ಜಯ ಜಯ ಭುವನೇಶ್ವರಿ | ರೈತರ ಐಶ್ವರಿ |
ಸ್ವಯಂ ಓಂಕಾರ ರೂಪ ಧಾರಿಣಿ |
ಅಂಡ ಪಿಂಡ ಉದ್ಬಿಜ ಉತ್ಪನ್ನಿ   || ಪ ||

ವಿಘ್ನೇಶ್ವರ ಮಾತೆ ಶೀಘ್ರ ಅಗ್ನಿ ದೇವತೆ |
ದುರ್ಗಾಂಬೆ ಭಾರ್ಗವಿ ಸ್ವರ್ಗ ನಿಸರ್ಗದ ಖ್ಯಾತೆ |
ವರ್ಗ ವರ್ಗದ ಜೀವಿಗೆ ಮಾರ್ಗ ದರ್ಶಕ ಮಮತೆ |
ನಿರಾಕಾರಿ || ನಿ || ನಿರೀಶ್ವರಿ ನೀನೆ | ಧರಣಿ ಕಾರಣಿ ||೧||

ಯಕ್ಷಣಿ ದಾಕ್ಷಾಯಣಿ
ರಾಕ್ಷಸರನ ಆ ಕ್ಷಣದಿ ಮಾಡಿದಿ ಮರ್ಧಿನಿ |
ವಿದ್ಯಾರಣ್ಯ ಗೊಲಿದ ಭವಾನಿ ||
ಮಾಯಾ ಶಕ್ತಿ – ಕಾಯಾ ಶಕ್ತಿ |
ಕ್ರಿಯಾ ಶಕ್ತಿ ಸಂಪೂರ್ಣಿ |
ಜೀವಶಕ್ತಿ ಭಾವಶಕ್ತಿ ಶಿವಶಕ್ತಿ ಪರಿಪೂರ್ಣಿ |
ಇಚ್ಛಾಶಕ್ತಿ ವಾಚಾಶಕ್ತಿ ಸರ್ವ ಶಕ್ತಿಯ ಜನನಿ |
ಜಗನ್ಮಾತೆ | ಜ | ಪಾರ್ವತಿಯ ನಾಮ ಧರಿಸಿದ ಸನ್ಮಾನಿ||೨||

ಬಾಲ ಯವ್ವನ ವೃದ್ಧ ಇವು ಮೂರುಕೆಲ್ಲಾ |
ಅಧಿಕಾರಿಯಾದಂಥ ಶರಣಿ |
ನಾ ನಂಬಿ ಮಾಡುವೆ ನಿನ್ನ ಸ್ಮರಣಿ ||
ಸ್ವತಂತ್ರ ಸ್ವರಾಜ್ಯದ ಮಂತ್ರ ಅರುಹಿದ ದೇವಿ |
ಬಂಕೀಮ ಚಂದನ ಅಂತರಂಗದ ಭಾವಿ |
ಹುಲಕುಂದ ಭೀಮೇಶ ನಿನ್ನಿಂದ ಅನಿಸಿದ ಕವಿ |
ಜಗದೇವಿ | ಜ | ಈ ಯುಗದೊಳು ಝಗಝಗಿಸುವ ಉನ್ಮನಿ ||೩||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು