ಕಚ್ಚೆಗಳ ಚೆಲ್ಲಣದ ಕುಂಕುಮ

[1]ಚ್ಚೆಗಳ ವನಮಾಲೆಗಳ ಮೈ
ಮೆಚ್ಚೆ ಶೋಭಾವಹದ ಪೆಂಡೆಯದಡಿಯ ದಂಡೆಗಳ
ಹೊಚ್ಚ ಹೊಸ ಪಟ್ಟುಗಳ ನೀಲಿಯ
ಪಚ್ಚೆಗಳ ಕಸ್ತುರಿಯ ತಿಲಕದ
ನಿಚ್ಬಟರು ವಂಗಡಿಸಿ ನಿಂದರು ಭುಜವನಪ್ಪಳಿಸಿ                                                          ೫೬

ಕಾರಿರುಳ ತಿರುಳಂತೆ ಚರಿಸುವ
ಮೇರುಪರ್ವತದಂತೆ ವಿಳಯದ
ವಾರಿಧಿಯ ತೆರೆ[2]ಯಂತೆ ಗಗನದೊಳೊಗೆದ[3] ಶಿಖಿಯಂತೆ
ಭಾರಣೆಯ ಬಿಂಕದಲಿ ಖಳ ಚಾ-
ಣೂರ ಮುಷ್ಟಿಕರಿರೆ ಹಲಾಯುಧ
ಶೌರಿಗಳು ಸಮ್ಮುಖಕೆ ನಡೆದರು ಭುಜವನೊದರಿಸುತ                                                 ೫೭

ಹರಿ-ಬಲರ ಭುಜಹೊ[4]ಯಿಲ ರವಕಿಳೆ
ಬಿರಿದುದಹಿಪತಿ[5] ಕೆಡೆ[6]ದನದ್ರಿಗ
ಳುರುಳಿದುವು ರವಿಬಿಂಬ ತಿರುಗಿತು [7]ಚಕ್ರಕೆಣೆ[8]ಯೆನಿಸಿ
ಶರಧಿಯೊಡಗಲಿಸಿದುವು ಮತ್ತರ
ನೆರವಿ ಮಿಗೆ ಕಳವಳಿಸಿತಭ್ರದ
ಹೊರೆಯವರು ಮೊರೆವೊಕ್ಕರಮೃತಮಯೂಖಶೇಖರನ                                               ೫೮

ಕಂಡು ಖಳರಬ್ಬರಿಸಿ ನಿಜ ದೋ
ರ್ದಂಡಗ[9][10]ಸೂಳಯಿಸಿ ಮುಪ್ಪರಿ
ಗೊಂಡ ಕೋಪದೊಳ[11]ಳವಳಿಸಿ[12] ನಿಂಬುಕೆಗೆ ಕೈಮುಗಿದು
ದಂಡೆಗೊಂಡ[13]ಕ್ಕರದ[14] ಧೂಳಿಯ
ಮಂಡೆಯಲಿ ತಳೆದಿದಿರೊಳೊಪ್ಪುವ
ಗಂಡುಗಲಿ ಹರಿಬಲರ ಕೆಣಕಿದರಿದಿರ ಲೆಕ್ಕಿಸದೆ                                                                       ೫೯

ಹರಿಯೊಡನೆ ಚಾಣೂರನಾ ಹಲ-
ಧರನೊಡನೆ ಮುಷ್ಟಿಕನಧಟ ಕೇ-
ಸರಿಯೊಡನೆ ಕರಿ ಗರುಡನೊಡನಹಿಯೆಂಬ ಮಾಳ್ಕೆಯಲಿ
ಕೆರಳಿ ಮೇಲ್ವಾಯ್ದೊಬ್ಬರೊಬ್ಬರ
ಕರತ[15]ಳಕೆ ಕೈಯಿಕ್ಕಿ ಗಳ[16]ಬಂ
ಧುರದ ಹತ್ತಾಹತ್ತಿಯಲಿ ಕೆಣಕಿದರು ಕಾಳೆಗವ                                                             ೬೦

ಹರಿ ತಿವಿದನಾ ಖಳನ[17] ತಿವಿದನು
ಹರಿಯನವ ಪಡಿಳಿಸಿ ಹರಿ ಖಳ
ನುರವ ತಿವಿದನು ಕನಲಿಯವನದ ಕಳಚುತಬ್ಬರಿಸಿ
ತೆರಳದೊಡೆ ತಿವಿದನು ಮುಕುಂದನ
ಶಿರವನದ ಲೆಕ್ಕಿಸದೆ ಮುರಹರ
ನೆರಗಿದನು ಸಿಡಿಲೆರಗುವಂತೆ ನಿಶಾಚರನ ಶಿರವ                                                        ೬೧

ಇತ್ತ ಹಲಧರ ತಿವಿದನಾ ಖಳ
ನುತ್ತಮಾಂಗವನಳುಕದವನೌ
ಡೊತ್ತಿ ತಿವಿದನು ಬಲನನದ ಚಾ[18]ಳಯಿಸಿ ಬಲರಾಮ
ಮತ್ತೆ ತಿವಿದನು ಖಳನೆದೆಯನೊದ
ರುತ್ತ ಖಳ ಪಡಿತಳಿಸಿ ಮುಸಲಿಯ
ನೆತ್ತಿ ಬಿರಿವಂತೆರಗಿದನು ಗೋವಳರು ತಲ್ಲಣಿಸೆ                                                           ೬೨

ತೆರಳ[19]ರೊಬ್ಬರಿಗೊಬ್ಬರತಿ ಸಲೆ
ಯು[20]ರವ[21]ಣಿಸಿ ಸಿಡಿಲೊಂದನೊಂದೆಡೆ[22]
[23]ಬೆರಸಿದಂತಿರೆ ಖಳರು[24] ತಿವಿದರು[25] ಸುರರು ಬೆರಗಾಗೆ
ಶರಧಿ ಶರಧಿಯ ಹಳಚಿದಂತಿರೆ
ಹರಿಬಲರು ಚಾಣೂರ ಮಷ್ಟಿಕ
ರರರೆ ! ಸಮಜೋಡಿ[26]ಯಲಿ ಕಾದಿದರವನಿ ತಲ್ಲಣಿಸೆ                                                  ೬೩

ಕರವಳಯ [27]ಸಲೆಯುಬ್ಬಿ[28] ಡೊಕ್ಕರ
ವುರಗಬಂಧನ ಬಾಹು[29]ಧಣು ಕೊ[30]
ಪ್ಪರ ಚಣಿ[31]ಕೆ [32]ಮೋಹರಲಗಡಿಯಾ[33] ಮಂಡಿ ತಳಹತ್ತ
ಶಿರಲಗಡಿ [34]ಧಣುದಟ್ಟೆ[35] ಚೊಕ್ಕೆಯ[36]
ಕರತಳದ ಕ[37]ಮ್ಮರಿಯ[38] ಢಾಳಾಂ
ತರಲಗಡಿ ಮೊದಲಾದ ಬಿನ್ನಣ[39]ಗಳಲಿ ಕಾಡಿದರು[40]                                                             ೬೪

೧೦[41]ತಿವಿತಿವಿದು ಲಾಗಿಸುವ ಚಿಮ್ಮುವ
ತಿವಿವ೧೦[42] ಬಂಧದಲಡರಿ ಮಂಡಿಸಿ
ಲವುಡಿಸಾರದಲವುಕಿ ಗಳಹಸ್ತದಲಿ ಮುಷ್ಟಿ ೧೧[43]ಸುವ
ಬವರಿ೧೨[44]ವರಿ೧೨[45]ದುಪ್ಪ ೧೩[46]ರಕೆ೧೩[47] ಲಂಘಿಸಿ
ನಿವಡಿ ಸಾರದಲೆರಗಿ ಜಾರುವ
ಜವಳಿ ಬಿನ್ನಾಣದಲಿ ಕಾದಿದರೊಬ್ಬರೊಬ್ಬರಲಿ                                                             ೬೫

ಉರಗನಂತಿರೆ ಸುತ್ತಿ ಸಿಡಿಲಂ
ತೆರಗಿ ೧೪[48]ಸುಟ್ಟುರೆ೧೪[49]ಗಾಳಿಯಂತಿರೆ
ಮುರಿಮುರಿದು ಕಿತ್ತೆತ್ತಿ ವಿಷಮಗ್ರಹದವೊಲು ಪಿಡಿದು
ಕರಿಗಳಂತಿರೆ ಹೋರಿ ವಿರಹದ
ಹರಿಣನಂತಿರೆ ನೆಗೆದು ಮೇಣದ
ಕರುವಿನಂತಿರೆ ಕಾದಿದರು ಕೌತುಕದ ಕಾಳೆಗವ                                                           ೬೬

ತೋರಹತ್ತರು ೧೫[50]ಹರಿಬಲರ೧೫[51]
ಜ್ಝಾ೯ರತೆಯ ೧೬[52]ತಿವಿಗಳ೧೬[53] ರವಕೆ ಮದ
ನಾರಿ ಕಿವಿಗಳ ಮುಚ್ಚಿದನು ಮಝ ಭಾಪು ೧೭[54]ಮಲ್ಲೆ೧೭[55]ನುತ
ಓರಣಿಸಿ ಝಣ ಝಣ ಝಣೆಂಬ ಮ
ಹಾರಭಸವಳ್ಳಿರಿದು ಮುಸುಕಿತು
೧೮[56]ಶಾರದಾದ್ಯ ೧೮[57]ರ ಶಕ್ರಮುಖ್ಯರ ಕರ್ಣಕೋಟರವ                                                 ೬೭

ಬಳಿಕ ಹರಿ ಚಾಣೂರನೊಡನ
ಗ್ಗಳಿಸಿ ಕಾದುತ ಪಟ್ಟಸದ ಸಂ
ಚಳತೆಯಲಿ ಕಾಲ್ವಿಡಿದು ಕೆ[58]ಡಹಿ ನಭೋಂತರಾಳದಲಿ
ಸೆಳೆದು ತಿರ‍್ರನೆ ತಿರುಗಿ ಲಗಡಿಯ
ಲುಳಿಯ ಪಯಪಾಡಿನಲಿ ನೆಲಕ
ಪ್ಪಳಿಸಿದರೆ ಖಳನೊದರುತಿರ್ದನಜಾಂಡ ಘೋ[59]ಳಿಡಲು                                             ೬೮

ಆ ಸಮಯದಲಿ ಮುಷ್ಟಿಕನ ಬಲ
ಮೀಸಲಳಿದುದನರಿದು ಹಲಧರ
ನೋಸರಿಸದೇಳೆಂಟು ತಿವಿದಡಗೆಡಹಿ ಬವರಿಯಲಿ
ಬೀಸಿದರೆ ಬಸವಳಿದನೂರ್ಧ್ವ-
ಶ್ವಾಸದಲಿ ಮಿಕ್ಕವರು ಗೆಲುವಭಿ-
ಲಾಷೆಯಲಿ ಹರಿಬಲರ ಮುತ್ತಿದರಳವ ಲೆಕ್ಕಿಸದೆ                                                         ೬೯

ಕಂಡು ಹರಿ ಕೋಪದಲಿ ಹುಲ್ಲೆಯ
ಹಿಂಡಿನೊಳು ಹುಲಿ ಹಾಯ್ದವೊಲು ಗವಿ
ಗೊಂಡ ತಿಮಿರವ್ರಜಕೆ ತರಣಿಯ ಕಿರಣ ಕವಿವಂತೆ
ದಂಡೆಗೊಂಡಬ್ಬರಿಸಿ ತಿವಿದೊಡೆ
ದಿಂಡುಗೆಡೆದುದು ಮಲ್ಲವಡೆ ಖಳ
ಕಂಡು ಬೆರಗಾಗಿರ್ದನಿವದಿರು ಮರ್ತ್ಯರಲ್ಲೆನುತ                                                          ೭೦

ಗಾಳಿಯಿದಿರಲಿ ನಿಲುವುದೇ ಘನ
ಜಾಳವಮರೇಶ್ವರನ ವಜ್ರದ
ದಾಳಿಯೊಡನಿದಿರೆತ್ತುವುವೆ ಹುಲು ಮೊರಡಿ[60]ಗಳ ಬಳಗ[61]
ಹಾಳು [62]ಜಗ[63]ಜಟ್ಟಿಗಳು ಬಲವನ-
ಮಾಲಿಗಳ ಮುಂದಿದಿರೆ ಎಂದು ವಿ-
ಶಾಲಮತಿಯಕ್ರೂರ ನುಡಿದನು ಶಿರವನೊಲೆದೊಲೆದು                                                 ೭೧

[64]ಮಗುವುಗಳು ತಾವ್[65] ವಿಗಡ ಜಗಜ-
ಟ್ಟಿಗಳೊಡನೆ ಸರಿಯೊಕ್ಕು ದಣಿಯದೆ
ಚಿಗುಳಿದುಳಿದೆಳೆದಿಕ್ಕಿ ಕೊಂಡರಿದಾವ ಸತ್ತ್ವದಲಿ
[66]ಜಗವ ಕಾವ ಮಹಾತ್ಮರಸುರನ
ಬಗೆಯರತಿ ಸಹಸಿಗಳೆನುತ ಕೈ
ಮುಗಿದು ಕೊಂಡಾಡಿದುದು ಕೂಡಿದ ನೆರವು ಹರಿಬಲರ[67]                                             ೭೨

ಸೊಕ್ಕಿದಿಭ ಸರಸಿರುಹವನದೊ[68]
ಗೊಕ್ಕಲಿಕ್ಕುವ ಮಾಳ್ಕೆಯಲಿ ಹರಿ
ಮಿಕ್ಕು ಮಲ್ಲರ ಕೆಡಹಿ ಹಲಧರಸಹಿತ ವಹಿಲದಲಿ
ರಕ್ಕಸನ ಸಮ್ಮುಖಕೆ ನಡೆದೆವೆ
ಯಿಕ್ಕದೀಕ್ಷಿಸಿ ಗಗನಗಂಗೆಯ
ಜಕ್ಕುಲಿಸುತಿಹ ತವಗದಗ್ರವ ಕಂಡು ಬೆರಗಾದ                                                           ೭೩

ಆ ತವಗದಗ್ರದಲಿ ಮುಸುಕಿದ
ಭೀತಿಯಲಿ ಸಿಗ್ಗಾಗಿ ಕಂಗೆ-
ಟ್ಟಾತುರಿಸಿ ಜವಗುಂದಿ ಕಳವಳಿಸುತ ವಿಕಾರದಲಿ
ಮಾತನಾಡುತ ಮರೆದು ನಿಮಿಷಕೆ
ಚೇತರಿಸಿ ಹಲುಮೊರೆದು ಮರುಗುವ
ಮಾತು[69]ಳನ[70] ದುಃಸ್ಥಿತಿಯ ಕಂಡಸುರಾರಿಯಿಂತೆಂದ                                                          ೭೪

ಬಿದ್ದು ದಗ್ಗದ ದಂತಿ ಮಲ್ಲರು
ಹದ್ದು-ಕಾಗೆಗೆ ಬೋನವಾದರು
ಹೊದ್ದಲಮ್ಮರು[71] ನಿನ್ನ ಕಾಹಿನ ವೀರ ಪರಿವಾರ
ಬಿ[72]ದ್ದಿನರ[73]ನುಪಚರಿಸು ಬಾ ಮೇ
ಲಿದ್ದು ನೋಡುವುದುಚಿತವಲ್ಲೆನೆ
ಗದ್ದುಗೆಯ ಹೊಯ್ದೆದ್ದು ಕಿಡಿಕಿಡಿಯೋದನಾ ಕಂಸ                                                        ೭೫

ಘಡುಘಡಿಸಿ ಘೂರ್ಮಿಸಿ ಯುಗಾಂತ್ಯದ
[74]ಸಿಡಿ[75]ಲವೊಲು ಗರ್ಜಿಸಿ ಕಠಾರಿಯ
ಜಡಿದು ಕಡುಗಿ ಕುಠಾರದಾನವನಧಿಕರೋಷದಲಿ
ಮಿಡುಕಿ [76]ಪರಿವಾರಕ್ಕೆ[77] ನೇಮವ
ಕೊಡುತ [78]ಹಮ್ಮದವೋಗಿ[79] ತನ್ನಯ
ಮಡದಿಯರ ನೆಮ್ಮಿರ್ದನಹಿತ[80]ಧ್ವನಿಯನಾಲಿಸುತ                                                     ೭೬

ಪತಿಯ ನೇಮದಲಖಿಳ ದೈತ್ಯ
ಪ್ರತತಿ ಕವಿದಿಕ್ಕರಿಸಿ ಕಮಲಾ
ಪತಿಯ ಮುತ್ತಿ[81]ತು ರವಿಯ ಮುತ್ತುವ ತಮದ ದಂಡಂತೆ[82]
ಧೃತಿಗೆಡದೆ ನಸುನಗುತ ಗಂಗಾ
ಪಿತನದಕೆ ಕಡುಮೆಚ್ಚಿ ಕಂಸನ
ಕೃತಕ ಲೇಸಾಯ್ತೆಂದ ತನ್ನಯ ಶಿರವನೊಲೆದೊಲೆದು                                                  ೭೭

ಮಾವ ಕೇಳ್ ನಿನ್ನೊಡನೆ ಹುಟ್ಟಿದ
ದೇವಕಿಯ ಸುತರಾವು ಹಬ್ಬಕೆ
ನೀವು ಬರಹೇಳಿದೊಡೆ ಬಂದೆವು ನಮ್ಮ ಕೊಬ್ಬಿನಲಿ
ಲಾವಕರ ನುಡಿ [83]ಕೇಳಿ[84] ಕೊಲಿಸದೆ
ಕಾವುದೊಳ್ಳಿತು ವನದೊಳಾಡುವ
ಗೋವರಲಿ ಗುಣದೋಷವರಸುವುದುಚಿತವಲ್ಲೆಂದ                                                       ೭೮

ನಾವು ಬಂದೆರಗುವಡೆ ನೀವಿಹ
ಠಾವೆಮಗೆ ವಶವಲ್ಲ ಸೋದರ
ಮಾವನಾಗಿಯು ನಮ್ಮ ಮೇಲಿನಿತಿಲ್ಲ ಕೃಪೆ ನಿಮಗೆ
ಈ ವಿಗಡ ಪರಿವಾರದಿದಿರಲಿ
ಜೀವಿಸುವರೇ ತರಳರಕಟ! ಕೈ
ಪಾವಲೋಕನದಿಂದ ಸಲಹುವುದೆಂದನಸುರಾರಿ                                                         ೭೯

ಎಂದು ಹರಿ ಕಟಕಿಯಲಿ ನಾನಾ
ಛಂದದಲಿ ಮೂದಲಿಸಿ ತ್ರಿಪುರವ
ನೊಂದು ಸರಳಿಂದುದುರಪಿದುಗ್ರನ ರೂಪ ಕೈಕೊಂಡ
ಹಿಂದ ನೆನೆದುರಿದೆದ್ದು ಮನದಲಿ
[85]ನೊಂದೊದ[86]ರಿ ಪುಟನೆಗೆದು ಪಾರಿದ
ನಿಂದುಬಿಂಬವ ರಾಹು ಮೊ[87]ಗೆದರೆಯಟ್ಟುವಂದದಲಿ                                                  ೮೦

ಹರಿಯ [88]ಸಮ[89] ಚಾಳಿಯಲಿ ಬಲನ
ಬ್ಬರಿಸಿ ತವಗಕೆ ನೆಗೆಯಲದ ಕಂ
ಡರರೆ ಹಲಧರ [90]ಜಾಗು ಜಾಗೆ[91] ನುತಸುರರಿಪು ಖಳನ
ಶಿರವ ಚಚ್ಚರದಲ್ಲಿ ಮೇಲ್ವಾ
ಯ್ದೆರಗಿ ಮುಂದಲೆವಿಡಿದು ತಿವಿದೆಳೆ
ಗುರುಳಿಸಿದೊಡಡಗೆಡೆದನೆರಗಿದ ಸಿಡಿಲ ರಭಸದಲಿ                                                     ೮೧

ಕೆಡೆದ ಕಂಸನ ಮೇಲೆ ಹರಿ ಬೊ
ಬ್ಬಿಡುತ ಧುಮ್ಮಿಕ್ಕಿದೊಡವನ ಹೇ
ರೊಡಲೊಳದ್ದುವು ಚರಣವಾ ದುರ್ಧರವ ಲೆಕ್ಕಿಸದೆ
ಹೊಡಕರಿಸಿ ಕುಣಿದಾಡಿ ಹಿಗ್ಗುತ
ಸಡಗರಿಸಿ ನೆರೆದಿರ್ದ ದೈತ್ಯರ
ಕೆಡಹಿ ತೊತ್ತಳದುಳಿದನೊಂದೇ ನಿಮಿಷಮಾತ್ರದಲಿ                                                     ೮೨

ಅರೆಮರಳುವಕ್ಷಿಗಳ ಕೆದರಿದ
ಕುರುಳ ಹೊಯ್ವಳ್ಳೆಗಳ ಮೇಲುಸು
ರುರವಣೆಯ ನಾಸಿಕದ ಹಾಯ್ಕುವ ಕೊರಳ ನೀರ್ದೆಗೆದು
ಹೊರಳದಿಹ ನಾಲಗೆಯ ನೆತ್ತರು
ಸುರಿವ ಕಾಯದ ಕಂಸ ಕೃಷ್ಣನ
ಚರಣದಂದುಗೆಯಂತೆ ಮೆರೆದನು ಕಳನ ಚೌಕದಲಿ                                                      ೮೩

ಬೊಬ್ಬಿರಿದುದಮರೌಘವಸುರನ
ಗಬ್ಬ ಮಗ್ಗಿತು ನೆರೆದ ನೋಟಕ
ರೊಬ್ಬರುಳಿಯದೆ ಸರಿದರಡಗಿದರಸುರಮಂತ್ರಿಗಳು
ಹಬ್ಬ ಹಸನಾಯ್ತೆನುತ ಗೋವಳ
ರುಬ್ಬಿದರು ಹರುಷದಲಿ ಯಾದವ
ರಬ್ಬರಣೆ ಹಿರಿದಾಯ್ತು ಖಳಕಂಸಾವಸಾನದಲಿ                                                            ೮೪

ಬಳಿಕ ಖಳನಳವಳಿದು ವಿಷಮ
ಸ್ಥಳಕೆ ತೆರಳಿದನಿತ್ತ ಹೂವಿನ
ಮಳೆಯ ಕರೆದನು ಶಕ್ರನಸುರಾಂತಕನ ಮಕುಟದಲಿ
ಜಲಜಭವ ಭವರಚ್ಯುತನ ಭುಜ
ಬಲಕೆ ಮನದೊಳು ಮೆಚ್ಚಿ ಮಕುಟುವ
ನೊಲೆದು ಕೊಂಡಾಡಿದರು [92]ಹರಿಯನು ಜಯತು ಜಯತೆನುತ[93]                                ೮೫

ಎಮೆ ಹಳಚುವನಿತರಲಿ ವಿಶ್ವ
ಭ್ರಮೆಯ ಹುಟ್ಟಿಸಿ ಸಲಹಿ ಕಾಲ
ಕ್ರಮದಲದ ಸಂಹರಿಸಿ ಮರಳಿ ನಿಜಸ್ವರೂಪದಲಿ
ಮಮತೆಯಳಿದು ಸಮಸ್ತದೇವೋ
ತ್ತಮನೆನಿನಿ ರಾಜಿಸುವ ಹರಿಯಾ
ಕ್ರಮಿಸಿದನು ಗಡ ಖಳನನೆಂದಕ್ರೂರ ನಗುತಿರ್ದ                                                         ೮೬

ಇಂದು ಕಡೆಯಾಯ್ತುಗ್ರಸೇನನ
ಬಂಧನಕೆ ದೇವಕಿಯ ಚಿತ್ತದ
ಕಂದು ಕೈಸೆರೆವೋಯ್ತು ಕಂಸಾಸುರನ ಸತಿಯರಿಗೆ
ನಂದನಂಜಿಕೆ ಹರಿದುದಾನಕ-
ದುಂದುಭಿಯ ಮನದಾಸರಡಗಿದು
ದೆಂದು ನಾರದ ನಲಿದು ನರ್ತಿಸುತಿರ್ದನಭ್ರದಲಿ                                                         ೮೭

ಚರಣದಲಿ ಸಿಲುಕಿರ್ದ ಕಂಸಾ
ಸುರನನೊದೆದೀಡಾಡಿ ನಿಜಪರಿ-
ಕರ ಸಹಿತ ಮುರಮಥನನೋಲಗಸಾಲೆಗೈತಂದು
ಹಿರಿದು ಬಳಲಿದಿರೆಂದೆನುತಲುಪ
ಚರಿಸುತಿರ್ದನು ಹಲಧರನ ಖಳ
ನರಸಿಯರು ಗೋಳಿಡುತ ನಡೆದರು ರಮಣನಿರ್ದೆಡೆಗೆ                                                 ೮೮

ಹಾ! ರಮಣ! ಹಾ! ರಮಣ! ಎಂದಮ-
ರಾರಿಯನು ತಕ್ಕೈಸಿ ಲೋಚನ
ವಾರಿಯಲಿ ಪುಳಕಿಸುತವನ ಸದ್ಗುಣವ ಹಂಬಲಿಸಿ
ವೈರಿಗಳ ಮಗ್ಗಿಸುವುಪಾಯದ
ವಾರಿಧಿಯ ಕಡೆಗಾಣದಳಿವೈ
ವೀರ ಎನುತ ಬಹುಪ್ರಕಾರದಲವರು ಮರುಗಿದರು                                                       ೮೯

ಮಡಿದ ಕಂಸನ [94]ಕಂಡು[95] ಮರುಗುವ
ಮಡದಿಯರ ಶೋಕಾಗ್ನಿ ವರ್ಧಿಸಿ
ಸುಡದೆ ಮಾಣದೆನುತ್ತ ತನ್ನಯ ಬರವ ಬೀಳ್ಕೊಟ್ಟು
ಪಡುವಣದ್ರಿಗೆ ನಡೆದನಿನನೊ
ಗ್ಗೊಡೆದು ಚೆಲ್ಲಿತು ಸೇನೆ ಮನೆಯಲಿ
ಗುಡಿಯ ಕಟ್ಟಿಸಿ ಬಹುಳ ಹರ್ಷದೊಳಿರ್ದನಕ್ರೂರ                                                         ೯೦

ಎಂಟನೆಯ ಸಂಧಿ ಮುಗಿದುದು


[1] ೧ ದ (ಅ)

[2] ೨ ಧ (ಅ)

[3] ೩ ವ (ಅ)

[4] ೪ ವೊ (ಮು)

[5] ೫-೫ ಸಿಡಿ (ಅ), ಸೆಡೆ (ಮು)

[6] ೫-೫ ಸಿಡಿ (ಅ), ಸೆಡೆ (ಮು)

[7] ೬-೬ ತಿಗುರಿಗೊರೆ (ಆ)

[8] ೬-೬ ತಿಗುರಿಗೊರೆ (ಆ)

[9] ೭-೭ ವನು (ಆ)

[10] ೭-೭ ವನು (ಆ)

[11] ೮-೮ ಟವಟಸಿ (ಆ), ಟಮಟಸಿ (ಮು)

[12] ೮-೮ ಟವಟಸಿ (ಆ), ಟಮಟಸಿ (ಮು)

[13] ೯-೯ ಡಾಕಳ (ಮು)

[14] ೯-೯ ಡಾಕಳ (ಮು)

[15] ೧-೧ ಕರವ ತಳುಕಿಕ್ಕಿಗಳ (ಆ), ತಳವ ಕತರಳಕಿಡುವ (ಮು)

[16] ೧-೧ ಕರವ ತಳುಕಿಕ್ಕಿಗಳ (ಆ), ತಳವ ಕತರಳಕಿಡುವ (ಮು)

[17] ೨ ನು (ಅ)

[18] ೩ ಬೋ (ಆ)

[19] ೪-೪ ರವರವರೊಬ್ಬರೊಬ್ಬರಿ | ಗು (ಆ), ದುಬ್ಬರದಬ್ಬರದೆ ಬಲ | ನು (ಮು)

[20] ೪-೪ ರವರವರೊಬ್ಬರೊಬ್ಬರಿ | ಗು (ಆ), ದುಬ್ಬರದಬ್ಬರದೆ ಬಲ | ನು (ಮು)

[21] ೫-೫ ವಣೆಯ ವೆಗ್ಗಳಿಸಿ ಪಿಡಿದೊಡ (ಮು)

[22] ೫-೫ ವಣೆಯ ವೆಗ್ಗಳಿಸಿ ಪಿಡಿದೊಡ (ಮು)

[23] ೬ ವೆ (ಆ-ಮು)

[24] ೭ ನ (ಮು)

[25] ೮ ನು (ಮು)

[26] ೯ ಳಿ (ಮು)

[27] ೧-೧ ಬೀಸಲೆವು (ಮು)

[28] ೧-೧ ಬೀಸಲೆವು (ಮು)

[29] ೨-೨ ದಣೆ ಖೊ (ಮು)

[30] ೨-೨ ದಣೆ ಖೊ (ಮು)

[31] ೩ ಡಿ (ಮು)

[32] ೪-೪ ಮೋಹು ಪೆರ ತೊಲಗಡಿ (ಮು)

[33] ೪-೪ ಮೋಹು ಪೆರ ತೊಲಗಡಿ (ಮು)

[34] ೫-೫ ದಣುವಟ್ಟೆ (ಮು)

[35] ೫-೫ ದಣುವಟ್ಟೆ (ಮು)

[36] ೬ ಹ (ಆ)

[37] ೭ (ಆ-ಮು)

[38] ೮ ಮ (ಮು)

[39] ೯-೯ ವೆಸೆಯ ಹೋರದಿರು (ಆ)

[40] ೯-೯ ವೆಸೆಯ ಹೋರದಿರು (ಆ)

[41] ೧೦-೧೦- ತಿವಿವ ತಿರುಗುವ ಲಾಗಿಸುವ ಚಿ | ಮ್ಮು ವನಿ (ಆ-ಮು)

[42] ೧೦-೧೦- ತಿವಿವ ತಿರುಗುವ ಲಾಗಿಸುವ ಚಿ | ಮ್ಮು ವನಿ (ಆ-ಮು)

[43] ೧೧ ಟ್ಟ (ಮು)

[44] ೧೨-೧೨ ಭರ (ಆ)

[45] ೧೨-೧೨ ಭರ (ಆ)

[46] ೧೩-೧೩ ರಿಸಿ (ಮು)

[47] ೧೩-೧೩ ರಿಸಿ (ಮು)

[48] ೧೪-೧೪ ಸುಂಟುರು (ಆ)

[49] ೧೪-೧೪ ಸುಂಟುರು (ಆ)

[50] ೧೫-೧೫ ಲಹರಿ ಬಲ (ಅ)

[51] ೧೫-೧೫ ಲಹರಿ ಬಲ (ಅ)

[52] ೧೬-೧೬ ತಗುಳಿನ (ಮು)

[53] ೧೬-೧೬ ತಗುಳಿನ (ಮು)

[54] ೧೭-೧೭ ಛಳಿರೆ (ಮು೦)

[55] ೧೭-೧೭ ಛಳಿರೆ (ಮು೦)

[56] ೧೮-೧೮ ಭೂರಿ ಶಾಠ್ಯ (ಮು)

[57] ೧೮-೧೮ ಭೂರಿ ಶಾಠ್ಯ (ಮು)

[58] ೧ ಕೊ (ಆ)

[59] ೨ ಘೀ (ಅ)

[60] ೩-೩ ಗಳು ಖಳನ (ಅ)

[61] ೩-೩ ಗಳು ಖಳನ (ಅ)

[62] ೪-೪ ಹರಿ (ಆ)

[63] ೪-೪ ಹರಿ (ಆ)

[64] ೧-೧ ಮುಗುದರಿವರಿರು (ಮು)

[65] ೧-೧ ಮುಗುದರಿವರಿರು (ಮು)

[66] ೨-೨ ಜಗವ ರಕ್ಷಿಸುವೀ ಮಹಾತ್ಮರು | ಬಗೆಯ ಲತಿ ಸಾಹಸಿಗಳೆನುತುವೆ | ಮಿಗೆ ನುತಿಸಿ ಕೊಂಡಾಡಿದರು ಹರಿಬಲರ ಪುರಜನರು (ಆ-ಮು)

[67] ೨-೨ ಜಗವ ರಕ್ಷಿಸುವೀ ಮಹಾತ್ಮರು | ಬಗೆಯ ಲತಿ ಸಾಹಸಿಗಳೆನುತುವೆ | ಮಿಗೆ ನುತಿಸಿ ಕೊಂಡಾಡಿದರು ಹರಿಬಲರ ಪುರಜನರು (ಆ-ಮು)

[68] ೩-೩ ಗ (ಮು)

[69] ೪-೪ ಗಳ (ಮು)

[70] ೪-೪ ಗಳ (ಮು)

[71] ೫ ದು (ಮು)

[72] ೬-೬ ದ್ದವರ (ಆ-ಮು)

[73] ೬-೬ ದ್ದವರ (ಆ-ಮು)

[74] ೧-೧ ಕಡ (ಆ)

[75] ೧-೧ ಕಡ (ಆ)

[76] ೨-೨ ನಿಜ ಪರಿಕರಕೆ (ಆ)

[77] ೨-೨ ನಿಜ ಪರಿಕರಕೆ (ಆ)

[78] ೩-೩ ಹಮ್ಮಿಂದೊಗ್ಗಿ (ಆ)

[79] ೩-೩ ಹಮ್ಮಿಂದೊಗ್ಗಿ (ಆ)

[80] ೪+ರ (ಆ)

[81] ೫-೫ ದುದರ್ಕನೊಡನೆ ತಮಂಧ ಕವಿವಂತೆ (ಆ)

[82] ೫-೫ ದುದರ್ಕನೊಡನೆ ತಮಂಧ ಕವಿವಂತೆ (ಆ)

[83] ೬-೬ ಗಳಲಿ (ಆ)

[84] ೬-೬ ಗಳಲಿ (ಆ)

[85] ೧-೧ ನಿಂದೊಡ (ಆ-ಮು)

[86] ೧-೧ ನಿಂದೊಡ (ಆ-ಮು)

[87] ೨ ವೊ (ಆ-ಮು)

[88] ೩-೩ ಸಂ (ಆ)

[89] ೩-೩ ಸಂ (ಆ)

[90] ೪-೪ ಚಾಗು ಚಾಗೆ (ಆ)

[91] ೪-೪ ಚಾಗು ಚಾಗೆ (ಆ)

[92] ೧-೧ ಹರಿಜಯಜಯಜಯೆಂದೆನುತ (ಆ)

[93] ೧-೧ ಹರಿಜಯಜಯಜಯೆಂದೆನುತ (ಆ)

[94] ೧-೧ ಮಲಗಿ (ಆ)

[95] ೧-೧ ಮಲಗಿ (ಆ)