ಶ್ರೀ ಗಣಪತಿ ಗಣನಾಥ – ಯಾರೂ ಇಲ್ಲ ನಿಮ್ಮ ಹೊರತ |
ವಿದ್ಯಾದೊಳಗ ಸಮರ್ಥ – ಬುದ್ಧಿಕೊಡಾವ ವಿಪರೀತ |
ಏನ ಹೇಳಲಿ ಡೌಲಾ ||
ವಜ್ರ ಕಿರೀಟ ತೆಲಿಯ ಮ್ಯಾಲಾ ||೧||

ಸರಳಸೊಂಡಿ ಸುರಳಿ ಸುತ್ತಿ ಹೆಚ್ಚಿನಾವ ಗಣಪತಿ |
ಕೊಡಬೇಕೆನಗ ಮತಿ – ಮಾಡತೀವ ನಿಮ್ಮ ಸ್ತುತಿ |
ನೇಮ ತೆಪ್ಪುದಿಲ್ಲಾ ||
ನಿಮ್ಮ ಕೀರ್ತಿಗೆ ಅಳವಿಲ್ಲಾ ||೨||

ಕರ್ಪುರೂದ ದುಂದಕಾರ – ದಿನ್ನ ಅಯ್ದ ಪ್ರsಕಾರ |
ಬೇಕ ನಿಮಗ ಪನಿವಾರ – ಕೊರಳಾಗ ಹೂವಿನ ಹಾರ | ಹರುಷದಿಂದ ಬರತಾರ |
ಏನ ಹೇಳಲಿ ಡೌಲಾ ||
ಕೂಡಿದುಬ್ಬ ಕೆಂಪ ನಾಮ ನಸಲಾ ||೩||

ವೀರ – ತಾತು ಇಬ್ರು ಜೋಡಿ – ನಾಗೇಶಿ ನಿನ್ನ ತೋಡಿ |
ಹೇಳಿದಾರ ಗನ್ನಮಾಡಿ – ಬರಬೇಕ ತೋಡಿಗಿ ತೋಡಿ | ಜನಕ ತಿಳಿವಂಗ ನುಡಿ |
ಮಾಡಬ್ಯಾಡ್ರಿ ಗದ್ದಲಾ |
ತರಿಬಿ ಕೇಳ್ಯಾನ ಮಾಸ್ತರ ಮಲ್ಲಾ ||೪||

ರಚನೆ : ಮಾಸ್ತರ ಮಲ್ಲಾ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ