ಸ್ಮರಣೆ ಮಾಡುವೆನು ದೇವ |
ಕರುಣಿಸಯ್ಯಾ ಮಹಾದೇವ |
ಮರಣ ರಹಿತ ಮೃತ್ಯುಂಜಯಾ |
ಧರಣಿ ಪಾಲಕ ನೀನಾ |
ಶರಣರಿಗೆ ಒಲದಿಯೋ ಭಗವಾನಾ ||೧||

ನಂದಿ ವಾಹನ ನಾಗಭರಣ |
ಇಂದು ಧರ ನಿಮ್ಮ ಚರಣ |
ಹೊಂದಿಕ್ಹೊಂಡ ಮಾರ್ಕಂಡೇಯನ |
ಬಂದ ಕಾಯ್ದಿ ಅಭಿಮಾನ |
ಮೃತ್ಯು ದೇವಿನ್ನೋಡಿಸಿದಿ ಒಂದೇ ಸವನಾ||೨||

ಪಶುಪತಿ ಶಶಿಧರ | ವಿಷಕಂಠ ಶಂಕರ |
ದೋಷ ನಾಶ ಪರಿಹಾರ |
ಈಶ ಪಾಲಿಸೋ ನೀನಾ |
ಕೂಸ ನಾನು ಪೋಷಿಸೋ ಅನುದಿನಾ ||೩||

ಕುಂತದೈವ ಕಲಲ | ಮಾಡಬಾರ್ದ ಗದ್ದಲ |
ದಯಾ ಅವರ ಮ್ಯಾಲ | ಇರಬೇಕ ಪರಿಪೂರ್ಣ |
ಹುಲಕುಂದ ರಾಮೇಶ ಕಾಯೋ ನೀನಾ ||೪||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು