ಶ್ರೀನಾಥಕಾಂತ ಗಣನಾಥ | ಜಾತ ಬಹುಶಾಂತ | ತಾತವೇದಾಂತ |
ಮಾತೃ ಪ್ರತೀತ | ಗೋತ್ರ ಏಕಾಂತ | ಚಿತ್ತ ಏಕದಂತ |
ಶ್ವೇತ ವರ್ಣಿ | ಸುತ್ತ ಸುಳಿಯುತ | ಸತ್ಯ ಅನಂತ |
ನಿತ್ಯ ಭಜಿಸುವೆನಾ ||೧||

ಬಂದೇನು ಶರಣ | ತವಚರಣ | ವರ್ಣಸುವರ್ಣ |
ಕಿರಣ ಪರಿಪೂರ್ಣ | ಕೃಷ್ಣಾದ್ವೈಪಾಯನ | ಸ್ಥಾನ ಪುರಾಣ |
ಕರುಣ ನೀ ಜಾಣ | ಗುಣ ನಿರ್ಗುಣ | ಹಾರತಾವ ಬಾಣ |
ಗನ್ನ ಗಜವದನ ||೨||

ವಿಧಿ ಸ್ತವನ ಮಾಡುತ ಶುದ್ಧ | ಎದ್ದ ತಾ ಬಂದ |
ಹಿಡದ ನಿಮ್ಮ ಪಾದ | ತತ್‌ಕ್ಷಣದಿಂದ | ನುಡಿಯತಾವ ವೇದ |
ಚತುರ್ಮುಖದಿಂದ | ಅಂದನಾ ಕಂದ | ನಿಮ್ಮ ಬೋಧದಿಂದ |
ಮಾಡುತ ಗಾಯನಾ ||೩||

ಸರ್ವತ್ರ ಮಾಡತಾರ ಸ್ತೋತ್ರ | ನೇತ್ರ ಪರಿಪಾತ್ರ |
ಪಿತ್ರ ಗುರುಸ್ತೋತ್ರ | ಚಿತ್ರ ನಿಮ್ಮ ಕ್ಷೇತ್ರ | ರಾತ್ರದಿನ ಮಂತ್ರ |
ತಂತ್ರ ಶರಶಾಸ್ತ್ರ | ಮಾತ್ರ ಚರಿತ್ರ |
ಮಿತ್ರ ಇಲಿವಾಹನಾ ||೪||

ಬಿಳ್ಳೂರವಾಸ ಬಹುಖಾಸ | ಠಾಸ ವಿಶ್ವಾಸ | ಯಾತ್ರ ಮಾಘಮಾಸ |
ನಾಥನ ಕಳಸ | ನುಡಿಯತಾವ ತಾಸ | ಸರಸ ನಿವಾಸ |
ವಾಸ ಸುವಾಸ | ದಾಸ ನಿಮ್ಮ ಕೂಸ | ಪಂಥ ಹರದಾಸ |
ಹೌಸ ದೃಢ ಮನಸ | ಧ್ಯಾಸ ಅಭ್ಯಾಸ |
ಗುರುವಿನ ಪುತ್ರ ಅಂದ ವಾಮನ ||೫||

ರಚನೆ : ವಾಮನ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ