾಡಿ, ಓಡಾಡಿ ೬ ೧೨
ಪರಿಪೂರ್ಣಚೇತನ-ಎಲ್ಲ ಜೀವಿಗಳಲ್ಲಿಯೂ
ಅಂತರ್ಯಾಮಿಯಾಗಿ ಇರುವವನು ೫ ೩೪
ಪರಿಮಳ-ಸುಗಂಧ, ಸುವಾಸನೆಯ ದ್ರವ್ಯ ೬ ೫೦
ಪರಿಮಳಿತ-ಸುವಾಸನೆಯಿಂದ ಕೂಡಿದ ೬ ೪೧
ಪರಿಮಳೋದಕ-ಕಂಪುಬೆರೆತನೀರು ೪ ೨
ಪರಿಯಂಕ-ಮಂಚ, ಶಯ್ಯೆ ೧ ೧
ಪರಿಯಂತ-ಅನ್ನಕ ವರೆಗೆ ೪ ೬೮
ಪರಿವಿಡಿ-ಅನುಕ್ರಮ ೨ ೨೭
ಪರಂಪರೆ ೩ ೪೧ ೬ ೧೪ ೪ ೮೩
ಪರಿವೃಢ-ಅರಸ, ದೊರೆ ೨ ೧೮
ಪರಿಸರ-ಹಿನ್ನೆಲೆ ೫ ೩೫
ತೀರಪ್ರದೇಶ ೮ ೧೯
ಪರುಷ-ಸ್ಪರ್ಶಮಣಿ ೬ ೫೪
ಪರುಷ-ಸ್ಪರ್ಶಮಣಿ ೨ ೩೬
ಪರೆದಾಡಿ-ಓಡಾಡಿ ೨ ೪೮
ಪಲಾಶ-ಮುತ್ತುಗ ೫ ೧೧
ಪಲ್ಲವಸತ್ತಿಗೆ-ಒಂದು ಬಗೆಯ ಕೊಡೆ ೬ ೨೧
ಪವಡಿಸು-ಮಲಗಿಕೊಳ್ಳು ೫ ೩೨
ಪವಣು-ಪ್ರಮಾಣ, ಅಳತೆ ೫ ೨೧
ಪವಳಿಗೆ-ಚಿಕ್ಕಧ್ವಜಗಳ ತೋರಣ ೭ ೨೨
ಪಳಿ-ರೇಶಿಮೆಯ ಬಟ್ಟೆ ೬ ೨೬
ಪಾಮರ-ಹುಂಬ, ಮೊದ್ದ ೩ ೪೪
ಪಾರಾವಾರ-ಸಮುದ್ರ ೨ ೫೭
ಪಾರಿವ-ಪಾರಿವಾಳ ೬ ೬
ಪಾವಕನೇತ್ರ-ಅಗ್ನಿನೇತ್ರ, ಶಿವ ೧ ೨
ಪಾಳೆಯ-ಬೀಡಾರ, ವಸತಿ ೫ ೫೬
ಪಿಕ-ಕೋಗಿಲೆ ೬ ೭
ಪಿಡಿ-ಹಿಡಿಕೆ ೪ ೨೨
ಪಿಂಡಿವಾಳ-ಒಂದು ಬಗೆಯ ಆಯುಧ ೭ ೨೫
ಪಿನಾಕಿ-ಶಿವ ೯ ೪೩
ಪಿಂದುಗಳೆ-ಹಿಂದಕ್ಕಟ್ಟು, ಧಿಕ್ಕರಿಸು ೭ ೨೧
ಪಿಲ್ಲಣಿಗೆ-ಪರಿಘಾಯುಧ ೮ ೫೫
ಪಿಸುಣತನ-ಚಾಡಿ ಹೇಳುವ ಸ್ವಭಾವ ೩ ೪೯
ಪೀತಾಂಬರ-ಹಳದಿಬಣ್ಣದ ಬಟ್ಟೆ ೪ ೨
ಪೀಲಿ-ನವಿಲ ಗರಿ ೨ ೫೫
ಪು, ಪೂ, ಪೆ, ಪೇ, ಪೊ
ಪುದಿ-ವ್ಯಾಪಿಸು ೧ ೧೩
ಪುನುಗು-ಒಂದು ಪರಿಮಳದ್ರವ್ಯ ೪ ೩೬
ಪುರಂದರ-ಇಂದ್ರ ೯ ೪೩
ಪುರಹರ-ತ್ರಿಪುರದೈತ್ಯರನ್ನು ಸಂಹರಿಸಿದವನು, ಶಿವ ೧ ೩
ಪುರಾಕೃತ-ಮುನ್ನಮಾಡಿದ ಕರ್ಮ, ಪಾಪ ೩ ೧೭
ಪುರುಷೋತ್ತಮ-ವಿಷ್ಣು ೩ ೨೧
ಪುರುಳಿ-ಹೆಣ್ಣುಗಿಳಿ
ಪುಷ್ಪಕ-ವಿಮಾನ ೮ ೨೪
ಪುಳಕಿಸು-ರೋಮಾಮಚಿತನಾಗು ೨ ೨೫
೯ ೪೪
ಪುಳಿನ-ಮಳಲು, ಉಸುಕು ೪ ೪೯ ೬ ೭
ಪೂಣಿಸು-ಹೂಳು, ಅಡಗಿಸು ೪ ೫೫
ಪೂತ-ಪವಿತ್ರನಾದವ ೧ ೨ ೧ ೧೮
ಪೂತನಿ-ರಾಕ್ಷಸಿ, ಕಂಸನ ದಾಸಿ ೧ ೧೯
ಪೂರ್ವದ-ಮೊದಲಿನ, ಹಳೆಯ ೨ ೬೩
ಪೂವಲಿ-ರಂಗವಲ್ಲಿ, ಚಿತ್ರದ ಸುಳಿವುಬಳ್ಳಿ ೮ ೪೫
ಪೆಂಡೆಯ-ಬಿರುದಿನ ಸರಪಣಿ ೮ ೫೬
ಪೆರೆನೊಸಲು-ಚಂದ್ರನಂತಿರುವ ಹಣೆ ೨ ೫೩
ಪೆರ್ಮೆ-ಹೆಚ್ಚಳ, ದೊಡ್ಡಿತೆ, ೧ ೨೨
ಮಹಾತ್ಮ, ಮಹತಿ ೬ ೪೭
ಪೊಂಗೊಳಲು-ಚಿನ್ನದಕೊಳಲಾ ೪ ೬೨
ಪೊಂಬಚ್ಚು-ಸುವರ್ಣಮುದ್ರೆತಾಯಿತ ೨ ೪೯
ಪೊಂಬಟ್ಟೆ-ಹೊನ್ನ ಬಣ್ಣದ ವಸ್ತ್ರ, ಪೀತಾಂಬರ ೬ ೨೬
ಪ್ರಕರ-ಸಮೂಹ ೩ ೪೩
ಪ್ರಣತಜನ-ಶರಣು ಬಂದ ಜನರು, ಭಕ್ತರು ೩ ೩೯
ಪ್ರತತಿ-ಸಮೂಹ ೩ ೨೦
ಪ್ರಭಾವ-ಮಹಿಮೆ, ಘನತೆ ೫ ೨೮
ಪ್ರವರ-ಸಮೂಹ, ಕುಲ ೩ ೨೨
Leave A Comment