ಅಂಥ ಉಜ್ವಲವಾದ ಪ್ರಾರಂಭಕ್ಕೆ, ಎಂಟು
ಶತಮಾನಗಳ ತರುವಾಯ ಇಂಥ ದುರ್ದೆಸೆಯೆ
ಕೂಡಲಸಂಗ? ಪಾಚಿಗಟ್ಟುತ್ತ ನಾರುತಿವೆ
ನೀವು ನಿರ್ಮಿಸಿದ ತೀರ್ಥತರಂಗ. ಗದ್ದುಗೆಯ
ಮೂಲೆಗತ್ತಲುಗಳಲ್ಲಿ ಇಲಿ ಹೆಗ್ಗಣದ ಪರಿ-
ವಾರ. ನಿಮ್ಮ ನೆನಪುಗಳ ಕೊಟ್ಟಣ ಕುಟ್ಟಿ ವಿಜೃಂ-
ಭಿಸಿವೆ ಪ್ರವಚನ ಮಹಾಪೂರ. ತಮಂಧ ಘನ-
ವಾದಂದು, ನೀವು ಹತ್ತಿಸಿದ ಜ್ಯೋತಿಗಳಿಂದ
ಪಂಜು ಹೊತ್ತಿಸಿಕೊಂಡು ಕುಣಿಯುತ್ತ, ಚಿತ್ತಸ್ವಾ-
ಸ್ಥ್ಯಕ್ಕೆ ಬೆಂಕಿಯಿಕ್ಕುತಲಿವೆ ಭೂತಗಣ ನಿರಾ-
ತಂಕ. ಮಠದೊಳಗಿನೆಚ್ಚರದ ಗಂಟೆಯೂ ಮೂಕ!
‘ಬೆಳೆಯ ಭೂಮಿಯೊಳೊಂದು ಪ್ರಳಯದ ಕಸಹುಟ್ಟಿ’
ಹುಲುಸಾಗಿ ಬೆಳೆಯುವಂತಾದದ್ದು ಹೇಗಯ್ಯ?
ಉಳಿವೆಯಲ್ಲಿ ಕೊನೆಗೂ ಉಳಿದದ್ದು ಏನಯ್ಯ?