ತಾನ/ಸ್ತಾನ ಸ್ನಾನ
ಬುಗು ಬುಗ್ನೆ ಭಂ ಭಂ ಎಂಬ ಶಂಕದ ಶಬ್ದ
ಸರ್ನೋಗ್ಬುಡ್ತವೆ ಬೇಗ ಹಾಳಾಗಿ ಬಿಡುತ್ತವೆ
ಬೊಳ್ಳ ಬೊಳ್ಳಗೆ ನಿಧಾನವಾಗಿ/ಮೆಲ್ಲಮೆಲ್ಲಗೆ
ರೂಪು ರೇಸ ರೂಪು, ಸೌಂದರ್ಯ
ಆರಪ್ಪ ಇಂವ ಯಾರಪ್ಪ ಇವನು
ಬುಟ್ಟಾರ? ಬಿಡುತ್ತಾರೆಯೇ?
ಮಲ್ಕಸ್‌ಬುಟ್ರೆ ಅಲುಗಾಡಿಸಿದರೆ
ಮಂಟು ಕದಲಿಸು
ಸುಳಿ ಜೇನು ಒಂದು ಜಾತಿಯ ಜೇನು
ನಾರಿ ಜೇನು ಒಂದು ಜಾತಿಯ ಜೇನು
ಸೂಳೇರಗ್ಯಾನ ವೇಶ್ಯಯರ ಮೇಲಿನ ಚಪಲ
ಏಡು ಎರಡು
ಕೂತ್ಗಂಡು ಕುಳಿತುಕೊಂಡು
ಎಡ್ಕ ಬಲ್ಕೆಲ್ಲಾ ಎಡ ಬಲ ದಿಕ್ಕುಗಳಿಗೆಲ್ಲಾ
ತಳ ಸ್ಥಳ
ನಿಂತ್ಗೊಳ್ಳಕ್ಕಾರು ನಿಂತು ಕೊಳ್ಳುವುದಕ್ಕಾದರು
ಎಳನಾಮ ತೆಳುವಾದ ಅಥವಾ ಸಣ್ಣದಾದ
ನಾಮ ವೈಷ್ಣವ ಸಮುದಾಯದ ಸಂಪ್ರದಾಯದಂತೆ ಹಣೆಗೆ ಬರೆಯುವ ನಾವು
ಉಲಿಸರ್ಮ ಹುಲಿಚರ್ಮ
ಆಸ್ಗೊಂಡಿದ್ದಿನಿ ಹಾಸಿಕೊಂಡಿದ್ದೇನೆ
ವುಲ್ಲೇ ಸರ್ಮ ಹುಲೆ ಅಥವಾ ಜಿಂಕೆ
ಮಡ್ಗಿದ್ದೀನಿ ಇಟ್ಟಿದ್ದೇನೆ
ಪಲ್ಸಿಸಬ್ದ ಪಕ್ಷಿಶಬ್ದ
ಅಕ್ಕಿಸಬ್ದ ಹಕ್ಕಿಶಬ್ದ
‘ಕಾ’ ಎಂಬ ‘ಕಾಗೆ’ ಸದ್ದಿಲ್ಲ ‘ಕಾ’ ಎನ್ನುವ ಕಾಗೆಯ ಸುಳಿವಿಲ್ಲ / ಶಬ್ದವಿಲ್ಲ
‘ಗೂ’ ಎಂಬ ಗೂಗೆ ಸದ್ದಿಲ್ಲ ಗೂ ಎನ್ನುವ ಗೂಬೆಯ ಸುಳಿವಿಲ್ಲ / ಶಬ್ದವಿಲ್ಲ
ಸಟ್ಗ ಮಡಿಕೊ ಸ್ವಲ್ಪ ಇಟ್ಟುಕೊಳ್ಳು
ಮಾಡ್ಗವೊತ್ಗ ಇಟ್ಟು ಕೊಂಡ ಕಾರಣಕ್ಕೆ
ಬಾನಗ್ಲ ಆಗಸದಷ್ಟು ವಿಸ್ತಾರವಾದ
ಕಂತೆ ಬೊಂತೆ ಗಂಟು / ಮೂಟೆ
ಬಿರ್ದುಗಳ್ಗೆ ಬಿರುದುಗಳಿಗೆ
ಬಾಳ ಬಹಳ
ಯೋಗವಾದವ್ರು ಯೋಗಪುರುಷರು
ತಕ್ಕಂಡು ತೆಗೆದುಕೊಂಡು
ವಾಕ್ಯದಂತೆ ಮಾತಿನಂತೆ / ಹೇಳಿಕೆಯಂತೆ
ಮೂಡಲು ಪೂರ್ವ
ಪಡವಲು ಪಶ್ಚಿಮ
ಬುಡ್ಕನೆಯ ಬುಡದಲ್ಲಿಯೇ
ಬಗಬಗನೆ ತರಾತುರಿಯಲ್ಲಿ
ಮಕ್ಕ ಮಕ್ಕಳು
ಹೈಕ ಮಕ್ಕಳು
ಎಬ್ಬಿದಿರು ದೊಡ್ಡ ಬಿದಿರು
ದಂಡೇಲಿ ಹತ್ತಿರ
ಗಕ್ಕನ್‌ ತಕ್ಷಣ
ಪಂಡರಗಾಳಿ ಗುಂಡರನಾಮ ಒಂಟಿ / ಏಕಾಂಗಿ ಗುರುಗುಂಜಿಯಷ್ಟು ಸುಂದರವಾದ ನರಿಗೆ ಹಾಗೂ ತುರುಬಿರುವವಳೆ
ಇಕ್ಕಲು ಬಟ್ಟೆ ಹೊಲಸು/ಕೊಳೆಬಟ್ಟೆ
ಸೋಲಗಿತ್ತಿ ಸೋಲಿಗರ ಹೆಣ್ಣು
ಇನ್ಯಾಕಯ್ಯ! ಆಶ್ಚರ್ಯ ಪೂರಕ ಪದ/ಇನ್ನು ಯಾಕಯ್ಯ!
ತೇರು ದೇವರ ಉತ್ಸವದ ರಥ
ತೆಪ್ಪ ಕೆರೆ ಅಥವಾ ಕೊಳದಲ್ಲಿ ನಡೆಯುವ ದೇವರ ಉತ್ಸವ
ಅರ್ಸೇವೆ ಹರಿಸೇವೆ
ತಲ್ಗೊಂದ್ಕಯ್ಯ ಒಬ್ಬೊಬ್ಬರು ಒಂದೊಂದು ಕೈ ಹಾಕುವುದು
ಟಮ್ಮು ಟುಮ್ಮನೆ ಕುಣಿತದ ಒಂದು ಶೈಲಿ
ಮೆರ್ದುಬುಟ್ಟು ಮೆರವಣಿಗೆಯಾದ ಬಳಿಕ
ಸನ್ವಾರ ಶನಿವಾರ
ಬೂತ ಅರ್ಸೇವೆ ಭೂತ ಹರಿಸೇವೆ
ಒತ್ಗಂದ್‌ ಹೊತ್ತುಕೊಂಡು
ಸಕುತ ಸಗುತ ಶಕ್ತಿ
ಅಲ್ಲಾಣಿ ಇಲ್ಲಾಣಿ – ಆ ಕಡೆ ಈ ಕಡೆ ರ್ಮಾಗವಾಗಿ
ಸುಳಿವೂವು ಸುಳಿಹೂವು ದೇವರ ತಲೆ ಮೇಲೆ ಇರಿಸಿದ ಹೂಮ
ದಡ್ಡು ಪೆದ್ದ
ಕಕ್ಕೆಯ ಜೊನ್ನಿ ಕಕ್ಕೆಯ ಎಲೆಗಳಿಂದ ಎಣೆದ ಜೊನ್ನಿ
ಸದ್ದು ಸದ್ದು ಉಸ್ರ ಸುಮ್ಮನಿರು ಸುಮ್ಮನಿರು ಉಸಿರು ಬಿಡಬೇಡ
ಕಿಮಿ ಕಿವಿ
ಮೋರೆ ತಿಮಿರವ್ವ ಮುಖಕ್ಕೆ ತಿವಿಯಿರಿ
ಜಡಿ ಎಳೆಯಿರಿ
ಇವ್ರಾವುರಪ್ಪ ಇವರು ಯಾವ ಊರಿನವರು
ಪೂರ್ವದ ಆದಿ ಹಳೆಯ ಮಾರ್ಗ
ಅತ್ತಿಕಣಿವೆ ಆದಿ ಅತ್ತಿ ಕಣಿವೆ ಮಾರ್ಗ
ಬಾಳ ಉಸಾರಾಗಿ ಬಹಳ ಜಾಗರೂಕತೆಯಿಂದ
ಕೇಡಿ ಕೆಡುಕುಗಾರ
ಬತ್ತಿಯ ಅಂದೊತ್ತಿಗೆ ಬರುವೆಯ ಎಂದು ಕೇಳಿದ್ದಕ್ಕೆ
ಮೀಸೆನುಲಿ ಮೀಸೆ ತಿರುವು
ಗೊಡ್ಡು ತೆಂಗಿನ ನಾರಿನಂತೆ ಇರುವ
ಕಿಲಾಡಿ ಚತುರ
ತೂರು ಆಡುತ್ತ ಜೋಲಾಡುತ್ತ
ತಾರು ಆಡುತ್ತ ಜೋರಾಡುತ್ತ
ಗಕ್ಕನ್‌ ತಿರ್ಗ್‌ ನೋಡ್ಬುಟ್ಟ ತಕ್ಷಣ ತಿರುಗಿ ನೋಡಿದ
ಬಾಳಯುಕ್ತಿವಂತೆ ಬಹಳ ಜಾಣೆ
ಅನ್ನೇಡ್‌ ವರ್ಸ ಹನ್ನೆರಡು ವರುಷ
ಸುಲ್ಬವಲ್ಲ ಸುಲಭವಲ್ಲ/ಸಾಮಾನ್ಯವಲ್ಲ
ಕಜ್ಜಿ ಮೈಮೇಲೆ ಬರುವ ಚರ್ಮರೋಗ
ಜಗ್ಗಿ ಕುಣ್ತ ಕುಣಿತದ ಒಂದು ಮಾದರಿ
ಮೋರೆಲಾ ಬತ್ತೊಯ್ತು ಮುಖವೆಲ್ಲಾ ಸೊರಗಿ ಹೋಯಿತು
ಕೋರಿರ ಗ್ಯಾನ ನಿನಗ್ಯಾಕ ಹದಿಹರೆಯದ ಹುಡುಗಿಯರ ಆಸೆ ನಿನಗೇತಕ್ಕೆ
ಅಣ್ಣೆವೂವ್ನಾಗೆ ತಲೆಯೆಲ್ಲ ಬೆಳ್ಳಗಾಯ್ತು ಅಣ್ಣೆಗಿಡದ ಹೂವಿನಂತೆ ತಲೆಯ ಕೂದಲೆಲ್ಲಾ ಬಿಳಿಯಾಯಿತು
ಕನ್ನುಡ್ಗಿಯರ ಸುದ್ದಿ ನಿನಗ್ಯಾಕ ಕನ್ಯೆಯರು/ ಹದಿಹರೆಯದವರು ಅವರ ಸಹವಾಸ ನಿನಗೇತಕ್ಕೆ
ಅತ್ತಿವೂವ್ನಂಗ ನೆತ್ತಿಯೆಲ್ಲ ಬತ್ತೋಗ್‌ ಬುಡ್ತು ಅತ್ತಿ ಮರದ ಹೂವಿನಂತೆ (ನೆತ್ತಿ) ತಲೆಯ ಮೇಲ್ಭಾಗವೆಲ್ಲಾ ಒಣಗಿ ಹೋಯಿತು
ಬಡಗಲು ಉತ್ತರ
ತೆಂಕಲು ದಕ್ಷಿಣ
ನಾಚನಟ್ಟಿ ಎರೊಂಬತ್ತು ಕೋಟಿ ಜಗತ್ತಿನ ಕೋಟಿ ಕೋಟಿ ಜೀವರಾಶಿಗಳು
ಬಡತನವನ್ನು ತಿದ್ದುಬುಟ್ಟು ಬಡತನ ನಿವಾರಿಸಿದ ಬಳಿಕ
ಅಂದ್ಕೊಂಡು ವೂವು ಅಂದಕ್ಕೊಂದು ಹೂವು
ಪಟ್ಟ ತಿದ್ದುಕೊಂಡು ಜಗತ್ತಿನ ಜೀವರಾಶಿಗಳಿಗೆಲ್ಲಾ ಅನ್ನದಾನ ಮಾಡಿ
ಆರ್ಸಿ ಇಳ್ಯವ ಕೊಡ್ಬೇಕು ಹರಸಿ ವೀಳ್ಯವನ್ನು ಕೊಡಬೇಕು
ಬೌಆಸೆ ಬಹು/ ಬಹಳ ಆಸೆ
ಆರಾರ ಯಾರನ್ನಾದರೂ
ಅರಿಶಿನಕೊಟ್ಟು ಲಗ್ನಕ್ಕೆ ಒಪ್ಪಿಗೆ ಕೊಟ್ಟು
ಆರ್ಕಿನ ಅಂಬ್ಲಿ ಆರಕ ಎಂಬ ಧಾನ್ಯದ ಅಂಬಲಿ ಅಥವಾ ಗಂಜಿ
ಅಡ್ಬ ಹಡಪ, ಬಟ್ಟೆಯ ಚೀಲ
ದಾಸಪ್ನ ಗಿಲ್ಮಿಲಿ ದಾಸಪ್ಪನ ದೆಸೆಯಲಿ
ಪತ್ರಗುಟ್ತವೆ ಕೂಗುತ್ತ ಓಡಾಡುತ್ತವೆ/ ನಡುಗುತ್ತವೆ
ಕುಕ್ಕರಗಾಲಲ್ಲಿ ವೀರ ಮಂಡಿಗಾಲಾತಾನನಗೆ
ಬೇಗ ಕಡಸೈಪ ಬೇಗ ಓಡಿಸಿರಿ
ಆಗನೊ ಆವಾಗ
ಬಂಡಿಗೂಡ ಚಳಿಗೆ ಬೆಂಕಿ ಹಾಕುವ ಮಣ್ಣಿನ ಮಡಕೆಯ ಸಾಧನ
ನೋಡುತವ್ರೆ ನೋಡುತ್ತಿದ್ದಾರೆ
ಐಕ್ಯಕೊಟ್ಟು ಜ್ಞಾನಕೊಟ್ಟರು/ ಸುದ್ಧಿ ಕೊಟ್ಟರು
ಆಕ್ರಮಳೆ ಅಕ್ಕರಮಳೆ
ಬಲಗ್ರ ಬಲವಾದ
ಕಾರಮಳೆ ಜೋರುಮಳೆ (ಮರೆಯ ಒಂದು ಮಾದರಿ)
ಮೇಲು ಮುಸ್ಕಂತೆ ಹೊದ್ದಿರುವ ಅರಿಮೆಯನ್ನು
ಗುಳ್ಳು ಸೊಪ್ಪುಗಳಿಂದ ನಿರ್ಮಿಸಿದ ಗುಡಿಸಲು
ಸಿವಪೂಜೆ ಶಿವಪೂಜೆ
ಎಣೆಗಂಟು ಜಡೆಯನ್ನು ಹಾಕದೆ ಕೂದಲನ್ನು ಒಟ್ಟಾರೆ ಎತ್ತಿ ಗಂಟು ಕಟ್ಟುವುದು
ಕಣ್ಣುಬ್ಬ ಒಡೆಯುತವ್ನೆ ಕಣ್ಣನ್ನು ಮಿಟುಗಿಸುತ್ತಿದ್ದಾನೆ
ಮೆಂಗಣ್ಣ ತಿರುಗ್ಸ್ ತವ್ನೆ ಓರಗಣ್ಣ ತಿರುಗಿಸುತ್ತಿದ್ದಾನೆ
ಬೇರ್ ತಾಳಿಗೆ ಬೇರಿನ ತಾಳಿಗೆ/ಮರದ ಬುಡದ ಬಳಿಗೆ
ಹೆಗ್ಗಜ್ಜಿ ಚರ್ಮ ರೋಗ ದೊಡ್ಡದಾಗಿ ಹುಟ್ಟುವ ಗಾಯ
ಹೆಗ್ಗಜಿ ಮೂರಕಂಡ್ಗ ಮೂರು ಕುಡುಗ ದೊಡ್ಡಕಜ್ಜಿ
ತುರ್ಗಜ್ಜಿ ಮೂಗಂಡ್ಗ ಮೂರು ಕುಡುಗ ಸಣ್ಣಕಜ್ಜಿ
ಅತಿಯಾದವಾಸನೆ ಅತಿದುರ್ವಾಸನೆ
ಕಸಕಿತ್ಬುಡಿ ಜಡೆ ಕಿತ್ತಾಕಿ ಬಿಡು
ಸ್ರಿಸಕ್ತಿ ಶ್ರೀಶಕ್ತಿ
ಕಟಕಟ ಮಾಡ್ಬೇಡ ಕಿರಿಕಿರಿಮಾಡಬೇಡ
ಬುಡ್ಲಾರ ಬಿಡಲಾರ
ಕಾಣ್ಕೆ ಕಟ್ಟುಡಾನ ಕಾಣಿಕೆ ಕಟ್ಟೋಣ
ತೂರಾಡ್ಕ ತುಂಟಾಡ್ಕ ತೂರಾಡುತ್ತ ವಾಲಾಡುತ್ತ
ತಲುಳ್ಳವ ತಲೆವುಳ್ಳವ/ ಬುದ್ದಿವಂತೆ
ತಂಗ್ದಿರೆ ತಂಗಿಯಂದಿರೆ
ಅಕ್ದಿರೆ ಅಕ್ಕಂದಿರೆ
ಹೊನ್ನೆಚ್ ದೇವರಿಗೆ ಮೀಸಲು ಕಟ್ಟು
ಕಾಡ್ಗಲ್ಲ ತಗ್ದು ಕಾಣ್ಕ ಕಟ್ಬುಡ್ತಿನಿ ಕಾಡಿನಲ್ಲಿ ಸಿಗುವ ಒಂದು ಕಲ್ಲನ್ನೇ ತೆಗೆದುಕೊಂಡು ಕಾಣಿಕೆ ಕಟ್ಟುತ್ತೇನೆ.
ಕಾಸಿನ ದೂಪ ಕಾಸುಕೊಟ್ಟು ಧೂಪ ತೆಗೆದುಕೊಂಡು, ದೇವರ ಹೆಸರೇಳಿ ಧೂಪ ಹಾಕುವುದು.
ಅರ್ಕೆ ಹರಕೆ
ಹೊನ್ನುಗಾಣಿಕೆ ದೇವರಿಗೆ ಚಿನ್ನದ ರೂಪದಲ್ಲಿ ಕಾಣಿಕೆ ಕೊಡುತ್ತೇನೆಂದು ಹರಕೆ ಮಾಡಿಕೊಳ್ಳುವುದು
ನಿಗ್ರೋಗ್‌ ಬುಟ್ಟಿದ್ದಾನೆ ಸತ್ತೋಗಿದ್ದಾನೆ
ದೊಡ್ಡರೋಗ ಸಾಂಕ್ರಾಮಿಕ ಕಾಯಿಲೆ
ತಂಗಳನ್ನು ಹಳಸಲು ಅನ್ನು/ತಂಗಳು ಅನ್ನ
ತಣ್ಣೀರ್ ತಣ್ಣಗಿರುವ ನೀರು
ಕರ್ದಿ ಕಕ್ಕರ್ದ್‌‌ಬುಡ್ತು ಕರಡಿ ಕೂಗುವುದಕ್ಕೆ ಈ ರೀತಿ ಹೇಳುತ್ತಾರೆ
ಉಲಿ ಅಮ್ಮರ್ದ್‌‌ಬುಡ್ತು ಹುಲಿ ಕೂಗುವುದಕ್ಕೆ ಈ ರೀತಿ ಹೇಳುತ್ತಾರೆ
ಬಾಳ ದರ್ಮಾಂತಿ ಬಹಳ ಧರ್ಮವಂತರು
ಸತ್ತುಳ್ಳ ಜನ ಸತ್ಯವಂತ ಜನರು
ಬಿದ್ರಬಿಂಕಿ ಬಿದಿರಿಗೆ ಹಚ್ಚಿದ ಬೆಂಕಿ
ಕಾರೆಂಬ ಕತ್ಲು ಕಗ್ಗತ್ತಲು
ಬೋರೆಂಬ ಮಳೆ ಒಂದೇ ಸಮನೆ ಗಟ್ಟಿಯಾಗಿ ಸುರಿಯುವ ಮಳೆ
ಕಾಕೋಳಿ ಕೂಗ್ಬುಡ್ತು ಕೋಳಿಕೂಗುವ ಸಮಯವಾಯಿತು/ಬೆಳಗಾಯಿತು
ಅರೆಗಣ್ಸಿನ ಅಂಬಲಿ ಅರೆಗೆಣಸಿನಿಂದ ಮಾಡಿದ ಅಂಬಲಿ/ಗಂಜಿ
ಕೂಳು-ಗೀಳು ಊಟ
ಅರಿಕೋಲ್‌ ಗೆಡ್ಡೆ ಗೆಣಸು ಅಗೆಯುವ ಕಟ್ಟಿಗೆ ಸಾಧನ
ಬಾಜರಕಂತ ಬಜರಿಗಂದು
ಉಸ್ನಗೆ ಹುಸಿನಗೆ
ಒಡೆದು ಮೂಡು ಉದ್ಭವಿಸು
ವೈರುಮುಡಿ ಮೀಸಲು/ಪೂಜಾ ಸಾಮಾಗ್ರಿಗಳುಂಟು
ಎಡ್ಚರಿ ಎಡಗಡೆ
ಬಲ್ಚರಿ ಬಲಗಡೆ
ನೆಟ್ಟ ನಡುವೆ ಮಧ್ಯ
ಗಣಿರೆಂದೂ ಗಂಟೆಯ/ಗೆಜ್ಜೆಯನಾದದಂತೆ
ಬಳ್ಸಿಬುಡಿ ಬಳಸುತ್ತ ಎಸೆಯಿರಿ
ಕುಯ್ಯುತ್ತಾರೆ ಕತ್ತರಿಸುತ್ತಾರೆ
ಅಕ್ಕಿ ಆಕ್ತಾರೆ ಅನ್ನ ಮಾಡುತ್ತಾರೆ
ಬೇಳೆ ಆಕ್ತಾರೆ ಸಾಂಬಾರು ಮಾಡುತ್ತಾರೆ
ಆರ್ಗೆ? ಯಾರಿಗೆ?
ಮೀಸಲು ಹರಕೆ ತೆಗೆದಿರುಸುವುದು, ನೈವೇದ್ಯವನ್ನು ಮೀಸಲಿಡು
ಎಂಜಲು ದೇವರಿಗೆ ಒಪ್ಪಿಸುವ ಮೊದಲು ಸಿದ್ದಪಡಿಸಿದ ಅಡುಗೆಯನ್ನು ಯಾರು ಸೇವಿಸಬಾರದು
ಸುಳ್ಕೆಂತ ಸುಳಿದಾಡುತ್ತ
ಕತ ಕತ ಕತ ನಡಿಕೊಂಡು ಗಡ ಗಡ ಗಡ ನಡುಗಿಕೊಂಡು
ಕರಿತಾನೆ ಕರೆಯುತ್ತಾನೆ
ಮುರ್ದು ಮುರ್ದಂಚಿ ಮುತ್ಗುತ್ತಾರೆ ಮುರಿದು ಮುರಿದು ಹಂಚಿ ಇಡುತ್ತಾರೆ.
ಕಟ್ಕೊಳ್ಳಕೆ ಕಟ್ಟಿಕೊಳ್ಳುವುದಕ್ಕೆ
ಎತ್ತಕಾಗ್ದೆ ವೋಯ್ತು ಎತ್ತುವುದಕ್ಕೆ ಸಾಧ್ಯವಾಗಲಿಲ್ಲ
ಜಲ್ಜಿ/ಜಲ್ದಿ ಬೇಗನೆ
ಮೀಸೆ ನವ್ರುತ್ತಾರೆ ಮೀಸೆ ತಿರುವುತ್ತಾರೆ
ಗ್ಯೆರ್ಯೆಸಿಗ್ಯಾನ ಮಾಡುತಾರೆ ಯೋಚಿಸಿ ವಿಚಾರ ಮಾಡುತ್ತಾರೆ
ಮಡ್ದಿ ಆಯ್ತಿನಿ ಹೆಂಡತಿಯಾಗುತ್ತೇನೆ
ಕಾಕ ಆಕ್ಬುಟ್ಟು ಕೂಗು ಹಾಕಿ
ಬೆಳ್‌ಮಡ್ಗ್‌ಬುಟ್ಟು ಬೆರಳನ್ನಿಟ್ಟು
ಪೊಣ್ಣನೆ ಚಂಗನೆ
ದುಬ್ನ ಡಬ್‌ ಎಂದು
ಆಗ್ನ ಆಗ
ಕವಡೆಚೀಲ ಶಾಸ್ತ್ರದ ಕವಡೆ ಇಟ್ಟುಕೊಳ್ಳುವ ಚೀಲ
ಕಣಿ ಶಾಸ್ತ್ರ ಹೇಳುವುದು
ದಾಸಯ್ನ ವಾಸಂತೆ ದಾಸಯ್ಯನ ವಶವಾಗಿದ್ದಾಳಂತೆ
ತಾರ್ಮಾರ್ನೆ ಪೇಟೆ ಕಟ್ಬುಟ್ಟು ಆಕಾರದಲ್ಲಿ ಕಟ್ಟುವ ಪೇಟ
ಪಗ್ಡೆಶಸ್ತ್ರ ಪಗಡೆಯನ್ನು ಬಿಟ್ಟು ಹೇಳುವ ಶಾಸ್ತ್ರ
ಆರುಗಚ್ಚೆ ಪಂಚೆ ಹಾರುವರು ಧರಿಸುವ ಕಟ್ಟೆ ಪಂಚೆ ಮಾದರಿ
ಕೋರೆ ಕಳ್ಕಂಡು ಕೋರೆ
ಪುಟ್ಟಾದ ಸಣ್ಣದಾದ ಹೆಜ್ಜೆ/ಪಾದ್ಗದ
ಮಡ್ಗ್‌ಬುಟ್ಟಿತು ಇಟ್ಟಿತ್ತು
ಮುರ್ಕಂಡು ಮುರಿದುಕೊಂಡು
ಒಂದ್ಗಳ್ಗೆ ಒಂದು
ಅಜ್ಜೆಯ ಅಳ್ತೆ ಹೆಜ್ಜೆಯ ಅಳತೆ
ಜಾದು ಕಲ್ಲಂತೆ ಮಾಯದ ಕಲ್ಲು
ಆರುವರಗವಿ ಹಾರುವರ ಗುಹೆ
ಯೇನು-ಸೀರು ಹೇನು-ಸೀರು, ಹೇನು ಮತ್ತು ಹೇನಿನ ಮೊಟ್ಟೆ
ಯೆಣ್ಣಿನ ತೆರ್ವ ಹೆಣ್ಣಿಗೆ ಕೊಡುವ ದಕ್ಷಿಣೆ