ಸೂಚನೆ :      ಪರಮಧರ್ಮರಹಸ್ಯನೀತಿಯ
ಪರಿವಿಡಿಯನಕ್ರೂರ ದೇವಂ
ಗೊರೆದು ಹರಿ ಮಥುರಾಪುರಿಗೆ ತೆರಳಿದನು ಬಲಸಹಿತ ||

ಪದನು :

ಧರಣಿರುಹ ನಿಕರದಲಿ ಚಂದನ
ಸುರತತುಗಳಿಪ್ಪಂತೆ ಮುನಿಗಳ
ನೆರವಿಯಲಿ ವಾಲ್ಮೀಕಿ ವೇದವ್ಯಾಸ

[1]ರಿಪ್ಪಂತೆ[2]
ಹರಿವ ನದಿನಿವಹದಲಿ ಯಮುನಾ
ಸುರನದಿಗಳಿಪ್ಪಂತೆ [3]ಕೃಷ್ಣ ಬ
[4]ರುಗಳೊಪ್ಪಿ [5]ರಲವರಕಂಡ[6]ಕ್ರೂರನಿಂತೆಂದ                                           ೧

ಮಧುರೆಯಲಿ ಕಾರ್ಮುಕಮಹೋತ್ಸವ
ವದು [7]ನಡೆವುದದುಭುತವು ನೀಂ[8]ಬಂ
ದದರ ವಿಭವವ[9]ನಿಟ್ಟಿಸುದೊಗ್ಗಿನಲಿ ನಿಮ್ಮೊಳಗೆ
ದಧಿ ಘೃತಾಮೃತ[10]ಪಣ್ ಫಲವ[11] ಕೊಂ
ಡೊದಗಿ ಬಹುದೀ ಬಲಮುಕುಂದರ
ನುದಯದಲಿ ನಮ್ಮೊಡನೆ ಕಳುಹುವುದೆಂದನಕ್ರೂರ                                        ೨

ಬಿಲ್ಲಹಬ್ಬದ ಚೆಲುವ ಬಳಿ[12]ಕಾ[13]
ಮಲ್ಲಯುದ್ಧದ ದಂಡಿಯನು ಕಂ
ಡಲ್ಲದೀ ಬಲಕೃಷ್ಣರಿಹರೇ ಕೇಳಿಲಂಪಟರು
ಅಲ್ಲಿಗಿವರನು ರಥವನೇರಿಸಿ
ಮಲ್ಲನೊಡಡಗೊಂಡೆಯ್ವೆನೆನೆ ಹೊಲ
ಬಲ್ಲೆನುತ [14]ಮನದೊಳಗೆ ನಂದನು ಮರುಗಿ ಚಿಂತಿಸಿದ[15]                              ೩

ಅಹಹ ತರುಣರ ಕಳುಹಿನಾ ನಿ
ರ್ವಹಿಸಬಲ್ಲೆನೆ ಕಂಸನಗರಿಯ
ಬಹಳ ವಿಭವವನೆನ್ನ ಮಕ್ಕಳು ನೋಡಿ ಫಲವೇನು
ಬಹು ವಿಧದ ಗೋರಸವ ಕೊಂಡಾಂ
ಬಹೆನು [16]ತರುಣರ[17] ಚಿಂತೆ ಬೇಡೆನೆ
ಗಹಗಹಿಸಿ ನಗುತಿರ್ದನಾ ಯದುಮಂತ್ರಿ ಮನದೊಳಗೆ                                     ೪

ಕಳವಳಿಸುತೀ ಮಾತ ಕೇಳುತ
[18]ಪುಳಕದಂಗದ[19] ಬೈತಲೆಯ ಥಳ
ಥಳಿಸುವೋಲೆಯ ಕಾಲ [20]ಹರಳು[21]ಂಗುರದ ಮಂಟಿಗೆಯ
ಹಲವು ಕಡಗದ ಹೊನ್ನಗಂಕಣ
ದುಲಿಯ ಹೊಸಹುಟ್ಟಿಗೆಯ ಮುಸುಕಿನ
[22]ನಳಿನಮುಖಿ ಬಳುಕುತ್ತ[23] ಬಂದಳ್ಯ [24]ಶೋದೆ[25] [26]ದುಗುಡದಲಿ[27]              ೫

ಲೇಸು ಲೇಸಕ್ರೂರನೃಪ ಕಂ
ಸಾಸುರನ ಹೊರೆಗೆನ್ನ ಮಕ್ಕಳ
ಬೋಸರಿಸಿ ಕೊಂಡೊಯ್ವ ಬೆಡಗಿನ [28]ದಂಡಿ[29] ಲೇಸಾಯ್ತು
ದೇಶದೊಡೆಯರ ಕೂಡೆ ಗೋಕುಲ
ವಾಸಿ[30]ಗಳದೆತ್ತಣದು ನಂಟೆನು[31]
ತಾಸು[32]ರದ[33] ತಲ್ಲ[34]ಣದಿ[35] ನು[36]ಡಿದಳ್ಯಶೋದೆ ದೈನ್ಯದಲಿ[37]                                ೬

ಹೀನರೈ ನೀವಕಟಕಟ ತವ
ಸೂನುಗಳ ವಿಕ್ರಮವ ನೋಡುವ
ಡಾನಳಿನಭವನರಿಯನದು [38]ನೀವೇನು ಬಾಲ್ಯದಲಿ[39]
ದಾನವರನರೆಯಟ್ಟಿ ಕೊಂದರು
ಮಾನವರು ನೀವ್ ಮರೆದಿರೇ ಸುತ
ರಾ ನಿಶಾಚರ ಕಂಸನನು ಲೆಕ್ಕಿಸುವರಲ್ಲೆಂದ                                                  ೭

ಹರಿ ನಿಮಗೆ ಮಗನಲ್ಲದನುಜಾ
ಮರರ ಲೆಕ್ಕಿಪನಲ್ಲ ಮಿಕ್ಕಿನ
ತರುಣರೆಂದೆಣಸದಿರಿ ಸಾಕ್ಷಾದ್ವಿಷ್ಣು ನರನಾಗಿ
ಧರೆಯ ಭಾರವನಿ[40]ಳುಹ[41]ಲೆಂದವ
ತರಿಸಿದನು ನಾಳಿನಲಿ ಕಂಸಾ
ಸುರನ ಸಂಹರಿಸುವನು ನೀವಿದಕಂಜಬೇಡೆಂದ                                              ೮

ಎಂದು ನಂದಯಶೋದೆಯರ ಹೃದ
ಯಾಂಧಕಾರವ ಬಿಡಿಸೆ ಕೈರವ
ಬಂಧುವಿಳೆಯ ತಮಂಧವನು ಬಿಡಿಸಿದನು ಬಳಿಸಲಿಸಿ
ನಂದಭವನಕೆ ದಾನಪತಿಯೈ
ತಂದ ವಾ*[42] [43]ರ್ತೆಯನರಿವೆನೆಸುತರ[44]
ವಿಂದರಿಪು[45]ವೈತಂದ[46]ವೋಲೆಸೆದಿರ್ದನಭ್ರದಲಿ                                           ೯

ಇಂದಿರೆಯ ಬಹುರೂಪಿ [47]ತಕ್ಕರ[48]
ವಿಂದನಾಭನ ವೇಣುನಾದ[49]ಸು
ರೇಂದ್ರನಿಧಿ[50] ಪದಿವೌಕಸರ ಗೋಪಾಲ ಲೀಲೆಗಳ
ಚೆಂದವನು ನೋಡುವೆನೆನುತಲಾ
ನಂದಮಿಗಲೈ ತಂದ[51]ನೆನೆ[52] ಬಳಿ
ಕಂದಿನಿರುಳೊಪ್ಪಿದುದು ಚಂದ್ರಿಕೆ ಭುವನಜನ ನಲಿಯೆ                                      ೧೦

ಪಸರಿಸಿದ ಬೆಳುದಿಂಗಳಲಿ ನಿಂ
ದಸುರಹರನುತ್ಸಾಹಿಸುತ ರಾ
ಕ್ಷಸನ ಮಂತ್ರಿಯ[53] ಕರೆಸಿ ನುಡಿದನು [54][55]ಚಿತ ವಚನದಲಿ
ಅಸುರಪತಿ ಸುಕ್ಷೇಮಿಯೇ ಮ
ನ್ನಿ ಸುವನೇ ನೀ ಬಂದ ಕೃತ್ಯವ
ಸಸಿನೆ ಹೇಳೆನೆ ದಾನಪತಿ ಬಿನ್ನವಿಸಿದನು ನಿಜವ                                             ೧೧

ದೇವ ನೀನವರತಿಸಿದಂದವ
ದೇವಮುನಿ [56]ಹೇಳಿದರೆ[57] ಮರ್ಕಟ
ಹಾವ ಕಂಡಂದದಲಿ ಸಿಡಿಮಿಡಿಗೊಂಡು ರಕ್ಕಸ[58]ನು[59]
ಸಾವನಡಿಗಡಿಗೆಣಸಿ ಬಡ ವಸು
ದೇವನನು ಕೊಲಲೆಂದು ಝೋಂಪಿಸ
ಲಾವು ಮಾಣಿಸಿ ತಿಳುಹಿದರೆ ಬಳಿ[60]ಕಸುರೆನಿಂತೆಂದ[61]                                               ೧೨

ಬಿಲ್ಲ ಹಬ್ಬದ ನೆವದಲರಿಗಳ
ಭುಲ್ಲವಿಸಿ ತಾ ಹೋಗು ಕೊಲಿಸುವೆ
ನಿಲ್ಲಿ ವಿವಿಧೋಪಾಯದಲಿ ಮರೆಯೇಕೆ [62]ದಿಟವಹುದು[63]
ಎಲ್ಲ ನನಗೆ ನಿರೂಪಿಸಿ[64]ದನಾ[65]
ನೊಲ್ಲೆನೆನ್ನದೆ ಬಂದೆನಲಸದೆ
ಬಲ್ಲ ಬಟ್ಟೆಯ ಕಾಂಬುದೆಂದಕ್ರೂರ ಕೈಮುಗಿದ                                                ೧೩

ಅಸುರನೆಮ್ಮನು ಕೊಲಲಿ ಮೇಣ್ಮ
ನ್ನಿಸಲಿ ನಾನದಕಂಜೆ ನೀಂ ಶಂ
ಕಿಸದೆ ಹೆದರೆದೆ ಚಕಿತನಾಗದೆ ನಮ್ಮನೊಡಗೊಂಡು
ಬಿಸಜಸಖನುದಯದಲಿ [66]ನಾವೀ[67]
ಶಿಶುಗಳೆಂದುಮ್ಮಳಿಸಬೇಡೆನೆ
ನಸುನಗುತ ಕೃಷ್ಣಂಗೆ ಬಳಿಕಕ್ರೂರನಿಂತೆಂದ                                                  ೧೪

ದೇವ ಬಿನ್ನಹ ನೀತಿಧರ್ಮವು
ನೀವರಿಯದಿಹುದಿಲ್ಲ ಮೂರ್ಖರು
ನಾವು ನಿಮಗೆ ಯಥಾಸ್ಥಿತಿಯ[68]ನಂ[69]ಜಿಕೆಯನರುಹಿದರೆ
ಭಾವದಲಿ ಚಿಂತಿ[70]ಪರೆ[71] ಮೇಲಣ
ಸಾವಿ[72]ಗಳುಕದೆ[73] ಹೋಹ ನಡೆಯೆಂ
ಬೀ ವಿರಾಗದ [74]ನೆಲೆಯ[75] ವಿಸ್ತರ[76]ವಾಗಿ ಹೇಳೆಂದ                                               ೧೫

ಮರುಳೆ ಕೇಳಕ್ರೂರ ಪಣೆಯಲಿ
ಸರಸಿ[77]ಜೋದ್ಭವ[78]ಬರೆದ [79]ಲಿಖಿತವ[80]
ಮರಳಿ ತೊಡೆವರೆ ಶಕ್ತನೇ ಮಾನವನ ಪಾಡೇನು
ಸಿರಿದರಿದ್ರತೆ ದುಃಖಸುಖವಾ
[81]ಚರಣೆ[82]ಯವಮನ್ನಣೆಗಳಿವು ಜೀ
ವರಿಗೆ ಪೂರ್ವದ ಸುಕೃತ [83]ಫಲವಕ್ರೂರ[84] ಕೇಳೆಂದ                                      ೧೬

ಎಲ್ಲಿ ಸುಖ ಜೀವರಿಗೆ ವೇದನೆ
ಯೆಲ್ಲಿ ಯೌವನದೇಳಿಗೆಯ ಸಿರಿ
ಯೆಲ್ಲಿ ಮುಪ್ಪಿನ ತಪ್ಪಿನಪಜಯವಾವ ದೇಶದಲಿ
ಅಲ್ಲಿಗೊಯ್ವುದು ವಿಧಿ ಪುರಾಕೃತ
ವೊಲ್ಲೆನೆಂದರೆ ಬಿಡದುಯಿದನಾ
ಬಲ್ಲೆ ಭಯ ಬೇಡೆಂದನಕ್ರೂರಂಗೆ ಮುರವೈರಿ                                                 ೧೭

ಕೇಳಿ ಹರುಷಿತನಾಗಿ ಹರಿಗೆ ವಿ
ಶಾಲಮತಿ ಕೈಮುಗಿದು ಲಕ್ಷ್ಮೀ
ಲೋಲ ಕರುಣಿಸು ಸಕಲಧರ್ಮರಹಸ್ಯ ನೀತಿಗಳ
ಹೇಳು ನಿನ್ನಯ ನಿಜವನೆನೆ ಶ್ರುತಿ
ಜಾಲದರ್ಥವನರುಹಿ ಭಕ್ತನ
ಪಾಲಿಸುವೆನೆಂದಸುರರಿಪು ಯದುಮಂತ್ರಿಗಿಂತೆಂದ                                         ೧೮

ಎನಗೆ ನಿಜ ಬೇರಿಲ್ಲ ನಿನ್ನಯ
ಮನದ ಕೊನೆಯಲಿ ನೋಡು ಮಿಕ್ಕಿನ
ಘನತೆಯನು ಕೇಳುವರೆ ಕಿವಿಯೆರಡೆಲ್ಲಿಗೈದುವುವು
ಮನುಜಭವದಲಿ ಬಂದು ಮುನ್ನಿನ
ಘನವಿಳಾಸವ [85]ಪೇಳ್ವುದುಚಿತವೆ[86]
ನಿನಗೆ ವಂಚಿಸಲಮ್ಮೆ [87]ನೈ[88] ಯಕ್ರೂರ ಕೇಳೆಂದ                                         ೧೯

ಶ್ರುತಿಗಳಿಗೆ ಮೈಗೊಡದೆ ತರ್ಕ
ಪ್ರತತಿಗಳವ [89]ಹುದಲ್ಲ[90] ಮುನಿಗಳ
*ಮತಿಗೆ ಗೋಚರವಾಗಿ ಮಹದಾನಂದ ವಿಭವದಲಿ
ಮತಹಲವನವಗಡಿಸಿ ತಾನ
ಪ್ರತಿಮನಾರಾಯಣನೆನಿಸಿ ಸಂ
ತತ [91]ವಪರ ಪರ[92] ದೊಳಗಿಹೆನು ಅಕ್ರೂರ ಕೇಳೆಂದ                                                ೨೧

ಮತ್ತೆ ವಿಶ್ವಾತ್ಮಕನೆನಿಸಿ ಸ
ರ್ವೋತ್ತಮೋತ್ತಮನಾಗಿ ಧರಿಸಿ ಗು
ಣತ್ರಯವ ನಿಜ ಜಗದ ಜನನ ಸ್ಥಿತಿ ಲಯಂಗಳಿಗೆ
ಕರ್ತುವಹ ಸರಸಿರುಹಭವ ಪುರು
ಷೋತ್ತಮೇಶ್ವರ ನಾಮದಲಿ ಬಹು
ಮೂರ್ತಿಯಲಿ ಸಂಭ್ರಮಿಸುತಿಹೆನಕ್ರೂರ ಕೇಳೆಂದ                                            ೨೨

ಭುವನವೆನ್ನಾಧೀನ ನಾನಾ
ಭುವನದಲಿ ಪರಿಪೂರ್ಣನಾ[93]ಗಿಹೆ
ಭುವನಕೀಶ[94] ಹುತಾಶನಾಂತಕರಾದಿಯಾದವರು
ವಿವರಿಸುವಡೆನ್ನಂಶ ಮಿಕ್ಕಿನ
ದಿವಿಜ ನರ ಪನ್ನಗ ಮುನೀಂದ್ರ
ಪ್ರವರದಲಿ ಬಹುರೂಪಿಯಹೆನಕ್ರೂರ ಕೇಳೆಂದ                                               ೨೨

ಅಸುರರನು ಮರ್ದಿಸುವ ನೆವದಲಿ
ವಸುಧೆಯೊಳಗವತರಿಸಿ ನಾನಿ
ರ್ಮಿಸಿದ ಧರ್ಮಾಧರ್ಮವರ್ಣಾಶ್ರಮವನಾ[95]ಚರಿಸಿ[96]
ಶಿಶುತನದ ಲೀಲೆಯಲಿ ಯೌವನ
ದೆಸಕದಲಿ ವಾರ್ಧಕದವಸ್ಥೆಯೊ
ಳೆಸೆದು ಮುನ್ನಿನ ನಿಜದಲಿಹೆನಕ್ರೂರ ಕೇಳೆಂದ                                               ೨೩

ಎನ್ನ ಗುಣವಿಕ್ರಮದ ಕೀರ್ತಿಸಿ
ಧನ್ಯವಹ ನೆರವಿಯಲ್ಲಿ [97]ನಾನಿಹೆ[98]
ನೆನ್ನ ವಲ್ಲಭೆ ತೊಳಸಿಯೆಲ್ಲಿಹಳಲ್ಲಿ ನಾನಿಹೆನು
ಎನ್ನ [99]ಹೊಗಳುವೆ[100] ಠಾವ ಬಿಡೆ ಸಂ
ಪನ್ನ ಸಾಲಗ್ರಾಮ ಶಿಲೆಯಲಿ
ಭಿನ್ನ ಪಂಕಜವನದೊಳಿಹೆನಕ್ರೂರ ಕೇಳೆಂದ                                                   ೨೪

ಹಾಡಿದರೆ [101]ಹಾರೈಸುವೆನು[102] ಕೊಂ
ಡಾಡಿದರೆ ಮೆಚ್ಚುವೆನು [103]ರಾಗದಿ[104]
ನೋಡಿದರೆ ಸಂತುಷ್ಟನಹೆನರ್ಚಿಸಿದೊಡತಿ ಮೆಚ್ಚಿ
ಬೇಡಿದುದನೊಲಿದೀವೆ [105]ನಿಹಪರ
ಕೂಡಿಕೊಂಬೆನು ತರ್ಕಶಾಸ್ತ್ರದ
ವೇಢೆಗಾನೊಳಗಾಗೆ[106]ನೈ[107]ಯಕ್ರೂರ ಕೇಳೆಂದ                                         ೨೫

ಭೂತದಯೆಗುಂದದೆ ದುರುಕ್ತಿಯ
ಮಾತನಾಡದೆ ಮರೆದು[108]ವಾದು[109]
ರ್ನೀತಿಯಲಿ ನಡೆಯದೆ[110] ದುರಾಚಾರದಲಿ ವರ್ತಿಸದೆ[111]
ಕಾತರಿಸಿ ಧನದಾಶೆಯಲಿ ಮನ
ಧಾತುಗುಂದದೆ ಪರ[112]ರ ಸ್ತ್ರೀಯರ[113]
ವೋತು ಕೂಡದೆ ಬಾಳ್ವನೆನ್ನವನಾತನಹನೆಂದ                                              ೨೬

ಅಲಸಿಕೆಗೆ ಮೈಗೊಡಡೆ ಲೋಭದ
ಬಲೆಗೆ ಬೀಳದೆ ಚಿತ್ತದಲಿ ಸಂ
ಚಲತೆಯಿಲ್ಲದೆ ಮತ್ಪದಾಂಬುಜಸೇವೆಯನು ಬಿಡದೆ
ಹಲವ ಬಯಸದೆ ಪುಣ್ಯಪಾಪದ
ನೆಲೆಯನರಿದಿಹಪರವ ಗೆ[114]ಲ್ಲುವ
ಗೆಳೆಯ[115] ನೆನ್ನವವಾತನಾನಕ್ರೂರ ಕೇಳೆಂದ                                                            ೨೭

ಸಿರಿಗೆ ಹಿಗ್ಗದೆ ಬಡತನಕೆ ಜ
ರ್ಜರಿತನಾಗದೆ ಪರರು ಕೀರ್ತಿಸೆ
ಬೆರತಿರದೆ ನಿಂದಿಸಿದವರ ತಾ ಮರಳಿ ನಿಂದಿಸದೆ
ಹಿರಿಯರಲಿ ಗರ್ವಿಸದೆ ತನುವನು
ಹಿರಿದು ವಿಶ್ವಾಸಿಸದೆ ಸತ್ಯವ
ತೊರೆಯದಿಹ ಸತ್ಪುರುಷನೆನ್ನವನಾತ[116]ನಹ[117]ನೆಂದ                                              ೨೮

ಯೋಗಿಗಳ ಹಳಿಯದೆ ನೃಪಾಲರ
ಭೋಗವನು ಬಯಸದೆ ಕುಬುದ್ಧಿಯ
ನೇಗ[118]ಳಾಲೋಚಿಸದೆ[119] ನಿಜಸಖರೊಡನೆ ವಂಚಿಸದೆ
ಭೋಗದಲಿ ಬೆರೆತಿರದೆ ಮನದನು
ರಾಗವನು ತೊಲಗಿಸದೆ ಬಾಳ್ವ ಸ
ರಾಗಿಯೆನ್ನವನಾತನಹನಕ್ರೂರ ಕೇಳೆಂದ                                                      ೨೯

ಬಂಧುಗಳನಳಲಿಸದೆ ಸಜ್ಜನ
ವೃಂದವನು ಝಂಕಿಸದೆ ಗುರುಗಳ
ಮುಂದಹಂಕರಿಸದೆ [120]ಯನಾ[121]ಚಾರದಲಿ [122]ವರ್ತಿ[123]ಸದೆ
ಬಂದೆಡರನೀಕ್ಷಿಸದೆ ಲೋಗರ
ನಿಂದೆಯನು ಕೇಳದೆ ಮಹೋತ್ಸವ
ದಿಂದೆಸೆವ [124]ಭಕ್ತರುಗಳೆನ್ನವರವರು[125] ತಾನೆಂದ                                         ೩೦


[1] ೧ ರೆಸೆವಂತೆ (ಆ)

[2] ೧ ರೆಸೆವಂತೆ (ಆ)

[3] ೨ ಬಲ ಕೃಷ್ಣ (ಆ), (ಮು)

[4] ೨ ಬಲ ಕೃಷ್ಣ (ಆ), (ಮು)

[5] ೩ ಹ ಗೋಪ ಸಭೆಗ (ಆ), (ಮು)

[6] ೩ ಹ ಗೋಪ ಸಭೆಗ (ಆ), (ಮು)

[7] ೪ ದುಭುದತದ ದೆಖ್ಖಾಳನೀನ್ (ಆ)

[8] ೪ ದುಭುದತದ ದೆಖ್ಖಾಳನೀನ್ (ಆ)

[9] ೫ ನೀಕ್ಷಿಸುವುದೊಗ್ಗಾಗಿ ವಿನಯದಲಿ (ಆ), (ಮು)

[10] ೬ ಘಟಗಳನು (ಮು)

[11] ೬ ಘಟಗಳನು (ಮು)

[12] ೧ ಕೀ (ಆ)

[13] ೧ ಕೀ (ಆ)

[14] ೨ ಹಣಿಯಗಿದ ಪಂಥದೊಳಿರ್ದನಾನಂದ (ಆ)

[15] ೨ ಹಣಿಯಗಿದ ಪಂಥದೊಳಿರ್ದನಾನಂದ (ಆ)

[16] ೩ ಮಕ್ಕಳ (ಆ)

[17] ೩ ಮಕ್ಕಳ (ಆ)

[18] ೪ ಲಲಿತಚಂದ್ರದ (ಆ), (ಮು)

[19] ೪ ಲಲಿತಚಂದ್ರದ (ಆ), (ಮು)

[20] ೫ ಕಳಚು (ಆ)

[21] ೫ ಕಳಚು (ಆ)

[22] ೬ ಲಳಿಮನದದುಗುಡದಲಿ (ಆ)

[23] ೬ ಲಳಿಮನದದುಗುಡದಲಿ (ಆ)

[24] ೭ ಗೋಪಿ (ಮು)

[25] ೭ ಗೋಪಿ (ಮು)

[26] ೮ ನಳಿನಮುಖಿ (ಆ)

[27] ೮ ನಳಿನಮುಖಿ (ಆ)

[28] ೧ ಭಂಗಿ (ಆ), (ಮು)

[29] ೧ ಭಂಗಿ (ಆ), (ಮು)

[30] ೨ ಗೆತ್ತಣ ನಂಟು ಹೇಳೆನು (ಆ), (ಮು)

[31] ೨ ಗೆತ್ತಣ ನಂಟು ಹೇಳೆನು (ಆ), (ಮು)

[32] ೩ ದತಿ (ಆ), (ಮು)

[33] ೩ ದತಿ (ಆ), (ಮು)

[34] ೪ ಣಿಸಿ (ಆ), (ಮು)

[35] ೪ ಣಿಸಿ (ಆ), (ಮು)

[36] ೫ ನುಡಿದಳು ರೋಷಧೈರ್ಯದಲಿ (ಆ), (ಮು)

[37] ೫ ನುಡಿದಳು ರೋಷಧೈರ್ಯದಲಿ (ಆ), (ಮು)

[38] ೬ ನೀವರಿಯುವರೆ ಅಂದಾ (ಮು)

[39] ೬ ನೀವರಿಯುವರೆ ಅಂದಾ (ಮು)

[40] ೭ ಬಿಡಿಸ (ಆ)

[41] ೭ ಬಿಡಿಸ (ಆ)

[42] * ವಾರ್ತೆಯ ಎಂಬ ಮಾತು ಆ ಪ್ರತಿಯಲ್ಲಿ ಇಲ್ಲ.

[43] ೧ ನರಿವೆನೆನುತ್ತೆ ಕೇಳರ (ಮು)

[44] ೧ ನರಿವೆನೆನುತ್ತೆ ಕೇಳರ (ಮು)

[45] ೨ ವೇಳ್ತಂದ (ಆ)

[46] ೨ ವೇಳ್ತಂದ (ಆ)

[47] ೩ ತನಕರ (ಆ)

[48] ೩ ತನಕರ (ಆ)

[49] ೪ ಪುರಂದರಾಗಿ (ಆ)

[50] ೪ ಪುರಂದರಾಗಿ (ಆ)

[51] ೫ ಳೆನೆ (ಮು)

[52] ೫ ಳೆನೆ (ಮು)

[53] ೬ ಕರೆದು ನುಡಿಸಿದ (ಆ), (ಮು)

[54] ೭ ಆ ಪ್ರತಿಯಲ್ಲಿ ಈ ಅಕ್ಷರವಿಲ್ಲ

[55] ೭ ಆ ಪ್ರತಿಯಲ್ಲಿ ಈ ಅಕ್ಷರವಿಲ್ಲ

[56] ೧ ಪೇಳಿದೊಡೆ ಆ), (ಮು)

[57] ೧ ಪೇಳಿದೊಡೆ ಆ), (ಮು)

[58] ೨ ರ (ಆ)

[59] ೨ ರ (ಆ)

[60] ೩ ಕೆಮಗೆ ನೇಮಿಸಿದ (ಆ)

[61] ೩ ಕೆಮಗೆ ನೇಮಿಸಿದ (ಆ)

[62] ೪ ದಿಟವೆಂದು (ಮು)

[63] ೪ ದಿಟವೆಂದು (ಮು)

[64] ೫ ದೊ ಡಾ (ಆ೦, (ಮು)

[65] ೫ ದೊ ಡಾ (ಆ೦, (ಮು)

[66] ೬ ನಡೆ ನಾವ್ (ಆ)

[67] ೬ ನಡೆ ನಾವ್ (ಆ)

[68] ೧ ಲ(ಮು)

[69] ೧ ಲ(ಮು)

[70] ೨ ಸದೆ (ಮು), (ಆ)

[71] ೨ ಸದೆ (ಮು), (ಆ)

[72] ೩ ಗಂಜದೆ (ಆ), (ಮು)

[73] ೩ ಗಂಜದೆ (ಆ), (ಮು)

[74] ೪ ನೀತಿಯಿದ (ಆ) ನೀತಿಯನ (ಮು)

[75] ೪ ನೀತಿಯಿದ (ಆ) ನೀತಿಯನ (ಮು)

[76] ೫ ರಿಸಿ (ಆ), (ಮು)

[77] ೬ ರುಹಭವ (ಆ)

[78] ೬ ರುಹಭವ (ಆ)

[79] ೭ ಬರೆಹವ (ಆ), (ಮು)

[80] ೭ ಬರೆಹವ (ಆ), (ಮು)

[81] ೮ ದ (ಆ), (ಮು)

[82] ೮ ದ (ಆ), (ಮು)

[83] ೯ ಕರ್ಮ (ಅ), (ಮು)

[84] ೯ ಕರ್ಮ (ಅ), (ಮು)

[85] ೧ ಕೇಳ್ವುದುನಿಚ (ಆ), (ಮು)

[86] ೧ ಕೇಳ್ವುದುನಿಚ (ಆ), (ಮು)

[87] ೨. ನೆಲೆ (ಮು)

[88] ೨. ನೆಲೆ (ಮು)

[89] ೩ ಚಾಳಯಿಸಿ (ಆ), ಬೋಳೈಸಿ (ಮು) ಪರಾಪರ (ಆ)

[90] ೩ ಚಾಳಯಿಸಿ (ಆ), ಬೋಳೈಸಿ (ಮು) ಪರಾಪರ (ಆ)

[91] ೪ ಮತಿಗಗೋಚರ ಎಂದು ಇರಬಹುದೆ

[92] ೪ ಮತಿಗಗೋಚರ ಎಂದು ಇರಬಹುದೆ

[93] ೧ ವಾಸನ ಶಶಾಂಕ (ಆ), (ಮು)

[94] ೧ ವಾಸನ ಶಶಾಂಕ (ಆ), (ಮು)

[95] ೨ ರೈದು (ಆ), (ಮು)

[96] ೨ ರೈದು (ಆ), (ಮು)

[97] ೩ ನೆಲಸಿಹೆ (ಆ), (ಮು)

[98] ೩ ನೆಲಸಿಹೆ (ಆ), (ಮು)

[99] ೪ ಮಗಳಿಹ (ಮು)

[100] ೪ ಮಗಳಿಹ (ಮು)

[101] ೫ ಹರುಷಿನ ವೆ ಮಿಗೆ (ಮು)

[102] ೫ ಹರುಷಿನ ವೆ ಮಿಗೆ (ಮು)

[103] ೬ ಜಾನಿಸಿ (ಮು)

[104] ೭ ನೆನೆದೊರ (ಆ), (ಮು)

[105] ೭ ನೆನೆದೊರ (ಆ), (ಮು)

[106] ೮ ನೆಲೆ (ಮು)

[107] ೮ ನೆಲೆ (ಮು)

[108] ೧ ದಡೆಯು (ಆ)

[109] ೧ ದಡೆಯು (ಆ)

[110] ೨ ಪರಾರ್ಥಕ ನೋಡೆನೆಂದೆನಿಸಿ (ಆ)

[111] ೨ ಪರಾರ್ಥಕ ನೋಡೆನೆಂದೆನಿಸಿ (ಆ)

[112] ೩ ಪರಸತಿಗೆ ಮನ (ಆ)

[113] ೩ ಪರಸತಿಗೆ ಮನ (ಆ)

[114] ೪ ಗೆಲುವಗ್ಗಳೆಯ (ಮು)

[115] ೪ ಗೆಲುವಗ್ಗಳೆಯ (ಮು)

[116] ೫ ನಾ (ಆ) ತಾ (ಮು)

[117] ೫ ನಾ (ಆ) ತಾ (ಮು)

[118] ೬ ಳುಂ ಚಿಂತಿಸದೆ (ಆ)

[119] ೬ ಳುಂ ಚಿಂತಿಸದೆ (ಆ)

[120] ೧ ದುರಾ (ಅ), (ಮು)

[121] ೧ ದುರಾ (ಅ), (ಮು)

[122] ೨ ಪಂಚಿ (ಆ)

[123] ೨ ಪಂಚಿ (ಆ)

[124] ೩ ಸುಚರಿತ್ರನೆನ್ನವನಾತ (ಮು)

[125] ೩ ಸುಚರಿತ್ರನೆನ್ನವನಾತ (ಮು)