ಮೆಲ್ ಮೆಲ್ಗೆ ಯಿಂಗೆ ಬತ್ರಾನೆ
ಅವ್ರು ಬುಡ್ ಬುಡ್ಕಿ ವೇಸ ಅಂದ್ರೆ
ಬುಡ್ ಬುಡ್ಕಣ್ಣ ಬುಡವೆ ಸಣ್ಣ
ಸೋಲಿಗರ ಬೋಮ್ಮೆಗೌಡ್ನ ಮಗಳ ನಡುವೆ ಸಣ್ಣ
ಆಹಾ ಯಾವ್ದಿದು ಬುಡ್ ಬುಡ್ಕಣ್ಣ
ಸೋಲಿಗರ ಬೊಮ್ಮೆಗೌಡ್ನ ಮಗಳ ನಡ್ವೆ ಸಣ್ಣ
ಅಂತ ಸಾರ್ಕೊಂಡು ಬತ್ರಾರಲ್ಲ
ಅಯ್ಯೋ ಅಡೇನಪ್ಪ ದಾಸಪ್ಪ ಬಪ್ಪ ಬಪ್ಪ
ನೀವಾರು ನೀವು?
ಬುಡ್ ಬುಡ್ಕ್ಯಮ್ಮ
ಬುಡ್ ಬುಡ್ಕ್ಯೇವ್ರು ನಾವು ಗುಟ್ಟಿಟ್ಟಿ…… ಸಾರವ್ರು
ಅದೆಂಗಪ್ಪ ನೀವೆಳ್ದದು
ಸೋಲಿಗರ್ ಬೊಮ್ಮೆಗೌಡ್ನ ಮಗ್ಳ
ನಡ್ವೆ ಸಣ್ಣ ಅಂತ ಅದೆಂಗೇಳ್ದೆ
ಕಾಡೋಳಗಿದ್ದಾರೆ
ಊರೋಳಗಿದ್ದಾರೆ
ನಡುಸಣ್ಣದ ಕುಸ್ಮದೇವಿ
ಅದನ್ನಾನು ಕಂಡ್ಬುಟ್ಟು ಬಂದಿದ್ದೀನಿ
ಅದಕ್ಕೋಸ್ಕರ ಬುಡ್ ಬುಡ್ಕ್ಯವ್ರು
ಯೇಳ್ತಾರೆ ಕೇಳ್ರಪ್ಪ ಅಂದದು
ಅಯ್ಯೋ ನಮ್ಮಪ್ಪ ನೀನಾದ್ರು
ಪತ್ತೆ ಮಾಡ್ ಕೊಡ್ಬೇಕು
ನಿನ್ಗ ನಾವು ಏನಾದ್ರು
ಅಟ್ಟಿದನ ಇಲ್ಲ
ಅಟ್ಟಲಿ ಕರ ಇಲ್ಲ
ಹುಂಡಿಲ್ಲ
ಬಂಡಿಲ್ಲ

ನಿನ್ಗೆ ಮಾರ್ಯಾರು ಕೊಟ್ಬುಡಕೆ……

ಮಣ್ಣಿನ್ ಗಡ್ಗೆ ಒಳ್ಗೆ ನೀರ್ ಕುಡಿಬೇಕಪ್ಪ
ಬುಡ್ ಬುಡ್ಕಿ ವೇಸದವ್ರೆ
ದಾಸಪ್ಪನವ್ರೆ ನೀವು

ನಂಗೊಂದು ಉತ್ಸವ್ ಕೊಡುಬೇಕು sss || ತಂದಾನ ||

ಆಹಾ ಪಾಪ ಕುಡಿಯೋಕೆ
ನೀರ್ಗೆ ಮಣ್ಣ ಕರ್ಗೆಯನ್ನು ನಾಡೋಳ್ಗೆ ತರ್ಬೇಕು
ಅದ್ರಲ್ಲಿ ಕುಡಿಬೇಕು ಸಾಸಿವೆ ಸೊಪ್ಪ ತಿನ್ನಬೇಕು
ಎಡ್ಡನ ಕೀರೆಸೊಪ್ಪ ತಿನ್ಬೇಕು
ಪೋಡ್ಗಿ ಗೆಡ್ಡೆಗೆಣಸ್ನ ತರ್ಬೇಕು
ವೊಟ್ಟೆ ತುಂಬ ಉಂಡ್ಕಂದ್
ಮನ್ಗ್ ತ್ತಿದ್ದಂತ ಮಗ್ಳು ಈಗ ವೋಗ್ಬುಟ್ಟ
ಬುಡ್ ಬುಡ್ಕ್ಯೇವ್ರೆ ಅಂದ್ರು
ಅವ್ರನ್ನ ಬರ್ ಮಾಡ್ಬುಡ್ತಿನಿ
ಏನೇನ್ ಕೊಡ್ಬೇಕು ಅಂದ್ರೆ
ಮ್ಯಾ ಎಂಬ ಆಡ್ ಕೊಡ್ಬೇಕು
ನಮ್ಮಪ್ಪ ಮರಿ ಅಂದ್ರೆ ಏನಪ್ಪ
ನಾವು ಅಂದ್ರು ಏನಪ್ಪ
ನಮ್ಮಿಂದಾಗಲಪ್ಪ
ಮರಿ ಇಲ್ದ ಮೇಲೆ ನಮ್ಗಳ್ಗೆ ರಂಗ ಆಕಕಾಗಲ್ಲ
ಪೋಡ್ಲಿರೊ ಮನೇಲಿ ರಂಗ ಆಕಕಾಗಲ್ಲ
ಅದ್ಕೆ…… ಎಪ್ಪತ್ತೇಳು ಮಂಡಲ ಬರ್ದು
ಗಾಳಿ ಗಾಚಾರ
ದಾಸಯ್ಯ ಕರ್ಕೊಂಡೋದ್ರು
ಅಂದರು ಸಾಸ್ತ್ರದಲ್ಲಿ ಸುಳ್ಳು
ದಾಸಪ್ಪ ನಿನ್ನ ಮಗಳೇಕಪ್ಪ ಕರ್ಕೊಂಡೋದದು

ಅಯ್ಯ ದಾಸಯ್ಯ ವೇಸದssss
ಈಸರು ನೋಡಿಲ್ಲssss
ದಾಸಯ್ಯ ವೇಸ ನೋಡಿರಪ್ಪsss || ತಂದಾನ ||
ಅಯ್ಯ ದಾಸಯ್ಯ ಮಾತೆಲ್ಲ
ಕುಣಕ್ಕೊಂಡು ನಾರಾಯ್ಣ
ಬೊಮ್ಮೆಗೌಡ್ರ ಪೋಡಿಗೆ ಬರುತ್ತಾರೆsss || ತಂದಾನ ||

ಏಯ್ ಈ ದಾಸಯ್ಯ ಮಾತೇನು ಕಟ್ಟೇಡಿ.
ಈ ಬುಡ್ ಬುಡ್ಕ್ಯವ್ರ ಮಾತೇನು ಕಟ್ಟಕಾಗಲ್ಲ
ಪೋಡು ಪೊನ್ನಾಚಿ ಒಳ್ಗೆ ಒಬ್ಬ ಉಡ್ಕಬೇಕು
ನಮ್ಮ ಜಾತಿಯವ್ರು ಇದ್ರೆ ಅಲ್ಲೆಲ್ಲಾರ ಒಂಟೋಯ್ತರೆ
ಕಳ್ಳರ ಬೆಟ್ಟ
ಕಾಳಮಾರಿ
ಮಲ್ಕಿಬೆಟ್ಟ
ಕೊಳ್ಗಬಾವಿ
ಬೆಜ್ಜಗುಂಡಿ
ದೊಡ್ಡ ಸಂಪ್ಗೆ ಪೋಡು.
ಎಲ್ಲಾ ಪೋಡೆಲ್ಲಾ ನೋಡ್ಕ ಬಂದ್ರು
ಏನಮ್ಮ ಕುಸ್ಮದೇವಿ ಬಂದಿದಳಪ್ಪ
ಅಯ್ಯಯ್ಯೋ ಇಲ್ಲಿಗ್ಯಾಗಪ್ಪ ಬಂದ್ರು
ಆಹಾ ಬೊಮ್ಮೆ ಗೌಡ್ರ
ಅವ್ರು ಬರರ್ಲಿಲ್ಲ ಕಾ ಮಾವ
ಅವ್ರು ಬಂದಿದ್ರೆ ನಾವು ಬುಡ್ನಿಲ್ಲ ಮಾವ
ನಾವ್ ಬುಡ್ನಿಲ್ಲ ಬಾವ ಅಂದ್ರು
ಅಯ್ಯಯ್ಯೋ ಮತ್ತೇನಪ್ಪ ಅಂದ್ರು

ನೀನೊಂದು ಮೊರ ಸಾಸ್ತ್ರ ಬುಡಪ್ಪsss

ಒಂದ್ ಮೊರ ನೀ ಬುಡು
ದಾಸೇಗೌಡ ನನ್ ಮಗ ಎಲ್ಲೋ……
ದಾಸೇಗೌಡ್ರ ಅಟ್ಟಿ ಒಳ್ಗೆ ಸಾಸ್ತ್ರ ಬುಟ್ಟಾಗ

ದಾಸಯ್ಯ ವಾಸ ಆಗಿದ್ದಾಳೆ sss || ತಂದಾನ ||
ಅಲ್ಲಿ ದಾಸಯ್ಯ ವಾಸ ಆಗವ್ಳೆssss
ಅವ ಕುಸ್ಮದೇವಿ ನಿಮ್ಗ ಸಿಕ್ಕಿದಿಲ್ಲsss || ತಂದಾನ ||

ಕುಸ್ಮದೇವಿಯವ್ರು ಸಿಕ್ಕಿಲ್ಲ
ಯಾಕ ನೀವು ಸಾಕಾದ್ರಿ
ಅವ್ರು ನೋಡಿದ್ರೆ ದೇವೆಂದ್ರನಂತೆ
ದೇವಗಂತಿ, ದೇವೇಂದ್ರನ ಮಗ
ದೇವಗಂತಿ ಕುಸ್ಮದೇವಿ
ಅವ್ರು ಹೋಗಿ ಸೇರಿದ ಸ್ತಳ ನನ್ಗೂ ಗೊತ್ತಿಲ್ಲ
ನಿನ್ಗೂ ಗೊತ್ತಿಲ್ಲ
ನೀಲ್ಗಿರಿ ಕೈಲಾಸ್ದಲ್ಲಿ
ಅವ್ರು ಅನುಮಂತನ ಗವಿ ಒಳಗಿದ್ದಾರೆ

ಅವ್ರು ಇದ್ದು ಬುದ್ಧಿಯ ಹೇಳುತ್ತಾರೆsss || ತಂದಾನ ||
ಇದ್ದು ಬುದ್ಧಿಯ ಯೇಳ್ತಾರೆ ನಾರಾಯ್ಣsss
ಬುದ್ಧಿ ಕಾರ್ಯವ ಯೇಳುತ್ತಾರೆsss || ತಂದಾನ ||

ಬುದ್ದಿ ಕಾರ್ಯವ ಯೇಳ್ಬುಟ್ಟು ಏನ್ ಮಾಡ್ತ ಇದ್ದಾನೆ?
ನಿನ್ನ ಮಗ್ಳ ಉಡ್ಕಬೇಕಾದ್ರೆ ನಾನೇ ನಿಮ್ಮಿಬ್ರಿಂದಾಗಲ್ಲ
ಯಾವ್ಯಾವ ಪೋಡ್ ವೋಗಿದ್ದಯ್ಯ?
ಮೊಬ್ಬೆಗೌಡ್ರೆ ಯಾವ್ ಪೋಡ್ ವೋಗಿದ್ರಿ?
ಅಯ್ಯಯ್ಯೋ ದಾಸಪ್ಪ ಕಾಳಮಾರಿ
ಕಳ್ಳರಬೆಟ್ಟ
ಸೀಗೆಬೆಟ್ಟ
ಮಂಜಿಗುಂಡಿ
ಪುರಾಣಿ
ಅಲ್ಲಿಂದ ವೋಗಿ ದೊಡ್ಡ ಸಂಪ್ಗೆ ಪೋಡ್ನೆಲ್ಲ
ಉಡ್ಕುದಿ ಎಲ್ಲೂ ಇಲ್ಲ
ನೀ ಯಾಕಪ್ಪ ಬೊಮ್ಮೆಗೌಡ್ರ ಸಾಕಾದರಿ
ನಿನ್ನ ವೊಟ್ಟೆಪಾಡ್ ನೋಡ್ಕ ನೀನು
ಅವ್ರು ನಿನ್ ಕೈಗೆ ಸಿಕ್ಕಲ್ಲ ಇನ್ನು

ಅವ್ರು ಕಂಬ್ರಿ ಗುಡ್ದಲ್ಲಿ ಇರುತ್ತಾರೆsss || ತಂದಾನ ||
ತಿಂಗಾಳು ಮುಣುಗಿದವೊssss
ರಂಗೋಲಿ ಬೆಳಗಿದವೋssss
ಎಡ್ಚರಿ ತೊಳಸಮ್ಮsss
ಬಲ್ಚರಿ ಲಕ್ಸಮ್ ದೇವಿsss
ನೆಟ್ಟ ನಡುವೆ ನಾರಾಯ್ಣ ಕೂತುಕೊಂಡು sss || ತಿಂಗಳು ||
ಗೊನೆಬಿಟ್ಟು ರಂಗಯ್ಯsss
ತಿಂಗಳು ಪೂಜೆ ನಿನಗಾದುsss
ಅಳ್ಳ ಕೊಳ್ಳಿರಯ ನೀರು
ಬೆಳ್ಳೀಲಿ ಕಯ್ಯ ಚಂಬುsss
ಇಲ್ಲಿ ರಂಗಯ್ಯ ಸಿವಪೂಜೆsss || ತಿಂಗಳು ||

ಇಲ್ಲಿ ರಂಗಯ್ಯನಂತೆ

ಸಿವಪೂಜೆ ನಡಿವಾಗsss
ಆಕಾಸೆ ಗಂಗೆ ಗಣಿರೆಂದೋ sss || ತಿಂಗಳು ||

ನಾರಾಯಣ ಮೂರ್ತಿಯವ್ರು

ಅವ್ರು ಕಿಸ್ಣನ್ ಕಟ್ಟೇಲ ಕೂತಿದ್ದಾರೆsss|| ತಂದಾನ ||

ತಾಯಿಯವ್ರು ಏನಾಂದ್ರೆ
ಬೆಂಗಳೂರು
ಬೀರಳ್ಳಿ
ಹೆಗ್ಗಡದೇವನ ಕೋಟೆ
ರಂಜಕಲ್ಲು
ಪಿರಿಯಾಪಟ್ಣ
ಯಳಂದೂರು ಎಲ್ಲಾ ಉಡುಕುದ್ರು
ಈ ದಾಸ್ಗಳು ಸಿಕ್ನಿಲ್ಲ
ಅಯ್ಯಯ್ಯೋ ದಾಸ್ಗಳು
ನಾವು ವೈದಿಕ ಮಾಡ್ಬೇಕಾದ್ರೆ
ಏನೇನ್ ಆಗ್ ಬೇಕಪ್ಪ ಅಂದ್ರೆ
ಐದು ಮಂದಿ ದಾಸ್ರಾಗಬೇಕು
ಒಂದ್ ದಾಸಪ್ಪ ಸಿಕ್ ಬುಟ್ರೆ ನಂಗೆ
ದಾಸೋಹ ಮಾಡ್ಬೇಕಲ್ಲ ಅಂತಯೋಚ್ನೆ ಮಾಡ್ತಾ ಬರ್ತಾಯಿದ್ರು
ದಾಸ್ಗಳೆ ಇಲ್ಲ
ತಲೆ ಮ್ಯಾಲೆ ಸೆರ್ಗಟ್ಗೋ ಬರ್ವಾಗ
ಕಿಸ್ಣನ ಕಟ್ಟೇಲಿ ಕೂತಿದಾರೆ ದಾಸಪ್ಪೋರು
ಗಡ್ಡ ನೋಡುದ್ರೆ ಗೊಬ್ಳಿ ಮುಳ್ಳು ಮಾಡ್ಕಂಡು
ಗೊಬ್ಳಿ ಮೂಳ್ನಾಗ್‌ ಬಿಟ್ಕಂಡು ಕುಂತವ್ರೆ
ಚೋಳ್ಗಯಿಡ್ಕಂದ್‌ ಕುಂತವ್ರೆ
ಇಲ್ಲಿ ಕುಂತವ್ರೆ ನೋಡಕ್ಕ ದಾಸ್ಗೋಳು
ಯಾವೂರಪ್ಪ ದಾಸಪ್ಪ ಅಂದ್ರು
ಮಲಿಗಿರೊ ನಾರಾಯಣ ಎಲ್ಲಮ್ಮ ಹೋಗಿದ್ರಿ?
ಅಯ್ಯೋ ನಮ್ಮ ದಾಸಪ್ನಟ್ಟಿಲಿ
ನಮ್ಮ ಯಜಮಾನ್ರು ತಿರ್ಕೊಂಡು ನೋಡಪ್ಪ ದಾಸಪ್ಪ
ಅನ್ನೇಡ್ ದಿವ್ಸ ಕರಟ್ಟಾಯ್ತು
ವೈದಿಕ ಮಾಡ್ಬೇಕು ಈವೊತ್ತು
ನೀನು ಬರ್ಬೇಕು ದಾಸಪ್ಪ
ದಾಸಪ್ನ ಉಡ್ಕಿ ಉಡ್ಕಿ ಸಾಕಾಗೊಯ್ತು
ಏನಮ್ಮ ನೀವ್ ನೋಡಿದ್ರೆ ವಯ್ಸಾದುಡ್ಗೀರು
ನಿಮ್ಮ ಜೊತೆ ನಾ ಬರಕಾಗಲ್ಲ
ನೀವ್ ಮುಂದೆ ಮುಂದೆ ನಡಿರಪ್ಪ
ನಾನು ಯಿಂದಿಂದೆ ಬರ್ತೀನಿ ಅಂದ್ರು
ಅಕ್ಕ ಓಡ್ಬುಟ್ರೆ ಕಸ್ಟ ಮುದ್ಕಪ್ನ ನಂಬಕಾಗಲ್ಲ
ದಾಸಪ್ಪ ಬೊಳ್ಳ ಬೊಳ್ಳಗೆ ಕರ್ಕಂಡೋಯ್ತಿನಿ ಬಪ್ಪ
ಇಲ್ಲ ನಡ್ರವ್ವ ನಾ ಯಿಂದಿಂದೆ ಬರ್ತೀನಿ ಅಂದ್ಬುಟ್ಟು

ಮೆಲ್ ಮೆಲ್ಗೆ ದಾಸಪ್ಪ ಬರುತ್ತಾರೆsss || ತಂದಾನ ||
ಮೇಲ್ ಮಲ್ಗೆ ದಾಸಪ್ಪ ಬರ್ತಾನೆsss

ಆಹಾ!
ದಾಸಪ್ಪ ಬರ್ತಾನೆ ಅಂದ್ಬುಟ್ಟು
ಎಡ್ಕ ಬಲ್ಕ ನೋಡ್ಬುಟ್ಟು
ಆಗ ನಾರಾಯ್ಣ ಎಲ್ಲಿ ಕುಂತಿದ್ದಾರೆ?

ಅವ್ರು ಕುಂಬಾರ ದೇವಪ್ನ ಕೊಳದಲ್ಲಿ ಕುಂತಿದ್ದಾರೆsss || ತಂದಾನ ||

ಸಾವಿರ ಬೀದಿ ನಡುವೊತ್ತಿಗೆ ನಡುವೆ ಕುಂತುಬುಟ್ಟಿದ್ದಾರೆ
ಅಲ್ಲಪ್ಪ ಯಾವಾಗ ಬಂದ್ಯೆಪ್ಪ ಮುದ್ಕಪ್ಪ
ಅಯ್ಯಯ್ಯೋ ತಾಯಿ
ನಿಮ್ಮೊಂದ್ಗೆ ಬಂದೀಕಾಣಮ್ಮ ನಾನು
ಲಚ್ಚಮಿ ಯಾವ್ ನ್ಯಾರಕ್ ಬಂದ್ನಕ್ಕ
ಅರಿನಾರಾಯಣಣ್ಗೆ ಗೊತ್ತು ನಂಗೊತ್ತಿಲ
ಅಯ್ಯ ವಂದ್ಗೆ ನಡಿಯಪ್ಪ
ಆನೆ ಬರ್ತದೆ, ಉಲಿಬತ್ರದೆ
ಅಮ್ಮ ನನ್ ಮಂಡಿಯೆಲ್ಲಾ ಕಟ್ಟೋಗ್ ಬುಟ್ಟಿದೆ
ನನ್ಗ ನೇತ್ರ ಕಾಣಲ್ಲ
ತಪ್ರ ಸಾಡ್ಕಂಡು ಬತ್ತಿನಿ
ನನ್ನ ದಾಸಪ್ನ ನಾರಾಯ್ಣ
ವೈದಿಕ ಅಂದ್ರೆ ತುಂಬಾ ಆಸೆ
ನಾನ್ ಬಂದು ದಾಸೋಹ ಮಾಡ್ತಿನಿ
ನಡ್ರಮ ಅಂದ್ಬುಟ್ಟು ಬಂದು

ಅಮ ವೈರು ಮುಡೀಲಿ ನಿಂತಿದ್ದಾನೆsss || ತಂದಾನ ||

ವೈರ್ ಮುಡಿ ನಾಗಾಳ ಬರವೊತ್ತಿಗೆ
ಇತ್ರಿಬುರ್ಗಿ ಮ್ಯಾಲೆ ಕೂತಿದ್ದಾನೆ
ಅಪ್ಪ ಇಂತ ಮಾಯದವ್ರು ಎಲ್ಲೂ ಇಲ್ಲ
ಯಾರಕ್ಕ ಇವ್ರು
ಆಗ ಏನ್ಮಾಡ್ತ ಇದ್ದಾರೆ?
ಅನ್ನ ಬೆಳೆ ಪಾಯ್ಸ ಎಲ್ಲಾ ಮಾಡಿ
ದಾಸೋಹ ಮಾಡ್ಬೇಕು
ಹೋಗಪ್ಪ ಪೂಜೆ ಮಾಡಿ ಅಂದ್ರು
ಆಗ ಇರೊಂಬತ್ ಕೋಟಿ
ಜೀವರಾಸಿಗಳೆಲ್ಲಾ ಪೂರಾ ಕರ್ದುಬುಟ್ರು
ಕರ್ದುಬುಟ್ರು ಮಾಡಿದನ್ನವೆಲ್ಲಾ
ಮಾಯಾ ಆಗೋಯ್ತು
ಅಟ್ಟ ಅನ್ನವನ್ನೆಲ್ಲಾ ಉಟಮಾಡ್ಬುಟ್ಟು

ಅಂತ ಬುಗ್ ಬುಗ್ನ ಸಂಕ ಊದುತ್ತಾರೆsss || ತಂದಾನ ||
ಬುಗ್ ಬುಗ್ನೆ ಸುಂಕ ಊದ್ಕಂಡು ನಾರಾಯ್ಣsss
ಊಟ ಮಾಡಿದರೆ ಬನ್ನಿರಯ್ಯsss || ತಂದಾನ ||

ಅನ್ನೇಡ್ ಕೌಳ್ಗೆ ಬಾಳೆ ಎಲೆ ತರ್ಬೇಕು
ದಾಸೋಹ ಮಾಡ್ಬೇಕಾಗಿದ್ರೆ
ಸ್ವಲ್ಪ ಅಂದ್ಬುಟ್ಟು ಊಟ ಮಾಡಿದ್ರು
ಮಾಯ ಆಗೋಗ್ ಬುಡ್ತು
ಏ ಮಡ್ಡೀರೆ ನನ್ನ ವೈದಿಕ ಮಾಡ್ಬೇಕಾದ್ರೆ
ನೀವಂತವ್ರಾಗಿರಬೇಕು ಅಂದುಟ್ಟು
ಈ ವೈದಿಕ ಆಗ್ಬೇಕಾದ್ರೆ
ನಾನು ತಿಸ್ಣ ಮಾಡ್ದಂತವ್ರಿಗೆಲ್ಲಾ

ಒಂದು ಅಲ್ಲೊಂದು ಉತುಪತಿ ಆಗುತ್ತದೆsss || ತಂದಾನ ||
ಆಡಿರ ರಾಗಗಳ ಅಚ್ಚಿರಿ ದೀಪಗಳsss
ವೈಕುಂಟ ರಂಗಯ್ಯsss
ಬಿಳಿಗಿರಿಯಲ್ಲಿsss
ಬಂದು ನೋಡಯ್ಯ ಬಕುತರ || ಆಡಿರಿ ರಾಗಗಳ ||
ರಂಗಯ್ಯ ಬಾಗಿನಲ್ಲಿsss
ಬಿಳಿ ಸಂದಾದರ ರಂಗೋಲಿsss
ರಂಗಯ್ಯ ಬಾಗಿನಲ್ಲಿsss
ಬಿಳಿ ಸಂವಾದ ಗೋಲಿsss
ರಂಗಯ್ನ ಗುಡಿಯಲ್ಲಿ sss
ಇಲ್ಲಿ ಸಂವಾದ ರಂಗೋಲಿsss
ಸ್ವಾಮಿ ಕಾದಿಗೆ ಮಲ್ಲಿ ತರುವರು sss || ಆಡಿರಿ ರಾಗಗಳ ||

ಸ್ವಾಮಿಗಳವರಿಗೆ ಸಂಕು ಆರತಿ ಬಂತು
ಅಂದ್ರೆ ರಂಗೋಲಿ ಬಿಡ್ ಬೇಕಾದ್ರೆ
ನೀನವ್ವ ನಾನಲ್ಲ
ನಾಚನಟ್ಟಿ ಇರೊಂಬತ್ತು ಕೋಟಿಗಳು
ರಂಗೋಲಿ ಬಿಡ್ತಾ ಇದ್ದಾರೆ
ಕಾಲಿಗೆ ಮುಳ್ಳು ತಗುಲ್ ಬುಡ್ತದೆ ಅಂದ್ಬುಟ್ಟು
ಮಾಯಾಮೃಗ ಇಡಿಬೇಕಲ್ಲ
ಅದಕ್ಕೋಸ್ಕರದಿಂದ ಅವ್ರು
ಕಾಲಿನ ಮುಳ್ಳಿಗೆ ಕಗ್ಗಲಿದಸಿ
ಕಾಡ್ ದಸಿ ಇದೆ ಅಂದ್ಬುಟ್ಟು
ಅವ್ರು ಕಾಲ್ ದಸಿ ತೆಗಿತ ಅವ್ರೆ

ಅವ್ರು ಅಂದ್ಕೊಂಡು ರಂಗೋಲಿ ಬಿಡ್ತ ಅವ್ರೆsss || ತಂದಾನ ||
ಸಂಕದಾರ್ತಿ ಬಿಡ್ತಾ ಇರ್ಯೋರ್ಯಾರುsss

ನರ್ಸಮನ್ಸರಲ್ಲ……

ಇರ ಬಿಡ್ವಂತದ್ದು ರಂಗೋಲಿ ಬಿಡ್ತಯಿದೆsss
ಅದು ಮಹಾರಾಣಿಗೆ ರಂಗೋಲಿsss

ಮಲೆಮಾದಪ್ಪನಿಗೆ ರಂಗೋಲಿ
ದೇವಾ ದೇವತೊನವರಿಗೆ ಸಂಕ್ರಾಂತಿ
ಟೈಮ್ನಲ್ಲಿ ಬಿಡ್ತಾ ಇರೋದು
ನಾಚನಟ್ಟಿ ಮೆಚ್ಚಿದಂತ ರಂಗೋಲಿ
ನಮ್ಮ ಅರಿನಾರಾಯಣ್ಣಿಗೆ ರಂಗೋಲಿ, ರಂಗೋಲಿ

ಗೋವಿಂದ ನೆsss || ತಂದಾನ ||
ಗೋಪಾಲ ಕಿಸ್ಣsss || ತಂದಾನ ||
ರಾಮ ರಾಮsss || ತಂದಾನ ||

ಪಾರ್ವತಿ ಆರ ಆರ ಮಹಾದೇವ ಸಂಬೋ
ರಂಗಯ್ಯ ಬರ್ವಾಗ…. .

ಚೆನ್ನ ನಾರಾಯ್ಣ ಬರುತ್ತಾರೆsss || ತಂದಾನ ||
ಅಲ್ಲಿ ಬತ್ತವ್ರೆ ಇಲ್ಲಿ ನಿಂತವರೆsss
ಬೊಮ್ಮೆಗೌಡ್ನ ಪೋಡಿಗೆ ಬರುತಾರೆsss || ತಂದಾನ ||
ಆಹಾ ಬೊಮ್ಮೆಗೌಡ್ನ ಪೋಡಿಗೆsss
ಬತ್ತವ್ನೆ ನಾರಾಯ್ಣsss
ಟುಮ್ಮ ಟುಮ್ಮನೆ ಸ್ವಾಮಿ ಕುಣಿತಾನೆsss || ತಂದಾನ ||
ಅವ್ರು ಟುಮ್ಮಟುಮ್ಮನೆ ಕುಣ್ಕಂಡು ಬರ್ವಾಗsss
ಏನ್ ದಾಸಯ್ಯ ನಿನ್ ಸಂಪತ್ತು sss || ತಂದಾನ ||

ಅಲ್ಲ ದಾಸಯ್ಯ ನೀನೇನಯ್ಯ
ಸಂಪತ್ತು ಬಂದ್ಬುಡ್ತು
ನಾನೆ ನನ್ನ ಮಗ ವೋದ್ಮೇಲೆ
ವೊಟ್ಟುರ್ಕಂದು ನಾ ಕುಂತಿದ್ದೀನಿ
ನಿನ್ಗ್ಯಾಕಯ? ನೀನು ಇಸ್ಟೊಂದ್
ದುಕ್ಕ ಮಾಡ್ತಿಯೇ ಬಾರಪ್ಪ ಬೊಮ್ಮೆಗೌಡ್ರೆ
ಯಾಕಪ್ಪ ಬೊಮ್ಮೆಗೌಡ್ರೆ
ಅಯ್ಯೊ ನಮ್ಮನೇಲಿ ಕುಸ್ಮದೇವಿ ವೋಗಿ
ಈವೋತ್ತಿಗೆ ಒಂಬತ್ ದಿವ್ಸ ಆಯ್ತು
ಅದ್ಕೆ ನೋಡಪ್ಪ ಉಡ್ಕ್‌ತ ಇದ್ದೀನಿ
ನೀನ್ ಬಂದು ಕುಣಿತಾ ಇದ್ದಿಯಲ್ಲ
ಎಲ್ಲೋ ಕುಸ್ಮದೇವಿಯನ್ನು ಕಂಡಂಗಿತ್ತಪ್ಪ ನಾನು
ಚಿಕ್ರಂಗಿ ದೊಡ್ರಂಗಿ ಎಲ್ಲೋ ನೋಡ್ದಾಂಗಾಯ್ತು
ಎಂದ್ಬುಟ್ಟು ನಾರಾಯ್ಣ ಮೂರ್ತಿಯವ್ರು ನುಡ್ದವ್ರೆ

ಅವ್ರು ಪಾರಿವಾಳ್ದ ಗವಿ ಒಳ್ಗೆ ಬಿಡುತಾರೆsss || ತಂದಾನ ||

ಪಾರಿವಾಳದ ಗವಿ ಒಳ್ಗೆ ಬಿಟ್‌ಬಿಟ್ಟಿದ್ದಾರೆ
ಈ ದಾಸಪ್ನಿಗೆ ಏನು ಅಂದ್ರೆ ಬಾರಿ ತಮಾಸೆ
ನೀ ನಂಗೆ ತಮಾಸೆ ಆಡ್ದ್‌ರೆ ಬೊಮ್ಮೆಗೌಡ್ನಿಗೆ ಬಾರಿ ದುಕ್ಕ
ಎಂಗ ದುಕ್ಕ ಅಂದ್ರೆ ನನ್ನ ಮಗು ಕುಸ್ಮದೇವಿ ವೋಗ್ಬುಟ್ಟ ಅನ್ಬುಟ್ಟು

ಗೋಳು ಗೋಳನೆ ಸೋಕಮಾಡಿsss
ಸೋಲಿಗರ ಬೊಮ್ಮೆಗೌಡsss
ಯೆಂಡ್ತಿ ಮಕ್ಳೆಲ್ಲಾ ಅಳುತಾರೆsss
ಬಾ ನನ್ನ ರಂಗಯ್ಯsss
ಬಡವರ ಗೋಳಯ್ಯsss
ನಿನ್ನ ಪಾದಕ್ಕೆ ಅರುವಲು…. .
ಬಂದು ನೋಡಯ್ಯ ನಾರಾಯ್ಣsss
ಬಾ ನನ್ನ ರಂಗಯ್ಯ sss ||ಬಾ…. .||
ಅಡವಿಯ ಒಳಗಂಜಿsss
ಬಿಡುವಿನ ಒಳಗಂಜಿsss
ಹಳ್ಳ ಕೊಳ್ಳಿಯಲ್ಲಿ ನಿಲ್ಲುತ್ತಾರೆsss
ವನ್ನು ಗಾಣಿಕೆ ಕಟ್ಟುತಾರೆsss
ಬಾ ನನ್ನ ರಂಗಯ್ಯ sss ||ಬಾ…. .||
ಮೇಲುಗಿರಿಯಿಂದ ಬರುತಾರೆsss
ಬಾ ನನ್ನ ರಂಗಯ್ಯ sss

ಆಗ ರಂಗಪ್ಪನವ್ರು ಏನ್ಮಾಡ್ತಾರೆ
ಈ ದುಕ್ಕ ಮಾಡವೊತ್ತಿಗೆ ಬಂದ್ಬುಡ್ತಾರೆ
ಆಗಲಗಾತ್ರ ಸಂಕು
ಮುಗಿಲ್ ಗಾತ್ರ ಜಾಗ್ಟೆ ವತ್ಕಂಡ್ ಬಂದ್ಬುಟ್ಟಿದಾರೆ
ಅಯ್ಯೋ ದಾಸಪ್ನೋರೆ ಯಾಕಯ್ಯ ಸಂಪೊತ್ ಪಡ್ತಿಯ
ನೀನು ನಿನ್ನ ಸಂಪತ್ ಸಿರಿಯಲ್ಲ ನಗ್ಗಿ ನುಗ್ಗೆ ಕಾಯಿ ಆಗೋಗ
ನಮ್ಯಾಕಯ್ಯ ವೊಟ್ಟುರಿಸ್ತಿಯ
ಆಹಾ!
ನಿನ್ನ ಮಗ ನೋಡಿದ್ರೆ
ನೋಡಿದ್ರೆ ದಾಸಪ್ನ ವಾಸ ಆಗ್ಬುಟ್ಟಿದ್ದಾಳೆ
ಯಾಕ್ ಬೊಮ್ಮೆಗೌಡ್ರ ಆಳ್ತಾ ಇದ್ದೀರಿ

ಅವ ಎಂದಿದ್ರು ದಾಸಯ್ಯನ ವಾಸ ಆಗುತಾಳೆsss || ತಂದಾನ ||

ಎಂದಿದ್ರು ದಾಸಯ್ಯ ವಾಸ ಆಗ್ತಾಳೆ
ಇದಕ್ಯಾಕಯ್ಯ ನೀನು ದುಕ್ಕ ಮಾಡ್ತೀಯ ಅಂದ್ರು
ಅಯ್ಯಯ್ಯೊ ನಿನ್ನ ವೊಟ್ಟೆಕಿಚ್ಚ ನೋಡ್ರಪ್ಪ
ಯಾಕಪ್ಪ ದಾಸಯ್ಯ ಈಗಾಡ್ತಿಯ ಅನ್ನುವಾಗ
ಪತ್ತೆ ಮಾಡಿ ನಾಳೆ ಕೊಡ್ಬುತಿನಿ
ನನ್ಗೇನು ಕೊಡ್ತಿರಯ ಯೇಳು
ಈಗ ನೋಡಪ್ಪ…. .ಮುದ್ಕಪ್ಪ
ಬಾಳೆಕಾಯಿ, ಕಿತ್ಕೊ ದಾಸಪ್ಪ ಬದ್ನೆ ಕಾಯಿ ಕಿತ್ಗೊ
ನನ್ಗೆ ಅದೆಲ್ಲಾ ಬೇಕಿಲ್ಲ

ಆ ಕುಸ್ಮದೇವಿಯ ಕೊಡುತಿಯಾsss || ತಂದಾನ ||
ಕುಸ್ಮದೇವಿಯ ಬಿಕ್ಸೆಯ ಕೊಟ್ಟರೆsss
ಬಾಳ ಪುಣ್ಯ ಬರುತದೆsss || ತಂದಾನ ||
ಮೇಲುಗಿರಕೆ ಕುಸ್ಮಾಲಿ ಬಂದರೆsss
ನೀನು ಬಾಳಬಾಗ್ಯವೆ ಬರುತದೆsss || ತಂದಾನ ||

ಅಯ್ಯಯ್ಯೋ ಈ ದಾಸಪ್ನೋರು
ಕುಸ್ಮದೇವಿಯನ್ನೆ ಕೇಳಿದರಲ್ಲಪ್ಪ
ಏನಪ್ಪ ಮಾಡದು ಅಂದ್ಬುಟ್ಟು
ಸೋಲಿಗರ ಬೊಮ್ಮೆಗೌಡ್ನೋರು
ಅಕ್ಕ ತಂಗಿ ಬಾರಿ ದುಕ್ಕ ಮಾಡ್ತ ಇದಾರೆ
ಕಿರಿ ತಂಗಿ ಒಂಟೋಗ್ಬುಟ್ಟ ಅಂದ್ಬುಟ್ಟು
ದುಕ್ಕ ಮಾಡ್ಕಂದ್ ಏನಪ್ಪ ಮಾಡದು
ದಾಸಪ್ಪ ಈಗ ಕೇಳ್ತಾನೆ ಅಂದ್ಬುಟ್ಟು
ನಮ್ಮ ಗಂಗಾದರಪ್ನ ಹುಡಿಗೆ ವೋಗ್ಬುಟ್ಟು ನಾವು
ಗಂಗಾದರಪ್ನ ಗುಡಿಗೆ ವೋಗಿ
ಪ್ರಸಾದ ಕೇಳಿದ್ರ ಕೊಟ್ಬುಡ್ತಾರೆ
ಅಡ್ವಿ ಒಳ್ಗೆ ಇದ್ದೊ ಇಲ್ವೊ ಅಂದ್ಬುಟ್ಟು

ಅವ್ರು ಗಂಗಾದರಪ್ನ ಗುಡಿಯಲ್ಲಿsss || ತಂದಾನ ||
ಅಲ್ಲಿ ಗಂಗಾದರನ ಗುಡಿಯಲ್ಲಿsss
ಈಸ್ಪುರನ ಪೂಜೆ ನಡಿತದೆ sss || ತಂದಾನ ||

ಸೋಲಿಗ್ರ ಬೊಮ್ಮೆಗೌಡ್ನೋರು
ತಣ್ಣೀರ್ ತಾನ ಮಾಡ್ಕಂಡು
ನಮ್ಮಪ್ನ ಮನೆದೇವ್ರು
ಅಂದ್ರೆ ಮಲೆ ಮಾದಪ್ಪ ತಾನೇ…. .
ಈಸ್ಪುರ ಅಂದ್ರೆ ಮಲೆ ಮಾದಪ್ಪ
ನಮ್ಮಪ್ನ ಮನೆ ದೇವ್ರು
ಅವ್ರು ತಾನೆ ಮಕ್ಳ ಪಲ ನೀಡೋರು
ವರ ಕೇಳ್ಬೇಕು ಅಂದ್ಬುಟ್ಟು
ಸ್ವಾಮಿಯೋರ್ನ ಪ್ರಸಾದಕೇಳವೊತ್ಗೆ

ಅವ್ರು ಎಡ್ಗಡೆ ಪ್ರಸಾದ ಕೊಡುತಾರೆsss || ತಂದಾನ ||
ಅಲ್ಲಿ ಎಡ್ಗಡೆ ಕೊಡ್ವಾಗ ಒಳ್ಚರಿ ಬಿಡ್ವಾಗ
ನಾರಾಯ್ಣ ರೂಪ ತಾಳುತ್ತಾರೆsss || ತಂದಾನ ||