೧೩. ಕುಡುತಿನಿ: ತಾಲೂಕು ಕೇಂದ್ರವಾದ ಬಳ್ಳಾರಿಯಿಂದ ಪಶ್ಚಿಮಕ್ಕೆ ಸು. ೨೭ ಕಿ.ಮೀ. ದೂರದಲ್ಲಿದೆ. ಇಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಗೆ ಸೇರಿದ ವಿವಿಧ ಮಾದರಿ ಉಪಕರಣಗಳು ದೊರೆತಿವೆ. ಅಲ್ಲದೆ ಇಲ್ಲಿಯೇ ನೂತನ ಶಿಲಾಯುಗ ಸಂಸ್ಕೃತಿಯ ಶಿಲೋಪಕರಣಗಳಾದ ಉಜ್ಜಿ ನಯಗೊಳಿಸಿದ ಕೊಡಲಿ, ಉಂಗುರ ಕಲ್ಲು ಮೊದಲಾದವು ದೊರೆತಿವೆ. ನವಶಿಲಾಯುಗ/ಶಿಲಾತಾಮ್ರಯುಗ ಸಂಸ್ಕೃತಿಗೆ ಸೇರಿದ ಬೂದಿದಿಬ್ಬವನ್ನು ವಿದ್ವಾಂಸರು ಶೋಧಿಸಿದ್ದು, ಈ ಸಂಸ್ಕೃತಿಗಳ ಕುರಿತು ಅಧ್ಯಯನ ಮಾಡಲು ಆಕರಗಳಾಗಿವೆ.[1]

೧೪. ಬಾದನಹಟ್ಟಿ ಗುಡ್ಡ: ಬಳ್ಳಾರಿ ತಾಲೂಕಿನ ಈ ನೆಲೆ ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ನೆಲೆಯಾಗಿದ್ದು, ಇಲ್ಲಿ ಆ ಕಾಲದ ಕೈಕೊಡಲಿಗಳು ದೊರೆತಿದ್ದು, ಅಧ್ಯಯನಕ್ಕೆ ಆಕರಗಳಾಗಿವೆ.[2]

೧೫. ಬಳ್ಳಾರಿ: ತಾಲೂಕು ಕೇಂದ್ರ ಮತ್ತು ಬಳ್ಳಾರಿ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಯಲ್ಲಿಯೂ ಆದಿ ಹಳೆ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಶೋಧಿಸಲಾಗಿದೆ. ಅಲ್ಲದೆ ಇಲ್ಲಿ ನೂತನ ಶಿಲಾಯುಗ ಕಾಲದ ಅವಶೇಷಗಳನ್ನು ಮತ್ತು ಶಿಲಾತಾಮ್ರಯುಗ ಸಂಸ್ಕೃತಿಯ ನೆಲೆಯನ್ನು ಪತ್ತೆ ಹಚ್ಚಲಾಗಿದೆ.

ಬಳ್ಳಾರಿ ದೊಡ್ಡ ಬೆಟ್ಟದಲ್ಲಿ ನೂತನ ಶಿಲಾಯುಗದ ಅವಶೇಷಗಳನ್ನು ೧೯೮೨ರಲ್ಲಿ ಫ್ರೇಜರ್‌ ಅವರು ಮೊದಲು ಗುರುತಿಸಿದರು. ಇದಾದ ನಂತರ ೧೮೯೬ರಲ್ಲಿ ರಾಬರ್ಟ್‌ ಬ್ರೂಸ್‌ಪೂಟ್‌ ಅವರು ನೂತನ ಶಿಲಾಯುಗದ ಅವಶೇಷಗಳೊಂದಿಗೆ ಕಬ್ಬಿಣ ಕರಗಿಸುವ ವಸ್ತುಗಳನ್ನು ಹಾಗೂ ಕುಲುಮೆಯನ್ನು ಗುರುತಿಸಿದರು. ಇದೇ ರೀತಿ ಕಪ್ಪಗಲ್ಲಿನಲ್ಲಿ ಆಯುಧಗಳನ್ನು ತಯಾರಿಸುವ ಕಲ್ಲು, ವಿವಿಧ ಹಂತದಲ್ಲಿ ಸಿದ್ಧಪಡಿಸಿದ ಆಯುಧಗಳು, ತ್ಯಾಜ್ಯ ಶಿಲೆ, ಸಂಪೂರ್ಣವಾಗಿ ತಯಾರಾದ ಆಯುಧಗಳು, ನೂತನ ಶಿಲಾಯುಗ ಆಯುಧಗಳು ಹೀಗೆ ನೂತನ ಶಿಲಾಯುಗದ ಆಯುಧದ ಭಂಡಾರ ಎನ್ನುವಷ್ಟು ವಸ್ತುಗಳು ಇಲ್ಲಿ ದೊರತಿವೆ. ಆಯುಧಗಳ ತಯಾರಿಕೆಗೆ ವಿವಿಧ ಭೌತಿಕ ಶಿಲೆಗಳನ್ನು ಉಪಯೋಗಿಸಿದ್ದಾರೆ. ಟ್ರಾಪ್‌ ಶಿಲೆಗಳಿಂದ ಕುಟ್ಟುವ ಕಲ್ಲು, ಅರೆಯುವ ಕಲ್ಲನ್ನು ತಯಾರಿಸಿದ್ದರು. ಅಲಗುಗಳ ತಯಾರಿಕೆಯಲ್ಲಿ ಚರ್ಟ್‌, ಆಗೇಟ್‌, ಚಾಲ್ಸಿಡನಿ ರಾಕ್‌, ಕ್ರಿಸ್ಟಲ್ಗಳನ್ನು ಉಪಯೋಗಿಸಿ ಹಲವಾರು ರೀತಿಯ ಸೂಕ್ಷ್ಮ ಶಿಲಾಯುಧಗಳನ್ನು ತಯಾರಿಸಿರುವುದು ತಿಳಿದುಬರುತ್ತದೆ. ಈ ಸ್ಥಳದ ಹತ್ತಿರದಲ್ಲಿ ಬಯಲು ಬಂಡೆಯ ಚಿತ್ರಗಳು ಹಾಗು ರೇಖಾಚಿತ್ರಗಳು ಹೇರಳವಾಗಿ ದೊರಕುತ್ತವೆ. ಮನುಷ್ಯ ಜಿಂಕೆ, ಗೂಳಿ ಮುಂತಾದ ಚಿತ್ರಗಳನ್ನು ನಿಖರವಾಗಿ ಬಿಡಿಸಲಾಗಿದೆ.[3]

೧೬. ಬೆಳಗಲ್ಲು: ತಾಲೂಕು ಕೇಂದ್ರವಾದ ಬಳ್ಳಾರಿಯಿಂದ ೧೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಆದಿ ಹಳೆಶಿಲಾಯುಗ ಸಂಸ್ಕೃತಿಯ ವಾಸದ ನೆಲೆಯನ್ನು ಮತ್ತು ನೂತನ ಶಿಲಾಯುಗದ ಮಡಕೆ ಚೂರು, ಕೈಕೊಡಲಿ ಮೊದಲಾದ ಸಾಂಸ್ಕೃತಿಕ ಅವಶೇಷಗಳನ್ನು ಪತ್ತೆ ಹಚ್ಚಿ ಈ ನೆಲೆಯ ಮೇಲೆ ಬೆಳಕು ಬೀರಲಾಗಿದೆ.[4]

೧೭. ಹಳಕುಂದಿ: ತಾಲೂಕು ಕೇಂದ್ರವಾದ ಬಳ್ಳಾರಿಯಿಂದ ೧೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ರಾಬರ್ಟ್‌ಬ್ರೂಸ್‌ಪೂಟ್‌ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಶಿಲಾಗುಳಿಗಳನ್ನು ಶೋಧಿಸಿರುವರು.[5] ಇತ್ತೀಚೆಗೆ ಇಲ್ಲಿ ತಯಾರಿಕಾ ಹಂತದ ವಿವಿಧ ಶಿಲೋಪಕರಣಗಳು ದೊರೆತಿವೆ.

೧೮. ಕಲ್ಲಹಳ್ಳಿ: ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ೪೮ ಕಿ.ಮೀ. ದೂರವಿರುವ ಈ ನೆಲೆಯಲ್ಲಿ (ತಿಪ್ಪೇಹಳ್ಳಿಗೆ ಹೋಗುವ ದಾರಿಯ ಹಾಳೂರಿನಲ್ಲಿ) ನೂತನ ಶಿಲಾಯುಗ, ಶಿಲಾತಾಮ್ರಯುಗ, ಬೃಹತ್‌ ಶಿಲಾ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಪಕರಣ ಹಾಗೂ ಮಡಕೆ ಭಾಗಗಳು ಮತ್ತು ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಅಲ್ಲದೇ ಇಲ್ಲಿಯೇ ಹಾಳಾಗಿರುವ ಬೂದಿದಿಬ್ಬವೊಂದನ್ನು ಶೋಧಿಸಲಾಗಿದೆ.[6]

೧೯. ಕೊಂಚಗೇರಿ:  ತಾಲೂಕು ಕೇಂದ್ರವಾದ ಸಿರುಗುಪ್ಪದಿಂದ ೧೫ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಂಗುರಕಲ್ಲು ಉಪಕರಣ ಹಾಗೂ ಮಡಕೆ ಭಾಗಗಳು ಮತ್ತು ಶಿಲಾಗುಳಿಗಳನ್ನು ಶೋಧಿಸಲಾಗಿದೆ.[7]

೨೦. ಕೋಟೆಕಲ್ಲು ದುರ್ಗಹಳ್ಳಿ: ತಾಲೂಕು ಕೇಂದ್ರವಾದ ಸಿರುಗುಪ್ಪದಿಂದ ೧೧ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಶಿಲಾಯುಧ ಮತ್ತು ವಿವಿಧ ಉಪಕರಣ ಹಾಗೂ ಮಡಕೆ ಭಾಗಗಳನ್ನು ಶೋಧಿಸಲಾಗಿದೆ.[8]

೨೧. ಸನವಾಸಪುರ: ತಾಲೂಕು ಕೇಂದ್ರವಾದ ಸಿರುಗುಪ್ಪದಿಂದ ೧೩ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಕೈಕೊಡಲಿ ಮತ್ತು ವಿವಿಧ ಮಡಕೆಗಳನ್ನು ಇಲ್ಲಿ ಶೋಧಿಸಲಾಗಿದೆ.[9]

೨೨. ಸುಕ್ರದಪ್ಪ ಬೆಟ್ಟ : ತಾಲೂಕು ಕೇಂದ್ರವಾದ ಸಿರುಗುಪ್ಪದಿಂದ ೧೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ, ಜಾಸ್ಪರ್ ಶಿಲೆಯ ಮೂಲಶಿಲಾಗಟ್ಟಿ, ನೀಳಗೆರೆಗಳುಳ್ಳ ಮೂಲಶಿಲೆ ದೊರೆತಿದೆ. ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆ ಇದಾಗಿದ್ದು, ಇಲ್ಲಿ ಕಲ್ಕುಪ್ಪೆ ಹಾಗೂ ಶಿಲಾವೃತ್ತಗಳು ದೊರೆತಿವೆ. ಇದೇ ಸ್ಥಳದಲ್ಲಿ ಅಶೋಕನ ಶಾಸನ ದೊರೆತಿರುವುದು ಗಮನಾರ್ಹ.[10]

೨೩. ಅಪ್ಪಲಾಪುರ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೧ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಸೂಕ್ಷ್ಮ ಶಿಲಾ ಉಪಕರಣಗಳನ್ನು ಇಲ್ಲಿ ಶೋಧಿಸಲಾಗಿದ್ದು, ಅಂದಿನ ಜನಜೀವನ ಅರಿಯಲು ಸಹಾಯಕವಾಗಿದೆ.

೨೪. ಅಯ್ಯನ ಹಳ್ಳಿ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೧ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ವಿವಿಧ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳನ್ನು ಇಲ್ಲಿ ಶೋಧಿಸಲಾಗಿದ್ದು, ಅಂದಿನ ಜನಜೀವನ ಅರಿಯಲು ಸಹಾಯಕವಾಗಿವೆ.[11]

೨೫. ಇಂಗಳಗಿ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೮ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಬೂದಿದಿಬ್ಬವನ್ನು ಇಲ್ಲಿ ಶೋಧಿಸಲಾಗಿದ್ದು, ಅಂದಿನ ಸಂಸ್ಕೃತಿ ಅರಿಯಲು ಸಹಾಯಕವಾಗಿದೆ.[12]

೨೬. ಕುರೇಕುಪ್ಪೆ (ಕುರೇಕುಪ್ಪ ಗುಡ್ಡ) : ತಾಲೂಕು ಕೇಂದ್ರವಾದ ಸಂಡೂರಿನಿಂದ ೨೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಆದಿ ಹಳೇಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ನೆಲೆಗಳನ್ನು ಮತ್ತು ಅದೇ ಕಾಲದ ವಿವಿಧ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ನವಶಿಲಾಯುಗ ಸಂಸ್ಕೃತಿಯ ಬೂದಿದಿಬ್ಬವನ್ನು ಸಹಾ ಇಲ್ಲಿ ಪತ್ತೆ ಹಚ್ಚಲಾಗಿದೆ.[13]

೨೭. ಕೋಡಾಳ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ವಿವಿಧ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳನ್ನು ಇಲ್ಲಿ ಶೋಧಿಸಲಾಗಿದ್ದು,[14]ಅವು ಅಂದಿನ ಜೀವನ ಕ್ರಮ ಅರಿಯಲು ಸಹಾಯಕವಾಗಿದೆ.

೨೮. ಜೋಗ : ತಾಲೂಕು ಕೇಂದ್ರವಾದ ಸಂಡೂರಿನಿಂದ ೨೩ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಆದಿ ಹಳೇಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಆಶ್ಯೂಲ್ ಮಾದರಿಯ ಕೈಕೊಡಲಿ, ಹೆರೆಗತ್ತಿ, ಮಡಕೆ ಚೂರುಗಳನ್ನು ಇಲ್ಲಿ ಗುರುತಿಸಲಾಗಿದ್ದು,[15]ಅಂದಿನ ಜೀವನಕ್ರಮ ಅರಿಯಲು ಇವು ಆಧಾರಗಳಾಗಿವೆ.

೨೯. ತೋರಣಗಲ್ಲು : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೮ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಮತ್ತು ನವಶಿಲಾಯುಗ ಸಂಸ್ಕೃತಿಯ ನೆಲೆಗಳನ್ನು ಮತ್ತು ಅದೇ ಕಾಲದ ವಿವಿಧ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ನವಶಿಲಾಯುಗ ಸಂಸ್ಕೃತಿಯ ಭಗ್ನಾವಸ್ಥೆಯಲ್ಲಿರುವ ಬೂದಿದಿಬ್ಬ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಪತ್ತೆ ಹಚ್ಚಲಾಗಿದ್ದು,[16]ಇವುಗಳ ಆಧಾರದ ಮೇಲೆ ಅಂದಿನ ಜೀವನಕ್ರಮ ಅರಿಯಬಹುದಾಗಿದೆ.

೩೦. ದರೋಜಿ : ತಾಲೂಕು ಕೇಂದ್ರವಾದ ಸಂಡೂರಿನಿಂದ ೨೮ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಅದೇ ಹಳೇಶಿಲಾಯುಗ ಮತ್ತು ನವಶಿಲಾಯುಗ ಸಂಸ್ಕೃತಿಯ ನೆಲೆಗಳನ್ನು ಮತ್ತು ಅದೇ ಕಾಲದ ವಿವಿಧ ಮಾದರಿಯ ಉಜ್ಜಿ ನಯಗೊಳಿಸಿದ ಕೊಡಲಿ, ಶಿಲಾ ಉಪಕರಣಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ನವಶಿಲಾಯುಗ ಸಂಸ್ಕೃತಿಗೆ ಸೇರಿದ ಬೂದಿದಿಬ್ಬವನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.[17]ಇವುಗಳ ಆಧಾರದ ಮೇಲೆ ಅಂದಿನ ಆದಿಮಾನವ ಜೀವನ-ನಡವಳಿಕೆ ಮತ್ತು ಅವನ ಜೀವನ ವಿಧಾನದಲ್ಲುಂಟಾದ ಬದಲಾವಣೆಯನ್ನು ಅರಿಯಬಹುದು.

೩೧. ಭೈರನಾಯಕಹಳ್ಳಿ : ತಾಲೂಕು ಕೇಂದ್ರವಾದ ಸಂಡೂರಿನಿಂದ ೩೮ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಮತ್ತು ನವಶಿಲಾಯುಗ, ತಾಮ್ರ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆಗಳನ್ನು ಮತ್ತು ಅದೇ ಕಾಲದ ವಿವಿಧ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳನ್ನು ಮತ್ತು ಗೀರು ಚಿತ್ರಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಬೃಹತ್ ಶಿಲಾಯುಗ ಸಂಸ್ಕೃತಿಯ ಕಂಡಿಕೋಣೆ ಗೋರಿಗಳನ್ನು ಇಲ್ಲಿ ಗುರುತಿಸಲಾಗಿದೆ.[18]ಇವುಗಳ ಆಧಾರದ ಮೇಲೆ ಅಂದಿನ ಜೀವನಕ್ರಮ ಅರಿಯಬಹುದಾಗಿದೆ.

೩೨. ಮೇದರಹಳ್ಳಿ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಅಲಗು ಮಾದರಿಯ ಸೂಕ್ಷ್ಮ ಶಿಲಾ ಉಪಕರಣ ಹಾಗು ಮೂಲ ಶಿಲಾ ಗಟ್ಟಿಗಳನ್ನು ಇಲ್ಲಿ ಶೋಧಿಸಲಾಗಿದ್ದು, ಅಂದಿನ ಜೀವನಕ್ರಮ ಅರಿಯಲು ಸಹಾಯಕವಾಗಿದೆ.

೩೩. ರಾಜಾಪುರ : ಸಂಡೂರು ತಾಲೂಕು ಕೇಂದ್ರದಿಂದ ೩೨ ಕಿ.ಮೀ. ದೂರದಲ್ಲಿರುವ ಇಲ್ಲಿ ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ/ಶಿಲಾ ತಾಮ್ರಯುಗ, ನೂತನ ಶಿಲಾಯುಗ ಹಾಗು ಬೃಹತ್ ಶಿಲಾ ಸಂಸ್ಕೃತಿಗೆ ಸೇರಿದ ನೆಲೆಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೆ ಇಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಗೀರುಚಿತ್ರಗಳು ದೊರೆತಿವೆ. ಅಲ್ಲದೆ ನೂತನ ಶಿಲಾಯುಗ ಸಂಸ್ಕೃತಿಗೆ ಸೇರಿದ ಉಜ್ಜಿ ನಯಗೊಳಿಸಿರುವ ಕೊಡಲಿಯ ತುಂಡೊಂದು ಹಾಗು ಮಡಕೆ ಭಾಗಗಳು ಮತ್ತು ಬಂಡೆಚಿತ್ರಗಳು ದೊರೆತಿವೆ. ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಗೀರುಚಿತ್ರಗಳು ಇದೇ ನೆಲೆಯಲ್ಲಿ ದೊರೆತಿರುವುದು ವಿಶೇಷವಾಗಿದೆ.[19]

೩೪. ರಾಂಪುರ (ಕೆರೆ) : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೦ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಆಲಗು ಮಾದರಿಯ ಸೂಕ್ಷ್ಮ ಶಿಲಾ ಉಪಕರಣ ಹಾಗು ಮೂಲ ಶಿಲಾಗಟ್ಟಿಗಳನ್ನು ಇಲ್ಲಿ ಶೋಧಿಸಲಾಗಿದ್ದು, ಅಂದಿನ ಜೀವನ ಕ್ರಮ ಅರಿಯಲು ಸಹಾಯಕವಾಗಿದೆ.[20]

೩೫. ಲಕ್ಷ್ಮೀಪುರ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೯ ಕಿ.ಮೀ. ದೂರವಿರುವ ತಾಮ್ರ  ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕೆಲಚಿತ್ರಗಳನ್ನು ಇಲ್ಲಿ ಶೋಧಿಸಲಾಗಿದ್ದು,[21]ಅಂದಿನ ಜೀವನ ಕ್ರಮ ಅರಿಯಲು ಸಹಾಯಕವಾಗಿದೆ.

೩೬. ಲಿಂಗದಹಳ್ಳಿ : ತಾಲೂಕು ಕೇಂದ್ರವಾದ ಸಂಡೂರಿನಿಂದ ೧೩ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಬೂದಿದಿಬ್ಬವೊಂದನ್ನು ಇಲ್ಲಿ ಶೋಧಿಸಲಾಗಿದ್ದು, ಅಂದಿನ ಜೀವನಕ್ರಮ ಅರಿಯಲು ಸಹಾಯಕವಾಗಿದೆ.[22]

೩೭. ಗದ್ದಿಕೇರಾ : ತಾಲೂಕು ಕೇಂದ್ರವಾದ ಹಗರಿಬೊಮ್ಮನಹಳ್ಳಿಯಿಂದ ೧೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ತಾಮ್ರ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಕೆಲಚಿತ್ರಗಳನ್ನು ಇಲ್ಲಿ ಶೋಧಿಸಲಾಗಿದ್ದು,[23]ಅಂದಿನ ಜೀವನಕ್ರಮ ಅರಿಯಲು ಸಹಾಯಕವಾಗಿದೆ.

೩೮. ಹಂಪಸಾಗರ : ತಾಲೂಕು ಕೇಂದ್ರವಾದ ಹಗರಿಬೊಮ್ಮನಹಳ್ಳಿಯಿಂದ ೧೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ, ತಾಮ್ರ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ಶಿಲಾಗೋರಿಗಳನ್ನು ಶೋಧಿಸಲಾಗಿದೆ. ಇಲ್ಲಿ ಸುಟ್ಟಮಣ್ಣಿನ ಶವ ಪೆಟ್ಟಿಗೆಯೊಂದು ದೊರೆತಿದ್ದು, ನಾಲ್ಕು ಕಾಲುಗಳನ್ನು ಹೊಂದಿರುವುದು ವಿಶೇಷವಾಗಿದೆ.[24]

೩೯. ಅಲ್ಲೀಪುರ : ಹೂವಿನಹಡಗಲಿ ತಾಲೂಕು ಕೇಂದ್ರದಿಂದ ೨೨ ಕಿ.ಮೀ. ಈ ನೆಲೆಯಲ್ಲಿ ನವಶಿಲಾಯುಗ, ತಾಮ್ರ ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಬೂದುಬಣ್ಣದ, ಮಸಕು ಕೆಂಪು ಬಣ್ಣದ ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ಶಿಲಾಗೋರಿಗಳನ್ನು ಶೋಧಿಸಲಾಗಿದೆ. ಇಲ್ಲಿ ಕಪ್ಪು ವರ್ಣದ ಮಡಕೆಯ ಭಾಗಗಳು ಮತ್ತು ಎಲುಬಿನ ಅವಶೇಷಗಳು ದೊರೆತಿವೆ.[25]ಇವುಗಳ ಆಧಾರದ ಮೇಲೆ ಆದಿಮಾನವನ ಜೀವನಕ್ರಮ ಅರಿಯಬಹುದು.

೪೦. ಕೊಟ್ನಕಲ್ಲು : ಹೂವಿನಹಡಗಲಿ ತಾಲೂಕು ಕೇಂದ್ರದಿಂದ ೨೯ ಕಿ.ಮೀ. ಈ ನೆಲೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆ ಮತ್ತು ವಿವಿಧ ಶಿಲಾಗೋರಿಗಳನ್ನು ಹಾಗು ಮಾನವಾಕಾರದ ಶಿಲೆಯೊಂದನ್ನು ಹಾಗು ಕಪ್ಪು ವರ್ಣದ ಮಡಕೆಯ ಭಾಗಗಳನ್ನು ಪತ್ತೆ ಮಾಡಲಾಗಿದೆ.[26]ಇವುಗಳ ಆಧಾರದ ಮೇಲೆ ಆದಿಮಾನವನ ಜೀವನಕ್ರಮ ಅರಿಯಬಹುದು.

೪೧. ನವಲಿ : ಹೂವಿನಹಡಗಲಿ ತಾಲೂಕು ಕೇಂದ್ರದಿಂದ ೧೮.೫ ಕಿ.ಮೀ. ದೂರದಲ್ಲಿರುವ ಈ ನೆಲೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆ ಮತ್ತು ವಿವಿಧ ಕಲ್ಮನೆ ಮಾದರಿಯ ಶಿಲಾಗೋರಿಗಳನ್ನು ಹಾಗು ೨.೫ ಅಡಿ ಎತ್ತರವಿರುವ ಮಾನವಾಕಾರದ ಶಿಲೆಯೊಂದನ್ನು ಹಾಗು ಕಪ್ಪು ವರ್ಣದ ಮಡಕೆಯ ಭಾಗಗಳನ್ನು ಪತ್ತೆ ಮಾಡಲಾಗಿದೆ.[27]ಇವುಗಳ ಆಧಾರದ ಮೇಲೆ ಆದಿಮಾನವನ ಜೀವನಕ್ರಮ ಅರಿಯಬಹುದು.

೪೨. ಮಾಗಳ : ತಾಲೂಕು ಕೇಂದ್ರವಾದ ಹೂವಿನಹಡಗಲಿಯಿಂದ ೩೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ಶಿಲಾಗೋರಿಗಳನ್ನು ಪತ್ತೆ ಹಚ್ಚಲಾಗಿದೆ.[28]ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವಾಗಿತ್ತೆಂದು ಹೇಳಬಹುದು.

೪೩. ಮೈಲಾರ : ತಾಲೂಕು ಕೇಂದ್ರವಾದ ಹೂವಿನಹಡಗಲಿಯಿಂದ ೨೭ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೇ ಇಲ್ಲಿಯೇ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ಶಿಲಾಗೋರಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವಾಗಿತ್ತೆಂದು ಹೇಳಬಹುದು.[29]

೪೪. ರಾಜವಾಳ : ತಾಲೂಕು ಕೇಂದ್ರವಾದ ಹೂವಿನಹಡಗಲಿಯಿಂದ ೧೭ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಇಲ್ಲಿಯೇ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ನಮೂನೆಯ ಶಿಲಾಗೋರಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವಾಗಿತ್ತೆಂದು ಹೇಳಬಹುದು.[30]

೪೫. ಹಿರೇಕುರುವತ್ತಿ : ತಾಲೂಕು ಕೇಂದ್ರವಾದ ಹೂವಿನಹಡಗಲಿಯಿಂದ ೨೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಆದಿ ಹಳೆಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಕೈಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು ಮತ್ತು ಆದಿಮಾನವ ನಿವಾಸ ಸ್ಥಾನವಾಗಿತ್ತೆಂದು ಹೇಳಬಹುದು.[31]

೪೬. ಹುಲಿಗುಡ್ಡ : ತಾಲೂಕು ಕೇಂದ್ರವಾದ ಹೂವಿನಹಡಗಲಿಯಿಂದ ೩೧ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ನಮೂನೆಯ ಶಿಲಾಗೋರಿಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೆ ಇಲ್ಲಿಯೇ ಈ ಯುಗದ ಮಡಕೆ ಚೂರುಗಳನ್ನು ದೊರತಿದ್ದು, ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವಾಗಿತ್ತೆಂದು ಹೇಳಬಹುದು.[32]

೪೭. ಹೂವಿನಹಡಗಲಿ : ತಾಲೂಕು ಕೇಂದ್ರವಾದ ಹೂವಿನ ಹಡಗಲಿಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯನ್ನು ಮತ್ತು ವಿವಿಧ ಶಿಲಾಗೋರಿಗಳನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿರುವ ಕಲ್ಗೋರಿಗಳಲ್ಲಿ “ಯು” ಆಕಾರದ ಕಿಂಡಿಕೋಣೆಯ ಕಲ್ಗೋರಿಯೊಂದು ಗಮನಾರ್ಹವಾಗಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವಾಗಿತ್ತೆಂದು ಹೇಳಬಹುದು.[33]

೪೮. ಇಂಗಳಗಿ : ತಾಲೂಕು ಕೇಂದ್ರವಾದ ಹೊಸಪೇಟೆಯಿಂದ ೧೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಇಲ್ಲಿಯೇ ಹಾಳಾಗಿರುವ ಬೂದಿದಿಬ್ಬವೊಂದನ್ನು ಗುರುತಿಸಲಾಗಿದ್ದು, ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವೆಂದು ಹೇಳಬಹುದು.[34]

೪೯. ವೆಂಕಟಾಪುರ : ತಾಲೂಕು ಕೇಂದ್ರವಾದ ಹೊಸಪೇಟೆಯಿಂದ ೧೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಗುರುತಿಸಲಾಗಿದೆ. ಅಲ್ಲದೆ ಆನೆಗೊಂದಿಗೆ ಹೋಗುವ ರಸ್ತೆಯ ಎಡಬದಿಯ ಬೆಟ್ಟದಲ್ಲಿ ವರ್ಣಚಿತ್ರಗಳನ್ನು ಹಾಗೂ ಗ್ರಾಮದ ಪೂರ್ವಭಾಗದ ಬೆಟ್ಟದಲ್ಲಿ ಮತ್ತೊಂದು ವರ್ಣಚಿತ್ರ ಮತ್ತು ಕುಟ್ಟು ಚಿತ್ರಗಳನ್ನು ಇಲ್ಲಿ ಶೋಧಿಸಲಾಗಿದೆ.[35]ಇಲ್ಲಿ ಬೂದಿದಿಬ್ಬವೊಂದನ್ನು ವಿದ್ವಾಂಸರು ಗುರುತಿಸಿದ್ದು, ಅದನ್ನು ‘ವಾಲಿಕಾಷ್ಠ’ ಎಂದು ಕರೆಯುತ್ತಿರುವುದು ಗಮನಾರ್ಹವಾಗಿದೆ. ಗ್ರಾಮದ ವಾಯವ್ಯ ಭಾಗದ ಭರಮದೇವರ ಚಿಕ್ಕಗುಡಿಯಲ್ಲಿ ನವಶಿಲಾಯುಗದ ಬೃಹತ್ ನಯಗೊಳಿಸಿದ ಕಪ್ಪುಕಲ್ಲಿನ ಕೊಡಲಿಯೊಂದು ಇದ್ದು, ಮಹತ್ವ ಪಡೆದಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವೆಂದು ಹೇಳಬಹುದು.[36]

೫೦. ಬುಕ್ಕಸಾಗರ : ತಾಲೂಕು ಕೇಂದ್ರವಾದ ಹೊಸಪೇಟೆಯಿಂದ ೨೨ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಮತ್ತು ಅದೇ ಕಾಲದ ಉಜ್ಜಿ ನಯಗೊಳಿಸಿದ ಕೊಡಲಿ ಮತ್ತು ಮಡಕೆ ಚೂರುಗಳನ್ನು ಇಲ್ಲಿನ ವಾಯವ್ಯ ಭಾಗದ ಬೆಟ್ಟದಲ್ಲಿ ಹಾಗು ಕರಿಸಿದ್ದೇಶ್ವರ ಮಠದ ಬಲಭಾಗದ ಬೆಟ್ಟದಲ್ಲಿ ಇದೇ ರೀತಿಯ ಅವಶೇಷಗಳನ್ನು ಶೋಧಿಸಲಾಗಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು, ಆದಿಮಾನವನ ನಿವಾಸ ಸ್ಥಾನವೆಂದು ಹೇಳಬಹುದು.[37]

೫೧. ಜುಮ್ಮೋಬನಹಳ್ಳಿ : ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ೩೭ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಆದಿ ಹಳೆಶಿಲಾಯುಗ ಸಂಸ್ಕೃತಿಗೆ ಸೇರಿದ ಅಬ್ಬೇವಿಲಿಯನ್ ತಂತ್ರಗಾರಿಕೆಯಿಂದ ತಯಾರಿಸಿದ ಶಿಲಾಕೊಡಲಿಯನ್ನು ಇಲ್ಲಿ ಶೋಧಿಸಲಾಗಿದೆ.ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೫೩. ಸುಣ್ಣಮರಡಿ : ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ೪೭ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಶಿಲಾಗೋರಿಗಳನ್ನು ಮತ್ತು ಈ ಕಾಲದ ಮಡಕೆ ಚೂರುಗಳನ್ನು ಇಲ್ಲಿ ಶೋಧಿಸಲಾಗಿದೆ. ಇದರಿಂದ ಇದು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.[38]

೫೪. ಸಿಡೇಗಲ್ಲು : ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ೩೯ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಕಾಲದ ಮಡಕೆ ಚೂರು ಮತ್ತು ವರ್ಣ ಚಿತ್ರಗಳನ್ನು ಇಲ್ಲಿ ಶೋಧಿಸಲಾಗಿದೆ. ಇದರಿಂದ ಆದಿಮಾನವನ ವಾಸಸ್ಥಾನವಿರಬಹುದೆಂದು ಮತ್ತು ಇದು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.[39]

೫೫. ಗುಡೇಕೋಟೆ : ತಾಲೂಕು ಕೇಂದ್ರವಾದ ಕೂಡ್ಲಿಗಿಯಿಂದ ೩೦ ಕಿ.ಮೀ. ದೂರವಿರುವ ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಗೆ ಸೇರಿದ ವಿವಿಧ ಸೂಕ್ಷ್ಮ ಶಿಲಾ ಉಪಕರಣಗಳನ್ನು ಮತ್ತು ನವಶಿಲಾಯುಗ ಕಾಲದ ಮಡಕೆ ಚೂರು ಮತ್ತು ವರ್ಣಚಿತ್ರಗಳನ್ನು ಇಲ್ಲಿ ಶೋಧಿಸಲಾಗಿದೆ. ಅಲ್ಲದೆ ಇಲ್ಲಿಯೇ ಬೃಹತ್ ಶಿಲಾಯುಗದ ಮಡಕೆಗಳು ಮತ್ತು ವಿವಿಧ ಮಾದರಿಯ ಶಿಲಾಗೋರಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಇದು ಆದಿಮಾನವನ ವಾಸಸ್ಥಾನವಿರಬಹುದೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.[40]

ಬಿ) ಕೊಪ್ಪಳ ಜಿಲ್ಲೆಯ ನೆಲೆಗಳು

ಜಿಲ್ಲೆಯ ವಿವಿಧೆಡೆ ಆದಿಮಾನವನ ಹಲವು ನೆಲೆಗಳಿದ್ದು, ಅವುಗಳನ್ನು ಸಂಕ್ಷಿಪ್ತವಾಗಿ ಅಧ್ಯಯನ ಮಾಡಲಾಗಿದ್ದು, ಆ ವಿವರ ಈ ಮುಂದಿನಂತಿದೆ.

೧) ಅಗೋಲಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೯ ಕಿ.ಮೀ.ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಆದ ದಿನ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆ ಚೂರು ಮತ್ತು ವರ್ಣಚಿತ್ರಗಳನ್ನು ಮತ್ತು ಕಂಡಿಕೋಣೆಯ ಶಿಲಾಗೋರಿಗಳನ್ನು ಶೋಧಿಸಲಾಗಿದೆ.[41]ಇದರಿಂದ ಇದು ಆದಿ ಮಾನವ ವಾಸಸ್ಥಾನವಿರಬಹುದೆಂದು ಮತ್ತು ಇದು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೨. ಅರಹಾಳ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೯ ಕಿ.ಮೀ. ದೂರದಲ್ಲಿದ್ದು, ತಾಮ್ರ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[42]ಇದರಿಂದ ಇದು ಆದಿಮಾನವನ ವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೩. ಆರ್ನಾಳ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೯ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[43]ಇದರ ಆಧಾರದ ಮೇಲೆ ಇದು ಆದಿಮಾನವನ ವಾಸಸ್ಥಾನ ಮತ್ತು ಇದು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೪. ಅರಳಿಹಳ್ಳಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ವರ್ಣಚಿತ್ರಗಳನ್ನು ಮತ್ತು ಬೃಹತ್ ಶಿಲಾಯುಗದ ಶಿಲಾವೃತ್ತಗಳನ್ನು ಹಾಗು ಕಂಡಿ ಕೋಣೆಯ ಶಿಲಾಗೋರಿಗಳನ್ನು ಶೋಧಿಸಲಾಗಿದೆ.[44]ಇವುಗಳ ಆಧಾರದಿಂದ ಇದು ಆದಿಮಾನವನ ವಾಸಸ್ಥಾನ ಮತ್ತು ಪ್ರಾಗೈತಿಹಾಸಿಕ ನೆಲೆಯಾಗಿತ್ತೆಂದು ಹೇಳಬಹುದಾಗಿದೆ.

೫. ಅಂಜನಹಳ್ಳಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[45]ಇದರಿಂದ ಇದು ಆದಿಮಾನವನ ವಾಸಸ್ಥಾನವಿರಬಹುದೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೬. ಆನೆಗುಂದಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೩ ಕಿ.ಮೀ. ದೂರದಲ್ಲಿದ್ದು, ಸೂಕ್ಷ್ಮ ಶಿಲಾಯುಗ, ನವಶಿಲಾಯುಗ, ಶಿಲಾ ತಾಮ್ರಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಾಲದ ಗವಿ ವರ್ಣಚಿತ್ರಗಳು ದೊರೆತಿವೆ. ಅವು ಕಂದು ಬಣ್ಣವನ್ನು ಹೊಂದಿದ್ದು, ಜಿಂಕೆ, ಹೋರಿ ಹಾಗೂ ಇತರೆ ಚಿತ್ರಗಳು ಕಂಡುಬಂದಿವೆ. ಇಲ್ಲಿ ಶಿಲೋಪಕರಣಗಳನ್ನು ಕ್ವಾರ್ಟ್ಸ್ ಶಿಲೆಯಲ್ಲಿ ರೂಪಿಸಿದ್ದು, ಅವುಗಳಲ್ಲಿ ಹೆರೆಚಕ್ಕೆ ಉಪಕರಣ ಮುಖ್ಯವಾಗಿ ದೊರತಿದೆ. ಈ ಗ್ರಾಮದ ಪಶ್ಚಿಮಕ್ಕೆ ತುಂಗಭದ್ರಾ ನದಿಯ ಬಲದಂಡೆಯ ಹತ್ತಿರ ನವಶಿಲಾಯುಗ ಕಾಲದ ‘ವಾಲೀ ದಿಬ್ಬ ಅಥವಾ ವಾಲಿಕಾಷ್ಠವು’ ದೊರೆತಿದ್ದು, ಇಲ್ಲಿಯೇ ಕಪ್ಪು, ಕೆಂಪು ವರ್ಣದ ಗೆರೆಗಳಿರುವ ಹಾಗೂ ಕೆಂಪು ಮಡಕೆ ಭಾಗಗಳು ದೊರೆತಿವೆ. ಅಲ್ಲದೆ ಇದು ಶಿಲಾ ತಾಮ್ರಯುಗ ಸಂಸ್ಕೃತಿಯ ನೆಲೆಯೂ ಇದಾಗಿದ್ದು, ಅದರ ಕೆಲವು ಗುರುತುಗಳು ದೊರೆತಿವೆ. ಇಲ್ಲಿಯೇ ನಾಲ್ಕುಕಡೆ ಬಂಡೆಗಳ ಮೇಲಿನ ಚಿತ್ರಗಳನ್ನು ಗುರುತಿಸಲಾಗಿದೆ. ಇಲ್ಲಿಯೂ ವಿವಿಧ ಮೃಗಗಳು ಹಾಗೂ ಮಾನವರು ಚಿತ್ರಿತರಾಗಿರುವುದನ್ನು ನೋಡಬಹುದು. ಇಲ್ಲಿನ ಒಂದು ಚಿತ್ರದಲ್ಲಿ ಮಾನವನೊಬ್ಬನಿಗೆ ಬಾಲ ಇರುವಂತೆ ವಿಶೇಷವಾಗಿ ಚಿತ್ರಿಸಲಾಗಿದೆ. ಇದೇ ಆನೆಗುಂದಿ ಪ್ರದೇಶದಲ್ಲಿ ಇನ್ನೂ ಕೆಲವೆಡೆ ಮೇಲಿನ ಕಾಲದ ಚಿತ್ರಗಳನ್ನು ಗಮನಿಸಲಾಗಿದೆ. ಅಲ್ಲಿಯೂ ಸಹ ವಿಶೇಷ ಆಕರ್ಷಕ ರೀತಿಯಲ್ಲಿ ಎತ್ತುಗಳು ಮತ್ತು ಇತರ ವನ್ಯಮೃಗಗಳ ಚಿತ್ರಗಳನ್ನು ಬಿಡಿಸಲಾಗಿದೆ. ಇವುಗಳಲ್ಲಿ ಕೆಲವು ಕಂದು ಕೆಂಪು ಬಣ್ಣಗಳಲ್ಲಿ ಚಿತ್ರಿಸಲ್ಪಟ್ಟಿದ್ದರೆ, ಇನ್ನುಳಿದವು ಬಿಳಿಸುಣ್ಣದಿಂದ ಚಿತ್ರಿತವಾಗಿವೆ. ಇನ್ನೊಂದು ಕಡೆ ಇರುವ ದಪ್ಪ ಗೋಡೆಯಾಕಾರದ ಚಿತ್ರವು ಕುತೂಹಲಕಾರಿಯಾಗಿದೆ. ದಪ್ಪನಾದ ಗೋಡೆಯ ಮಧ್ಯದಲ್ಲಿ ದುಂಡಾದ ಕಂಬಗಳನ್ನು ನೆಟ್ಟಿರುವಂತೆ ತೋರಿಸಲಾಗಿದೆ. ವೃತ್ತಾಕಾರದ ಚಿತ್ರದ ಮಧ್ಯದಲ್ಲಿ ಮಾನವಾಕಾರಗಳು ಇವೆ.[46]ಇವೆಲ್ಲವು ಸೇರಿ ನವಶಿಲಾಯುಗದ ಮಾನವನು ನೆಲಸಿದ್ದ ಸ್ಥಳಗಳು ಅವನು ನಡೆಸುತ್ತಿದ್ದ ಜೀವನ ಪ್ರವೃತಿ ಅವನು ರೂಢಿಸಿಕೊಂಡ ಸಂಸ್ಕೃತಿ, ಆ ದಿಶೆಯಲ್ಲಿ ಅವನು ಸಾಧಿಸಿದ ಪ್ರಗತಿ ಮೊದಲಾದ ಅಂಶಗಳನ್ನು ಸೂಚಿಸುತ್ತವೆ.

ಅಲ್ಲದೆ ಇದೇ ನೆಲೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ವಾಸ್ತವ್ಯದ ನೆಲೆ ಇದ್ದು, ಅದರಲ್ಲಿ ಕಪ್ಪು ಮತ್ತು ಕೆಂಪು ವರ್ಣದ ಮೃತ್ಪಾತ್ರೆಗಳು ಮತ್ತು ಶಿಲಾಗೋರಿ, ಕಬ್ಬಿಣದ ಕಿಟ್ಟಗಳು ದೊರೆತಿವೆ.[47]ಇದರಿಂದ ಈ ಕಾಲಘಟ್ಟದಲ್ಲಿ ಈ ನೆಲೆಯ ವಹಿಸಿಸಬಹುದಾದ ಪಾತ್ರವನ್ನು ಗ್ರಹಿಸಬಹುದಾಗಿದೆ.

೭. ಇಂದರ್ಗಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಅಲ್ಲದೆ ಇದೇ ಕಾಲಕ್ಕೆ ಸೇರಿದ ಒಂದು ಬೂದಿದಿಬ್ಬವನ್ನು ಇಲ್ಲಿಯೇ ಬೆಳಕಿಗೆ ತರಲಾಗಿದೆ.[48] ಇದರಿಂದ ಇದು ಆದಿಮಾನವನ ವಾಸಸ್ಥಾನ ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೮. ಕನಕಗಿರಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೨ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆ ಚೂರು ಮತ್ತು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[49] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೯. ಕಕ್ಕರಗೋಳ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೨ ಕಿ.ಮೀ. ದೂರದಲ್ಲಿದ್ದು, ಸೂಕ್ಷ್ಮಶಿಲಾಯುಗ ಮತ್ತು ನವಶಿಲಾಯುಗದ ಸಂಸ್ಕೃತಿಗೆ ಸೇರಿದ ಮಾನವ ನೇಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು, ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[50] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೧೦. ಕೇಸರಹಟ್ಟಿ : ಇದು ತಾಲೂಕು ಕೆಂದ್ರವಾದ ಗಂಗಾವತಿಯಿಂದ ೨೭ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ವರ್ಣಚಿತ್ರಗಳನ್ನು ಶೋಧಿಸಿಲಾಗಿದೆ.[51]ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೧೧. ಕುಂಟೋಜಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೨ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ.[52]ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

೧೨. ಗಡ್ಡಿ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೦ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಿಕೆಚೂರು ಮತ್ತು ಕಂಡಿ ಹಾಗು ಹಾದಿಕೋಣೆ ಶಿಲಾಗೋರಿಗಳನ್ನು ಶೋಧಿಸಲಾಗಿದೆ.[53] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದುದಾಗಿದೆ.

೧೩. ಗುಡೂರು : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಮದ ೧೬ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಶಿಥಿಲವಾಗಿರುವ ಶಿಲಾವೃತ್ತ, ಕಂಡಿ ಹಾಗು ಹಾದಿಕೋಣೆ ಶಿಲಾಗೋರಿಗಳನ್ನು ಶೋಧಿಸಲಾಗಿದೆ.[54] ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳುಬಹುದಾಗಿದೆ.

೧೪. ಗೋನಾಳ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೧೨ ಕಿ.ಮೀ. ದೂರದಲ್ಲಿದ್ದು, ನವಶಿಲಾಯುಗ, ಶಿಲಾ ತಾಮ್ರಯುಗದ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಕುಟ್ಟು, ಗವಿ ವರ್ಣಚಿತ್ರಗಳನ್ನು ಶೋಧಿಸಲಾಗಿದೆ. ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.[55]

೧೫. ಚಿಕ್ಕಬೆನಕಲ್ : ಇದು ತಾಲೂಕು ಕೇಂದ್ರವಾದ ಗಂಗಾವತಿಯಿಂದ ೨೮ ಕಿ.ಮೀ. ದೂರದಲ್ಲಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಮಾನವ ನೆಲೆಯಾಗಿದೆ. ಇಲ್ಲಿ ಈ ಕಾಲದ ಮಡಕೆಚೂರು ಮತ್ತು ಶಿಥಿಲವಾಗಿರುವ ಕಂಡಿ ಹಾಗು ಹಾದಿಕೋಣೆ ಶಿಲಾಗೋರಿಗಳನ್ನು ಶೋಧಿಸಲಾಗಿದೆ.[56]ಇದರಿಂದ ಇದು ಆದಿಮಾನವನ ಆವಾಸಸ್ಥಾನವೆಂದು ಮತ್ತು ಪ್ರಾಗೈತಿಹಾಸಿಕ ನೆಲೆಯೆಂದು ಹೇಳಬಹುದಾಗಿದೆ.

 

[1] Foote R.B. 1916, Indian Prehistoric & Protohistoric Antiquities, Madras.

[2] Foote R.B. 1916, Indian Prehistoric & Protohistoric Antiquities, Madras.

[3] ತಿಪ್ಪೇಸ್ವಾಮಿ ಎಚ್., ಕೂಡ್ಲಿಗಿ ತಾಲೂಕಿನ ಶಿಲಾಯುಗ ಸಂಸ್ಕೃತಿ,

[4] Foote R.B. 1916, Indian Prehistoric & Protohistoric Antiquities, Madras.

[5] Foote R.B. 1916, Indian Prehistoric & Protohistoric Antiquities, Madras.

[6] Foote R.B. 1916, Indian Prehistoric & Protohistoric Antiquities, Madras.

[7] ಇಂ. ಆ. ರಿ. ೧೯೭೭-೭೮

[8] ಇಂ. ಆ. ರಿ. ೧೯೮೭-೮೮

[9] ಇಂ. ಆ. ರಿ. ೧೯೮೭-೮೮

[10] ಇಂ. ಆ. ರಿ. ೧೯೮೭-೮೮

[11] ಇಂ. ಆ. ರಿ. ೧೯೮೭-೮೮

[12] ಇಂ. ಆ. ರಿ. ೧೯೮೭-೮೮

[13] Foote R.B. 1916, Indian Prehistoric & Protohistoric Antiquities, Madras.

[14] Foote R.B. 1916, Indian Prehistoric & Protohistoric Antiquities, Madras, 1987-88

[15] ೧. Foote R.B. 1916, Indian Prehistoric & Protohistoric Antiquities, Madras, 1987-88

1) Padayya K 1973, Investigation into the nealithic culture of the shorapur Doab south India Leiden

2) ಇಂ. ಆ. ರಿ. 1987-88

[16] Taylar M 1853, in Jouy Bombay Branch Royal Asiatic Soc. 2. ಇಂ. ಆ. ರಿ. ೧೯೮೭-೮೮

[17] ಇಂ. ಆ. ರಿ. ೧೯೯೩-೯೪

ಇಂ. ಆ. ರಿ. ೧೯೯೨-೯೩

[18] ಇಂ. ಆ. ರಿ. ೧೯೮೭-೮೮

[19] ಇಂ. ಆ. ರಿ. ೧೯೬೨-೬೩

[20] Foote R.B. 1916, Indian Prehistoric & Protohistoric Antiquities, Madras, 1987-88

[21] Paddayya K., 1973, Investigation into the Neolithc culture of Shorapur Doab South indian, Leiden.

[22] Foote R.B. 1916, Indian Prehistoric & Protohistoric Antiquities, Madras.

[23] ಇ.ದ-೧೩  ೧೯೯೮

[24] ಇ.ದ-೧೪ ೧೯೯೯

[25] Foote R.B. 1916, Indian Prehistoric & Protohistoric Antiquities, Madras.

[26] ಇ.ದ-೧೩  ೧೯೯೮

[27] ಇಂ.ಅ.ರಿ. ೧೯೯೩-೯೪

[28] ಬಳ್ಳಾರಿ ಜಿಲ್ಲಾ ಗೆಜಟಿಯರ್, ಪು.

ಎಚ್. ತಿಪ್ಪೇಸ್ವಾಮಿ, ಹಂಪಿ ಪರಿಸರದ ಸ್ಮಾರಕಗಳು,

[29] ಎಚ್. ತಿಪ್ಪೇಸ್ವಾಮಿ, ೧೯೯೮, ಕೂಡ್ಲಿಗಿ ತಾಲೂಕಿನ ಪ್ರಾಗೈತಿಹಾಸಿಕ ನೆಲಗಳು.

[30] ಕನ್ನಡಪ್ರಭ ದಿನಪತ್ರಿಕೆ, ದಿನಾಂಕ ೧೪-೧೨-೨೦೦೦

[31] A.R. Hyderabad Dept. Arch 1936-37

[32] ಕರ್ನಾಟಕ ಭಾರತಿ ೬-೧

[33] ಇಂ.ಅ.ರಿ. ೧೯೭೦-೧

[34] ಇಂ.ಅ.ರಿ. ೧೯೭೨-೭೩ ಕರ್ನಾಟಕ ಭಾರತಿ ೬-೧

[35] ಸುಂದರ ಅ. ೧೯೯೪ ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು

[36] ಇಂ.ಅ.ರಿ. ೧೯೬೧-೬೨

ಇಂ.ಅ.ರಿ. ೧೯೬೨-೬೩

[37] ಇಂ.ಅ.ರಿ. ೧೯೭೭-೭೮

ಇಂ.ಅ.ರಿ. ೧೯೭೮-೭೯

ಇ.ದ.೮ ೧೯೯೩,

[38] ಇಂ.ಅ.ರಿ.  ೧೯೭೮

ಸುಂದರ ಅ, ೧೯೪ ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು

[39] Paddayya. K, 1973, Investigation into the Nolithic culture of shorapur Doub S. India Seiden Fig 29.

[40] ಇಂ.ಅ.ರಿ. ೧೯೬೨

ಇಂ.ಅ.ರಿ. ೧೯೭೭-೭೮

[41] ಕರ್ನಾಟಕ ಭಾರತಿ

[42] ಇಂ.ಅ.ರಿ. ೧೯೭೦

ಕರ್ನಾಟಕ ಭಾರತಿ

[43] ಕರ್ನಾಟಕ ಭಾರತಿ

[44] ಕರ್ನಾಟಕ ಆರತಿ

[45] ಇಂ.ಅ.ರಿ. ೧೯೭೦

ಕರ್ನಾಟಕ ಭಾರತಿ

[46] Allchin F.R. 1963 Neolithic cattle-keepers, India, Cambridge.

[47] ಇಂ.ಅ.ರಿ. ೧೯೭೭-೭೮

[48] ಕರ್ನಾಟಕ ಭಾರತಿ

[49] ಇಂ.ಅ.ರಿ. ೧೯೭೧

[50] Jair Geological survey if Hyderabad

[51] ಇ.ದ. ೮ ೧೯೯೩

[52] ಇಂ.ಅ.ರಿ. ೧೯ ೬೨

[53] ಇಂ.ಅ.ರಿ. ೧೯೭೭-೭೮

ಇ.ದ. ೮೧ ೧೯೯೩

ಸುಂದರ ಅ. ೧೯೯೪, ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು

[54] ಇಂ.ಅ.ರಿ. ೧೯೭೭-೭೮

ಇದ. ೮೧ ೧೯೯೩

ಸುಂದರ ಅ. ೧೯೯೪, ಕರ್ನಾಟಕ ಪ್ರಾಗೈತಿಹಾಸ ಕಾಲದ ಕಲೆ, ಬೆಂಗಳೂರು

[55] ಇ.ದ. ೮ ೧೯೯೩

೧. ಇ.ದ. ೧೩ ೧೯೯೮

೨. ೮೩,A.I-೪. ೧೯೪೭

[56] ಕರ್ನಾಟಕ ಭಾರತಿ