ಕಾವ್ಯದಲ್ಲಿ ಉಲ್ಲೇಖಿತವಾದ ಸ್ಥಳಗಳು

ಬೂದುಬಾಳು  ಗ್ರಾಮದ ಹೆಸರು. ಕೊಳ್ಳೇಗಾಲ ತಾಲ್ಲೂಕು ಬೂದುಬಾಳು ತಿರುಪತಿ ವೆಂಕಟರಮಣಸ್ವಾಮಿ ಭವ್ಯವಾದ ಗುಡಿ ಇದೆ. ಇದು ಈ ಸುತ್ತಿನ ಜನರಿಗೆ ತಿರುಪತಿಯಷ್ಟೆ ಪವಿತ್ರವಾದುದಾಗಿದೆ.
ತಿರ್ಪತಿ ತಿರುಪತಿ. ಆಂಧ್ರಪ್ರದೇಶ
ಹೊನ್ನಾಳಿ ಗ್ರಾಮದ ಹೆಸರು
ಗೋಕುಲ/ಗೋಕುನಾಡು ಒಂದು ಪ್ರದೇಶದ ಹೆಸರು ಪಶುಸಾಕುವಸ್ತ್ರದ ಹೆಸರು
ಪೋಡ್ನಾಡು ಪೋಡುಗಳು ನಾಡು ಸೋಲಿರು ವಾಸಿಸುವ ಪ್ರದೇಶ
ಸಿವನ ಸಮುದ್ರ ಶಿವನಸಮುದ್ರ – ವಿದ್ಯುತ್‌ ಉತ್ಪಾದನಾ ಕೇಂದ್ರ ಮಳವಳ್ಳಿ ತಾಲ್ಲೂಕು. ಪ್ರವಾಸಿ ಕೇಂದ್ರ
ಶ್ರೀರಂಗಪಟ್ಣ ಶ್ರೀರಂಗಪಟ್ಟಣ. ತಾಲ್ಲೂಕು ಕೇಂದ್ರ. ಟಿಪ್ಪು ಸುಲ್ತಾನ ಆಳಿದ ರಾಜ್ಯ ರಾಜಧಾನಿಯೂ ಹೌದು. ಶ್ರೀರಂಗ ನೆಲೆಗೊಂಡಿರುವ ಭೌವ್ಯವಾದ ಗುಡಿ ಇದೆ. ಶ್ರೀರಂಗನ ಶಯನ ಅವಸ್ಥೆಯಲ್ಲಿದ್ದಾನೆ
ಕಲ್ಯಾಣಿ ಒಂದು ಗ್ರಾಮದ ಹೆಸರು. ತಿರುಮಕೂಡಲ. ನರಸೀಪುರ ತಾಲ್ಲೂಕು
ತಲಕಾಡು ಗ್ರಾಮದ ಹೆಸರು. ತಿ.ನರಸೀಪುರ ತಾಲ್ಲೂಕು ಗಂಗರು ಆಳಿದ್ದು ರಾಜಧಾನಿ ಐತಿಹಾಸಿಕ ಸ್ಥಳ
ಮೇಲುಗಿರಿ ಕೈಲಾಸ ಬಿಳಿಗರಿ ರಂಗಸ್ವಾಮಿ ನೆಲೆಗೊಂಡಿರುವ ಗಿರಿಯನ್ನು ಕಾವ್ಯದಲ್ಲಿ ಮೇಲುಗಿರಿ ಕೈಲಾಸ ಎಂದು ಕರೆದಿದ್ದಾರೆ. ಅದು ಬಿಳಿಗಿರಿಯೂ ಹೌದು
ಮಗ್ಗ ಮರಳ್ಳಿ ಗ್ರಾಮದ ಹೆಸರು. ಚಾಮರಾಜ ನಗರ ತಾಲ್ಲೂಕು
ಹೆಗ್ಗಡದೇವನ ಕೋಟೆ ಗ್ರಾಮದ ಹೆಸರು. ತಾಲ್ಲೂಕು ಕೇಂದ್ರ. ಓರ್ವ ಪಾಳೆಗಾರನ ರಾಜ್ಯವಾಗಿತ್ತು
ರಂಜಕಲ್ಲು ಗ್ರಾಮದ ಹೆಸರು
ಪಿರಿಯಾಪಟ್ಣ/ಪಟ್ಟಣ ಗ್ರಾಮದ ಹೆಸರು, ತಾಲ್ಲೂಕು ಕೇಂದ್ರ
ಸಂತೆ ಸರಗೂರು ಗ್ರಾಮ ಹೆಸರು ಚಾಮರಾಜ ನಗರ ತಾಲ್ಲೂಕು
ಮರಳ್ಳಿ ಗ್ರಾಮದ ಹೆಸರು ಚಾಮರಾಜ ನಗರ
ಮಗಡಳ್ಳಿ ಗ್ರಾಮ ಹೆಸರು ಚಾಮರಾಜ ನಗರ ತಾಲ್ಲೂಕು
ಅರ್ಧನಳ್ಳಿ ಗ್ರಾಮ ಹೆಸರು ಚಾಮರಾಜ ನಗರ ತಾಲ್ಲೂಕು
ಗುಂಡ್ಲುಪೇಟೆ ಗ್ರಾಮ ಹೆಸರು. ತಾಲ್ಲೂಕು ಕೇಂದ್ರ
ಕಪ್ಳ ಗ್ರಾಮದ ಹೆಸರು
ಗೂಡ್ನೂರು ಗ್ರಾಮದ ಹೆಸರು
ನೀಲಗಿರಿ ಗ್ರಾಮದ ಹೆಸರು. ತಮಿಳುನಾಡು
ಕೋತ್‌ಗಿರಿ ಗ್ರಾಮದ ಹೆಸರು. ತಮಿಳುನಾಡು
ದಾಸಯ್ನಹುಂಡಿ ಗ್ರಾಮದ ಹೆಸರು. ಚಾಮರಾಜ ನಗರ ತಾಲ್ಲೂಕು
ಗಂಗವಾಡಿ ಗ್ರಾಮದ ಹೆಸರು. ಚಾಮರಾಜ ನಗರ ತಾಲ್ಲೂಕು
ಉನಗನ ಮುಂಟಿ ಪೋಡಿನ ಹೆಸರು
ಕೋಳಿಗುಂಡಾ ಪೋಡಿನ ಹೆಸರು
ಮಲ್ಕಿಬೆಟ್ಟಿ ಬಿಳಿಗಿರಿರಂಗನ ಬೆಟ್ಟದ ಸಾಲಿನಲ್ಲಿರುವ ಒಂದು ಬೆಟ್ಟದ ಹೆಸರು. ಮೂಲಿಕೆ ಬೆಟ್ಟ>ಮೂಲ್ಕಿ ಬೆಟ್ಟ>ಮುಲ್ಕಿ ಬೆಟ್ಟ ಮಲ್ಕಿಬೆಟ್ಟ
ಜಗ್ಟೆಕಲ್ಲು ಒಂದು ಸ್ಥಳದ ಹೆಸರು
ಸತ್ರ ಛತ್ರ ಗ್ರಾಮದ ಹೆಸರು. ಯಳಂದೂರು ತಾಲ್ಲೂಕು
ಮಸ್ಣಪುರ/ಮಸಣಾಪುರ ಗ್ರಾಮದ ಹೆಸರು. ಯಳಂದೂರು ತಾಲ್ಲೂಕು
ವಂಗ್ನೂರು/ಹೊಂಗುನೂರು ಗ್ರಾಮದ ಹೆಸರು. ಚಾಮರಾಜನಗರ ತಾಲ್ಲೂಕು
ಬೆಳ್ಳಿಕೆರೆ ಕೆರೆಯ ಹೆಸರು ಬಿಳಿಗಿರಿರಂಗನ ಬೆಟ್ಟದ ಸುತ್ತಿನ ಪ್ರದೇಶ
ಗೋಕುಲ ದೇಶ ಗೋವು ಸಾಕುವ ನಾಡು
ಕೋಳಿಗುಳ್ಳಾರ ಕಾಡಿನ ಒಂದು ಪ್ರದೇಶದ ಹೆಸರು
ಕನಕದಾಸರ ಗವಿ ಕಾಡಿನ ಒಂದು ಪ್ರದೇಶದ ಹೆಸರು
ಕಾಡುದಾಸರ ಗವಿ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಒಂದು ಗವಿ ಹೆಸರು
ಹನುಮಂತ ರಾಯನ ಕಣಿವೆ ಒಂದು ಕಣಿವೆಯ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಸೋಮಾರಿಯಪ್ಪನ ಕೊಳ ಸೋಮೇಶ್ವರ ಕೊಳ ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಬೊಮ್ಮನ ಕೊಳ ಕೊಳದ ಹೆಸರು ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಈಶ್ವರನ ಕಟ್ಟಿ ಒಂದು ಕೆರೆ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಕೃಷ್ಣನ ಕಟ್ಟಿ ಕೆರೆಯ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಕಂಬ್ರಿಪುರ ಗ್ರಾಮದ ಹೆಸರು
ಅಂಜನಾಗುಡ್ಡ ಒಂದು ಗುಡ್ಡದ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಕಳ್ಳರ ಬೆಟ್ಟ ಬೆಟ್ಟದ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಕಾಮಾರಿ ಬೆಟ್ಟ ಬೆಟ್ಟದ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಜಾಜಿವನ ಜಾಜಿ ಹೂವು ಯೇಥಚ್ಚಾಗಿ ಬಿಡುವ ಪ್ರವೇಶದ ಹೆಸರು
ಪರಿಮಳದ ಗವಿ ಒಂದು ಗುಹೆಯ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಕೊಂಗ್ನಾಡ ಸೀಮೆ ತಮಿಳುನಾಡು
ಪೊನ್ನಾಚಿ ಗ್ರಾಮದ ಹೆಸರು. ಕೊಳ್ಳೇಗಾಲ ತಾಲ್ಲೂಕು ಸೋಲಿಗರು ವಾಸಿಸುವ ಪ್ರದೇಶ ತಮಿಳರು ಇದ್ದಾರೆ
ಕಾಳಮಾರಿ ಒಂದು ಪ್ರದೇಶದ ಹೆಸರು
ಬೆಜ್ಲಗುಂಡಿ ಪೋಡಿನ ಹೆಸರು
ಜಾಜರೆ ಒಂದು ಪ್ರದೇಶದ ಹೆಸರು ಅರಣ್ಯ ಪ್ರದೇಶ
ಪುರಾಣಿ ಒಂದು ಪೋಡಿನ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ
ಮಂಜಿಗುಂಡಿ ಒಂದು ಪೋಡಿನ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ. ಸೋಲಿಗರ ಬಿಳಿಗಿರಿರಂಗನ ಕಾವ್ಯವನ್ನು ಹಾಡಿರುವ ಪರಮುಖ ಕಲಾವಿದನ ಪೋಡು
ಸೀಗೆಬೆಟ್ಟ ಪೋಡಿನ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿದೆ. ೧೯೪೨ರಲ್ಲಿ ಮಹಾತ್ಮಗಾಂಧೀಜಿ ಇಲ್ಲಿಗೆ ಬಂದು ಹೋಗಿದ್ದಾರೆಂದು ಹೇಳುತ್ತಾರೆ. ಅವರ ನೆನಪಿಗಾಗಿ ಇಲ್ಲೊಂದು ಗಾಂಧಿ ಆಶ್ರಮ ಶಾಲೆ ಇದೆ.
ಕುಂಬಾರ ದೇವರ ಕೊಳ ಒಂದು ಕೊಳದ ಹೆಸರು ಬಿಳಿಗಿರಿರಂಗನ ಬೆಟ್ಟದಲ್ಲಿದೆ

 

ದೇವತೆ

ತುಳಸಮ್ಮ ಬಿಳಿಗಿರಿರಂಗಯ್ಯನ ಹೆಂಡತಿ
ಲಕ್ಷ್ಮೀದೇವಿ ಬಿಳಿಗಿರಿರಂಗಯ್ಯನ ಹೆಂಡತಿ
ಪಟ್ಟದ ರಂಗಸ್ವಾಮಿ ಬಿಳಿಗಿರಿರಂಗಸ್ವಾಮಿ ಇನ್ನೊಂದು ಹೆಸರು
ಕರಿರಂಗಪ್ಪ ರಂಗಸ್ವಾಮಿ ಇನ್ನೊಂದು ಹೆಸರು ರಂಗ
ಸಿಂಗ ಅಣ್ಣ ತಮ್ಮಂದಿರು
ಕಳ್ಳರಂಗಪ್ಪ ರಂಗಸ್ವಾಮಿ ಇನ್ನೊಂದು ರೂಪ/ಹೆಸರು
ಈಶ್ವರ ಶಿವ
ಪಟ್ಟದ ಪಾರ್ವತಿ ಶಿವನ ಹೆಂಡತಿ
ಬೆಟ್ಟದ ಚಾಮುಂಡಿ ತಾಯಿ ಮೈಸೂರು ಮಹಾರಾಜರ ಮನೆ ದೇವರು ನಂಜಗೂಡಿನ ನಂಜುಂಡೇಶ್ವರನ ಪ್ರೇಯಸಿ
ಸೋಸಲೆ ಹೊನ್ನಾದೇವಿ ಸೋಸಲೆ ಗ್ರಾಮದ ‘ಗ್ರಾಮದೇವತೆ’ ಸಪ್ತಮಾತ್ರಕೆಯದಲ್ಲಿ ಒಬ್ಬರು
ಗಂಗಾದೇವಿ ಮುಡುಕುತೊರೆ ಮಲ್ಲಪ್ಪನ ಹೆಂಡತಿ
ಚೆನ್ನನಾರಾಯಣ ರಂಗಸ್ವಾಮಿ ಇನ್ನೊಂದು ರೂಪ/ಹೆಸರು
ಸೂಳೆ ರಂಗಮ್ಮ  
ಮಲೆಮಾದಪ್ಪ ಸಾಂಸ್ಕತಿಕ ವೀರ ಮಲೆಗಳ ಮಧ್ಯೆ ನೆಲೆಸಿ ಮಲೆ ಮಾದಪ್ಪನಾದ ಮಹಾಪುರುಷ. ಸುಮಾರು ೧೪ನೇ ಶತಮಾನದಲ್ಲಿ ಇದ್ದಾದಾಗಿ ಹೇಳುತ್ತಾರೆ.

 

ವ್ಯಕ್ತಿ

ಬೊಮ್ಮೆಗೌಡ ಬಿಳಿಗಿರಿರಂಗಯ್ಯನ ಕಾವ್ಯದಲ್ಲಿ ಬರುವ ಸೋಲಿಗ ಕುಟುಂಬದ ನಾಯಕ. ಬಿಳಿಗಿರಿರಂಗಯ್ಯನ ಮಾವ ಕುಸ್ಮದೇವಿ ತಂದೆ
ಚಕ್ಕಕಾಡಿ  
ದೊಡ್ಡಕಾಡಿ  
ಚಿಕ್ಕರಂಗಿ  
ದೊಡ್ಡರಂಗಿ  
ಕ್ಯಾತಿ  
ಮಾದಿ  
ಕುಸ್ಮದೇವಿ/ಕುಸ್ಮಾಲ ಬೊಮ್ಮೆಗೌಡನ
ಏಳು ಜನ ಹೆಣ್ಣು ಮಕ್ಕಳು  
ಸಟ್ಟಗಾರ  
ಯಾಜಮಾನ  
ಕೋಲ್ಕಾರ ಸೋಲಿಗ ಸಮುದಾಯದ ಪ್ರಮುಖ ಮೂರು ಮಂದಿ ಹಿರಿಯರ ಸ್ಥಾನ ಮತ್ತು ಹೆಸರು
ಸಸ್ಯ  
ಕಾಡ ಕೆಬ್ಬಾರಹೂವು  
ಕಾರೆ ಹೂವು  
ಅಣ್ಣೆ ಹೂವು /ಸೊಪ್ಪು  
ಅತ್ತಿಹೂವು  
ಬಾನೆಹುಲ್ಲು  
ನೂರೆ ಗೆಣಸು  
ಮೆಳ್ಗೆಣಸು  
ತಾವ್ರ ಗೆಣಸು  
ಕಾರಂಜಿ ಹುಲ್ಲು  
ಮಲ್ಲಿಯಾ ಕಡ್ಡಿ  
ಉನ್ಗನ ಹುಲ್ಲು  
ದುರ್ಬಲ್ಲು / ದಬ್ಬೆ ಹುಲ್ಲು  
ಬಿದ್ರಕ್ಕಿ /ಬಿದಿರು  
ಹೆಬ್ಬಿದಿರು  
ತೇಗು  
ಬಾಳೆಯ ಮರ  
ಮುತ್ತುಗ  
ಬನ್ನಿಮರ  
ಕಾರಾಚಿ ಹುಲ್ಲು  
ಕಬ್ಬಾಳೆ ಹಂಬು  
ಬಿಳಿ ಸೀಗೆಕಾಯಿ  
ಗೊಬ್ಬಳಿ ಮುಳ್ಳು  
ಹಂಚಿ ಕಡ್ಡಿ /ಹುಲ್ಲು ಒಂದು ಜಾತಿಯ ಹುಲ್ಲು. ಹುಲ್ಲು ಮನೆಯ ಚಾವಣಿಗೆ ಹೊದಿಸುವರು
ಕಗ್ಗಳೀ ಮರ ಕಗ್ಗಲಿ ಒಂದು ಜಾತಿಯ ಮರ. ವ್ಯವಸಾಯ ಉಪಕರಣಕ್ಕೆ ಬೇಕಾದ ಮರ
ಕಕ್ಕಬೇರು /ಗಿಡ/ ಸೊಪ್ಪು ಒಂದು ಜಾತಿಯ ಗಿಡ. ಸೊಪ್ಪನ್ನು ಗುಡಿಸಲು, ಬೇಲಿ ಹಾಕಲು ಬಳಸುವರು
ಎಕ್ಕದ ಬೇರು/ ಹೂ/ ಎಲೆ ಮಾಟ – ಮಂತ್ರದಲ್ಲಿ ಬೇರು ಬಳಕೆ. ವಿಶೇಷ ಪೂಜೆಯಲ್ಲಿ ಹೂವು ಬಳಕೆ ಹಾಗೆಯೇ ಎಲೆಯೂಸಹ
ಸಾಸಿವೆ ಸೋಲಿಗರು ಸಾಸಿವೆ ಸೊಪ್ಪನ್ನು ಆಹಾರವಾಗಿ ಬಳಸುವರು. ಮೂಲಂಗಿ ಸೊಪ್ಪಿನ ಮಾದರಿ
ಎಡ್ಡನ ಕೀರೆ ಕೀರೆ ಸೊಪ್ಪಿನಂತೆ ಇದ್ದರೂ ೪ ರಿಂದ ೫ ಅಡಿ ಎತ್ತರ ಬೆಳೆಯುತ್ತದೆ. ನವಣೆ ತೆನೆಯಂತೆ ಹೂ ಬಿಟ್ಟು ಕಾಳುಗಳಾಗುತ್ತವೆ. ಸೊಪ್ಪನ್ನು ಆಹಾರವಾಗಿ ಬಳಸುವರು.
ಬದನೆಕಾಯಿ ಸೋಲಿಗರು ಬೆಳೆಯುತ್ತಿದ್ದ ತರಕಾರಿಯಲ್ಲಿ ಒಂದು
ಬಾಖೆಕಾಯಿ/ಎಲೆ/ ಹಣ್ಣು ಜಾತ್ರೆಯಲ್ಲಿ ಬಾಳೆಕಾಯಿಯನ್ನು ದೇವರಿಗೆ (ಬಾವ) ಸಾಂಪ್ರದಾಯಿಕವಾಗಿ ನೀಡುವುದು ವಾಡಿಕೆ. ಎಲೆ ಊಟಕ್ಕೆ ನೀಡಬೇಕು. ಹಣ್ಣನ್ನು ಸಾರ್ವಜನಿಕರೆಲ್ಲರಾದಿಯಾಗಿ ತೇರಿಗೆ ಹಣ್ಣು- ಜನ ಕೂಡಿಸಿ ಎಸೆಯುವುದು ಪದ್ಧತಿ. (ಕಾಡುಬಾಳೆ)
ಕುಂಬಳಕಾಯಿ/ ಬೂದಗುಂಬಳ ಮೇಲೆ ಹೇಳಿದಂತೆ ಬೂದಗುಂಬಳ ಕಾಯಿಯನ್ನು ನೀಡುವುದುಂಟು.
ಬೆಂಕಿಕಡ್ಡಿ ಬೆಂಡಿನ ಮಾದರಿ ಕಡ್ಡಿ – ಇದರಿಂದ ಬಿತ್ರಗಳನ್ನು ರಚಿಸಲು ಬಳಸುವರು
ಮೆಕಿಕಾಯಿ ಒಂದು ಜಾತಿಯ ಗಿಡ ಕಾಡಲ್ಲ ಬೆಳೆಯುವುದು ಅದು ಬಿಡುವ ಕಾತಿ ಮೆಕ್ಕಿಕಾಯಿ

 

ವಸ್ತುಗಳು

ಪಟ್ಟಮಂಚ ದೇವತೆಗಳ ಸಿಂಹಾಸನ
ಸಂಕ ಶಂಕ – ಶಂಕು
ಜಗ್ಟೆ ಜಾಗಟೆ
ಬುಸಿ ಬೋನಾಸಿ – ಬೌನಾಸಿ
ನಾಮ ವಿಭೂತಿಗಟ್ಟಿ
ಉಲಿಸರ್ಮ ಹುಲಿಯ ಚರ್ಮ
ವುಲ್ಲೆ ಸರ್ಮ ಹುಲ್ಲೇ ಚರ್ಮ
ತ್ರಿಸೂಲ ತ್ರಿಶೂಲ
ಮೂಲೆ ಚೀಲ ಅಜ್ಜಂದಿರು ಇಟ್ಟುಕೊಂಡಿರುವ ವಿವಿದ್ದೋದ್ದೇಶದ ಚೀಲ
ಗೆಜ್ಜೆಸ್ ದೊಣ್ಣೆ ಅಜ್ಜಂದಿರು ಮೂರನೆ ಕಾಲಾಗಿ ಬಳಸುವ ದೊಣ್ಣೆ ಅದಕ್ಕೆ ಗೆಜ್ಜೆ ಕಟ್ಟಿರುತ್ತಾರೆ
ಕವಡೆ ಚೀಲ ಕವಡೆ ಕಾಯಿಯನ್ನು ಇಡುವ ಚೀಲ
ಪಗಡೆ ಪಗಡೆ
ತಾತಿ ತಾಯಿತ
ಸುಣ್ಕಯಿ ಸುಣ್ಣದ ಡಬ್ಬ
ಕಮ್ಮತ್ತಿ ಕೊಂತ ಕಮ್ಮತ್ತಿ ಮರದ ಕೊಂಡು
ಕುಕ್ಕೆ ಬುಟ್ಟಿ

ಕಾಲ

ಕಲ್ಲು ಕರ್ಗುವ ಜಾಮ ಸರಿ ರಾತ್ರಿ/ ಮಧ್ಯೆ ರಾತ್ರಿ/ ಸಮರಾತ್ರಿ
ಲೋಕವೆಲ್ಲಾ ಬೆಳಗಾಯ್ತು ಸೂರ್ಯ ಉದಯಿಸಿತು
ಕಾಕೋಳ ಕೂಗ್ಬುಡ್ತು (ಕಾಡುಕೋಳಿ) ಬೆಳಗಾಯಿತು

 

ಐದು ಕುಲದ ಸೋಲಿಗರು

ಹೊಂಗೆಲರ ಕುಲ ಹೊಂಗೆ ಮರದ ಸಂಕೇತ ಇದರ ಸಂಬಂಧ ನಿಷೇಧಗಳಿವೆ
ಆಲುರು ಕುಲ ಮಾದಪ್ಪ ಕುಲದೇವತೆ
ಬೆಲ್ಲರ ಕುಲ ಬೆಳ್ಳಕುಲ. ಚಿನ್ನ ಬೆಳ್ಳಿ ಕೆಲಸ ನಿರ್ವಹಿಸಿದ್ದರ ಸಂಕೇತ
ಸೂರ್ಯಕುಲ ಸೂರ್ಯ ದೇವತೆ. ಕೈಲಿಚೂರಿ ಹಿಡಿದ್ದರಿಂದ ಈ ಹೆಸರು ಬಂತು
ತೆನೇರು ಕುಲ ರಾಗಿ ತೆನೆಯ ಸಂಕೇತವಾಗಿ ಈ ಹೆಸರು ಬಂತು

 

ಸೋಲಿಗ ಗುಂಪುಗಳು

ಉರುಳಿ ಸೋಲಿಗರು ಚಾಮರಾಜನಗರ, ಸತ್ಯಮಂಗಲ ಕಾಡಲ್ಲಿ ವಾಸ
ಕಾಡು ಸೋಲಿಗರು ಬಿಳಿಗಿರಿರಂಗಬೆಟ್ಟ, ಮಹದೇಶ್ವರ ಬೆಟ್ಟ ಸುತ್ತಲಿನ ಕಾಡು
ಮಲೆಸೋಲಿಗರು ಬಿಳಿಗಿರಿರಂಗಬೆಟ್ಟ, ಮಹದೇಶ್ವರ ಬೆಟ್ಟ ಸುತ್ತಿನ ಕಾಡು
ಊರುಬತ್ತಿ ಸೋಲಿಗರು ಕಾಕನ ಕೋಟೆ ಕಾಡು
ಬುರುಡೆ ಸೋಲಿಗರು ಕೊಳ್ಳೇಗಾಲ ಸುತ್ತಮುತ್ತ ಹೆಗ್ಗಡ ದೇವನ ಕೋಟೆ ಸುತ್ತಲಿನ ಕಾಡುಗಳು