ಹಿಂದೆಮಾಡಿದ ಭವ

[1]ಕತಂ[2]ಗಳ
ದಂದು[3]ಗದ[4] ಜೀವರನು ನಾನಾ
[5]ಛಂದ[6]ದಲಿ ಬೇಸರಿಸಿ ಕಾಡುವಡದಕೆ ಬೆಂಬಿದ್ದು
ಮುಂದುಗೆಡದೆ ವಿಧಾತೃಲಿಖಿತವಿ
ದೆಂದು ಧೈರ್ಯದಲಿಪ್ಪ ನರನೆ
ನ್ನಿಂದ ವೆಗ್ಗಳನಾತ ತಾನಕ್ರೂರ ಕೇಳೆಂದ                                                     ೩೧

ಅತಿಶಯದ ಸಂಸಾರಸುಖದು
ನ್ನತಿಯನನುಭವಿಸುತ್ತರಿದು ಪರ
ಹಿತವೆ ಸಾಧನವೆಂದು ಜಲದಂಬುಜದ ಮಾಳ್ಕೆಯಲಿ
ಪ್ರತಿದಿನದಲೊಂದೊಂದು ದಾನವ
ವ್ರತದಿ [7]ನಡೆಸುವ ನಿಯತ ಬುದ್ಧಿಯ[8]
ಚತುರನೆನ್ನವನಾತನಹನಕ್ರೂರ ಕೇಳೆಂದ                                                     ೩೨

ಕರಚರಣಸುಶ್ಲಾಘ್ಯನಮಳಾಂ
ಬರವಿಲೇಪನಯುಕ್ತನತಿ ಬಂ
ಧುರವಚೋವಿನ್ಯಾಸಿಸುಮುಖನುದಾರನನಸೂಯ
ಸರಸಚೇತನನೆನ್ನ ನಾಮ
ಸ್ಮರಣಪರಿಣತನೆನಿಸಿ ಬಾಳುವ
ವರನು ಜೀವನ್ಮುಕ್ತನೆಲೆಯಕ್ರೂರ ಕೇಳೆಂದ                                                    ೩೩

ಆಗಮಂಗಳನರಿದು ನಿರ್ಮಳ
ಯೋಗದಂತ್ಯವ ತಿಳಿದು ಕಲ್ಪಿತ
ಭೋಗವಿದು ನೆಲೆಯೆಂದು ಬಗೆ[9]ವವ[10] ಭಾವಶುದ್ಧಿಯಲಿ
ಲೋಗರೆನ್ನವರೆಂ [11]ಬೆರವ ತಾ[12]
ನೀಗಿ ನಿಸ್ಪೃಹನಾಗಿ ಬಾಳ್ವ ಸ
ರಾಗಿ ಜೀವನ್ಮುಕ್ತನೆಲೆಯಕ್ರೂರ ಕೇಳೆಂದ                                                      ೩೪

ಘೋರತರ ಸಂಸಾರವಿದು ನಿ
ಸ್ಸಾರ ದೇಹವನಿತ್ಯ ಸಂಪದ
ನೀರ ಬುದ್ಬುದ ಸತಿಸುತರು ಸಂತಾಪಕಾರಿಗಳು
ಸಾರ ಸದ್ಗುರುವಚನಧರ್ಮ ವಿ
ಚಾರಮತ್ಪದ ಭಕ್ತಿಯೆಂದರಿ
ದಾರು ನಡೆ[13]ವವರಪ್ರತಿಮ[14]ರಕ್ರೂರ ಕೇಳೆಂದ                                                        ೩೫

ಅಂಗಜಂಗಳುಕದೆ ಧನಾಶೆಗೆ
ಬೆಂಗೊಡದೆ ಷಡುವರ್ಗಮುಖದಲಿ
ಭಂಗವಡೆಯದೆ ಗುರು ನಿರೂಪಿಸಿದಂತೆ ಮತ್ಪದದ
ಸಂಗವನು ನಿರ್ಧರಿಸಿ ಸುಕೃತವ
ಸಂಗಡಿಸಿ ನಿಶ್ಚಿಂತರಾಗಿಹ
ಮಂಗಳಾತ್ಮಕನಪ್ರತಿಮನಕ್ರೂರ ಕೇಳೆಂದ                                                    ೩೬

ಭಾಷೆಯಲಿ ಹುಸಿಯದೆ ನಿರಂತರ
ದ್ವೇಷವಿಲ್ಲದೆ ಮನದ ಕೊನೆಯಲಿ
ದೋಷವನು ಚಿಂತಿಸದೆ ಶ್ರುತಿವಾಕ್ಯದಲಿ ಶಂಕಿಸದೆ
ಲೇಸು ಹೊಲ್ಲೆ [15]ಹನೆ[16]ರಡನತಿ ವಿ
ಶ್ವಾಸಿಸದೆ[17] ನಿರ್ಭಿನ್ನ[18]ನಾಗಿಹ
ಭೂಸುರೋತ್ತಮನಪ್ರತಿಮನಕ್ರೂರ ಕೇಳೆಂದ                                                 ೩೭

ಪರರ ದುಃಖದ ಕೇಳಿ ಮನದಲಿ
ಹಿರಿದು ಚಿಂತಿಸಿ ಪರರ ಪದವಿಗೆ
ಹರುಷ ಮಿಗೆ ಹಾರಯಿಸಿ ಪರರವಗುಣವ ಲೆಕ್ಕಿಸದೆ
ಪರರಗುಣವರ್ಣನೆಯ ಮಾಡುತ
ಪರರು ತಾವಾನೆಂಬ ಭಾವವ
[19]ಧರಿಸಿಹರೆ ತಾವ[20] ಮುಕ್ತರೆಲೆಯಕ್ರೂರ ಕೇಳೆಂದ                                                   ೩೮

*[21]ಗುಣ[22]ಯುತನು[23] ಸಂಪನ್ನವಿದ್ಯದ
ಕಣಿ ವಿಲಕ್ಷಣನ[24]ಧಿಕನಾ[25] ಸುರ
ಮಣಿ ರಸಜ್ಞ ನಿಗರ್ವಿ [26]ನಿಷ್ಕೃತ[27] ನೀತಿವಿದನೆ[28]ನಿಸಿ[29]
[30]ಪ್ರಣತ[31] ಜನಪಾಲಕನಿಳಾಮರ
ಗಣವಿಭೂಷಣನೆನಿಪ ಪುರುಷಾ
ಗ್ರಣಿ ಮದೀಯವನ[32]ಧಿಕನೆಲೆ[33]ಯಕ್ರೂರ ಕೇಳೆಂದ                                                   ೩೯

ಕಲಹದಲಿ ಸೈರಣೆ[34]ಕುಲಾಂ[35]ಗನೆ
ಯಲಿ [36]ಸುಗುಣಪತಿ ವಿಷ್ಣುಚರಣಾ
ಸ್ಖಲಿತ ಭಕುತಿಯು ಘೋರಪಾತಕದಲಿ ಮನೋಭೀತಿ[37]
ಬಲವಿಹೀನರೊಳಭಯ ಸಿರಿಸಂ
ಚಲಿಸುವೆಡೆಯಲಿ ಧೈರ್ಯ ಸಜ್ಜನ
ರಲಿ ವಿನಯವುಳ್ಳ ೧೦[38]ವನೆಯೆನ್ನ ವನೆಂದನಸುರಾರಿ೧೦[39]                                                          ೪೦

ಪರಮತತ್ವ[40]ವಿದೆಂದು[41] ಧರ್ಮ
ಸ್ಮರಣೆಯನು ಬಲುವಿಡಿದು ಭಕ್ತಿಯ
ಪರಿವಿಡಿಯ ಲೆಕ್ಕಿಸುತ ಸಜ್ಜನಸಂಗದೊಳು ಸುಖಿಸಿ
ಗುರುನಿರೂಪಿಸಿದಾಗಮವನಾ
ಚರಿಸಿ [42]ಪರಮಪರಾತ್ಪರನು ತಾ
ಧರೆಗೆ ಮಿಗಿಲಾಗಿರುವನೆನ್ನವನಾತನಹನೆಂದ[43]                                                                     ೪೧

ನಿತ್ಯವಲ್ಲದ ದೇಹವಿದು ವಶ
ವರ್ತಿ[44]ಯೊಳ[45]ಗಿಹುದರಿದೆನುತ ನಿಜ
ಕೃತ್ಯ ಲೋಪಿಸದಂತೆ ಸನ್ಮಾರ್ಗದಲಿ ಸಂಚರಿಸಿ
ಹೊತ್ತುಗಳೆಯದೆ ಮತ್ಪದಾಂಬುಜ
ದತ್ತ ಚಿತ್ತವನಿರಿಸಿ ನುಡಿಯಲ
ಸತ್ಯ ಹೊದ್ದದೆ ಬಾಳ್ವನೆನ್ನವನಾತ ತಾನೆಂದ                                                             ೪೨

ಸಕಲವೇದವನೋದಿ [46]ಶಾಸ್ತ್ರ[47]
ಪ್ರಕರದರ್ಥವ[48]ನರಿದು[49] ವಿದ್ಯಾ
ಪ್ರಕಟನೆನಿಸಿ ಸಮಸ್ತ ತೀರ್ಥಕ್ಷೇತ್ರದೊಳು [50]ಚರಿಸಿ[51]
ಬಕನವೊಲು [52]ಗಮಿಸುತ್ತ[53] ಮತ್ಪದ
ಭಕುತಿಯಾತ್ರೆಯನುಳಿದ ನರ ಡಂ
ಬಕನವನೆ ಸತ್ಕರ್ಮ ನಿಷ್ಪಲವೆಂದನಸುರಾರಿ                                                             ೪೩

ಏನುಮರಿಯದ ಮೂರ್ಖ ಜಡನ
ಜ್ಞಾನಿ ಪಾಮರನಾಗಲಲಸದೆ
ಮಾನಸದೊಳೆನ್ನಂಘ್ರಿಪೂಜೆಯೆ ಮಾಡಿ [54]ಹರುಷದಲಿ[55]
[56]ಮಾನವಿಕ್ಕದೆ ಮತ್ಕಥಾಶ್ರವ
ಣಾ[57]ನುರಾಗದಲಿಪ್ಪ [58]ನರನೇ[59]
ಜ್ಞಾನಿ [60]ಸರ್ವಶ್ರೇಷ್ಠನಹನ[61] ಕ್ರೂರ ಕೇಳೆಂದ                                                                       ೪೪

ಪರಹಿತವನೆಣಿಸದೆ ಸುವಿದ್ಯ[62][63]
ಸರಕುಮಾಡದೆ ಧರಣಿಯಮರರ
ಪರಿಭವಕೆ ಬೆ[64]ರತಿ[65]ರದೆ ಕುಲಸ್ತ್ರೀಜನವ [66]ಲಾಲಿಸದೆ[67]
ಗುರುಮುಖದಿ [68]ತಿಳಿಯದೆ[69] ಮದೀಯ
ಸ್ಮರಣೆಯಿಲ್ಲದೆ ಕೆಡುವ ಕಾಯವ
ಹೊರೆವ ನರನಿಹಪರಕೆ ಬಾಹಿರನೆಂದು ಬಗೆಯೆಂದ                                                     ೪೫

ಹಿರಿಯರಿಗೆ ವಂದಿಸದೆ ಮನದಲಿ
ಕರುಣವಿಲ್ಲದಧರ್ಮ [70][71]ರ್ಮದ
ಪರಿವಿಡಿಯ ಲೆಕ್ಕಿಸದೆ ಮಾತಾಪಿತರ ರಕ್ಷಿಸದೆ
ದುರುಳತನವನು ಬಿಡದೆ ಲೋಗರ
ಸಿರಿಗೆ ಪರಿ೧೦[72]ತಾಪಿಸುತ೧೦[73] ಬಾಳುವ
೧೧[74]ನರನು ಇಹಪರಲೋಕಕತಿ ಬಾಹಿರನು ಕೇಳೆಂದ೧೧[75]                                                         ೪೬

ಅಥಿತಿಗಳ ಮನ್ನಿಸದೆ ನಿಯಮ
ವ್ರತದಿ [76]ನಡೆಯದೆ ತೀರ್ಥಯಾತ್ರೆಯ
ಗತಿಯ ನೊಡದೆ ಸತ್ಯನುಡಿಗಳ ಮೀರಿ ಸಂಚರಿಸಿ[77]
ಯತಿಪದವನರ್ಚಿಸದೆ [78]ಲಜ್ಜಾ[79]
ಸ್ಥಿತಿಯ [80]ನೋಡದೆ[81] [82]ಬಾಳ್ವ[83] [84]ನರ ತಾ[85]
[86]ನತಿ ಕಷ್ಟನವನಿಹಪರಕೆ ಅಕ್ರೂರ ಕೇಳೆಂದ[87]                                                                     ೪೭

*[88]ನಿತ್ಯಕರ್ಮವ ಬಿಟ್ಟು ಸತ್ಪದ
ವರ್ತನೆಯನವಘಡಿಸಿ ಮಿಗೆ ದು
ರ್ವೃತ್ತನಾಗಿ ಕುತರ್ಕದಲಿ ಕಂಡವರ ಧಿಕ್ಕರಿಸಿ
ವಿತ್ತವನುವೆಚ್ಚಿಸದೆ ಲೋಕದ
ಚಿತ್ತದಲಿ ಖಳನೆನಿಸಿ ಬಾಳುವ
ಮತ್ತನಿಹಪರದೂರನೆಲೆಯಕ್ರೂರ ಕೇಳೆಂದ                                                                ೪೮

ಹುಸಿ, ಪರಸ್ತ್ರೀ ವ್ಯಸನ ವೈಸಿಕ
ಪಿಸುಣತನವನ್ಯಾಯ ಕುಟಿಲ
[89]ಭ್ಯ[90]ಸನ ಕುಹಕೋಪಾಯ ಮತ್ಸರ ಹಿಂಸೆ ಡಂಬತನ
ಮಸುಳಿಸಿದ ಮತಿ ವಿತ್ತವಂಚನೆ
ವಿಷಮ[91]ತನವ[92] ವಿಗಡ[93][94]ನು ವ
ರ್ಜಿಸದ ನರ೧೦[95]ನಿ೧೦[96]ಹಪರಕೆ ಬಾಹಿರ೧೧[97]ನೆಂ೧೧[98]ದು ಬಗೆಯೆಂದ                    ೪೯

*[99]ವಾದವಶ್ಯವಿಕಾರತಂತ್ರ ವಿ
ಭೇದ ವಿವಿಧ ದ್ಯೂತಕೇಳಿಯ
ವೇದ ಭೂತದ್ರೋಹ ಚಿಂತನೆ ಮತ್ಕಥಾಕ್ಷೇಪ
ಹಾದರಿಯ ಸಂಸರ್ಗ ಕುತ್ಸಿತ
ಬಾಧೆಯಲಿ ಕಡು ಯೋಗ್ಯರೆನಿಸುವ
ರಾದುರಾತ್ಮಕರತ್ಯಧಮರಕ್ರೂರ ಕೇಳೆಂದ                                                                 ೫೦

*[100] ತನುಸುಖದೊಳಿರ್ಪ್ಪಂದು ಯೌವನ
ತನವೆ ವಶವಾದಂದು ಕೈಕಾ
ಲಿನಲಿ ಬಲಿದಿರ್ದಂದು ಮತ್ಪದ ಭಜನೆಯಿಲ್ಲೆನಿಸಿ
ವನಿತೆಯರಿಗೊಲಿದಕೃತಶತದಿಂ
ದನವರತ ಕೀರ್ತಿಸುತೆ ಭವ ಬಂ
ಧನದೊಳಿಹ ನರರತ್ಯಧಮರಕ್ರೂರ ಕೇಳೆಂದ                                                             ೫೧

ಈ ಪರಿಯಲಬುಜಾಕ್ಷನತಿ ಸಂ
ಕ್ಷೇಪದಲಿ ನಿಜನೀತಿಹಿತವ ನಿ
ರೂಪಿಸಿದಡಕ್ರೂರನಧಿಕಮನೋನುರಾಗದಲಿ
ಶ್ರೀಪತಿಗೆ ಮೈಯಿಕ್ಕಿ ಮಧುರಾ
ಳಾಪದಲಿ ಕೊಂಡಾಡುತಿರೆ ಬಳಿ
ಕಾ ಪಡುವಣದ್ರಿಯಲಿ ಮೆರೆದುದು ಬಿಂದ ಹಿಮಕರನ                                                    ೫೨

ಸಿರಿ ತೊಲಗಿದವನಿಪನೊ ಭರಿಕೈ
ಮುರಿದ ದಂತಿಯೊ ನೇಹ[101]ವಗಲಿದ[102]
ವಿರಹಿಯೋ ವರ್ಣಾಶ್ರಮೋಚಿತಧರ್ಮವನು ತೊರೆದ
ಪರಮ ಋಷಿಯೋ [103]ಭೀತಿಲಜ್ಜಾ[104]
[105]ಕರನೊ ಹಂತನೊ[106] ಪೇಳೆನಲು ಸಿತ
ಕಿರಣನೆಸೆದನು ವರುಣದಿಗ್ಭೂಧರದ ಶಿ[107]ಖರದಲಿ[108]                                                            ೫೩

ದೋಷದೊಡೆತನವೊಂದು ಮಿತ್ರ
ದ್ವೇಷವೊಂದ[109]ಬುಜಕ್ಕೆ[110] ಸೇರದ
ದೋಷವೊಂದಹಿ [111]ತಂಬು[112]ಲೆನಿಸಿದ ನಿಂದೆ ಮತ್ತೊಂದು
[113]ದೋ[114] ಷದಬಲೆಯರಾಸ್ಯದಲಿ ಸಂ
ಕ್ಲೇಶಿಯಾಗಿಹುದೊಂದೆನುತ [115]ಮನ[116]
ಹೇಸಿ [117]ವಿಧು[118]ಜಾರಿದನು [119]ಪಡುವಣ ವಿಷಧಿಮಜ್ಜನಕೆ[120]                                                           ೫೪

ನಳಿನರಿಪುವಸ್ತಮಿಸೆ ತಾರೆಗ
ಳಿಳಿದುವಾತನ ಕೂಡೆ ಕುಮುದಿನಿ
ಯಳಲಿ ಮರುಗಿದಳಸುವ ಬಿಟ್ಟಳು ಯಾಮಿನೀ[121]ಲಲನೆ[122]
ಬಳಿಕ ರವಿಯುದಯಿಸಿದಡಾತನ
ಬಳಗದೊಸಗೆಯ ಕಂಡು ಹರಿ ಗೋ
ಕುಲದೊಳೆಲ್ಲರಿಗರುಹಿ ಗಮನೋಧ್ಯೋಗಪರನಾದ                                                     ೫೫
ಮೂರನೆಯ ಸಂಧಿ ಮುಗಿದುದು

[1] ೪ ಭವ (ಮು)

[2] ೪ ಭವ (ಮು)

[3] ೫ ಗವು (ಆ), (ಮು)

[4] ೫ ಗವು (ಆ), (ಮು)

[5] ೬ ದ್ವಂದ್ವ (ಆ), ಛಂದ (ಮು)

[6] ೬ ದ್ವಂದ್ವ (ಆ), ಛಂದ (ಮು)

[7] ೭ ನಿಯಮಸುವ್ಯಸನಿಯೆನಿಸುವ (ಆ)

[8] ೭ ನಿಯಮಸುವ್ಯಸನಿಯೆನಿಸುವ (ಆ)

[9] ೧ ಯದೆ (ಆ), (ಮು)

[10] ೧ ಯದೆ (ಆ), (ಮು)

[11] ೨ ಬ ಭೇದದ (ಆ), (ಮು)

[12] ೨ ಬ ಭೇದದ (ಆ), (ಮು)

[13] ೩ ವರವರನುಪನು (ಮು)

[14] ೩ ವರವರನುಪನು (ಮು)

[15] ೪ ಯವೆ (ಆ)

[16] ೪ ಯವೆ (ಆ)

[17] ೫ ನಿರ್ಭೀತ (ಆ), (ಮು)

[18] ೫ ನಿರ್ಭೀತ (ಆ), (ಮು)

[19] ೧ ಧರಿಸಿದವರೇ (ಆ)

[20] ೧ ಧರಿಸಿದವರೇ (ಆ)

[21] *ಮುದ್ರಿತ ಪ್ರತಿಯಲ್ಲಿ ಈ ಪದ್ಯವಿಲ್ಲ

[22] ೨ ವಿನಯ (ಆ)

[23] ೨ ವಿನಯ (ಆ)

[24] ೩ ರ್ತಿ ಜನ (ಆ)

[25] ೩ ರ್ತಿ ಜನ (ಆ)

[26] ೪ ನಿಶ್ಚಲ (ಆ)

[27] ೪ ನಿಶ್ಚಲ (ಆ)

[28] ೫ ನನಘ (ಆ)

[29] ೫ ನನಘ (ಆ)

[30] ೬ ಪ್ರಣುತ (ಆ)

[31] ೬ ಪ್ರಣುತ (ಆ)

[32] ೭ ತಾರವೆ (ಆ)

[33] ೭ ತಾರವೆ (ಆ)

[34] ೮ ನಿಜಾ (ಮು)

[35] ೮ ನಿಜಾ (ಮು)

[36] ೯ ರತಿವ್ಯಾಪಾರಸೂರಿಗ | ಳಲಿ ನಿರಂತರ ಸಖ್ಯಪಾಪವ್ಯಸೆನದೊಳು ಭೀತಿ (ಆ), (ಮು)

[37] ೯ ರತಿವ್ಯಾಪಾರಸೂರಿಗ | ಳಲಿ ನಿರಂತರ ಸಖ್ಯಪಾಪವ್ಯಸೆನದೊಳು ಭೀತಿ (ಆ), (ಮು)

[38] ೧೦ ಳ್ಳಾತನೆನ್ನವನಾತನಾನೆಂದ (ಆ)

[39] ೧೦ ಳ್ಳಾತನೆನ್ನವನಾತನಾನೆಂದ (ಆ)

[40] ೧ ವ ತಿಳಿದು (ಆ), (ಮು)

[41] ೧ ವ ತಿಳಿದು (ಆ), (ಮು)

[42] ೨ ಹರುಷಿತ ಶಾಂತನಾಗಿಹ |
ಗರುವನೆನ್ನವನಾತತಾನಕ್ರೂರ ಕೇಳೆಂದ || (ಆ), (ಮು)

[43] ೨ ಹರುಷಿತ ಶಾಂತನಾಗಿಹ |
ಗರುವನೆನ್ನವನಾತತಾನಕ್ರೂರ ಕೇಳೆಂದ || (ಆ), (ಮು)

[44] ೩ ಯಾ (ಆ), (ಮು)

[45] ೩ ಯಾ (ಆ), (ಮು)

[46] ೪ ಸಕಲ (ಆ)

[47] ೪ ಸಕಲ (ಆ)

[48] ೫ ನೊಲಿದು (ಆ)

[49] ೫ ನೊಲಿದು (ಆ)

[50] ೬ ಗಮಿಸಿ (ಮು)

[51] ೬ ಗಮಿಸಿ (ಮು)

[52] ೭ ಗರ್ವಿಸುತ (ಆ) ಚರಿಸುತ್ತೆ (ಮು)

[53] ೭ ಗರ್ವಿಸುತ (ಆ) ಚರಿಸುತ್ತೆ (ಮು)

[54] ೧ ದೇಹದಲಿ (ಆ)

[55] ೧ ದೇಹದಲಿ (ಆ)

[56] ೨ ಮಾನವಿಲ್ಲದೆ ಸತ್ಕಥಾಸಮನೋನು (ಆ)

[57] ೨ ಮಾನವಿಲ್ಲದೆ ಸತ್ಕಥಾಸಮನೋನು (ಆ)

[58] ೩ ಡವನೇ (ಆ)

[59] ೩ ಡವನೇ (ಆ)

[60] ೪ ಸರ್ವೋತ್ಕೃಷ್ಟನೆಲೆಯ (ಆ)

[61] ೪ ಸರ್ವೋತ್ಕೃಷ್ಟನೆಲೆಯ (ಆ)

[62] ೫ ರ (ಆ), (ಮು)

[63] ೫ ರ (ಆ), (ಮು)

[64] ೬ ದ (ಆ), (ಮು)

[65] ೬ ದ (ಆ), (ಮು)

[66] ೭ ಪಾಲಿಸದೆ (ಆ), (ಮು)

[67] ೭ ಪಾಲಿಸದೆ (ಆ), (ಮು)

[68] ೮ ವನರಿಯದೆ (ಆ)

[69] ೮ ವನರಿಯದೆ (ಆ)

[70] ೯ ಮೆ (ಮು)

[71] ೯ ಮೆ (ಮು)

[72] ೧೦ ಣಾಮಿಸದೆ (ಆ)

[73] ೧೦ ಣಾಮಿಸದೆ (ಆ)

[74] ೧೧ ಗರವಡಕರಿಹಪರಕೆ ಬಾಹಿರರಹರು ಬಗೆಯೆಂದ (ಆ), ನರನು ಬಾಹಿರನಿಹಪರಕೆ ಬಾಹಿರನು ಬಗೆಯೆಂದ (ಮು)

[75] ೧೧ ಗರವಡಕರಿಹಪರಕೆ ಬಾಹಿರರಹರು ಬಗೆಯೆಂದ (ಆ), ನರನು ಬಾಹಿರನಿಹಪರಕೆ ಬಾಹಿರನು ಬಗೆಯೆಂದ (ಮು)

[76] ೧ ವ ನಾಚರಿಸಿದೆ ಸುತೀರ್ಥ ಪ್ರತತಿಯಲಿ ಮೀಯದೆ ಸುದಾನತ್ಯಾಗವಿಲ್ಲೆನಿಸಿ (ಆ)

[77] ೧ ವ ನಾಚರಿಸಿದೆ ಸುತೀರ್ಥ ಪ್ರತತಿಯಲಿ ಮೀಯದೆ ಸುದಾನತ್ಯಾಗವಿಲ್ಲೆನಿಸಿ (ಆ)

[78] ೨ ವಿಷಯ ! (ಆ), (ಮು)

[79] ೨ ವಿಷಯ ! (ಆ), (ಮು)

[80] ೩ ಲಚ್ಯುತನಾಗಿ (ಆ) ಲಂಪಟರಾಗಿ (ಮು)

[81] ೩ ಲಚ್ಯುತನಾಗಿ (ಆ) ಲಂಪಟರಾಗಿ (ಮು)

[82] ೪ ಬಾಳುವ (ಆ), (ಮು) ೫ ಈ ಶಬ್ದಗಳು (ಆ) ಮತ್ತು (ಮು) ಪ್ರತಿಗಳಲ್ಲಿ ಇಲ್ಲ.

[83] ೪ ಬಾಳುವ (ಆ), (ಮು)

[84] ೫ ಈ ಶಬ್ದಗಳು (ಆ) ಮತ್ತು (ಮು) ಪ್ರತಿಗಳಲ್ಲಿ ಇಲ್ಲ.

[85] ೫ ಈ ಶಬ್ದಗಳು (ಆ) ಮತ್ತು (ಮು) ಪ್ರತಿಗಳಲ್ಲಿ ಇಲ್ಲ.

[86] ೬ ಮತಿವಿಕಳರಿಹಪರಕೆ ಬಾಹಿರರೆಂದು ಬಗೆಯಂದ (ಆ), ಮತಿವಿಕಳ ……………. ಹರಿ ನುಡಿದ (ಮು)

[87] ೬ ಮತಿವಿಕಳರಿಹಪರಕೆ ಬಾಹಿರರೆಂದು ಬಗೆಯಂದ (ಆ), ಮತಿವಿಕಳ ……………. ಹರಿ ನುಡಿದ (ಮು)

[88] * ಈ ಪದ್ಯ ಆ ಪ್ರತಿಯಲ್ಲಿ ಮಾತ್ರ ಇದೆ.

[89] ೭.ವ್ಯ (ಆ), (ಮು)

[90] ೭.ವ್ಯ (ಆ), (ಮು)

[91] ೮ ಗತಿಯ (ಆ), (ಮು)

[92] ೮ ಗತಿಯ (ಆ), (ಮು)

[93] ೯ ವ (ಆ), (ಮು)

[94] ೯ ವ (ಆ), (ಮು)

[95] ೧೦ ರಿ (ಆ), (ಮು)

[96] ೧೦ ರಿ (ಆ), (ಮು)

[97] ೧೧ ರೆ (ಆ), (ಮು)

[98] ೧೧ ರೆ (ಆ), (ಮು)

[99] * ಈ ಪದ್ಯಗಳು ಆ ಪ್ರತಿಯಲ್ಲಿ ಮಾತ್ರ ಇವೆ.

[100] * ಈ ಪದ್ಯಗಳು ಆ ಪ್ರತಿಯಲ್ಲಿ ಮಾತ್ರ ಇವೆ.

[101] ೧ ದಿನಿಯಳ್ಳ (ಆ), (ಮು)

[102] ೧ ದಿನಿಯಳ್ಳ (ಆ), (ಮು)

[103] ೨ ಬತ್ತಿದಬ್ಜಾ (ಆ), (ಮು)

[104] ೨ ಬತ್ತಿದಬ್ಜಾ (ಆ), (ಮು)

[105] ೩ ಕರದ ಹಂಸನೋ (ಆ), (ಮು)

[106] ೩ ಕರದ ಹಂಸನೋ (ಆ), (ಮು)

[107] ೪ ಸೀಮೆಯಲಿ (ಆ)

[108] ೪ ಸೀಮೆಯಲಿ (ಆ)

[109] ೧ ದಂಬುಜಕೆ (ಆ), (ಮು)

[110] ೧ ದಂಬುಜಕೆ (ಆ), (ಮು)

[111] ೨ ಯೆಂಜ (ಆ), (ಮು)

[112] ೨ ಯೆಂಜ (ಆ), (ಮು)

[113] ೩ ಘೋ (ಆ)

[114] ೩ ಘೋ (ಆ)

[115] ೪ ಶಶಿ (ಆ), (ಮು)

[116] ೪ ಶಶಿ (ಆ), (ಮು)

[117] ೫ ಮೆಲ್ಲನೆ (ಮು)

[118] ೫ ಮೆಲ್ಲನೆ (ಮು)

[119] ೬ ವರುಣದಿಶಾದ್ರಿಮಂದಿರಕೆ (ಆ) ಪಡುವಣ ಸಮುದ್ರದಲಿ (ಮು)

[120] ೬ ವರುಣದಿಶಾದ್ರಿಮಂದಿರಕೆ (ಆ) ಪಡುವಣ ಸಮುದ್ರದಲಿ (ಮು)

[121] ೭ ದೇವಿ (ಆ), (ಮು)

[122] ೭ ದೇವಿ (ಆ), (ಮು)