ಪಾರ್ವತಿಯ ಕಂದ ಕೈಲಾಸದಿಂದ ಬಂದ ಇಳದಿಂದ
ವಿಭೂತಿ ಗಂಧ ಪುಷ್ಪ ಚಂದ ಚಂದ ವಾಸ ಮಕರಂದ
ಪೂಜಿಸುವೆ ನಾನಾ ಪೂಜಿಸುವೆ ನಾನಾ |
ದೂರ ಮಾಡೊ ಬಂದಂತ ವಿಘ್ನ ಸ್ವಾಮಿ ಭಗವಾನಾ
ಗಣ್ಣಗಜವದನಾ ಗಣ್ಣಗಜವದನಾ ||

ಆರು ಶಾಸ್ತ್ರ ಪುರಾಣ ಹದಿನೆಂಟ ವೇದಗಳಗುಟ್ಟ
ಸತ್ಯ ಸರ್ವ ನೀ ಶ್ರೇಷ್ಠ ಬಾಲಲೀಲಾಟ ತಿಳದಿ ಮುಕ್ಕಟ್ಟ
ಹಸ್ತ ನಮಗಿಟ್ಟ ಮಾಡೊ ಪಾಲನಾ ಮಾಡೊ ಪಾಲನಾ |
ಎಡಬಿಡದೆ ಮಾಡುವೆನೊ ಭಜನಾ ಇಲಿಯು ನಿನ್ನ ವಾಹನ
ಗಣ್ಣಗಜವದನಾ ಗಣ್ಣಗಜವದನಾ ||

ಮೂರು ಲೋಕದಲ್ಲಿ ನಿಮ್ಮ ಶೃತಿ ಸಾರತೈತಿ ಕೀರ್ತಿ
ಸಭಾದಲ್ಲಿ ಭರತಿ ನಾಮಗಣಪತಿ ಅಕ್ಕಂಡ ಮೂರ್ತಿ
ಮರಿಯಲಾರೆ ನಿನ್ನ ಮರಿಯಲಾರೆ ನಿನ್ನಾ |
ಜಂಕರಿಯನಾದ ಜನನನನ ನುಡಿಸಿ ವಂದಸವನ
ಗಣ್ಣಗಜವದನಾ ಗಣ್ಣಗಜವದನಾ ||

ಜೋಮಾಲಿ ಹಾರ ಕೊಳಳಲ್ಲಿ ಶಂಖ ಕೈಯಲ್ಲಿ ವಜ್ರ ಬೆರಳಲ್ಲಿ
ನಂದಿ ಬದಿಯಲ್ಲಿ ಕಿರೀಟ ತಲಿಮ್ಯಾಲಿ
ಹೊಳಿಯುತಾವ ರತನ ಹೊಳಿಯತಾವ ರತನಾ |
ಮರಿಕಲ್ಲ ಮಾಡಿದ ಕವನ ತಿಗಡೊಳ್ಳಿ ಆತನ ಸ್ಥಾನ
ಗಣ್ಣಗಜವದನಾ ಗಣ್ಣಗಜವದನಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು