ಇದು,
ನೀ ಸುಟ್ಟು ಬೂದಿ ಮಾಡಿರುವ ಪಟ್ಟಣದ ನಡುವೆ
ಹೊಗೆ ಹತ್ತಿ ನಿಂತಿರುವ ಸ್ಮಾರಕ ಶಿಲಾ ಪ್ರತಿಮೆ.

ಇನ್ನಿದರ ಸುತ್ತಲೂ ಊರೆದ್ದು, ಮಣ್ಣು ಮುಕ್ಕುತ್ತಿರುವ
ಕಾರಂಜಿಗಳೆಲ್ಲ ಪುಟನೆಗೆದು,
ದಾರಿಯ ತುಂಬ ಹೆಜ್ಜೆ-ಗಾಲಿಗಳಾಡಿ
ಮತ್ತೆ ಎಲ್ಲಾ ಮೊದಲಿನಂತಾದೀತೆಂಬ
ನಂಬಿಕೆಯಿಲ್ಲ,
ನಿರ್ನಾಮ ನಗರದ ಈ ಶ್ಮಶಾನದೊಳಗಿರುವ
ಮೂಳೆಗಳ ಹುಯ್ಯಲಿಗೆ ಕೊನೆ ಇಲ್ಲ.