ಎಲ್ಲಿ ನೋಡಿದರ ಅಲ್ಲೆ ನಿಂತಾಳೊ ಆದಿಶಕ್ತಿ
ನಿರ್ಹಂಕಾರದೊಳಗ ಹುಟ್ಟಿಹಾಕಿ ಶಕ್ತಿ ಪಲ್ಲ
ವಿಷ್ಣು ಬ್ರಹ್ಮರನ ಹಡದಾಕಿ ಶಕ್ತಿ
ಮಾದೇವಗ ಮಲಿ ಕುಡಿಸಿದಾಕಿ ಶಕ್ತಿ ೧
ಚಂಡ ಪ್ರಚಂಡರ ಹೊಡೆದಾಕಿ ಶಕ್ತಿ
ದುರ್ಗಿ ಅವತಾರ ಕೊಟ್ಟಾಕಿ ಶಕ್ತಿ ೨
ಹೆಣ್ಣುಮಕ್ಕಳ ಕರಿಸಿದಾಕಿ ಶಕ್ತಿ
ಬೇವಿನಹುಟ್ಟಿಗೆ ಉಡಿಸಿದಾಕಿ ಶಕ್ತಿ ೩
ಗಂಡುಮಕ್ಕಳ ಕರಿಸಿದಾಕಿ ಶಕ್ತಿ
ತಲಿಮ್ಯಾಲ ಕೊಡಾ ಹೊರಿಸಿದಾಕಿ ಶಕ್ತಿ ೪
ಏಳ ಕೊಳ್ಳದಾಗ ಇದ್ದಾಕಿ ಶಕ್ತಿ
ಭಕ್ತರನ್ನೆಲ್ಲ ಸಲುವಾಕಿ ಶಕ್ತಿ ೫
Leave A Comment