ಸಾಂಬ ಶಿವ ಮಾಡುವೆನು ಧ್ಯಾನಾ
ಸರ್ವರಿಗೆ ಮುಕ್ತಿ ಕೊಡಾಂವಾ ನೀನಾ ||

ಪಿಂಡ ಬ್ರಹ್ಮಾಂಡಗಳ ಉತ್ಪನ್ನಾ
ಜನನ ಮರಣ ನಿಮ್ಮ ಸ್ವಾಧೀನಾ ||

ಸಭಾದೊಳು ಕಾಯಿರಿ ನನ್ನ ಮಾನಾ
ಅಜ್ಞಾನಿ ಮ್ಯಾಲ ಇರಲಿ ಅಂತಃಕರಣಾ

ಭಕ್ತಿಯಿಂದ ಬೇಡಿಕೊಳ್ಳುವೆ ನಾನಾ
ಸದ್ಯದೊಳು ಆಗಬೇಕ ಪ್ರಸನ್ನಾ ||

ತಿಗಡೊಳ್ಳಿ ಊರ ನಮ್ಮ ಸ್ಥಾನಾ
ಬಲಭೀಮ ಆದಾನೊ ಪ್ರಸನ್ನಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು