ಅನ್ನೇಡ ಕೊಂಗ ರೂಪಾಯಿ |
ಹನ್ನೆರಡು ಕೊಂಗ ರೂಪಾಯಿ |
ಕೊಂಗ |
‘ಮೊರ’ದ ಮಾದರಿಯಲ್ಲಿರುವ ಧಾನ್ಯ ತೂರುವ ಸಾಧನ ಬಿದಿರು/ಲೋಹದ ಧಾನ್ಯ ತೂರುವ ಮೊರ |
ಕಮ್ರಿ ಒಳ್ಗೆ |
ಕಮರಿಯ ಒಳಗೆ |
ಅಮ |
ಅವನು |
ಜಲಜಲ್ನೆ |
ಜಲದಂತೆ |
ನನ್ನ ಉಯ್ದ್ ಬಿಟ್ಟಿದ್ದಿಯಾ |
ನನ್ನ ಹೊಡೆದು ಬಿಟ್ಟಿದ್ದಿಯಾ |
ಕಂಬಳದಾಳು |
ಕೂಲಿ ಆಳು |
ಆಸ್ಗೆ ಆರುಗಂಟ |
ಸ್ವಲ್ಪ ಸಮಯದಲ್ಲೇ |
ಸೈನು |
ಸಹಿ ಅಥವಾ ಹೆಬ್ಬೆಟ್ಟಿನ ಗುರುತು |
ಬೆಟ್ಟೊತ್ತಬೇಕು |
ಹೆಬ್ಬೆರಳಿ ಗುರುತು ಹಾಕಬೇಕು |
ಉರ್ದುಳ್ದಿ |
ಹುರಿದಿರುವ ಹುರುಳಿ ಕಾಳು |
ತಿರಿಕೊಂಡು |
ಭಿಕ್ಷೆ ಬೇಡಿಕೊಂಡು |
ವೇಸವನ್ನು ತಾಳ್ನುಟ್ಟು |
ವೇಷವನ್ನು ಧರಿಸಿ |
ಬುಡ್ಬುಡ್ಕಿ ವೇಷ |
ಬುಡುಬುಡಿಕೆ ವೇಷ |
ಕಲ್ಲು ಕರ್ಗೊ ಜಾಮ |
ಕಲ್ಲು ಕರಗುವ ಸಮಯ/ಸರಿರಾತ್ರಿ/ಮಧ್ಯರಾತ್ರಿ |
ತಿಟ್ಟಿನ ಮೇಲೆ |
ಎತ್ತರದ ಪ್ರದೇಶದ ಮೇಲೆ |
ಕರಿಕಪ್ಪ |
ಕರೆಯಿರಿ |
ಬುರ್ಕಾಬುಡ್ತಿನ |
ಬರೆದುಕೊಳ್ಳುವೆನು |
ಅಂತರ ಕಟ್ತಿನಿ |
ಯಂತ್ರ ಕಟ್ಟುವೆ |
ಮಂತರ ಮಾಡುತಿನಿ |
ಮಂತ್ರ ಹಾಕುವೆ |
ಕೂಗ ಉಂಜ |
ಕೂಗುವ ಹುಂಜ/ಕೋಳಿ |
ಕೊಂಬಿನ ಟಗರು |
ಕೊಂಬು ಬಂದಿರುವ ಟಗರು |
ಬೆಲ್ಲದ ನಂಜ್ ಆಗ್ಬೇಕು |
ಬೆಲ್ಲದ ಸಿಹಿ ಆಗಬೇಕು |
ಅಣ್ತೆಂಗಿನ ಕಾಯಿ |
ಹಣ್ಣು ತೆಂಗಿನ ಕಾಯಿ/ಬಲಿತದ್ದು |
ಬರ್ಮಾಡಿ ಕೊಟ್ಬುಡಿ |
ಬರಮಾಡಿ ಕೊಡಿರಿ |
ಆರುಮಂಡಲ |
ಹಾರುವ ಮಂಡಲ |
ತೂರು ಮಂಡಲ |
ತೂರುವ ಮಂಡಲ |
ಗೆಜ್ಜೆ ಮಂಡಲ |
ಗೆಜ್ಜೆ ಮಂಡಲ |
ಉಳ್ಕುಮಂಡಲ |
ಉಳುಕು ಮಂಡಲ |
ನಾಗಮಂಡಲ |
ನಾಗಮಂಡಲ |
ನರಮಂಡಲ |
ನರಮಂಡಲ |
ಎಪ್ಪತ್ತೇಳು ಮಂಡಲ |
ಎಪ್ಪತ್ತೇಳು ಮಂಡಲ |
ಇಂಗಣ್ಣ |
ಹಿಂದೆ ಕಣ್ಣುಳ್ಳವ |
ಮುಂಗಣ್ಣ |
ಮುಂದೆ ಕಣ್ಣುಳ್ಳುವ |
ಮುಕ್ಕಣ್ಣ ಕಾಯಿ |
ಮೂರುಕಣ್ಣಿನಕಾಯಿ/ತೆಂಗಿನಕಾಯಿ |
ತುಣಿತಿನಿ |
ತುಳುಯುತ್ತೇನೆ |
ಗಾಚಾರ |
ಗ್ರಹಚಾರ |
ತಾತಿ |
ತಾಯಿತ |
ನೆಪ್ಪಾಗಿ |
ಜೋಪಾನವಾಗಿ/ಮರೆಯದೆ |
ಪಂತಕ್ಕೆ ಪಂತ್ಯ |
ಸ್ಪರ್ಧೆಗೆ ಪ್ರತಿಸ್ಪರ್ಧೆ |
ಕಾಣ್ಕೆ ಕಪ್ಪಂತೆ |
ಕಾಣಿಕೆ – ಹರಕೆ |
ಒಂಟಾನೆ ಜಿಗಿಬಾರ |
ಒಂದು ಆನೆ ಜಗ್ಗಿಸಲಾರದಷ್ಟು ಭಾರ |
ಎಂಟಾಳು ಹೊರಬಾರ |
ಎಂಟು ಆಳು ಹೊರಲಾಗದಷ್ಟು ಭಾರ |
ಕುಂಚ್ಗುರ್ಕ |
ಕಚ್ಚಿದರೆ ಉರಿಯುವ ಒಂದು ಜಾತಿ ಹುಳು |
ಅನ್ನದ ಅಗಳ |
ಅನ್ನದಕಾಳು |
ಯಿಂದ-ಮುಂದೆ |
ಹಿಂದ-ಮುಂದೆ/ವಾಂತಿ ಬೇಧಿ |
ತಾಯಿ ದಂಡೆ |
ತಾಯಿ ಹತ್ತಿರಕ್ಕೆ |
ಬಿದ್ರಿಕ್ಕಿ ಪಾಯ್ಸ |
ಬಿದಿರ ಅಕ್ಕಿಯಿಂದ ಸಿದ್ಧಪಡಿಸಿದ ಪಾಯಸ |
ಬಯ |
ಭಯ |
ಬೆವ್ರು ಕಿತ್ಗಂಡು |
ಬೆವರು ಹರಿಯುವಂತೆ |
ಪರಸಂ ಮೂರ್ತಿ |
ಪರಮ ಮೂರ್ತಿ/ಪರಶಿಮೂರ್ತಿ |
ಕುಸಿನ್ಮ್ಯಾಲ |
ಖುಷಿಯಿಂದ |
ಸೀರೆ ಕೊಡೆ |
ಸ್ಥಳದ ಹೆಸರು |
ಸುಳಿಯ/ಸುಣ್ಕಾಯಿ |
ಸುಣ್ಣದ ಡಬ್ಬ |
ಕೊಂಗ್ನಾಡು ಸೀಮೆಗೆ |
ತಮಿಳರು ವಾಸಿಸುವ ನಾಡು |
ನೆರಿಯ ಚೆಂಡಿಗೆ |
ನಡುವಿನ ಸೀರೆ ಕಟ್ಟಿರುವ ಜಾಗಕ್ಕೆ |
ಕುಳ್ತ್ಗಂಡು |
ಕುಳಿತುಕೊಂಡು |
ಬಾಳೆಕಾಯಿ ನರಿಯವೆಳ |
ಸೀರೆ ತೊಟ್ಟಾಗ ನಡುವಿನ ಬಳಿ ಬಾಯಿಕಾಯಿಯಂತೆ ಆಕಾರ ಬರುವುದಕ್ಕೆ ಬಾರೆಕಾಯಿ ನರಿಯುವಳು ಎನ್ನುವರು |
ಬಾಯ್ಗೆ ಬತ್ತ ಕಚ್ಚುಟ್ಟಿದೆ |
ಬಾಯಿಯಲ್ಲಿ ಬತ್ತವನ್ನು ಕಟ್ಟಿಕೊಂಡಿದೆ |
ಇರಿನ್ಬಾಯಿಬಳ್ಗೆ ರಾಗಿ ಬೇಳೆ ಕಚ್ಚುಟ್ಟಿದೆ |
ಇರುವೆ ಬಾಯಿಯಲ್ವಿ ರಾಗಿಯ ಚೂರು ಕಚ್ಚಿಕೊಂಡಿದೆ |
ಮನಿಕಳಕ್ಕೆ |
ಮಲಗಿಕೊಳ್ಳಲು |
ಐಬೋಗ |
ವೈಭವ/ಶ್ರೀಮಂತಿಕೆ/ಸಂಪತ್ತು |
ಮಧ್ಯಾನದೊತ್ತಿನ |
ಮಧ್ಯಾಹ್ನದ ಸಮಯಕ್ಕೆ |
ಸಜ್ಜೀನ ರಂಗಯ್ಯ |
ಸಜ್ಜಾಗಿರುವ ರಂಗಯ್ಯ |
ಎಂಟುಪಟ್ಟು |
ಎಂಟು ಮುಖದ |
ಬಾಯಾಗೆ ಬೆಳ್ಳಾಕಿ |
ಬಾಯಿಗೆ ಬೆರಳನ್ನು ಹಾಕಿ |
ಇದೇ ಸೌಳು |
ಇದೇ ಸಮಯ |
ಕದ್ದು ಓಡಿನಾ |
ಕದ್ದು ಓಡಿದ |
ಬಿಸ್ಲ ಒಳಪ |
ಬಿಸಿಲ ಬೆಳಕು |
ಕೈವಸ ಕೈವಶ |
ಅಧೀನವಾಗುವುದು |
ಸಾನೆ ಮಾಯ್ಕಾರ |
ಮಹಾ ಮಾಯಕಾರ |
ಕೊಳ್ಗ ದರ್ಸಬೇಕು |
ಲಿಂಗಕ್ಕೆ ಕೊಳಗದಾಕಾರದ ಚಿನ್ನದಿಂದ ಮಾಡಿದ ಸಾಧನಿವನ್ನು ಧರಿಸುವುದು |
ಅಸ್ಯ-ಪಾಸ್ಯ ಆಡ್ತ ನಿಂತ್ಗೊವೊತ್ಗ |
ಹಾಸ್ಯ ಮಾಡುತ್ತ ನಿಂತುಕೊಂಡ ಕಾರಣ |
ಕಾಂಚಿನ ಮನೆ |
ಕಾಂಚನ ಹುಲ್ಲಿಂದ ನಿರ್ಮಿಸಿದ ಮನೆ |
ಗೊಡ್ಡುಮಂಜಿ |
ಕತ್ತಾಳೆಯಿಂದ ತೆಗೆದ ಮಂಜಿ. ಸಿಕ್ಕುಸಿಕ್ಕಾದ ಮಂಜಿಯನ್ನು ಗೊಡ್ಡು ಮಂಜಿ ಎನ್ನುವರು |
ಎಡೆ |
ಮಿಸಲು/ನೈವೈದ್ಯ |
ಮಂಡಿಯೆಲ್ಲ ಕಟ್ಟೋಗ್ ಬುಡ್ತು |
ನಡೆಯಲು ಬಾರದಾಯಿತು |
ಮೂಡೆಗಾತ್ರ |
ಧಾನ್ಯ ತುಂಬಿಡಲು ಹಂಚಿ ಹುಲ್ಲಿಂದ ಸಿದ್ಧಪಡಿಸುವ ಸಾಧನ ಅದರ ಗಾತ್ರದಷ್ಟು |
ಚಾನಸಂಕು |
ಬೋನಾಸಿ+ಶಂಕು |
ಬಂಗಾರದ ಕೊಳಗ |
ಚಿನ್ನದ ಲಿಂಗಾಕಾರ |
ಕಗ್ಗಾಲು ಬತ್ತಿಯವೆಳ |
ತಲೆಗೆ ಸ್ನಾನವಿಲ್ಲದೆ ತೆಂಗಿನನಾರಿನಂತಾದ ಕೂದಲಿರುವವರು |
ಮುಗ್ಗಾಲು ಮೋರೆಯವೆಳ |
ಮುಖ ತೊಳೆಯದೆ ಎಷ್ಟೊ ದಿನಗಳಾದ ಸ್ತ್ರೀ |
ನೆಲಗಾಡವರಾದ್ರ |
ಬಯಲು ಸೀಮೆಯವರಾದರೆ |
ಸಿಬ್ರಿ |
ಬೇಸರ |
ಗಾಳಿ |
ಭೂತ/ದೆವ್ವ |
ಐದಚ್ಬೆಲ್ಲ |
ಐದು ಅಚ್ಚು ಬೆಲ್ಲ |
ಐದ್ಪಾವು ಕಳ್ಳ |
ಐದು ಪಾವು ಪುಟಾಣಿ |
ಐದ್ ಕುಡ್ಕ |
ಐದು ಮಣ್ಣಿನ ಸಣ್ಣ ಗಡಿಗೆ |
ಐದಣ |
ನಾಲ್ಕಾಣೆಯ ಐದು ನಾಣ್ಯಗಳು |
ಸಾಲ್ವೊ ಸೋಲ್ವೊ |
ಸಾಲವೂ-ಶೂಲವೋ ಗಾಳಿಕಟ್ಟು, ಸಾರ ಹಟ್ಟು, ಪೀಡೆ ಕಟ್ಟು, ಪಿಶಾಚಿ ಕಟ್ಟು, ಆಟಕಟ್ಟು, |
ಭೂತ ಕಟ್ಟು |
ತಂತ್ರ ಮಂತ್ರದ ಕಟ್ಟುಗಳು. ಎದುರಾಳಿ ಅಥವಾ ವಿರೋಧಿಗೆ ಹಾಕುವ ಬಂಧನಗಳು |
ಮಾಯದ ಮದ್ದು |
ಮಾಯದ ಕಪ್ಪು |
ಮಲೆಯಾಳ ಕಪ್ಪು |
ಮಲೆಯಾಳದವರ ಮಾಯದ ಕಪ್ಪು |
ಸಾಂಬೋಗರ ಬಾವಿ |
ಶಾನುಭಾಗರ ಬಾವಿ |
ಸಂಪಾಗಿ ತಾನ |
ಸೊಂಪಾಗಿ ಸ್ನಾನ |
ಹುಟ್ಟಿದ್ದು ಬೆದೆದ್ದು ಮಾಯೆದ್ದು |
ಹುಚ್ಚು, ಬೆಪ್ಪು, ಮಾಯಾಕ್ಕೆ ಒಳಗಾಗಿ |
ಏಸ ತುಳ್ಬುಟ್ಟು |
ವೇಷಧರಿಸಿ |
ಕಾಡೆ ಕಚ್ಚೆ ಉಟ್ಗಂಡು |
ಕಚ್ಚೆ ಪಟ್ಟಿ ಧರಿಸಿಕೊಂಡು |
ಬಾಳ ಪುಣ್ಯಪ |
ಬಹಳ ಪುಣ್ಯ ಬರುತ್ತದೆ |
ಸಿಲ್ಪಿ ನೋಡ್ಬೇಕಾದ್ರ |
ಶಾಸ್ತ್ರ ನೋಡಬೇಕು |
ಉಡ್ಕಬ್ಯಾಡ |
ಹುಡುಕಬೇಡ |
ಅವ್ನುಗೊಳ ಗೊಳ್ನ ಸೋಕ |
ಅವನು ಗೋಳೋ ಎಂದು ಶೋಕ |
ನಂಚರಿ |
ನನ್ನ ಕಡೆ/ನನ್ನ ಹತ್ತಿರ |
ಆಳ ಮಕ್ಳಾಗಿ |
ಕೂಲಿ ಮಕ್ಕಳಂತೆ |
ಅವರಿಂಚೆ |
ಅವರಾಗಿಯೇ |
ಕಲ್ತವ್ರೆ |
ಕಲಿತ್ತಿದ್ದಾರೆ |
ದುಕ್ಕ |
ದುಃಖ |
ಮೋಡಿವಿದ್ಯೆ |
ಮೋಡಿ |
ಕಾಡನ್ನು ಕಡಿದೀನಿ |
ಕಾಡನ್ನು ಕತ್ತರಿಸಿದ್ದೇನೆ |
ಪೋಡನ್ನು ಮಾಡಿಸು |
ವಾಸಸ್ಥಳ/ಪೋಡು ಮಾಡಿದ್ದೇನೆ |
ಬದ್ದು ಬಾಳೆಲ್ಲ |
ಬದುಕಿದ ಬಾಳೆಲ್ಲಾ |
ಬಟ್ಟಿದಾಸ್ತು |
ಬಟ್ಟೆ ಭಿಕ್ಷೆ ಮಾಡುವವರು |
ಅಂಗಾದ ಮೇಲೆ |
ಆ ರೀತಿ ಆದ ಮೇಲೆ |
ಮರ್ಮ |
ರಹಸ್ಯ |
ಹಂಡಿಲ್ಲ – ಬುಂಡಿಲ್ಲ |
ಪಾತ್ರ ಪಗಟೆ ಇಲ್ಲ |
ಮಾರ್ಯಾರು ಕೊಟ್ಟುವಡಕೆ |
ಮಾರಾಟ ಮಾಡಿ ಕೊಡುವುದಕ್ಕೆ |
ಕರ್ಗೆ |
ಮಣ್ಣಿನ ಸಣ್ಣ ಮಡಕೆ |
ಕೂಕ್ಕೊಂಡು |
ಕೂಗಿಕೊಂಡು |
ಕಟ್ಬೇಡಿ |
ನಂಬ ಬೇಡಿ |
ಅಲ್ಲೆಲ್ಲಾರ |
ಅಲ್ಲಿ ಎಲ್ಲಾದರು/ಯಾರ ಬಳಿಯಾದರು |
ಮೊರಶಾಸ್ತ್ರ |
ಮೊರದಲ್ಲಿ ಕವಡೆಬಿಟ್ಟು ಶಾಸ್ತ್ರ ಕೇಳುವುದು |
ಸಾಕಾದರಿ |
ದಣಿಯಬೇಡಿ |
ಬುದ್ದಿಕಾರ್ಯವ |
ಬುದ್ದಿ ಮಾತ |
ತಲೆಮ್ಯಾಲೆಸೆರ್ಗಿಟ್ಗೊ ಬರ್ವಾಗ |
ತಲೆ ಮೇಲೆ ಸೆರಗು ಹಾಕಿಕೊಂಡು ಬರುವಾಗ |
ಲಚ್ಚಮಿ |
ಲಕ್ಷ್ಮಿ |
ಕೌಳ್ಗೆ |
ಕೌಳಿಗೆ ಇಪ್ಪತ್ತು ವೀಳ್ಯದೆಲೆ ಕಟ್ಟು |
ಉತುಪತಿ |
ಉತ್ಪತ್ತಿ |
ಬಕುತರ |
ಭಕ್ತರ |
ಸಂದಾದ ರಂಗೋಲಿ |
ಚೆಂದಾದ ರಂಗೋಲ |
ತಗುಲ್ ಬಿಡ್ತದೆ |
ಚುಚ್ಚಿಕೊಳ್ಳುತ್ತದೆ |
ಕಗ್ಗಲದಸಿ |
ಕಗ್ಗಲಿಗಿಡದ ಚೂಪಾದ ಕಡ್ಡಿ |
ಕಾಡದಸಿ |
ಯಾವುದಾದರೂ ಗಿಡದ ಚೂಪಾದ ಕಡ್ಡಿ |
ಕಾಲ್ದಸಿ |
ಕಾಲಿಗೆ ಚುಚ್ಚಿಕೊಂಡ ಚೂಪಾದ ಕಡ್ಡಿ |
ಸಂಕುದಾರುತಿ |
ಶಂಕದ ಆರತಿ |
ನರಮನ್ಸರೆಲ್ಲಾ |
ಮನುಷ್ಯರೆಲ್ಲಾ |
ವೊಟ್ಟುರ್ಕಂಡ |
ಹೊಟ್ಟೆ ಕಿಚ್ಚಿನಿಂದ/ಅಸೂಯೆಯಿಂದ |
ಕಂಡಂಗಿತ್ತು |
ಕಾಣಿಸಿದಂತೆ ಇತ್ತು |
ಅರುವಲು |
ತಿಳಿಯಲು/ಅರಿಯಲು |
ಅಡವಿಯ ಒಳಗಂಜ |
ಅಡವಿಯ ಒಳಭಾಗದಲ್ಲಿ |
ಬಿಡುವಿನ ಒಳಗಂಜ |
ಅಡವಿ ಹೊರ ಭಾಗದಲ್ಲಿ |
ಸಂಪತ್ತು |
ಸಂತೋಷ |
ತಿರ್ಕೊಂಡು ತಿನ್ನದಾಸ |
ಭಿಕ್ಷೆ ಬೇಡಿ ತಿನ್ನುವ ದಾಸ |
ತಿಮಿತಿನ್ ನೋಡ್ಕೊ |
ತಿವಿಯುತ್ತೇನೆ ನೋಡು |
ಮೊಕ |
ಮುಖ |
ಉರ್ಗ್ದ್ದೇಟ್ಗೆ |
ಹೊಡೆದ ತಕ್ಷಣ |
ಪಾತಾಳ ಲೋಕ |
ಭೂಮಿಯ ಕೆಳಗಿರುವ ಕಲ್ಪನಾಲೋಕ |
ರಾತುರ |
ರಾತ್ರಿ |
ನಾರಿರ್ಗೆ |
ಸ್ತ್ರೀಯರಿಗೆ |
ನಾಟಕ ಕಲೇಲಿ |
ನಾಟಕ ಕಲೆಯಲ್ಲಿ |
ತೇರ್ನತಡಿಗೆ |
ತೇರಿನ ಕೆಳಗೆ |
ಓದು ಹೇಳ್ಕೊಂಡು |
ಬುದ್ಧಿಮಾತ ಹೇಳುತ್ತಾ |
ಬೋದ ಹೇಳುತ್ತಾರೆ |
ಬೋಧನೆ ಮಾಡುತ್ತಾರೆ |
ಜಿಗ್ರಿಮರಿ |
ಜಿಂಕೆ |
ಮಾಂತ ಮಾರ್ಲಾಮಿ |
ಮಹಾನವಮಿ |
ಜಂಬು ಸವಾರಿ ಹೋಗ್ವಾಗ |
ಜಂಬು ಸವಾರಿಗೆ ಹೋಗುವ ಸಮಯ ಜಾತ್ರೆ ಸಂದರ್ಭದಲ್ಲಿ ಸೋಲಿಗರು ಕೊಡಬೇಕಾದ ಪದಾರ್ಥಗಳು ಸಾಂಪ್ರದಾಯಿಕವಾಗಿ ಬಂದಿರುವುದು ಕುಂಬಳದನ್ನ ಬೂದು ಗುಂಬಳಕಾಯಿ ಬಾಳೆ ಎಲೆ ಬಾಳೆ ಕಾಯಿ |
ಅಳಿತಾರ |
ಕಳೆಯುವುದು/ಶುಚಿಗೊಳಿಸುವುದು |
ಸುಂಗರಾಗಿ |
ಶೃಂಗಾರವಾಗಿ |
ಬೆಂಡೆಕಡ್ಡಿ |
ಬೆಂಡಿನಂತಹಕಡ್ಡಿ |
ತೇರುಚಿತ್ರವನ್ನು ಗೇದ್ಬುಟ್ಟಿದ್ದಾರೆ |
ತೇರಿನ ಚಿತ್ರವನ್ನು ಬಿಡಿಸಿದ್ದಾರೆ |
ನಡುಕಲ ಮಂಟಪ |
ಮಧ್ಯೆದ ಮಂಟಪ |
ಕೆರೆ ತಡಿಗೆ |
ಕೆರೆಯ ಹತ್ತಿರಕ್ಕೆ/ದಂಡೆಗೆ ಹಣ್ಣು ಜವನ |
ಕುಕ್ಕೇಲಿ |
ಬುಟ್ಟಿಯಲ್ಲಿ |
ತಲೆಗೊಂದ |
ಒಬ್ಬರಿಗೆ ಬಂದರಂತೆ |
ತೆಂಕಲ ಕಾಡಿ ಕಂಚಿ ಹೋಗುತ್ತದೆ |
ದಕ್ಷಿಣದ ಕಡೆಗೆ ವಾಲಿನ ಹೋಗುತ್ತದೆ |
ಸಿಡ್ಕಾಟ |
ಸಿಟ್ಟು/ಸಿಡುಕಾಟ |
ನರಾರಿಬೇಡ |
ಬಾಯಿ ಬಡಿಬೇಡ/ಕಿರುಚಬೇಡ |
ನಾರಾಗಿದ್ರು |
ನಾರಿನಂತೆ ಇದ್ದರು |
ಬಲುಸಿಡ್ಕಾ |
ಬಹಳ ಜೋರಾಗಿದ್ದಾನೆ |
ಹೊರ್ಗಿಟ್ ಬುಡ್ತಾರೆ |
ಜಾತಿಯಿಂದ ಹೊರಗೆ ಹಾಕುತ್ತಾರೆ |
ಪಸ್ಯೆ |
ಪರುಸೆ/ಭಕ್ತರು |
ನಾಮ ಇಕ್ದಾಕೆ ಸಲವೇನು |
ಹಣೆಗೆ ನಾಮವನ್ನು ಬರೆದವಳು ನನಗೆ ಹೆಂಡತಿಯಾಗಬೇಕು |
Leave A Comment