ಗೋವಿಂದsss ಗೋವಿಂದsss ಗೋಪಾಲsss ಗೋವಿಂದsss
ಅವ್ರು ಬೂದುಬಾಳಿಗೆ ಬಂದಿದ್ದಾರೆsss || ತಂದಾನ ||
ತಿರ್ಪತಿ ಬಿಟ್ಟವರೆ ವನ್ನಾಳಿ ಬಂದಾರೆsss
ವನ್ನಾಳಿ ನಾರಾಯ್ಣ ಆಗಿದ್ದಾರೆsss || ತಂದಾನ ||

ಸ್ವಾಮಿಯವ್ರು ತಿರ್ಪತಿ ಬಿಟ್‌ ಬಿಟ್ಟಿದ್ದಾರೆ
ಪೊಡ್ನಾಡಿಗೆ ಬಂದ್ಬುಟ್ಟು ಗೋಕುಲಾಗೆ ಬಂದಿದ್ದಾರೆ
ಪೊಡ್ನಾಡಿಗೆ ಬಂದು ಪೋಡು ದೇಸಕೆ ಬಂದು
ನಾರಾಯ್ಣ ಮೂರ್ತಿಯವ್ರು ಎಲ್ಲಿಗೆ ಬಂದಿದ್ದಾರೆ?
ತಿರ್ಪತಿಗೆ ಬಂದು ದಾಸ್ಗೊಳ್ಗೆಲ್ಲ ನಾಮ್ಕರ್ಣ ಮಾಡ್ಬುಟ್ಟು,
ದಾಸ್ಗೋಳ್‌ ಮಾಡ್ಬುಟ್ಟು ಎಲ್ಲಿಗ್‌ ಬಂದಿದ್ದಾರೆ?

ಅವ್ರು ಸಿವ್ನಸಮುದ್ರಕ್ಕೆ ಬಂದಿದ್ದಾರೆsss || ತಂದಾನ ||
ಸ್ವಾಮಿಯವ್ರು ಸಿವ್ನಸಮುದ್ರಕ್ಕೆ ಬಂದು ತುಂಬಾ ಸಾಕಾಗೋಗ್ ಬುಡ್ತು.
ಸ್ವಾಮಿಯವ್ರಿಗೆ ಸಾಕಾಗೊತ್ತಿಗೆ ಮನಗ್ ಬುಟ್ರು
ಆ ಬೂತಾಯಿ ತಗುದ್ನು ಲಕ್ಷ್ಮಿ ದೇವಿ ತುಳ್ಸಮ್ನ ಮಾಡ್ಕಂಡು
ಮೈ- ಕೈ ನೋಯ್ಸಿಕೊಂಡು. . . .

ಅಲ್ಲಿ ತಳ್ಕಾರ್ ರಂಗಪ್ಪಸ್ವಾಮಿ ನಾಮಕರಣsss || ತಂದಾನ ||
ಅಲ್ಲಿ ಪಟ್ಟದ ರಂಗ್ಸೋಮಿ ನಾಮ್ಕರ್ಣ ಮಾಡ್ಬುಟ್ಟು
ಆಗ ಎಲ್ಲಿ ಹೋಗಿದ್ದಾರೆ? ಸ್ರಿರಂಗಪಟ್ನ ಹೋಗಿದ್ದಾರೆ.
ಸ್ರಿರಂಗಪಟ್ನ ಹೋಗಿ, ಅಲ್ಲೋಗಿ ಏನ್ಮಾಡಿದ್ದಾರೆ?
ಸ್ರೀರಂಗಪ್ಪ ಅಂದ್ಬುಟ್ಟು ನಾಮ್ಕರ್ಣ ಮಾಡ್ಬುಟ್ಟು

ಅಪ್ಪಾsss ಸ್ರೀರಂಗಪ್ಪ ಎಂದು ನಾಮಕರಣsss || ತಂದಾನ ||
ಸ್ರೀರಂಗಪಟ್ಣಕ್ಕೆ ಬಂದು ಸ್ರೀರಂಗಪ್ಪ ಎಂದು ನಾಮ್ಕರ್ಣ ಮಾಡ್ಬುಟ್ಟು. . . . .

ಅವ್ರು ಗೋಕುನಾಡಿಗೆ ಸ್ವಾಮಿ ಓಗಿದ್ದಾರೆsss || ತಂದಾನ ||
ಸ್ವಾಮಿಯವ್ರು ಗೋಕುನಾಡಿಗೆ ಒರ್ಟೊಗ್‌ ಬುಟ್ರು
ಆಗ್ಲ್ ಗಾತ್ರ ಸಂಕು ಮುಗಲ್ ಗಾತ್ರ ಜಗ್ಟೆ ಒತ್ಗಂಡು ಅವ್ರು
ಗೋಕುಲ್ ನಾರಯ್ಣ ರಂಗಪ್ಪ ಈವೊತ್ತು ಬಂದಿದ್ದಾನೆ ಅಂದ್ಬುಟ್ಟು . . . .

ಅಂವ ಕರಿಯಕಲ್ಲ ಬೆಟ್ಟಕ್ಕೆ ವೋಗಿದ್ದಾರೆsss || ತಂದಾನ ||
ಕರಿಯಕಲ್ಲ ಬೆಟ್ಟಕೋದ್ರು ನಾರಾಯ್ಣ ಮೂರ್ತಿಯವ್ರು. . . .
ಕರಿಕಲ್ಲ ಬೆಟ್ಟ ಅಂದ್ರೆ ದೂರ ಅಲ್ಲ
ಇಲ್ಲಿ ನೋಡು ಯಾವ್ ಕಡೆ ಪಕ್ಕ ಇದ್ದಾರೆ
ಕಲ್ಕುಣಿ, ಕಲ್ಕುಣಿ ಕರಿಕಲ್ಲ ಬೆಟ್ಟ ಅನ್ನುವಂತದಿದೆ.

ಅಲ್ಲಿ ಕರಿರಂಗಪ್ಪನವ್ರು ಆಗಿದ್ದಾರೆsss || ತಂದಾನ ||
ಕರಿರಂಗಪ್ಪ ನಾಮ್ಕರ್ಣ ಮಾಡ್ಬುಟ್ಟು ನಾರಾಯ್ಣ ಮೂರ್ತಿ ಎಲ್ಲಿ ಬಂದಿದ್ದಾರೆ ಅಂದ್ರೆ. . . .

ತಲ್ಕಾಡಿಗೆ ಸ್ವಾಮಿ ಬಂದಿದ್ದಾರೆsss || ತಂದಾನ ||
ತಲ್ಕಾಡಿಗೆ ಬಂದಿದ್ದಾರೆ ರಂಗಪ್ಪೋರು ಅಣ್ಣ -ತಮ್ಮ ಇಬ್ರು ಸೇರ್ಕೋಂಡು . . . .
ಆಹಾ ರಂಗ !
ಏನಣ್ಣ ಸಿಂಗ?
ಓಹೋ ರಂಗ!
ಏನಣ್ಣ ಸಿಂಗ?
ಅಯ್ಯೋ ಈಗ ನಾನು ತಾನ ಮಾಡ್ಬೇಕು ಸೀಗಕಾಯಿ ಬೇಕು.
ಅಣ್ಣಾ ನಾವು ತರ್ಬೇಕಾದ್ರೆ ಬಿಳಿಕಲ್ಲ ಬೆಟ್ಟಕ್ಕೋಗ್ ಬೇಕು.
ಬೆಳ್ಳಿ ಬೆಟ್ಟಕೋದ್ರೆ ಬಿಳಿ ಸೀಗೆಕಾಯಿ ತರ್ತೀನಿ ಅಂದ್ರು.
ಹೋಗಪ್ಪಾ ಅಂದ್ರು.

ಏನ್ಮಾಡ್ತಾ ಇದ್ದಾನೆ ತಿರ್ಪತಿ . . . . ತಿಮ್ಮಪ್ಪ,
ಮೇಲ್ ಗಿರಿ ಕೈಲಾಸ್ದ ರಂಗಪ್ಪ ಕಳ್ಳ ಹುಳಿ ಕಳ್ ರಂಗಪ್ಪ,
ಇವ್ರು ಏನ್ಮಾಡ್ತ ಇದ್ದರೆ ಅಂದ್ರೆ ನನ್ ತಮ್ಮ ತಂದ್ಬುಡ್ತಾರೆ.
ಆಗೆಂದ್ಬುಟ್ಟು ನಾರಾಯ್ಣ ಮೂರ್ತಿ ತಳ್ಳಾರ್ ರಂಗಪ್ಪೋರು
ತಾನ ಮಾಡ್ದೆ ಸಣ್ಣ ಮರ್ಳ ಮೇಲೆ ಆನಂದ್ವಾಗಿ ಮಲ್ಗಿದ್ದಾರೆ.
ಆಗ ನಾರಾಯ್ಣ ಮೂರ್ತಿಯವ್ರು ಪಿರಿಯಾಪಟ್ಣ, ಸಂತೆ ಸರ್ಗೂರು,
ಮರಳ್ಳಿ, ಮಗಡಳ್ಳಿ, ಆರ್ದಳ್ಳಿ, ಗುಂಡ್ಲುಪೇಟೆ, ಹೂಡ್ನೂರು ಕಪ್ಪ
ಎಲ್ಲಾ ದಾಸ್ಗೋಳ ಮಾಡ್ಕಂಡು ನೀಲ್ಗಿರಿ, ಕೋತ್‌ಗಿರಿ

ಅವ್ರು ದಾಸಯ್ನ ಉಂಡಿಗೆ ಬಂದಿದ್ದಾರೆsss || ತಂದಾನ ||
ಅಪ್ಪಾ ದಾಸಯ್ಯ ಉಂಡಿಗೆ ಬಂದವ್ರೆ ದಾಸಯ್ಯsss
ಬುಗುಬುಗ್ನೆ ಸಂಕ ಊದುತ್ತಾರೆsss || ತಂದಾನ ||

ಆಗ ಒಕ್ಲಾದ ಗಂಗಡಿಕಾರ ಗೌಡ ಗೊತ್ತು ತಾನೆ?
ಗಂಗಡಕಾರ ಗೌಡ ಅಂದ್ರೆ ಗೊತ್ತಿಲ್ವಲ?

ಏಯ್ ತಿಂಡಿ ಊಟ ಆಗದೆ. ತಿಂಡಿ ಊಟ ಮಾಡ್ಕಂಡ್ ಹೋಗಪ್ಪ ಅಂದ್ರು.
ಯಾರು ಈ ಗಂಗಡಿಕಾರ ಗೌಡ್ರು
ದಾಸಪ್ಪ ಏನ್ಮಾಡ್ತ ಇದ್ದ, ಸುಮ್ ಸುಮ್ನೆ ನುಗ್ತಾ ಇದ್ದ
ಅರೆ ಹೆಂಗ್ಸರ ಊಟ ಆಗಿಲ್ಲ ಯಾವ್ ದಾಸಯ್ಯ?
ಯಾವ್ ಕೇರಿಯವ್ನಯ್ಯ?
ನಾವು ಒಕ್ಲಾದವ್ರು ಇಡ್ಕಳ್ರಯ್ಯ ಆ ದಾಸಪ್ನ.

ಅಲ್ಲಿ …. ಹುಟ್ಟುತ್ತಾರೆsss || ತಂದಾನ ||
ಒಕ ….
ಆಗೆನ್ಮಾಡ್ತ ಇದ್ದಾನೆ “ದಾಸಯ್ನುಂಡಿ ಹಾಳಾಗ್ಲಿ,
ಗಂಗವಾಡಿ ಉದ್ದಾರವಾಗ್ಲಿ”
ದಾಸಯ್ನುಂಡಿ ಮುಂದೆ ತೋಪಾಗ್ಲಿ.

ಅಯ್ಯ ದಾಸಯ್ನ ಮಂಟಪ ಆಗುತ್ತದೆsss || ತಂದಾನ ||
ದಾಸಯ್ನ ಮಂಟಪ ಅಂದುಬುಟ್ಟು ನಾಮ್ಕರ್ಣ ಮಾಡ್ಬುಟ್ಟು
ನಾರಾಯ್ಣ ಎಲ್ಲಿಗ್ ಬಂದಿದ್ದಾರೆ?

ಉನಗನ ಮುಂಟಿಗೆ ಬಂದಿದ್ದಾರೆ.
ಆಗ್ಲ ಗಾತ್ರ ಸಂಕು ಮುಗಲ ಗಾತ್ರ ಜಗ್ಟೆ
ಒತ್ಕೊಂಡು ಎಲ್ಲಿಗ್ ಬಂದಿದ್ದಾರೆ?
ಉನಗನ ಮುಂಟಿಗೆ ಬಂದಿದ್ದಾರೆsss || ತಂದಾನ ||
ಉನಗನ ಮುಂಟಿಗೆ ಬಂದವರೆ ನಾರಾಯ್ಣsss
ಎಡಗಡೆ ಸಂಕ ಇಡುತ್ತಾರೆsss || ತಂದಾನ ||

ಎಡ್ಗಡೆ ಸಂಕ ಇಟ್ಬುಟ್ಟು ಬಲ್ಗಡೆ ಜಗ್ಟ ಇಟ್ಬುಟ್ಟು ನೋಡುದ್ರು
ಆ ಉನ್ಗನ ಮುಂಟಿ ಆಗೆ ಉರಿ ಕಂಡೋಗ್ತಿದೆ.
ಅಯ್ಯಯ್ಯೊ ನಮ್ಮಪ್ಪ ಉನ್ಗನ ಮುಂಟಿಯಾ ಬಾಗ್ಯ ಸರ್ನೋಗ್ಬುಡ್ತದ ಅಂದ್ಬುಟ್ಟು
ನಾರಾಯ್ಣ ಮೂರ್ತಿಯವ್ರು ಬೊಳ್ಳ ಬೊಳ್ಳಗೆ ಮೆಲ್ ಮೆಲ್ಗೆ ಇಳಿದ್ಬುಟ್ರು.
ಇಳಿದ್ಬುಟ್ಟು ಎಲ್ಲಿಗ್ ಬಂದಿದ್ದಾರೆ?

ಅವರು ಕೋಳಿ ಗುಂಡಾಡಿ ಬಂದಿದ್ದಾರೆsss || ತಂದಾನ ||
ಕೋಳಿ ಗುಂಡಾ ಆದಿ ಒಳಗೆ ಬಂದು ನಾರಾಯ್ಣ ಮೂರ್ತಿಯವ್ರು ಎಲ್ಲಿಗ್ ಬಂದಿದ್ದಾರೆ?
ಮಲ್ಕಿ ಬೆಟ್ಟಕ್ ಒಂಟೋಗ್ ಬುಟ್ರು
ಮಲ್ಕಿ ಬೆಟ್ಟ ಅಂದ್ರೆ ದೊಡ್ದಬೆಟ್ಟ.
ದೊಡ್ಡ ಬೆಟ್ಟಕ್ಕೆ ಬಂದು ಅಲ್ಲೊಬ್ಬ ಹೆಣ್ ದೇವ್ತೆ ಇತ್ತು.
ನೋಡುದ್ರ ನನ್ನಾಗೆ ರೂಪು ರೇಸ
ಅಪ್ಪಪೈ ನನ್ ಬುಟ್ಟರ ಅಂದ್ಬುಟ್ಟು
ನಾರಾಯ್ಣ ಮೂರ್ತಿ ಹೋಗುವಾಗ
ಆ ಮಲ್ಕಮ್ಮನವ್ರು ಏನ್ಮಾಡ್ತ ಇದ್ದಾರೆ ಅಂದ್ರೆ.
ಆರಪ್ಪ ಇಂವ ಅಗಲಗಾತ್ರ ಸಂಕು ಮುಗಲ್ ಗಾತ್ರ ಜಗ್ಟೆ ಒತ್ಕೊಂಡು
ಎಡ್ಗಡೆ ಎರಡ್ ನಾಮ ಬಲ್ಗಡೆ ಬಿಳಿನಾಮ ಇಟ್ಕೊಂಡು ಬಂದಿದ್ದಾರೆ
ಇವರ್ಯಾರಯ್ಯ ನನ್ ಬುಟ್ಟಾರ?
ಈ ಮಲ್ಕಿ ಬೆಟ್ಟ ಸ್ವಲ್ಪ ಮಲ್ಕಸ್ ಬುಟ್ರೆ
ಮಲ್ಕಮ್ಮ ಅಂತ ನಾಮ್ಕರ್ಣ ಆಗ್ಬುಡ್ತದೆ
ಈ ದಾಸಪ್ನ ಓಡಿಸ್ ಬೌದು
ಮಲ್ಕಮ್ಮ ಅಂದ್ರೆ ಎಣ್ಣುಡ್ಗಿ ನನ್ಕಂಡ್ರೆ ಬಯ ಅಲ್ವಾ
ಅಯ್ಯೋ ನಮ್ಮಪ್ಪ ಇಂವ ನನ್ನ ಆಂಗೆಂದ್ಬುಟ್ಟು ….

ಅಯ್ಯ ಮಲ್ಕಿ ಬೆಟ್ಟಾವ ಮಂಟುತ್ತಾರೆsss || ತಂದಾನ ||
ಮಲ್ಕಿ ಬೆಟ್ಟ ಮಂಟವಾಗ ನಾರಾಯ್ಣ ಮೂರ್ತಿಯವ್ರು ನೋಡುದ್ರು
ಅಯ್ಯಯ್ಯೋ ಇದೊಳ್ಳಿ ಕತೆಯಾಯ್ತಲ್ಲಪ್ಪ ಅಂದ್ಬುಟ್ಟು
ಸಿದ್ದನಕೆರೆ ಅತ್ರ ಬಂದ್ರು
ಸಿದ್ದಕೆರೆ ಅತ್ರ ಬಂದು ತಾನ ಜಪಮಾಡ್ಕೊಂಡು ….

ಅವ್ರು ಜಗ್ಟೇ ಕಲ್ಲಿಗೆ ಬಂದಿದ್ದಾರೆsss || ತಂದಾನ ||
ಜಗ್ಟೆ ಕಲ್ಲಿಗೆ ಬಂದ್ಬುಟ್ಟಿದ್ದಾರೆ ನಾರಾಯ್ಣ ಮೂರ್ತಿಯವ್ರು
ಅಗಲಗಾತ್ರ ಸಂಕು ಮುಗಿಲಗಾತ್ರ ಜಗ್ಟೆ ಇಟ್ಬುಟ್ಟು
ನಾರಾಯ್ಣ ಮೂರ್ತಿಯವ್ರು ಏನು ಅಂದ್ರೆ ಬರೀ ನಾಮ್ ಜೇನೆ
ಅಪ್ಪ ಎಡ್ಗಡೆ ನೋಡು ಸೂಳೆಗ್ಯಾನುಂಟು
ಬಲ್ಗಡೆ ನೋಡು ನಾರಿಗ್ಯಾನುಂಟು.

ನಾರಾಯಣ್ಗೆ ಸುದ್ದಿ ತರಬೇಕುsss || ತಂದಾನ ||
ಎಡ್ಗಡೆ ಸೂಳೆರಗ್ಯಾನ ಬಲ್ಗಡೆ ನಾರಿರಗ್ಯಾನ
ಮದ್ಯೆದಲ್ಲಿ ನಾರೀರ್ ಸೂಳೆರು ಏಡುಬೇಕು.
ಜಗ್ಟೆ ಕಲ್ಲ ಮೇಲೆ ಕೂತ್ಕೊಂಡು ನಾರಾಯ್ಣ ಮೂರ್ತಿಯವ್ರು
ಎಡ್ಕ ಬಲ್ಕೆಲ್ಲಾ ಸುತ್ತ ನೋಡುದ್ರು ನನ್ಗೆ ಕೂತ್ಕಳಕೆ ತಳ್ವಿಲ್ಲ
ನಾನು ಎಲ್ಲೋಗ್ ಬೇಕು?
ಅತ್ತಿಮರದ್ ಕಾಡ್ಗೆ ಗೊತ್ತಾಗದಂತೆ ಓಗ್ ಬುಟ್ರೆ
ನೀಲ್ಗಿರಿ ಕೈಲಾಸ ಎಲ್ಲಾ ಸಿಗುತ್ತೆ
ಅಯ್ಯಯ್ಯೋ ಮಗ್ಗ ಮರಳ್ಳಿ ಎಗ್ಡದ್ಯಾವ್ನ್ ಕ್ವಾಟೆ
ರಂಜಕಲ್ಲು, ಪಿರಿಯಾಪಟ್ಣ, ಸಂತೆಸರ್ಗೂರು, ಗುಂಡ್ಲುಪೇಟೆ,
ಗೂಡ್ನೂರು, ಅರ್ದನಳ್ಳಿ, ಚತ್ರ, ಯಳಂದೂರು, ಮಸ್ಣಾಪುರ
ವಂಗ್ನೂರೆಲ್ಲಾ ದಾಸ್ಗೋಳ್ ಮಾಡ್ಕ ಬಂದಿದ್ದೀನಿ
ಅತ್ತಿ ಮರತ್ತಕೆ ಓಗ್ ಬುಟ್ರೆ
ನಂಗೆ ನಿಂತ್ಕೊಳ್ಳಕಾದ್ರು ಜಾಗ ಸಿಗುತ್ತೆ
ಮದ್ಯ ಇವ್ರು ನಾರಾಯ್ಣ ಮೂರ್ತಿಯವ್ರು
ಏನ್ಮಾಡ್ತ ಅವ್ರೆ?
ತಿರ್ಪತಿ ಬುಟ್ಬುಟ್ಟಿದ್ಡಾರೆ.
ಆಗ ನಾರಾಯ್ಣ ಮೂರ್ತಿಯವ್ರು ಎಲ್ಲಿಗ್ ಬಂದಿದಾರೆ?

ಮೇಲುಗಿರಿಗೆ ಅವ್ರು ಬಂದಿದ್ದಾರೆsss || ತಂದಾನ ||
ಅಯ್ಯ ಮೇಲುಗಿರಿ ಚಂದsss
ನುರಿಯ ಮಂಟಪ ಚಂದsss
ಅಯ್ಯ ಆಣೆಯ ಮೇಗೊಂದು ಎಳೆಯನಾಮ ಬಲುಚಂದsss
ಮೇಲುಗಿರಿಯಂತೆ ಬಲು ಚಂದsss || ತಂದಾನ ||

ಆಗ ನಾರಾಯ್ಣ ಮೂರ್ತಿಯವ್ರು ಹೋಗಿ
ಮೇಲುಗಿರಿ ಕೈಲಾಸ್ದಲ್ಲಿ ನಿಂತ್ಗಂಡು
ಅಗಲಗಾತ್ರ ಸಂಕು, ಮುಗಿಲಗಾತ್ರ ಜಗ್ಟೆ
ಆಹಾ ನಿಂತ್ಗಂಡ್ರು. ಇವ್ರು ಇದ್ರು ಇಲ್ಲ ಈಸ್ಪುರ
ಆ ನೀನು ಆರಪ್ಪ?
ನಾವು ಈಸ್ಪುರಪ್ಪ
ಈ ಬೆಟ್ಟ ಉಟ್ಟಾಗ ಉಟ್ಟಿದ್ದೀಮಿ
ಈ ಅತ್ತಿಮರಾದೊಳ್ಗೆ ಗೊತ್ತಾಗಿದ್ದೀಮಿ
ನಾವು ಎಲ್ಲಪ್ಪ, ನಾವು
ಸ್ವಾಮಿ ನೀವು ಏನ್ ಕೆಲ್ಸ ಮಾಡ್ತಿರಿ ಸ್ವಾಮಿ?
ನಮ್ಗೆನಪ್ಪ ಉಲಿ ಸರ್ಮ ಅಸ್ಗೊಂಡಿದ್ದಿಮಿ
ಉಲ್ಲೆಸರ್ಮ ಉಟ್ಕೊಂಡಿದ್ದಿಮಿ
ತ್ರಿಸೂಲ ಮಡ್ಗಿದ್ದಿಮಿ ಅಗಲ್ ಗಾತ್ರ ಸಂಕು
ಮುಗಲ್ ಗಾತ್ರ ಜಗ್ಟೇ ಮಂಜು ಮನೇ ಒಳ್ಗೆ
ಅಕ್ಕಿ ಸಬ್ದ ಇಲ್ಲ ಪಕ್ಷಿ ಸಬ್ಧ ಇಲ್ಲ
ಕಾ ಎಂಬ ಕಾಗೆ ಸಬ್ಧಿಲ್ಲ ಗೂ ಎಂಬ ಗೂಗೆ ಸಬ್ಧಿಲ್ಲ
ಅಲ್ಲಿ ನಾನಿದ್ದಿನಪ್ಪ
ಅಪ್ಪ ಈಸ್ಪರ ನನ್ಗೆ ಸ್ವಲ್ಪ ಜಾಗ ಕೊಡಪ್ಪ ಅಂದ್ರು
ಅಯ್ಯೊಯೋ ನಾನಿರದು ಉಟ್ ಬಂಡೆ ಮೇಲೆ
ಉಟ್ ಬಂಡೆ ಮೇಲೆ ನಾನು ಕೂತ್ಕಂಡು
ನಿನಗೆಲ್ಲಿ ಜಾಗ ಕೊಡ್ಲಿ ದಾಸಯ್ಯ
ಅಪ್ಪ ನಾನು ನಿಂತ್ಗೋಂಡಿದಿನಿ ಈಸ್ಪರ
ಜಗ್ಟೆ ಮಡಿಕೊಳ್ಳಾಕೆ ಸ್ವಲ್ಪ ಜಾಗ ಕೊಡರ ಅಂದ್ರು
ಎಡಕ್ಕ ನೋಡುದ್ರು ಇವನಂಗೆ ಈಸ್ಪರ ದಡ್ಡ
ಇಂವ ಮಾವಿಸ್ಣು ಮಡಿಕಪ್ಪ ಅಂದ್ಬುಟ್ರು
ಅಗಲ್ ಗಾತ್ರ ಸಂಕ ತಗ್ದು ಮಡ್ಗವೊತ್ಗೆ
ಬಾನಗ್ಲ ಸಂಕು, ಬೂಮಿಗಾತ್ರ ಜಗ್ಟೆಲ್ಲಾ ಬುಗುಬುಗ್ನ ತಿರುಗ್ಬುಡ್ತು

ಅಲ್ಲೆ ಕಂತೆ ಬೊಂತೆ ಸ್ವಾಮಿ ಎತ್ತುತ್ತಾರೆsss || ತಂದಾನ ||
ಕಂತೆ ಬೊಂತೆಯ ಎತ್ತಿ ಮಾವಿಸ್ಣು ಈಸ್ಪುರsss
ಬಂದಂತ ಬಿರ್ದುಗಳ್ಗೆ ಅಯ್ಯ ಇಟ್ಟುಕೊಳ್ಳಾಕ ತಳವಿಲ್ಲsss || ತಂದಾನ ||

ಇಟ್ಟುಕೊಳ್ಳಾಕೆ ತಳವಿಲ್ಲ
ಇಂಗ್ ಮಾಡ್ಬುಟ್ಟೆಲ್ಲಪ್ಪ ಮಾವಿಸ್ಣು
ಇನ್ನು ನಾನ್ ಎಲ್ಲೋಗ್ ಬೇಕು?
ಅಪ್ಪ ಈಸ್ಪುರ ಕಡೆ ಕೋಡಿಗೊಂಟೋಗ್ ಬುಡು
ಕಡೆ ಕೋಡಿಗೋಗ್ ಬುಡು ನೀನು

ನಿನಗೊಂದು ಪೂಜೆ ಕೊಡುತ್ತೀನಿsss || ತಂದಾನ ||
ನಿಂಗೊಂದು ಪೂಜೆ ಕೊಡ್ತೀನಿ ಗಂಗದರsss
ಗಂಗದರ ಎಂದು ನಾಮಕರಣsss || ತಂದಾನ ||

ಸ್ವಾಮಿಯವ್ರು ಈಸ್ಪುರ ಅಂದ್ರೆ ಬಾಳ ಯೋಗವಾದವ್ರು
ಕಂತೆ ಬೊಂತೆ ತಕ್ಕಂಡು ಕಡೆ ಕೋಡಿಹೋಗಿ ಕಣ್ಣೆಲ್ಲಾ ಉರಿ ಬಂದ್ಬುಡ್ತು
ಅಗ ಹೋಗಿ ಕಡೆ ಕೋಡಿ ಒಳ್ಗೆ ಕರಿ ಅಂಗಿ ದರಿಸ್ಟುಟ್ಟು
ಕಡೆ ಕೋಡಿಲಿ ಮೂರ್ತವಾಗ್ಬುಟ್ರು
ನಾರಾಯಣ ಮೂರ್ತಿಯವ್ರು ಹೇಳ್ದ ವಾಕ್ಸದಂತೆ
ನಾರಾಯ್ಣ ಮೂರ್ತಿಯವ್ರು ಮೇಲುಗಿರಿ ಒಳ್ಗೆ ನಿಂತ್ಗಂಡ್ರು

ಮೂಡಲು ನೋಡುತವರೆsss
ಪಡುವಲು ನೋಡುತವರೆsss
ಮೂಡ ದಿಕ್ಕಲ್ಲಿ ಕಾಣುತ್ತಾರೆsss || ತಂದಾನ ||

ಮೂಡ ದಿಕ್ಕ ನೋಡ್ಬುಟ್ಟು
ಬಿಂಕಿ ಬಡ್ಕನೆಯ ಬಗ ಬಗ ಅಂತದೆ
ಕಾ ಎಂಬ ಕಾಗೆ ಸಬ್ಧವಿಲ್ಲ
ಗೂ ಎಂಬ ಗೂಗೆ ಸಬ್ದವಿಲ್ಲ
ಈ ಬಿಂಕಿ ಬುಡ್ಕ ಎಂಗಿದ್ದನು? ಅಂದ್ಬುಟ್ಟು
ಕಾಡನ್ನ ಕಡ್ಡುಬುಟ್ಟು ಪೋಡನ್ನ ಮಾಡ್ಬುಟ್ಟರೆ
ಯಾರಿದ್ದರು ಇಲ್ಲಿ
ಕಾ ಎಂಬ ಕಾಗೆ ಸಬ್ಧವಿಲ್ಲ
ಗೂ ಎಂಬ ಗೂಗೆ ಸಬ್ದವಿಲ್ಲ
ಅಕ್ಕಿ ಸಬ್ದವಿಲ್ಲ ಯಾರಯ್ಯ ಈ ಸಂಪತ್ತುಗಾರ? ಅಂದ್ಬುಟ್ಟು
ಈ ದಾಸಪ್ಪ ಏನ್ಮಾಡಿದ್ರು
ಈ ಐಕ ಇದ್ದರಲ್ಲ ಸೋಲಿಗ್ರ ಬೊಮ್ಮೆಗೌಡ್ನ ಮಕ್ಕ
ಕಾಡಿನಲ್ಲಿ ಎಬ್ಬಿದರನ್ನು ಕಡ್ಡು ಬೊಂಬುಗಳ್ನ ಮಾಡ್ಕಂಡು
ನೀರ್ಗೋಗೊ ಸಮಯ ಕಾಯ್ಕಂಡ
ಈ ಉಡ್ಗಿರೆಲ್ಲಾ ಬರ್ತಾ ಇದ್ರು
ಕಾಯ್ಕೊಂಡ್ ಆಗೇನ್ ಮಾಡ್ತ ಇದ್ದಾನೆ?
ಬೊಳ್ಳಬೊಳ್ಳಗೆ, ಮೆಲ್ಲಮೆಲ್ಲಗೆ ಒಯ್ತಾ ಇದ್ದಾರೆ
ಸೋಲಿಗ್ರ ಬೊಮ್ಮೆಗೌಡ್ನ ಮಕ್ಕ ಅಂದ್ರೆ
ಚಿಕ್ಕಕಾಡಿ, ದೊಡ್ಡಕಾಡಿ, ಚಿಕ್ಕರಂಗಿ, ದೊಡ್ಡರಂಗಿ,
ಕ್ಯಾತಿ, ಕ್ಯಾತಿ ದಂಡೆಲಿ ಮಾದಿ, ಮಾದಿ ದಂಡೆಲಿ ಕುಸ್ಮ ದೇವಿ

ಅವ್ರು ಮೆಲ್ಲಮೆಲ್ಲಗೆ ನೀರಿಗೆ ಹೋಗುತ್ತಾರೆsss || ತಂದಾನ ||
ಬೆಳ್ಳಿ ಕೆರೆಗೆ ಓಗ್ವಾಗ ದಾಸಪ್ಮೋರ ವೇಸ ನೋಡಕಾಗ್ನಿಲ್ಲ
ಗಕ್ಕನ್ ನೋಡುತ್ತಾರೆ. ಇವ್ರೆ ನೋಡಪ್ಪ
ಸೋಲಿಗ್ರ ಬೊಮ್ಮೆಗೌಡ್ನ ಮಕ್ಕ ಅಂದ್ರೆ
ಪಂಡರಗಾಳಿ ಗುಂಡರ ನಾಮ ….

ಗುರುಗುಂಜಿ ನರಿಯವ್ಳೆ ಗುರುಗಂಜಿ ತುರ್ಬಿನವ್ಳೆsss
ಇಕ್ಕಾಲು ಬಟ್ಟೆsss ಸೋಲಗಿತ್ತಿsss || ತಂದಾನ ||

ಆಗ ನೋಡ್ಬುಟ್ಟ ನಾರಾಯ್ಣ ಇನ್ಯಾಕಯ್ಯ
ಪಡುಗ ದಿಕ್ಕಿನ ನಾರಾಯ್ಣ ಮೂರ್ತಿ ಪಸ್ಚಿಮಕ್ಕೆ ಬಂದ್ರು
ದೊಡ್ರಂಗಿ ಕಂಡ್ಬುಟ್ಟ. ಅಕ್ಕ ! …. ಅಕ್ಕ! ….

ಅಲ್ಲಿ ನಾಡಿನ ದಾಸಯ್ಯ ಪೋಡಿಗೆ ಬಂದವ್ನೆsss
ತೇರು ಯಾವತ್ತ ಕೇಳಿರವ್ವsss || ತಂದಾನ ||
ಏಯ್ ನಾಡಿನ ದಾಸಯ್ಯ ಪೋಡಿಗೆ ಬಂದವ್ನೆsss
ತೇರು ಯಾವತ್ತ ಕೇಳಿರವ್ವsss || ತಂದಾನ ||

ಅಪ್ಪ ನಾಡಿನ ದಾಸಪ್ಪ ಪೋಡಿಗೆ ಬಂದ್ಬುಟ್ಟಿದ್ದೀರಲ್ಲ
ತೇರು ಯಾವತ್ತ?
ತೆಪ್ಪ ಯಾವತ್ತ?
ಅರ್ಸೇವೆ ಯಾವತಪ್ಪಾ?
ಏಯ್ ಚಿಕ್ಕರಂಗಿ, ದೊಡ್ಡರಂಗಿ
ಚಿಕ್ಕಕಾಡಿ, ದೊಡ್ಡಕಾಡಿ ….
ದೊಡ್ರಂಗಿ ಬಂದು ಎಡಬುಜ ಇಡ್ಕಳ್ ಬೇಕು
ಚಿಕ್ರಂಗಿ ಬಂದು ಬಲಬುಜ ಇಡ್ಕಂಡು
ನನ್ನ ಗಡ್ಡ ನಿನ್ನ ಗಡ್ಡ ದಾಗದಲ್ಲ ಅಂತ
ಈ ಗಡ್ಡ ಇಡ್ಕಂದು ಕುಸ್ಮದೇವಿ ಬಂದು

ತೇರು ಯಾವತ್ತ ರಂಗಬಾವsss || ತಂದಾನ ||
ಅಯ್ಯ ತೇರು ಯಾವತ್ತ ರಂಗ ಬಾವ ಅಂದರೆsss
ತೇರು ತೆಪ್ಪವ ಯೇಳುತ್ತಿನಿsss || ತಂದಾನ ||

ಅಕ್ಕ …. ಅಕ್ಕ …. ಚಿಕ್ರಂಗಿ, ಅಕ್ಕ ದೊಡ್ರಂಗಿ
ಚಿಕ್ಕಾಡಿ, ದೊಡ್ಯಾಡಿ ನಮ್ ತಾತನ್ ಜೊತೆ ಇದ್ದಾನೆ
ಇವ್ನ ಗಡ್ಡ ಇಡ್ಕಂಡ್ರೆ ನಮ್ ಮಾನ ಓಗಲ್ಲ
ಇವ್ನ ಬುಜ ಇಡ್ಕಂಡ್ರೆ ನಮ್ಮ ಮಾನ ಓಗಲ್ಲ
ಇವ್ನ ಮೀಸೆ ಇಡ್ಕಂಡ್ರೆ ನಮ್ ಮಾನ ಓಗಲ್ಲ
ಇಡ್ಕೊಳ್ಳಿ ಅಂದ್ಬುಟ್ಟು ….

ತಲ್ಲೊಂದು ಕೈಯ ಆಕುತ್ತಾರೆsss || ತಂದಾನ ||
ತಲ್ಲೊಂದು ಕೈಯ ಹಾಕಿ ಇಡ್ದ್ ಬುಟ್ರು
ಇನ್ಯಾಕಪ್ಪ ರಂಗಪ್ನ ನೋಡಕಾಯ್ತದ
ಅಯ್ಯಯ್ಯೋ ನಮ್ಮಪ್ಪ ನೋಡ್ದ

ಅಯ್ಯ ಟಮ್ಮಟು ಮ್ಮನೆ ಸ್ವಾಮಿ ಕುಣಿಯುತ್ತಾನೆsss || ತಂದಾನ ||
ಸ್ವಾಮಿ ಟಮ್ಮಟುಮ್ಮನೆ ಕುಣಿತವ್ನೆ ರಂಗಪ್ಪ
ಅವ್ರು ಮೇಲುಗಿರಿಗೆ ಮೆರಿತಾರೆsss || ತಂದಾನ ||

ಮೇಲುಗಿರಿ ಮೇರ್ದುಬುಟ್ಟು
ಟಮ್ಮಟುಮ್ಮನೆ ಕುಣದ್ಬುಟ್ಟು ನಾರಾಯ್ಣ ಮೂರ್ತಿ
ಏಯ್ ಸೋಲಿಗ್ರ ಬೊಮ್ಮೆಗೌಡ್ನ ಮಕ್ಳೆ
ತೇರು ತೆಪ್ಪ ಯೇಳ್ಬೇಕಾದ್ರೆ ಬಾವ ಅಂತ ಬಾಯ್ ಬುಟ್ಟುಟ್ಟಿದ್ದೀರಿ
ಈವೊತ್ತಿನ್ ದಿವ್ಸದಲ್ಲಿ ನೋಡು
ತೇರು ತೆಪ್ಪ ಒಪ್ಪಾಗಿ ಯೇಳ್ಕೊಟ್ ಬುಡ್ತಿನಿ

ತೇರು ಸನ್ವಾರ ಚಿಕ್ಕರಂಗಿsss || ತಂದಾನ ||
ಅಯ್ಯ ತೇರು ಸನ್ವಾರ, ತೆಪ್ಪ ಮಂಗ್ಳೋರsss
ಬೂತ ಅರ್ಸೇವೆ ಬುದವಾರsss || ತಂದಾನ ||
ಏಯ್ ಬೂತ ಅರ್ಸೇವೆsss ಬುದವಾರ ಚಿಕ್ರಂಗಿsss
ಆರು ಸೇರಕ್ಕಿ ಅರ್ಸೇವೆsss || ತಂದಾನ ||

ಆರು ಸೇರಕ್ಕಿ ಒಡೆಯ ತೆಂಗಿನಕಾಯಿ
ಒಡೆಯ ರಂಗಪ್ಪನ ಸೇವೆ ಮೇಲುಗಿರಿಯಲ್ಲಿ ಮಾಡ್ತಾ ಇದ್ದಾರೆ
ನಾಳೆ ಸನ್ವಾರ ಅನ್ನೊಂದು ಗಂಟೆಗ ಬನ್ಯಮ್ಮ ಅಂದ್ಬುಟ್ಟು
ನಾರಾಯ್ಣ ಮೂರ್ತಿಯವ್ರು ಯೇಳ್ಬುಟ್ರು
ಅಗ್ಲೆಪ್ಪ ದಾಸಪ್ಪ ನೀವು ಬಂದು ಕಂಡು
ಪೋಡ್ನ ಸೋಲುಗ್ರೆಲ್ಲಾ ಗೊತ್ತಾಯ್ತು
ಆಗೆಂದ್ಬುಟ್ಟು ನಾರಾಯ್ಣ ಮೂರ್ತಿಯವ್ರು
ಯೇಳ್ಬುಟ್ಟು ಒಂಟೋಗಿದ್ದಾರೆ
ನಾಳೆ ಅನ್ನೇಡು ಗಂಟೆಗೆ ಬಂದ್ಬುಡ್ರಮ್ಮ ನೀವು
ತೇರು ತೆಪ್ಪ ಅರ್ಸೇವೆ – ಗುರ್ಸೇವೆ ಎಲ್ಲಾ ಆಗ್ತದೆ

ನಿಮ್ಗೆ ತೇರು ತೆಪ್ಪವ ನಾನು ತೋರುತಿನಿsss || ತಂದಾನ ||
ತೇರು ತೆಪ್ಪವ ಎಳ್ತೀನಿ ಬೊಮ್ಮೆಗೌಡ್ನ ಮಕ್ಳೆsss
ನೀವು ನಾಳೆ ಸನ್ನಾರ ಬರಬೇಕುsss || ತಂದಾನ ||

ಸ್ವಾಮಿಯವ್ರು ಯೇಳ್ಬುಟ್ಟು ಏನ್ಮಾಡ್ತ ಇದ್ದಾರೆ
ನಾಳೆ ಸನ್ನಾರ ತುರ್ತಾಗಿ ಬಂದ್ಬುಡ್ರಮ್ಮ ಅಂದ್ಬುಟ್ಟು
ಸೋಲಿಗ್ರ ಬೊಮ್ಮೆಗೌಡ ಮಕ್ಳು ಅಂದ್ರೆ
ಚಿಕ್ಕಕಾಡಿ, ದೊಡ್ಡಕಾಡಿ, ಚಿಕ್ಕರಂಗಿ, ದೊಡ್ಡರಂಗಿ,
ಕ್ಯಾತಿ, ಕ್ಯಾತಿದಂಡೆ ಮಾದ್ರಿ, ಮಾದಿ ದಂಡೆ ಕುಸ್ಮದೇವಿಯರಿಗೆ
ಯೇಳ್ಬುಟ್ಟು ಎಲ್ಲೋಗ್ತಾರೆ
ಆಹಾ ದಾಸಪ್ಪ ಅಂದ್ರೆ ಇಂತ ದಾಸಪ್ಪ ನಮ್ಗೆ ಎಲ್ಲೂ ಸಿಕ್ಕಿಲ್ಲ
ಅಯ್ಯಯ್ಯೋ ನಮ್ಮಪ್ಪ ನಮ್ಮಪ್ಪ ಮನೆ ದೇವ್ರ
ಒತ್ಕಂದ್ ಬಂದಿದ್ದ ನರ ನರ ಅಂದ್ಬುಟ್ಟು ….

ಅಯ್ಯ ಅಪ್ಪಗೆ ಸರದವಳೆ ಅರಮನೆ ಜೀನಿಯವಳೆsss
ಸೋಲಿಗ್ರೆ ಸಕುನ ನೋಡಿರಣ್ಣsss || ತಂದಾನ ||

ಅಯ್ಯ ಕಾಡ ಕೊಳಗ ಹೂವು ಕಾಡರ್ದ ಹೂ ಮುಡ್ಕಂಡು ಸೋಲ್ಗಿತ್ತಿ

ಅವ ಗಂಗಾದರನ ಗುಡಿಯಲಿsss || ತಂದಾನ ||

ಅಲ್ಲಾಣಿ ಇಲ್ಲಾಣಿ ಕಡ್ಡು ಗಂಗಾದರ್ನ ಗುಡಿಯಾಣೆ ಸುಳಿ ಹೂ ಮುಡ್ಕಂಡು
ಸೋಲುಗ್ರ ಐಕ ಪಾಪ ದಡ್ಡು ಈ ಐಕಳ್ಗೆ ಗೊತ್ತಾಗ್ತದೆ

ಕಕ್ಕೆಯ ಜೊನ್ನಿ ಕೈಯಲ್ಲಿ ಇಡುಕೊಂಡುsss
ತುರಾಡಿ ತುಂಟಾಡಿ ಬರುತ್ತಾರೆsss || ತಂದಾನ ||

ಅಕ್ಕ …. ಅಕ್ಕಾ …. ಅಕ್ಕ …. ದಾಸಪ್ಪ ಬರ್ತಾನ ನೋಡಿ. ವೇಸದ ಮೇಲ್ ಬರ್ತಾ ಇದ್ದಾನೆ.
ದಾಸಪ್ನ ಸುಮ್ಮೆ ಅಂತ ತಿಳ್ಕೊಬೇಕಂತೇಳಿ, ಅಪ್ಪೊ ದಾಸಪ್ಪ ಸದ್ದು ಸದ್ದು ಉಸ್ರ ಮಾತಾಡ್ನಿಲ್ಲ. ದಾಸಪ್ಪ ಅಂದ್ರ್ ಯಾಕೋ ಮಾತೆ ಇಲ್ಲ
ಅಕ್ಕ ಇವ್ನಿಗೆ ಕಿಮಿ ಕೇಳಲ್ಲ
ನೆನ್ನೆ ದಿವ್ಸ ನಮ್ಮ ಪೋಡಿಗ್ ಬಂದ ದಾಸಪ್ನಲ್ಲ ಇಮ ಇವ್ರು ಬೇರೆ

ಇವ್ನ ಮೊರೆಯ ಮೇಲೆ ತಿಮಿರವ್ವsss || ತಂದಾನ ||
ಅಕ್ಕ ಮೋರೆಯ ಮೇಗೆ ತಿಮಿರವ್ವ ಅಂದ್ಬುಟ್ಟುsss
ಗಡ್ಡವ ಇಡ್ಡು ಜಡಿತ್ತಾರೆsss || ತಂದಾನ ||

ಅಯ್ಯೋ ಇವ್ಯಾವುರಪ್ಪ ಅಂದ್ರು
ಅಪ್ಪ, ನಮ್ಮ ಸೋಲಿಗರ ಬೊಮ್ಮೇಗೌಡ್ನ ಮಕ್ಳೆ
ಚಿಕ್ಕಾಡಿ, ದೊಡ್ಕಾಡಿ, ಚಿಕ್ರಂಗಿ, ಡೊಡ್ರಂಗಿ,
ಕ್ಯಾತಿ, ಕ್ಯಾತಿ ದಂಡೆ ಮಾದಿ, ಮಾದಿ ದಂಡೆ ಕುಸ್ಮದೇವಿ
ನನ್ಗೆ ಕೊಕ್ರಗೆ ಬಂದು ಕರೆಯುಂಟಾ?
ದಾಸರಿಗೊಂದು ಊರುಂಟಾ?
ಗಿರಿತವ್ಕೆ ಹೋದ್ರೆ ಎಷ್ಟೋ ಪ್ರಾಣಿಗಳು ಬರ್ತವೆ ನೀರ್ ಕುಡಿಯಾಕೆ
ಅಂಗೆ ನಾನು ಬಂದ್ ಬುಟ್ಟಿರಿನವ್ವ
ಈ ಬೆಳ್ಳಿ ಬೆಟ್ಟ ಅಂದ್ರೆಯಾವ್ ದಿಕ್ಕೂ?
ಏಯ್ ಇವ್ನಲ್ಲ ಇವ್ನಲ್ಲಾ
ನೆನ್ನೆ ಬಂದವ ಬೇರೆ ದಾಸಯ್ಯ
ಬೆಳ್ಳಿ ಬೆಟ್ಟ ನಮ್ಮನ್ನೆ ಕೇಳ್ತಾನೆ
ಅಯ್ಯ ದಾಸಯ್ಯ ನೀನು ಗೊತ್ತಿಲ್ಲ ದಾಸಯ್ಯ

ಯಾವಗೆಪ್ಪ ನೀನು ಬಂದೇsss || ತಂದಾನ ||

ಅಮ್ಮ ಅನುಮಂತ್ರಾಯನ ಗುಡಿಯೊಳಗೆ,
ಪೂರ್ವದ ಅದಿಯೊಳ್ಗೆ ಬಂದ್ಬುಟ್ಟೆ ಬೆಟ್ಟಾನು ನೋಡಿಲ್ಲ

ಅತ್ತಿ ಕಣಿವೇರಿ ಬಂದಿದ್ದೀನಿsss || ತಂದಾನ ||