. ಅಕ್ರೂರ : ಕಾವ್ಯನಾಯಕ, ಯದುವಂಶದಲ್ಲಿ ಹುಟ್ಟಿದವನು. ಕಂಸನ ಮುಖ್ಯಸಚಿವನಾದರೂ ಶ್ರೀಕೃಷ್ಣನ ಪರಮ ಭಕ್ತ.

. ಕಂಸ : ಯದುವಂಶದ ಉಗ್ರಸೇನ ರಾಜನ ಮಗ; ಸಾಧು-ಸತ್ಪುರುಷ ಹಿಂಸಕನಾದುದರಿಂದ ಅಸುರವರ್ಗದಲ್ಲಿ ಸೇರಿಕೊಂಡವ. ತಂಗಿ ದೇವಕಿಯ ಮಗನಾದ ಶ್ರಿಕೃಷ್ಣನ ಪರಮದ್ವೇಷಿ, ದೇವವಿರೋಧಿ, ಮಥುರೆಯ ರಾಜ.

. ಶ್ರೀಕೃಷ್ಣ : ವಿಷ್ಣುವಿನ ಎಂಟನೆಯ ಅವತಾರಿ. ಯದುವಂಶದ ವೃಷ್ಟಿಕುಲದ ವಸುದೇವನ ಮಗನಾಗಿ ಜನಿಸಿದವ. ಕಂಸನ ಹಿಂಸೆಗಾಗಿ ಗೋಕುಲದ ಒಡೆಯ ನಂದನ ಮನೆಯಲ್ಲಿ ಬೆಳೆದಿರುವ. ಈ ಕೃತಿಯ ಮೂಲಾಧಾರ.

. ಬಲರಾಮ : ವಸುದೇವನ ಇನ್ನೊಬ್ಬ ಹೆಂಡತಿ ರೋಹಿಣಿಯ ಮಗ, ಶ್ರೀಕೃಷ್ಣನಿಗೆ ಅಣ್ಣನಾದರೂ ಪ್ರೀತಿಯ ಜೊತೆಗಾರ, ಆದಿಶೇಷನ ಅವತಾರಿಯಿವನೆಂದು ಪುರಾಣಗಳು ಹೇಳಿರುವುವು.
. ನಂದ : ಮಥುರೆಯ ಬಳಿಯ ಗೊಲ್ಲರ ಪಳ್ಳಿಯ ಯಜಮಾನ. ವಸುದೇವನ ಆಪ್ತಬಂದು. ಶ್ರಿಕೃಷ್ಣ-ಬಲರಾಮರ ಸಾಕುತಂದೆ

. ಯಶೋದೆ : ನಂದಗೋಪನ ಪತ್ನಿ, ಶ್ರೀಕೃಷ್ಣನ ಸಾಕುತಾಯಿ.

. ವಸುದೇವ : ಅಕ್ರೂರನ ಆಪ್ತಬಂದುಃ ಯದುವಂಶದ ಒಬ್ಬ ನಾಯಕ ಕಂಸನ ತಂಗಿ ದೇವಕಿಯ ಪತಿ. ಕಂಸನ ಕ್ರೋಧಕ್ಕೊಳಗಾಗಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿರುವವ. ಶ್ರೀಕೃಷ್ಣನ ತಂದೆ.

. ದೇವಕಿ : ಕಂಸನ ಚಿಕ್ಕಪ್ಪ ದೇವಕನ ಮಗಳು; ವಸುದೇವನ ಪತ್ನಿ, ಶ್ರೀಕೃಷ್ಣನ ತಾಯಿ. ಕಂಸನ ಕ್ರೋಧಾಗ್ನಿಯಿಂದ ಕಷ್ಟಕ್ಕೊಳಗಾದವಳು.

. ರಜಕ : ಕಂಸನ ಅರಮನೆಯ ಅಗಸ. ಶ್ರೀಕೃಷ್ಣನ ವಿರೋಧಿ. ಶ್ರೀಕೃಷ್ಣನ ಮಾತನ್ನು ಕೇಳದೆ ಮರಣಕ್ಕೆ ಈಡಾದ.

೧೦. ಸುದಾಮ : ಮಥುರೆಯ ಒಬ್ಬ ಹೂವಡಿಗ. ಕಂಸನ ಅರಮನೆಗೆ ಹೂಮಾಲೆಗಳನ್ನು ಪೂರಯಿಸುವವ. ಶ್ರೀಕೃಷ್ಣನ ಪರಮ ಭಕ್ತ.

೧೧. ಕುಬ್ಜೆ : ಕಂಸನ ರಾಣಿವಾಸದಲ್ಲಿ ಸೈರಂಧ್ರಿಯಾಗಿರುವವಳು. ಸುಗಂಧವಿಲೇಪನಗಳನ್ನು ಅನುಗೊಳಿಸುವುದು ಇವಳ ಕಾಯಕ. ಶ್ರೀಕೃಷ್ಣನ ಏಕಾಂತ ಭಕ್ತೆ. ಸುಸ್ವರೂಪಿಣಿಯಾದರೂ ಮೂಡೊಂಕಿನ ಮೈಯ ಮೂಲಕ “ಕುಬ್ಜಾ” ಎಂಬ ಹೆಸರನ್ನು ಪಡೆದವಳು.

೧೨. ಕುವಲಯಾಪೀಡ : ಕಂಸನ ಪಟ್ಟದಾನೆ. ಕಂಸನಂತೆಯೆ ಮಹಾದುಷ್ಟ ಪ್ರಾಣಿ. ಕೃಷ್ಣನನ್ನು ಕೊಲ್ಲಿಸುವದಕ್ಕಾಗಿ ಕಂಸ ಇದರ ಸಹಕಾರವನ್ನು ಪಡೆಯುತ್ತಾನೆ.

೧೩. ಚಾಣೂರ : ಕಂಸನ ಆಶ್ರಯದಲ್ಲಿರುವ ಒಬ್ಬ ಜಟ್ಟಿ. ಕೃಷ್ಣನನ್ನು ಕೊಲ್ಲುವ ಉದ್ಧೇಶದಿಂದ ಅವನೊಂದಿಗೆ ಮಲ್ಲಗಾಳಿಗವಾಡಿ ತಾನೆ ಸಾಯುತ್ತಾನೆ.

೧೪. ಮುಷ್ಟಿಕ : ಚಾಣೂರನ ಜೊತೆಯ ಜಟ್ಟಿ.  ಇವನೂ ಮಲ್ಲಗಾಳೆಗದಲ್ಲಿ ಶ್ರೀಕೃಷ್ಣನಿಂದ ಸಾವನ್ನಪ್ಪಿದ.

೧೫. ಅಕ್ರೂರಸತಿ : ಅಕ್ರೂರನ ಹೆಂಡತಿ : ಪತಿಕಾರ್ಯಾನುಕೂಲೆ; ಶ್ರಿಕೃಷ್ಣನ ಭಕ್ತೆ.

೧೬೧೭ ಆಸ್ತಿ, ಪ್ರಾಸ್ತಿ : ಕಂಸನ ಇಬ್ಬರು ಹೆಂಡಂದಿರು. ಮಗಧ ದೇಶದ ರಾಜನಾಧ ಜರಾಸಂಧನ ಪುತ್ರಿಯರು.