ಧ್ಯಾನವ ಮಾಡಿರೊ ಜಿನೇಶ್ವರ
ಧ್ಯಾನವ ಮಾಡಿರೋ ||

ಮಾನವ ಜನರಿಗೆ ಮತಿಕೊಡುವ ಮಹಾತ್ಮನ್ನ
ಸ್ತುತಿ ಮಾಡಿ ಯುಕ್ತಿಲಿಂದ ಗತಿ ಎಂಬೊ ಮುಕ್ತಿಪಡಿರೋ ||

ಪರಮ ಪಾವನ ಮೂರ್ತಿ ಧರಣಿಯೊಳು ಅವರ ಕೀರ್ತಿ
ಅರಹಂತ ದೇವರನ್ನ ಮರಿಯದೆ ಭಜಿಸಿರೊ ||

ಮನಸಿನ ಮಡಿಉಟ್ಟು ಶಿಸ್ತಿಲಿಂದಲಿ ಬಂದು
ಮನಮುಟ್ಟಿ ಪೂಜಿಸಿ ಗಡನೆ ಗತಿ ಪಡೆಯಿರೋ ||

ತಿಗಡೊಳ್ಳಿ ಊರಲ್ಲಿ ಹೊಸದಾದ ಬಸ್ತಿಯಲ್ಲಿ
ವಾಸ ಮಾಡಿದ ಪಾಸಮೂರ್ತಿ ಮರಿಕಲ್ಲ ಮಾಡಿದ ಸ್ತುತಿ ||

ಜೈನರಾಗಿ ಜೈನರು ಹುಟ್ಟಿಬಂದ ಣಮೋಕಾರ ಮಂತ್ರ ಒಂದ
ಅನಬೇಕ ಬಸ್ತಿಗಿ ಬಂದ ಮನಾ ತೊಳದ ಮಾಡಬೇಕ ಜಳಕ ||
ಸಂದೇಹವಿಲ್ಲದ ದೊರಕುವದು ಮೋಕ್ಷ ||

ಪುಣ್ಯ ಪಡಿಯುವುದಕ್ಕೆ ಹುಣವಿ ನೋಂಪಿ ಬೆಳಗಬೇಕ
ಸಿದ್ಧಶಾಸ್ತ್ರ ಓದಬೇಕ ಅಹಿಂಸಾದಿಂದ ಸಾಗಬೇಕ ||
ಸತ್ಯಾಸತ್ಯೆ ತಿಳದ ನಡಿಯಬೇಕ ||

ತೀರ್ಥಕ್ಷೇತ್ರ ನೋಡಬೇಕ ದಾನಧರ್ಮ ಮಾಡಬೇಕ
ಪುಣ್ಯೇದ ಗಂಟ ಕಟ್ಟಬೇಕ ಮಾಡಿ ಇಟ್ಟಾಂಗ ಸ್ಟಾಕ ||
ದೊರಕೀತ ಮುಂದೀನ ಜನ್ಮಕ್ಕ ||

ಬೈಲಹೊಂಗಲ ತಾಲೂಕ ತಿಗಡೊಳ್ಳಿ ಊರಚೊಕ್ಕ
ಎಲ್ಲಾರು ಬರಬೇಕ ಜಿನೇಶ್ವರನ ದರ್ಶನಕ ||
ಮರಿಕಲ್ಲ ಸಖಿ ಹೇಳಿದ ಖಡಕ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿ ಗೀಗೀ ಪದಗಳು