ವೈಯಕ್ತಿಕ ಯೋಜನೆಯಡಿಯಲ್ಲಿ ‘ಹೊಸಪೇಟೆ ತಾಲೂಕಿನ ವಿಜಯನಗರ ಕಾಲದ ಕೆರೆಗಳು, ಒಂದು ಅಧ್ಯಯನ’ ಎಂಬ ಯೋಜನೆಯನ್ನು ೧೯೯೫-೯೬ ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಯೋಜನೆಯನ್ನು ಪ್ರಕಟಿಸುವಲ್ಲಿ ಆಸ್ಥೆವಹಿಸಿ, ಉತ್ತೇಜಿಸಿದ ಮಾನ್ಯ ಕುಲಪತಿಗಳಾದ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಯೋಜನೆಯನ್ನು ನನಗೆ ವಹಿಸಿಕೊಟ್ಟು ಸಂಶೋಧನೆ ಕೈಗೊಳ್ಳಲು ಅನುಮತಿ ನೀಡಿ ಪ್ರೋತ್ಸಾಹಿಸಿದ ವಿಶ್ವಾಂತ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರರಿಗೆ ನಾನು ಆಭಾರಿಯಾಗಿದ್ದೇನೆ.

ಯೋಜನೆಯ ಪ್ರತಿಯೊಂದು ಹಂತದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರಗಳನ್ನು ನೀಡಿದ ಡಾ. ಕೆ.ವಿ. ನಾರಾಯಣ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಯೋಜನೆಯಲ್ಲಿದ್ದ ಲೋಪದೋಷ ಮತ್ತು ಓರೆಕೋರೆಗಳನ್ನು ತೋರಿ ಹಸ್ತಪ್ರತಿಯು ಅಚ್ಚುಕಟ್ಟಾಗುವಂತೆ ಸೂಕ್ತ ಸಲಹೆಗಳನ್ನು ನೀಡಿರುವ ತಜ್ಞರಾದ ಡಾ. ಶ್ರೀನಿವಾಸ ರಿತ್ತಿಯವರಿಗೆ ನನ್ನ ನಮನಗಳು. ಈ ಸಂಶೋಧನೆಯನ್ನು ೧೯೯೫-೯೬ ನೇ ಸಾಲಿನಲ್ಲಿ ಕೈಗೊಂಡು ಪೂರೈಸಲಾಗಿತ್ತು. ಅ ನಂತರದ ವರ್ಷಗಳಲ್ಲಿ ಅನೇಕ ಸಂಶೋಧನೆಗಳು ಈ ನಿಟ್ಟಿನಲ್ಲಿ ನಡೆದಿದ್ದು, ಅನೇಕ ಪುಸ್ತಕ ಮತ್ತು ಲೇಖನಗಳು ಪ್ರಕಟಗೊಂಡಿವೆ. ಅವುಗಳನ್ನು ಸೇರಿಸಿ ಹಸ್ತಪ್ರತಿಯನ್ನು ತಜ್ಞರ ಸಲಹೆಯಂತೆ ಪರಿಷ್ಕರಿಸಲಾಗಿದೆ.

ಯೋಜನೆಯನ್ನು ಪೂರೈಸುವಲ್ಲಿ ಸಲಹೆ ಮತ್ತು ಸಹಕಾರಗಳನ್ನು ನೀಡಿರುವ ವಿಭಾಗದ ಮುಖ್ಯಸ್ಥ ಶ್ರೀ ಬಾಲಸುಬ್ರಹ್ಮಣ್ಯರವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ವಿಜಯನಗರ ಕಾಲದ ಕೆರೆ ನೀರಾವರಿ ಪದ್ಧತಿಯನ್ನು ಕುರಿತು ಆಳವಾಗಿ ಅಧ್ಯಯನ ನಡೆಸಿದ ಶ್ರೀ ಸಿ.ಟಿ.ಎಂ. ಕೊಟ್ರಯ್ಯನವರು ಈ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಚರ್ಚಿಸಿ ಅವಶ್ಯಕ ಮಾಹಿತಿಗಳನ್ನು ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ.

ಹಸ್ತಪ್ರತಿಯ ಕೆಲವು ಅಧ್ಯಾಯಗಳನ್ನು ತಿದ್ದಿದ ಪ್ರೊ. ಮಲ್ಲೇಪುರಂ ಜಿ. ವೆಂಟೇಶ್‌ರವರಿಗೆ ನಾನು ಕೃತಜ್ಞನಾಗಿದ್ದೇನೆ. ಯೋಜನೆಯನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಸಹಕಾರ ನೀಡಿದ ಡಾ. ಕೆ. ಎಂ. ಸುರೇಶ, ಡಾ.ಹಿ.ಚಿ. ಬೋರಲಿಂಗಯ್ಯ, ಪ್ರೊ. ಲಕ್ಷ್ಮಣ್ ತೆಲಗಾವಿ, ಪ್ರೊ. ಎ.ವಿ.ನಾವಡ, ಡಾ. ಸಿ. ಮಹದೇವ, ಶ್ರೀ ರಮೇಶ್ ನಾಯ್ಕ ಅವರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಈ ಯೋಜನೆಗೆ ಸಂಬಂಧಿಸಿದ ನನ್ನ ಎಲ್ಲ ಕ್ಷೇತ್ರ ಕಾರ್ಯಗಳಲ್ಲಿಯೂ ನನ್ನೊಡನಿದ್ದು ಸಲಹೆ ಮತ್ತು ಸಹಕಾರ ನೀಡಿದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪುರಾತತ್ವಜ್ಞರಾದ ನನ್ನ ಆತ್ಮೀಯ ಮಿತ್ರ ಶ್ರೀ ಡಬ್ಲ್ಯು ಬಿ.ಎಸ್. ನರಸಿಂಹನ್‌ರವರಿಗೆ ನಾನು ಆಭಾರಿಯಾಗಿದ್ದೇನೆ.

ಯೋಜನೆಯ ವಿವಿಧ ಹಂತಗಳಲ್ಲಿ ನನಗೆ ಸಹಕರಿಸಿದ ಡಾ. ಕೆ.ಜಿ. ಭಟ್ಟಸೂರಿ, ಡಾ. ಎಸ್.ವೈ. ಸೋಮಶೇಖರ, ಶ್ರೀ ವಿಜಯಕುಮಾರ್, ಶ್ರೀ ಅಜಿತ್, ಶ್ರೀ ಅಬ್ದುಲ್ ನಬಿ ಮತ್ತು ಸಹೋದ್ಯೋಗಿ ಮಿತ್ರರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಯೋಜನೆಗೆ ಸಂಬಂಧಿಸಿದ ಗ್ರಂಥಗಳನ್ನು ಪರಾಮರ್ಶಿಸಲು ಅನುಮತಿ ನೀಡಿದ ಈ ಕೆಳಕಂಡ ಗ್ರಂಥಾಲಯಗಳಿಗೆ ನಾನು ಕೃತಜ್ಞನಾಗಿದ್ದೇನೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ, ನಿದೇಶಕ (ಶಾಸನ) ಕಚೇರಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಮೈಸೂರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕಮಲಾಪುರ ವಸ್ತು ಸಂಗ್ರಹಾಲಯ.

ಪುಸ್ತಕವು ಸುಂದರವಾಗಿ ಮೂಡಿಬರಲು ಸಲಹೆ ಸಹಕಾರಗಳನ್ನಿತ್ತ ಪ್ರಸಾರಾಂಗದ ಸಹಾಯಕ ನಿರ್ದೇಶಕ ಶ್ರೀ ಸುಜ್ಞಾನಮೂರ್ತಿ, ಸುಂದರ ಮುಖಪುಟ ರಚಿಸಿರುವ ಕಲಾವಿದ ಶ್ರೀ ಕೆ. ಕೆ. ಮಕಾಳಿ, ಸುಂದರವಾಗಿ ಅಕ್ಷರ ಸಂಯೋಜಿಸಿದ ಸಂಧ್ಯಾ ಕಂಪ್ಯೂಟರ್ ಗ್ರಾಫಿಕ್ಸ್, ಹೊಸಪೇಟೆ ಮತ್ತು ಅಚ್ಚುಕಟ್ಟಾಗಿ ಮುದ್ರಿಸಿದ ವಿಶ್ವಾಸ್ ಪ್ರಿಂಟ್ಸ್, ಬೆಂಗಳೂರು ಮತ್ತು ಪ್ರಸಾರಾಂಗದ ಎಲ್ಲ ಮಿತ್ರರಿಗೆ ನಾನು ಕೃತಜ್ಞನಾಗಿದ್ದೇನೆ.

ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸಹಾಯ ಮಾಡಿದ ನನ್ನ ತಾಯಿ ಮತ್ತು ಮಡದಿಗೆ ಹಾಗೂ ಹೊಸಪೇಟೆ ತಾಲೂಕಿನ ಎಲ್ಲ ಗ್ರಾಮದ ಜನತೆಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ಸಿ.ಎಸ್. ವಾಸುದೇವನ್