. ಪಾರಿಭಾಷಿಕಶಬ್ದಕೋಶ

ಅಣೆ, ಅಣೆಕಟ್ಟು : ನದಿ, ಹಳ್ಳ ಮೊದಲಾದವುಗಳು ನೀರನ್ನು ತಡೆಯಲು ಹಾಕಿರುವ ಅಡ್ಡಗಟ್ಟೆ

ಅನ್ಯಾಯ : ತೆರಿಗೆ

ಅಳಿವು : ತೆರಿಗೆ

ಅಂತರಗಂಗ : ಅಂತರ್ಜಲ, ಊಟೆ

ಆಯಕಟ್ಟು : ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಜಮೀನು, ಗದ್ದೆ

ಅಳಮಂಜಿ : ಸಹಕಾರಿ ತತ್ವವಿಧಿಗಳಂತೆ ನೀರಾವರಿ ವ್ಯವಸ್ಥೆಗಳ ಸಂರಕ್ಷಣಾ ಕೆಲಸ (ನೋಡಿ ಕೂಡಿಮರಾಮತ್)

ಊಟಿ ಕಾಲುವೆ : ಊಟಿ ನೀರಿನ ಕಾಲುವೆ

ಏತ, ಏತಂ : ಬಾವಿಯಿಂದ ನೀರನ್ನು ಮೇಲೆತ್ತುವ ಸಾಧನ

ಏರಿ : ಕೆರೆ, ಕೆರೆಯ ಕಟ್ಟೆ

ಏರಿ ಆಯಂ : ಕೆರೆ ನೀರಿನ ಉಪಯೋಗದಿಂದ ಬರುವ ಆದಾಯ

ಏರಿ ಬಿರಾಡ : ಕೆರೆ ನೀರಿನ ಸೌಲಭ್ಯಕ್ಕಾಗಿ ಸಲ್ಲಿಸಬೇಕಾದ ತೆರಿಗೆ

ಏರಿ ವಾರಿಯಂ : ಕೆರೆ ಮತ್ತು ಅದರ ನೀರಾವರಿ ಸೌಲಭ್ಯಗಳನ್ನು ಪರಿಶೀಲಿಸುವ ಉಸ್ತುವಾರಿ ಸಮಿತಿ

ಏರಿ ಮೀನ್ ವಿಲೈಪಣಂ : ಕೆರೆಯಲ್ಲಿ ಮೀನು ಹಿಡಿಯುವ ಗುತ್ತಿಗೆಯಿಂದ ಬಂದ ಹಣ

ಕಟ್ಟು ಕೊಡುಗೆ, ಕಟ್ಟುಗೊಡುಗೆ : ಕೆರೆ ಉಸ್ತುವಾರಿ ಅಥವಾ/ ಮತ್ತು ಸಂರಕ್ಷಣೆಗಾಗಿ ನೀಡಿದ ಮಾನ್ಯ (ಗದ್ದೆ)

ಕಟ್ಟು ಮಾನ್ಯ : ಕೆರೆ ಉಸ್ತುವಾರಿ ಅಥವಾ / ಮತ್ತು ಸಂರಕ್ಷಣೆಗಾಗಿ ನೀಡಿದ ಮಾನ್ಯ (ಗದ್ದೆ)

ಕಪಿಲೆ : ಎತ್ತುಗಳನ್ನು ಹೂಡಿ ಬಾವಿಯಿಂದ ನೀರೆತ್ತುವ ಸಾಧನ

ಕೂಡಿಮರಾಮತ್ : ಸಹಕಾರಿ ತತ್ವ, ವಿಧಿಗಳಂತೆ ನೀರಾವರಿ ವ್ಯವಸ್ಥೆಗಳ ಸಂರಕ್ಷಣಾ ಕಾರ್ಯ (ನೋಡಿ ಅಳಮಂಜಿ)

ಕೆರೆ, ಕಟ್ಟಿ, ಕಟ್ಟೆ, ಕೊಳ, ಕುಂಟೆ : ಏರಿ ನಿರ್ಮಿಸಿ ನೀರು ಸಂಗ್ರಹಿಸಿಡುವ ಜಲಾಶಯ

ಕೆರೆಬಂಡಿ : ಕೆರೆ ಏರಿಯ ಸಂರಕ್ಷಣೆಗಾಗಿ ಏರ್ಪಡಿಸಲಾಗಿರುತ್ತಿದ್ದ ಎತ್ತಿನ ಬಂಡಿ

ಕೆರೆಬಂಡಿ ಹಣ : ಕೆರೆ ಏರಿಯ ಸಂರಕ್ಷಣೆಗೆ ಬೇಕಾದ ಎತ್ತಿನ ಬಂಡಿಯ ವ್ಯವಸ್ಥೆಗಾಗಿ ಸ್ಥಳೀಯವಾಗಿ ಸಂಗ್ರಹಿಸುತ್ತಿದ್ದ ತೆರಿಗೆ

ಕೆರೆ ಬಂಡಿ ಕೊಡುಗೆ : ಕೆರೆ ಏರಿಯ ಸಂರಕ್ಷಣೆಗೆ ಬೇಕಾದ ಎತ್ತಿನ ಬಂಡಿಯ ವ್ಯವಸ್ಥೆಗೆ ನೀಡಲಾದ ಮಾನ್ಯ ಅಥವಾ ಗದ್ದೆ

ಗುಂಡು : ಚಿಕ್ಕ ಜಲಾಶಯ ಅಥವಾ ಜಲ ಸಂಗ್ರಹಗೊಂಡ ಸ್ಥಳ

ಚಕ್ರ ಪಣಮ್ : ಬಂಗಾರದ ನಾಣ್ಯ

ಚಿಲುಮೆ : ನೀರಿನ ಬಾವಿ

ಚೆರುವು (ತೆಲುಗು) : ಕೆರೆ

ಜಲಯಂತ್ರ : ನೀರೆತ್ತುವ ಸಾಧನ

ನೀರುಗಂಟಿ : ಕೆರೆ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸುವ ನಿರ್ವಾಹಕ

ತೂಮು : ಒಂದು ಭೂ ಅಳತೆ : ಕೆಲವೊಮ್ಮೆ ಧಾನ್ಯಗಳ ಅಳತೆ (ಒಂದು ನಿರ್ದಿಷ್ಟ ಜಮೀನಿಗೆ ಬಿತ್ತುವಷ್ಟು)

ತೂಮು, ತೂಬು ನೀರನ್ನು ಕೆರೆಯಿಂದ ಹಾಯಿಸುವ ಕೆರೆಯ ಭಾಗ

ದಶವಂದ : ದಶವಂಧ, ದಸವಂದ : ಕೆರೆ ನಿರ್ಮಾಣ ಮತ್ತು ಉಸ್ತುವಾರಿಗೆ ದಾನವಾಗಿ ನೀಡಿದ ಭೂಮಿ

ದೇವದಾನ : ದೇವಾಲಯಕ್ಕೆ ಕೊಟ್ಟ ಉಂಬಳಿ

ದೇವ ಮಾತೃಕ : ಮಳೆಯ ನೀರಿನಿಂದಲೇ ಸಾಗುವಳಿ ಮಾಡುವ ಜಮೀನು

ದೋಣೆ : ಕಲ್ಲಾಸರೆಗಳಲ್ಲಿ ಸ್ವಾಭಾವಿಕವಾಗಿ ಉಂಟಾದ ಜಲಸಂಗ್ರಹ

ನದಿ ಮಾತೃಕ : ನದಿ ನೀರಿನ ಕಾಲುವೆ

ನದಿ ತಟಾಕ : ನದಿ ನೀರನ್ನು ಪಡೆಯುವ ಕೆರೆ

ನರ್‌ ಪಣಂ : ಚಿನ್ನದ ನಾಣ್ಯ

ನೀರ್‌ ಕೂಲಿ : ನೀರಾವರಿಯ ಒಂದು ತೆರಿಗೆ

ಪುಟ್ಟಿ (ತೆಲುಗು) : ಧಾನ್ಯಗಳ ಒಂದು ಅಳತೆ

ಬಿತ್ತುವಟ್ಟ, ಕೆರೆ ಬಿತ್ತುವಟ್ಟು : ನಿರ್ದಿಷ್ಟ ಅಳತೆಯ ಜಮೀನು, ಅಲ್ಲಿ ಬಿತ್ತಲು ಬೇಕಾಗುವ ಬೀಜದ ಪ್ರಮಾಣದಿಂದ ಅಳೆಯಲಾಗುವುದು.

ಮರಾಮತ್ : ಸರಿಪಡಿಸುವುದು

ಮತ್ತರ್ : ಭೂ ಅಳತೆ

ಮಹಾಸಭ : ಮಹಾಜನ, ವಾರಿಯಂ : ನೀರಾವರಿಯ ವ್ಯವಸ್ಥೆಗಳ ಉಸ್ತುವಾರಿಗಾಗಿ ಗ್ರಾಮೀಣ ಸದಸ್ಯ ಜನರುಗಳಿಂದ ಕೂಡಿರುವ ಸಮಿತಿ

ರಹಟ್ಟಿಡಿಗೆ : ರಾಟೆಗಡಿಗೆ : ಚಕ್ರ, ಮಡಕೆ, ಹಗ್ಗ, ಸರಪಳಿಗಳಿಂದ ಕೂಡಿದ ನೀರೆತ್ತುವ ಸಾಧನ

ಸಮುದ್ರ, ಸರೋವರ : ವಿಶಾಲ ನೀರಿನ ಹರಿವಿನಿಂದ ಕೂಡಿದ ಕೆರೆ

. ಗ್ರಂಥಋಣ

ಪ್ರಾಥಮಿಕ ಆಕರಗಳು

ಅಚೀವ್‌ಮೆಂಟ್ಸ್ ಇನ್ ಮೈನರ್ ಇರಿಗೇಶನ್ ಇನ್ ಕರ್ನಾಟಕ ಸ್ಟೇಟ್ ಫಾರ್ ಟು ಡಿಕೇಡ್ಸ್, ೧೯೫೬-೫೭ ಟು ೧೯೭೬-೭೭, ಚೀಫ್ ಎಂಜಿನಿಯರ್, ಎಂಟಿ ಅಂಡ್ ಪಿಎಚ್‌, ಪಿ.ಡಬ್ಲ್ಯು,ಡಿ. ಬೆಂಗಳೂರು ೧೯೭೭

ಆನ್ಯುಯಲ್ ರಿಪೋರ್ಟ್ಸ್‌ ಆನ್ ಇಂಡಿಯನ್ ಎಪಿಗ್ರಾಫಿ

ಆನ್ಯುಯಲ್ ರಿಪೋರ್ಟ್ಸ್ ಆನ್ ಸೌಥ್ ಇಂಡಿಯನ್ ಎಪಿಗ್ರಾಫಿ

ಇಂಡಿಯಾ ಇರಿಗೇಶನ್ ಕಮಿಶನ್ ರಿಪೋರ್ಟ್‌, ೧೯೦೧-೦೩

ಇಂಡಿಯಾ ಇರಿಗೇಶನ್ ಕಮಿಶನ್ ರಿಪೋರ್ಟ್, ಸೆಲೆಕ್ಟೆಡ್ ಎವಿಡೆನ್ಸ್, ೧೯೦೧-೦೩

ಇಂಪೀರಿಯಲ್ ಗ್ಯಾಸೆಟಿಯರ್, ೧೯೦೭

ಇನ್ಸ್‌ಕ್ರಿಪ್ಷನ್ಸ್ ಇನ್ ಕನ್ನಡ ಡಿಸ್ಟ್ರಿಕ್ಟ್ಸ್ ಆಫ್ ಹೈದರಾಬಾದ್ ಸ್ಟೇಟ್

ಎಕನಾಮಿಕ್ ಅನಾಲಿಸಿಸ್ ಆಫ್ ಡಿಸಿಸ್ಟಿಂಗ್ ಆಫ್ ಟ್ಯಾಂಕ್ಸ್ ವಿಥ್ ಸ್ಪೇಷಲ್ ರೆಫರೆನ್ಸ್ ಟು ಮಲ್ನಾಡ್, ಪ್ಲಾನಿಂಗ್ ಡಿಪಾರ್ಟ್‌‌ಮೆಂಟ್‌, ೧೯೭೮

ಎಪಿಗ್ರಾಫಿಯ ಕರ್ನಾಟಿಕ (ಹಳೆಯ) ಸಂ. I ರಿಂದ X

ಎಪ್ರಿಗ್ರಾಫಿಯ ಕರ್ನಾಟಿಕ (ಹೊಸ), ಸಂ. I ರಿಂದ IX

ಎಪಿಗ್ರಾಫಿಯಾ ಇಂಡಿಕಾ ಸಂಪುಟಗಳು

ಕರ್ನಾಟಕ ಸ್ಟೇಟ್ ಗ್ಯಾಸೆಟಿಯರ್ಸ್, ಸೂರ್ಯನಾಥ ಕಾಮತ್, ಯು (ಸಂ), ಭಾಗಗಳು I ಮತ್ತು II ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಗ್ಯಾಸೆಟಿಯರ್ಸ್‌

ಕೌಟಿಲ್ಯಸ್ ಅರ್ಥಶಾಸ್ತ್ರ (ಅನು) ಶಾಮಶಾಸ್ತ್ರಿ, ಆರ್., ೮ ನೆಯ ಆವೃತ್ತಿ, ಮೈಸೂರು, ೧೯೬೭

ಗ್ಯಾಸೆಟಿಯರ್ ಆಫ್ ಮೈಸೂರ್ ಅಂಡ್ ಕೂರ್ಗ, ಬೆಂಗಳೂರು, ೧೯೭೬

ಗೌರ್ನಮೆಂಟ್ ಆಫ್ ಕರ್ನಾಟಕ, ಸೋರ್ಸಸ್ ಆಫ್ ಇರಿಗೇಶನ್ ಅಂಡ್ ಏರಿಯಾ ಇರಿಗೇಟೆಡ್ ಇನ್ ಕರ್ನಾಟಕ ಫ್ರಂ ೧೯೫೦-೫೧ ಟು ೧೯೭೦-೭೧, ಬ್ಯೂರೋ ಆಫ್ ಎಕ್‌ನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್, ಬೆಂಗಳೂರು, ೧೯೭೪

ಗೌರ್ನಮೆಂಟ್ ಆಫ್ ಮೈಸೂರ್, ರೆಕಾರ್ಡ್ಸ್ ಕನೆಕ್ಟೆಡ್ ವಿಥ್ ದಿ ಟ್ಯಾಂಕ್ ಸಿಸ್ಟಮ್ ಇನ್ ಮೈಸೂರು, ಕರ್ನಾಟಕ ಸ್ಟೇಟ್ ಆರ್ ಕೈವಸ್

ಗೌರ್ನಮೆಂಟ್ ಆಫ್ ಹೈದರಾಬಾದ್, ಎಡ್ಮಿನಿಸ್ಟ್ರೇಶನ್ ರಿಪೋರ್ಟ್ಸ್ ಆಫ್ ಪಿ,ಡಬ್ಲ್ಯು,ಡಿ. ಇರಿಗೇಶನ್, ೧೮೮೫-೮೬ ಅಂಡ್ ೧೯೦೫-೦೬

ಗೌರ್ನಮೆಂಟ್ ಆಫ್ ಇಂಡಿಯಾ, ರಿಪೋರ್ಟ್ ಆನ್ ದಿ ಮೈಸೂರ್ ಜೆನರಲ್ ಸೆನ್ಸ್‌ಸ್, ೧೮೭೧

ನ್ಯಾಶನಲ್ ವರ್ಕ್‌‌ಶಾಪ್ ಆನ್ ಟ್ಯಾಂಕ್ ಇರಿಗೇಶನ್ ಪ್ರಾಕ್ಟೀಸಸ್ ಅಂಡ್ ಇರಿಗೇಶನ್ ಮ್ಯಾನೇಜ್‌ಮೆಂಟ್ ಇನ್ ವಿಜಯನಗರ ಚಾನೆಲ್ಸ್, ಇನ್ ಕರ್ನಾಟಕ, ಇರಿಗೇಶನ್ ಡಿಪಾರ್ಟ್‌‌ಮೆಂಟ್ ಸೋವಿನಿಯರ್, ಮುನಿರಾಬಾದ್, ನವೆಂಬರ್, ೧೯೯೧

ಟ್ಯಾಂಕ್ ಮ್ಯಾನ್ಯುಯಲ್ ಮೈಸೂರ್ ಸ್ಟೇಟ್, ೧೯೧೬, ಕರ್ನಾಟಕ ಸ್ಟೇಟ್ ಅರ್‌ಕೈವಸ್

ಟೋಪೋಗ್ರಾಫಿಕಲ್ ಲಿಸ್ಟ ಆಫ್ ದಿ ಇನ್ಸ್‌ಕ್ರಿಪ್ಷನ್ಸ್ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ, ೩ ಸಂಪುಟಗಳು

ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನ್ಯುಯಲ್, ಬಳ್ಳಾರಿ ಡಿಸ್ಟ್ರಿಕ್ಟ್, ಜಾನ್ ಕೆಲ್‌ಸೆಲ್, ೧೮೭೨, ಡಬ್ಲ್ಯು ಫ್ರಾನ್ಸಿಸ್, ೧೯೦೩

ಮೈನರ್ ಇರಿಗೇಶನ್ ಸ್ಟಾಟಿಸ್‌ಟಿಕ್ಸ್ ಇನ್ ಮೈಸೂರ್ ಸ್ಟೇಟ್ ಆನ್ ೩೧-೩-೧೯೬೯, ಚೀಫ್ ಇಂಜನಿಯರ್, ಜೆನರಲ್, ಪಿಡಬ್ಲ್ಯುಡಿ, ಬೆಂಗಳೂರು

ಮೈಸೂರು ಗ್ಯಾಸೆಟಿಯರ್, ಹಯವದನರಾವ್ (ಸಂ), ಬೆಂಗಳೂರು, ೧೯೩೦

ರಿಪೋರ್ಟ ಆನ್ ಮೈನರ್ ಇರಿಗೇಶನ್ ವರ್ಕ್ಸ್ ಇನ್ ಮೈಸೂರು ಸ್ಟೇಟ್, ಕಮಿಟಿ ಆನ್ ಪ್ಲಾನ್ ಪ್ರಾಜೆಕ್ಟ್, ೧೯೫೯

ರಿಪೋರ್ಟ್ ಆಫ್ ದಿ ಕಮಿಟಿ ಆನ್ ಟ್ಯಾಂಕ್ ಮೈನ್‌‌ಟೆನನ್ಸ್ ಸ್ಕೀಂ, ೧೯೦೨- ಆಸ್ ಕಂಟೈನ್ಡ್ ಇನ್ ದಿ ಗೌರ್ನಮೆಂಟ್ ಆರ್ಡರ್ ನಂ. ೫೨೫೧-೬೧- ಅಗ್ರಿ- ೬೨೬-೦೮-೬, ಡೇಟೆಡ್೧೫ ಡಿಸೆಂಬರ್, ೧೯೦೪

ವಿಜಯನಗರ ಪ್ರೊಗ್ರೆಸ್ ಆಫ್ ರಿಸರ್ಚ್ ಸಂಪುಟಗಳು

ವಿಜ್ಞಾನೇಶ್ವರ, ದಿ ಮಿತಾಕ್ಷರ ಆಫ್ ಯಾಜ್ಞವಲ್ಕ್ಯ, ಚರ್‌ಪುರೆ, ಜೆ.ಆರ್. (ಅನು), ೨ ನೆಯ ಆವೃತ್ತಿ, ಬಾಂಬೆ, ೧೯೩೯

ಸ್ಟಡಿ ಆಫ್ ಪ್ರಾಬ್ಲಮ್ ಆಫ್ ಮೈನರ್ ಇರಿಗೇಶನ್, ಪ್ಲಾನ್ ಇವಾಲ್ಯುಯೇಶನ್ ಡಿವಿಜನ್, ಪ್ಲಾನಿಂಗ್ ಕಮಿಶನ್, ೧೯೬೧

ಸೆನ್ಸಸ್ ಆಫ್ ಇಂಡಿಯಾ, ಪಾರ್ಟ್‌ I , ೧೮೯೧

ಹ್ಯಾಂಡ್ ಬುಕ್ ಆನ್ ಹೈಡ್ರೋಮೆಟ್ರಾಲಜಿ ಅಂಡ್ ಹೈಡ್ರಾಲಜಿ ಆಫ್ ಕರ್ನಾಟಕ, ಪಾರ್ಟ್‌ I, ಸಂ.I ಮತ್ತು II, ಚೀಫ್ ಎಂಜಿನಿಯರ್, ಡಬ್ಲ್ಯುಆರ್‌ಡಿಒ, ಪಿಡಬ್ಲ್ಯುಡಿ, ಬೆಂಗಳೂರು, ೧೯೮೦

ಅನುಷಂಗಿಕ ಆಕರಗಳು

ಅಪ್ಪಾದೊರೈ, ಎ. ೧೯೯೦, ಎಕ್‌ನಾಮಿಕ್ ಕಂಡೀಶನ್ಸ್ ಇನ್ ಸದರನ್ ಇಂಡಿಯಾ, ೨ ಸಂಪುಟಗಳು, ಮದ್ರಾಸ್ ಯೂನಿವರ್ಸಿಟಿ, ಮದ್ರಾಸ್

ಕಲಬುರ್ಗಿ, ಎಂ.ಎಂ. ೧೯೯೪, ಕರ್ನಾಟಕದ ಕೈಫಿಯತ್ತುಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ

ಕಾರ್ತಿಕೇಯ ಐ, ಶರ್ಮ, ೧೯೬೨ “ಏನ್ಷಿಯಂಟ್ ಕೆನಾಲ್ಸ್”, ಜರ್ನಲ್ ಆಫ್ ಇಂಡಿಯನ್ ಹಿಸ್ಟರಿ, ಸಂ. XL, ಭಾಗ II

———–”———– ೧೯೮೯ ಕೆನಾಲ್ಸ್ ಅಂಡ್ ಚಾನೆಲ್ಸ್ ಆನ್ ಎನ್‌ಸೈಕ್ಲೋಪಿಡಿಯಾ ಆಫ್ ಇಂಡಿಯನ್ ಆರ್ಕಿಯಾಲಜಿ (ಇಐಎ), ಘೋಷ್, ಎ. (ಸಂ), ನವದೆಹಲಿ

ಕಾರ್ತಿಕೇಯ ಐ, ಶರ್ಮ, ೧೯೮೯, ವಾಟರ್ ರಿಸರ್‌ವಾಯರ್ (ಇಐಎ), ನವದೆಹಲಿ

ಕುಪ್ಪುಸ್ವಾಮಿ, ಜಿ.ಆರ್., ೧೯೭೫ ಎಕ್‌ನಾಮಿಕ್ ಕಂಡೀಶನ್ಸ್ ಇನ್ ಕರ್ನಾಟಕ – ೯೭೩-೧೩೩೬ ಕರ್ನಾಟಕ ಯೂನಿವರ್ಸಿಟಿ, ಧಾರವಾಡ

———–”———– ೧೯೮೦-೮೧ “ಇರಿಗೇಶನ್ ಸಿಸ್ಟಮ್ ಡೈನಾಸ್ಟಿಕ್ ಅನಾಲಿಸಿಸ್, ಜರ್ನಲ್ ಆಫ್ ಕರ್ನಾಟಕ ಯೂನಿವರ್ಸಿಟಿ, ಸೋಶಿಯಲ್ ಸೆನ್ಸ್‌ಸ್ (ಜಿಕೆಯು), ಸಂ. XIX

———–”———– ೧೯೮೩, “ಇರಿಗೇಶನ್ ಸಿಸ್ಟಮ್ ಇನ್ ಕರ್ನಾಟಕ- ಹೊಯ್ಸಳ ಪಿರಿಯಡ್ – ಎ ಸ್ಟಾಟಿಸ್‌ಟಿಕಲ್ ಅನಾಲಿಸಿಸ್” , ಜಿಕೆಯು, ಸಂ. XIX

———–”———– ೧೯೮೩, ಇರಿಗೇಶನ್ ಫೆಸಿಲಿಟಿಸ್ ಪ್ರೊವೈಡೆಡ್ ಬೈ ಫೆಂಡಾಕರಿ ಫ್ಯಾಮಿಲಿಸ್ ಇನ್ ಸೌಥ್ ಕರ್ನಾಟಕ” ಕ್ವಾರ್ಟನರಿ ಜರ್ನಲ್ ಆಫ್ ಮಿಥಿಕ್ ಸೊಸೈಟಿ ( ಕ್ಯೂಜೆಎಎಂಎಸ್), LXXIV, ಸಂ. ೧

———–”———– ೧೯೮೩ “ಸಮ್ ಆಸ್ಪೆಕ್ಟ್ಸ ಆಫ್ ಇರಿಗೇಶನ್ ಸಿಸ್ಟಮ್ ಇನ್ ಕರ್ನಾಟಕ- ಹಿಸ್ಟಾರಿಕಲ್ ಪಿರಿಯೆಡ್”, ಕ್ಯೂಜೆಎಂಎಸ್, LXXIV, ಸಂ. ೪

———–”———–೧೯೮೭ “ಇರಿಗೇಶನ್ ಪೊಟೆನ್‌‌ಶಿಯಾಲಿಟಿಸ್ ಆಫ್ ಮೇಜರ್ ಟ್ಯಾಂಕ್ಸ್ ಇನ್ ಕರ್ನಾಟಕ, ಕ್ಯೂಜೆಎಂಎಸ್, ಸಂ. LXXVIII, ಸಂ. ೩ ಮತ್ತು ೪

———–”———– ೧೯೮೮ “ಇರಿಗೇಶನ್ ಸಿಸ್ಟಮ್ – ಸ್ಕೋಪ್ ಅಂಡ್ ಮೆಥಡಾಲಜಿ” ಕ್ಯೂಜೆಎಂಎಸ್, LXXXI, ಸಂ.

———–”———– ೧೯೯೦ “ಇರಿಗೇಶನ್ ಸಿಸ್ಟಮ್- ಮೆಥೆಡ್ಸ್ ಅಂಡ್ ಟೆಕ್‌ನಿಕ್ಸ್ ” ಕ್ಯೂಜೆಎಂಎಸ್, LXXII, ಸಂ. ೩ ಮತ್ತು ೪ ——- ೧೯೯೧ “ಇರಿಗೇಶನ್ ಸಿಸ್ಟಮ್ ಇನ್ ಕರ್ನಾಟಕ- ಬಿಲ್ಡ್- ಆಸ್ಪೆಕ್ಟೆಸ್” ಜ್ಯೂಜೆಎಂಎಸ್ LXXXIII, ಸಂ. ೧.

ಕುಲಕರ್ಣಿ, ಆರ್.ಬಿ., ೧೯೮೨, ಹಂಪಿ ರೂಯಿನ್ಸ್ (ಮರುಮುದ್ರಣ), ದೆಹಲಿ

ಕೊಟ್ರಯ್ಯ, ಸಿ.ಟಿ.ಎಂ. ೧೯೯೫, ಇರಿಗೇಶನ್‌ ಸಿಸ್ಟಮ್ ಅಂಡರ್ ವಿಜಯನಗರ ಎಂಪೈರ್, ಮೈಸೂರು.

———–”———– ೨೦೦೧, ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ (ಅನು), ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಗುರುರಾಜಾಚಾರ್, ಎಸ್., ೧೯೭೪, ಸಮ್ ಆಸ್ಪೆಕ್ಟ್ಸ್ ಆಫ್ ಎಕ್‌ನಾಮಿಕ್ ಅಂಡ್ ಸೋಶಿಯಲ್ ಲೈಫ್ ಇನ್ ಕರ್ನಾಟಕ, ೧೦೦೦-೧೩೦೦, ಮೈಸೂರು ಯೂನಿವರ್ಸಿಟಿ, ಮೈಸೂರು.

ಚತುರ್ವೇದಿ, ಬಿ. ವಿ., ೧೯೬೮, “ದಿ ಆರಿಜಿನ್ ಅಂಡ್ ಡೆವಲಪ್‌ಮೆಂಟ್ ಆಫ್ ಟ್ಯಾಂಕ್ ಇರಿಗೇಶನ್ ಇನ್ ಪೆನಿನ್‌ಸುಲಾರ್ ಇಂಡಿಯಾ” ಡೆಕ್ಕನ್ ಜಿಯೋಗ್ರಾಫರ್, ಸಂ.VI

ಚಿದಾನಂದಮೂರ್ತಿ, ಎಂ., ೧೯೬೬, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

———–”———– ೧೯೯೩, ಹೊಸತು ಹೊಸತು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಡಾಮನಿಕ್ ಜೆ. ಡೇವಿಸನ್ – ಜೆನ್ ಕಿನ್ಸ್, ೧೯೯೭, ದಿ ಇರಿಗೇಶನ್ ಅಂಡ್ ವಾಟರ್ ಸಪ್ಲೈ ಸಿಸ್ಟಮ್ಸ್ ಆಫ್ ವಿಜಯನಗರ, ದೆಹಲಿ.

ಡೇವಿಡ್ ಲುಡ್ಡಕ್, “ ಪಾಟ್ರೆನೇಜ್ ಅಂಡ್ ಇರಿಗೇಶನ್ ಇನ್ ತಮಿಳ್ ನಾಡು ಎ ಲಾಂಗ್ ಟರ್ಮ್ ವ್ಯೂ” ದಿ ಇಂಡಿಯನ್ ಎಕ್‌ನಾಮಿಕ್ ಅಂಡ್ ಸೋಶಿಯಲ್ ಹಿಸ್ಟರಿ ರಿವ್ಯೂ, ಸಂ. XVI, ಸಂ. ೩

ದಾರ್‌ವಾರ್, ಬಿ. ಡಿ. ೧೯೮೮, ಇರಿಗೇಶನ್ ಇನ್ ಇಂಡಿಯನ್ ಅಗ್ರಿಕಲ್ಚರ್, ನವದೆಹಲಿ

ದಿವಾಕರ್, ಆರ್.ಆರ್. (ಸಂ) , ೧೯೬೮, ಕರ್ನಾಟಕ ಥ್ರೂ ದಿ ಏಜೆಸ್, ಬೆಂಗಳೂರು

ದೀಕ್ಷಿತ್, ಜಿ.ಎಸ್., ೧೯೬೪, ಲೋಕಲ್ ಸೆಲ್ಫ್ ಗೌರ್ನಮೆಂಟ್ ಇನ್ ಮಿಡೀವಲ್ ಕರ್ನಾಟಕ, ಕರ್ನಾಟಕ ಯೂನಿವರ್ಸಿಟಿ, ಧಾರವಾಡ

———–”———– ೧೯೯೬ ಅಧ್ಯಕ್ಷರ ಭಾಷಣ, ಕರ್ನಾಟಕ ಇತಿಹಾಸ ಅಕಾಡೆಮಿಯ ೧೧ನೆಯ ವಾರ್ಷಿಕ ಅಧಿವೇಶನ, ಧಾರವಾಡ

ದೀಕ್ಷಿತ್ ಜಿ.ಎಸ್. ಕುಪ್ಪುಸ್ವಾಮಿ, ಜಿ.ಆರ್. ಮತ್ತು ಮೋಹನ್ ಎಸ್. ಕೆ., ೧೯೯೩, ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ ಎ ಹಿಸ್ಟಾರಿಕಲ್ ಸರ್ವೆ, ಬೆಂಗಳೂರು

———–”———– ೨೦೦೦, ಕರ್ನಾಟಕದಲ್ಲಿ ಕೆರೆ ನೀರಾವರಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ

ದೀಕ್ಷಿತರ್, ವಿ.ಆರ್.ಆರ್., ೧೯೪೫ “ಎ ಹಿಸ್ಟರಿ ಆಫ್ ಇರಿಗೇಶನ್ ಇನ್ ಸೌಥ್ ಇಂಡಿಯಾ” ಇಂಡಿಯನ್ ಕಲ್ಚರ್, ಸಂ.XII, ಕಲ್ಕತ್ತಾ

ಧ್ರುವನಾರಾಯಣ, ಎಂ. (ಅನು), ೨೦೦೧, ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ನರಸಿಂಹಮ್, ಡಬ್ಲ್ಯು,ವಿ.ಎಸ್., ೧೯೯೬, “ಬಯಕಾರ ರಾಮಪ್ಪನ ೧೬ನೆಯ ಶತಮಾನದ ಕೆಲವು ಹೊಸ ಶಾಸನಗಳು” ಇತಿಹಾಸ ದರ್ಶನ, ಸಂ. ೧೧, ಬೆಂಗಳೂರು.

ನಾಡಕರ್ಣಿ ಎಂ.ವಿ. ಮತ್ತು ಇತರರು, ೧೯೭೯, ಇಂಪಾಕ್ಟ್ ಆಫ್ ಕೆನಾಲ್, ವೆಲ್ ಅಂಡ್ ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ, ಬಾಂಬೆ.

ನೀಲಕಂಠಶಾಸ್ತ್ರಿ, ಕೆ.ಎ., ದಿ ಚೋಳಾಸ್, ೧೯೮೪ (ದ್ವಿತೀಯ ಮರುಮುದ್ರಣ), ಯೂನಿವರ್ಸಿಟಿ ಆಫ್ ಮದ್ರಾಸ್, ಮದ್ರಾಸು

ನೀಲತ್ತಹಳ್ಳಿ ಕಸ್ತೂರಿ (ಅನು), ೨೦೦೦, ಕರ್ನಾಟಕದಲ್ಲಿ ಕೆರೆ ನೀರಾವರಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಫಣಿಕ್ಕರ್, ಕೆ.ಎಂ. ೧೯೫೯, “ಜಿಯೋಗ್ರಾಫಿಕಲ್ ” ಫ್ಯಾಕ್ಟರ್ಸ ಇನ್ ಇಂಡಿಯನ್ ಹಿಸ್ಟರಿ”, ಭಾರತೀಯ ವಿದ್ಯಾ ಭವನ್, ಬಾಂಬೆ

ಬರ್ಟನ್ ಸ್ಟೈನ್, ೧೯೮೦, ಪೆಸೆಂಟ್ ಸ್ಟೇಟ್ ಅಂಡ್ ಸೊಸೈಟಿ ಇನ್ ಮಿಡಿವಲ್ ಸೌಥ್ ಇಂಡಿಯಾ, ನವದೆಹಲಿ

ಭಟ್ಟ, ಹೆಚ್‌,ಸಿ.ಕೆ., ೧೯೯೫, “ಎಂಜಿನಿಯರಿಂಗ್ ಇನ್ ಕರ್ನಾಟಕ” ಕರ್ನಾಟಕ ದರ್ಶನ, ಆರ್.ಆರ್. ದಿವಾಕರ್ ಅಭಿನಂದನಾ ಗ್ರಂಥ

ಮಹಾಲಿಂಗಂ, ಟಿ.ವಿ., ೧೯೩೬, “ಇರಿಗೇಶನ್ ಅಂಡರ್ ವಿಜಯನಗರ”, ಡಾ. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಸ್ಮರಣಾರ್ಥ ಸಂಪುಟ, ಮದ್ರಾಸು.

ಮಹಾಲಿಂಗಂ, ಟಿ.ವಿ., ೧೯೬೯, ಅಡ್ ಮಿನಿಸ್ಟ್ರೇಶನ್ ಅಂಡ್ ಸೋಶಿಯಲ್ ಲೈಫ್ ಅಂಡರ್ ವಿಜಯನಗರ, ಭಾಗ, I, ಅಡ್ ಮಿನಿಸ್ಟ್ರೇಶನ್, ಮದ್ರಾಸು.

———–”———– ೧೯೭೫, ಸೋಶಿಯಲ್ ಲೈಫ್, ಮದ್ರಾಸು

ರಾಂಧವ, ಎಂ.ಎಸ್. ೧೯೮೦, ಹಿಸ್ಟರಿ ಆಫ್ ಅಗ್ರಿಕಲ್ಚರ್ ಇನ್ ಇಂಡಿಯಾ, ೩ ಸಂಪುಟಗಳು.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ (ಐಸಿಎಆರ್), ನವದೆಹಲಿ

ರಾಬರ್ಟ್‌ ಸೀವೆಲ್, ೧೯೬೨, ದಿ ಫರ್‌ಗಾಟೆನ್ ಎಂಪೈರ್ ಭಾರತ ಆವೃತ್ತಿ, ನವದೆಹಲಿ

ರಾಯ್, ಜೆ.ಸಿ., ೧೯೪೮, ದಿ ಲೈಫ್ ಇನ್ ಏನ್ಷಿಯಂಟ್ ಇಂಡಿಯಾ, ಕಲ್ಕತ್ತಾ

ರಾಯಚೌಧರಿ, ಎಸ್.ಪಿ., ೧೯೫೩, ಅಗ್ರಿಕಲ್ಚರ್ ಇನ್ ಏನ್ಷಿಯಂಟ್ ಇಂಡಿಯಾ, ಐಸಿಎಆರ್, ನವದೆಹಲಿ.

ಲಲ್ಲಂಜಿ ಗೋಪಾಲ, ೧೯೮೦, ಆಸ್ಪೆಕ್ಟ್ಸ್ ಆಫ್ ಹಿಸ್ಟರಿ ಆಫ್ ಅಗ್ರಿಕಲ್ಚರ್ ಇನ್ ಏನ್ಷಿಯಂಟ್ ಇಂಡಿಯಾ, ವಾರಣಾಸಿ

ಲಾ., ಬಿ. ಸಿ. ೧೯೭೬, ಹಿಸ್ಟಾರಿಕಲ್ ಜಿಯೋಗ್ರಾಫಿ ಆಫ್ ಏನ್ಷಿಯಂಟ್ ಇಂಡಿಯಾ, ಕಲ್ಕತ್ತಾ

ವಸುಂಧರ ಫಿಲಿಯೋಜ (ಸಂ), ೧೯೭೭, ವಿಜಯನಗರ ಎಂಪೈರ್, ನವದೆಹಲಿ

ವೆಂಕಟಯ್ಯ, ವಿ., “ಇರಿಗೇಶನ್ ಇನ್ ಸದರನ್ ಇಂಡಿಯಾ ಇನ್ ಏನ್ಷಿಯಂಟ್ ಟೈಮ್ಸ್” ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಆನ್ಯುಯಲ್ ರಿಪೋರ್ಟ್‌, ೧೯೦೩-೦೪

ವೆಂಕಟರತ್ನಂ, ಎ.ವಿ., ಮತ್ತು ಸರಸ್ವತಿ, ಎಂ.ಎಲ್. ೧೯೯೬ “ಇರಿಗೇಶನ್ ಇನ್ ವಿಜಯನಗರ ವಿಥ್ ರೆಫರೆನ್ಸ್ ಟು ಟ್ಯಾಂಕ್ಸ್, ಅಣೆಕಟ್ಸ್ ಅಂಡ್ ಚಾನೆಲ್ಸ್” ಎಪಿಗ್ರಾಫಿ, ನ್ಯೂಮಿಸ್‌ಮ್ಯಾಟಿಕ್ಸ್ ಅಂಡ್ ಅದರ್ ಆಸ್ಪೆಕ್ಟ್ಸ್ ಇನ್ ಕರ್ನಾಟಕ, ದೇವರಾಜ ಡಿ.ವಿ. ಮತ್ತು ಚೆನ್ನಬಸಪ್ಪ ಎಸ್. ಪಾಟೀಲ, (ಸಂ), ಮೈಸೂರು

ವೆಂಕಟರಮಣಯ್ಯ, ಎನ್., ೧೯೩೫ ಸ್ಟಡೀಸ್ ಇನ್ ದಿ ಹಿಸ್ಟರಿ ಆಫ್ ಥರ್ಡ್‌ ಡೈನಾಸ್ಟಿ ಆಫ್ ವಿಜಯನಗರ, ಯೂನಿವರ್ಸಿಟಿ ಆಫ್ ಮದ್ರಾಸ್, ಮದ್ರಾಸು

ಶಿವರುದ್ರಸ್ವಾಮಿ,ಎಸ್.ಎನ್. ೨೦೦೦, ಬಯಕಾರ ರಾಮಪ್ಪ, ಮಂಟಪಮಾಲೆ, ಸಂ. ೪೦, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಶ್ರೀನಿವಾಸನ್, ಟಿ.ಎಂ., ೧೯೯೧ ಇರಿಗೇಶನ್ ಅಂಡ್ ವಾಟರ್ ಸಪ್ಲೈ – ಸೌಥ್ ಇಂಡಿಯಾ, ೨೦೦ ಬಿಸಿ ಟು ೧೬೦೦ ಎಡಿ, ಮದ್ರಾಸು

ಸುಬ್ರಮಣ್ಯ ಅಯ್ಯರ್, ಕೆ.ವಿ., ಹಿಸ್ಟಾರಿಕಲ್ ಸ್ಕೆಚಸ್ ಆಫ್ ಏನ್ಷಿಯಂಟ್ ಡೆಕ್ಕನ್, ಸಂ. I (೧೯೧೭), ಸಂ. III (೧೯೬೯), ಕೊಯಮತ್ತೂರು.

ಸೂರ್ಯನಾಥ್ ಕಾಮತ್, ಯು., ೧೯೯೦, “ಹಿಸ್ಟಾರಿಕಲ್ ರೋಲ್ ಆಫ್ ಟ್ಯಾಂಕ್ಸ್ ಇನ್ ಕರ್ನಾಟಕ”, ಮಾರ್ಚ ಆಫ್ ಕರ್ನಾಟಕ, ಸಂ. ಸ. ೨೮, ಬೆಂಗಳೂರು.