ಗಜಾನನ ಗಣಪತಿ
ಮಾಡತೇನ ನಿನ್ನ ಸ್ತುತಿ
ಪಹಿಲೆ ಪ್ರಥಮ ನಾನಾ – ನನ್ನ
ಮಾನಾ ಅಪಮಾನಾ – ಎಲ್ಲಾ
ನಿಮ್ಮ ಸ್ವಾಧೀನಾ

ಕರಕಿಪತ್ರಿ ಕನಗಲದ್ಹೂವ
ತಂದ ಇಟ್ಟೀನ ನಿಮ್ಮ ಮುಂದ
ಪೂಜಾದ ಸಾಮಾನಾ – ಎಲ್ಲಾ
ಮತಿಕೊಟ್ಟ ಕಾಯಬೇಕೋ
ನಿನ್ನ ಬಾಲಕನಾ

ಬಾಗೇವಾಡಿ ಗ್ರಾಮಚಂದ
ಕವಿ ಹುಟ್‌ತಾವ ಕಲ್ಪನದಿಂದ
ದೇಶಕ ವಾಹೀನಾ –
ಬಾಳಗೋಪಾಳನ ಅಕ್ಷರಾ
ಬಹಳ ಹಸನ ಹಸನಾ

ರಚನೆ : ಬಾಳಗೋಪಾಳ
ಕೃತಿ : ಬಾಳಗೋಪಾಳನ ಲಾವಣಿಗಳು