ಭಾರತ ಮಾತೆ ನೀನು |
ತೋರೆ ಕರುಣವನ್ನು |
ಬಾರಿ ಬಾರಿಗೆ ನಾನು |
ಸ್ಮರಣೆ ಮಾಡುವೆನು |
ಪರಿ ಪಾಲಿಸ ಜನನಿ |
ಮರಯದೆ ಪೊರೆಯ ನರನ ವಾಣಿ ||೧||

ಮೇರು ಪರ್ವತವನ್ನು |
ಕಿರೀಟ ಮಾಡಿದೆ ನೀನು |
ಕ್ಷೀರ ಸಮುದ್ರವನ್ನು |
ಸೀರಿ ಉಟ್ಟೆವ್ವ ನೀನು |
ಮೂರು ಲೋಕದ ಜ್ಞಾನಿ |
ಪಾರ ಮಾಡ ಸರ್ವರ ಸಂಪನ್ನಿ ||೨||

ದುಷ್ಟರಿಗೆ ಶಿಷ್ಟರಿಗೆ |
ಭ್ರಷ್ಟರಿಗೆ ಶ್ರೇಷ್ಟರಿಗೆ |
ಒಟ್ಟ ಕನಿಷ್ಟರಿಗೆ |
ಕಷ್ಟ ಸೋಸವರಿಗೆ |
ಹೊಟ್ಟೆ ಗ್ಹಾಕುವ ಜನನಿ |
ಪಕ್ಷಪಾತ ಮಾಡದಂಥ ಕಾತ್ಯಾಯನಿ ||೩||

ಕವಿಗಳ ಭವಿಗಳ |
ಶ್ರವಗಳ ಜೀವಿಗಳ |
ಅವನಿ ಪಾಲಕರ |
ಅವತಾರಿಗಳ |
ಸಲುಹುವಂಥ ಸರ್ವಾಣಿ |
ಮರೆಯಲಾರೆ ತಾಯಿ ನಿನ್ನ ಭಜನಿ ||೪||

ಅಂದವಾದ ಹುಲಕುಂದ
ಚಂದ ಭೀಮೇಶನ ಪದ
ಮಂದಿಗೆಲ್ಲಾ ಆನಂದ
ಹೊಂದಿಶ್ಯಾನ ಒಂದೊಂದ
ಪ್ರಾಸ ಬಂಗಾರ ಖಣಿ
ದೇಶದೊಳು ಆತ ಬಹಳವಾಹಿನಿ ||೫||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು