ಹಂಪಿ ಮೆಟ್ಟಿಲು ಪುಷ್ಕರಣಿಯು ಪರಿಪೂರ್ಣ ಪ್ರಮಾಣಬದ್ಧ ಸುಂದರ ನಿರ್ಮಾಣವಾಗಿದೆ. ಈ ಮೆಟ್ಟಿಲು ಪುಷ್ಕರಣಿಯು ನೆಲಮಟ್ಟಕ್ಕಿಂತ ಕೆಳಗೆ ಇದ್ದು ಇದನ್ನು ಕೇಂದ್ರ ಪುರಾತತ್ವ ಇಲಾಖೆಯವರು ೧೯೮೪-೮೫ನೇ ಸಾಲಿನಲ್ಲಿ ಶೋಧಿಸಿದ್ದಾರೆ. ಪುಷ್ಕರಣಿಯು ಐದು ಹಂತಗಳಲ್ಲಿದೆ. ಪ್ರತಿ ಮೇಲಿನ ಹಂತವು ಕೆಳಗಿನ ಹಂತಕ್ಕಿಂತ ಹೆಚ್ಚು ವಿಸ್ತಾರವಾಗಿದೆ. ಪ್ರತಿ ಹಂತವೂ ಚೌಕಾಕಾರವಾಗಿದೆ.

ಮೊದಲನೇ ಹಂತವು ೬.೯೦ x ೬.೯೦ ಮೀಟರ್‌ಇದ್ದು, ಆಳವು ೨.೪೫ ಮೀಟ್‌ರ್‌ಇದೆ. ಇದರ ನಾಲ್ಕೂ ದಿಕ್ಕಿನಲ್ಲಿ ೧೧ ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳು ಅಗಲ ಮಾತ್ರ ಹೆಚ್ಚಾಗುತ್ತಾ, ಕೊಳದ ಆಳಕ್ಕೆ ಪಕ್ಕಕ್ಕೆ ಚಲಿಸುತ್ತಾ ಇಳಿಯಬೇಕಾಗುತ್ತದೆ. ಎರಡನೇ, ಮೂರನೇ ನಾಲ್ಕನೇ ಮತ್ತು ಐದನೇ ಹಂತಗಳು ೬.೨೦ x ೬.೨೦ ಮೀ, ೧೨.೬೫ x ೧೨.೬೫ ಕಿ.ಮೀ, ೧೬.೧೦ x ೧೬.೧೦ ಮೀ. ಮತ್ತು ೨೦.೭೦ x ೨೦.೭೦ಮೀಟರ್‌ಕ್ರಮವಾಗಿ ಇದೆ. ಪ್ರತಿ ಹಂತದಲ್ಲಿ ಪಿರಾಮಿಡ್‌ಆಕಾರದ ೦೬ ಮೆಟ್ಟಿಲುಗಳಿವೆ. ಇವು ಅಗಲದಲ್ಲಿ ಮತ್ತು ಉದ್ದದಲ್ಲಿ ಹೆಚ್ಚಾಗುತ್ತಾ, ಪಕ್ಕಕ್ಕೂ ಮತ್ತು ಮುಂದಕ್ಕೂ ಚಲಿಸಲು ಅನುವು ಮಾಡಿಕೊಡುತ್ತವೆ.

ಎರಡನೇ ಹಂತದಲ್ಲಿ ಪ್ರತಿ ದಿಕ್ಕಿನಲ್ಲೂ ಮೂರು ಪಿರಮಿಡ್‌ಆಕಾರದ ಮೆಟ್ಟಿಲುಗಳಿವೆ. ಮೂರನೇ, ನಾಲ್ಕನೇ ಮತ್ತು ಐದನೇ ಹಂತದ ಪ್ರತಿ ದಿಕ್ಕಿನಲ್ಲಿ ಐದು, ಏಳು ಮತ್ತು ಒಂಭತ್ತು ಪಿರಾಮಿಡ್‌ಆಕಾರದ ಮೆಟ್ಟಿಲುಗಳಿವೆ. ಕೋಷ್ಟಕ ರೂಪದಲ್ಲಿ ಮೆಟ್ಟಿಲುಗಳ ವಿವರ ಹೀಗಿದೆ.

ಹಂತ ಹಂತದಲ್ಲಿರುವ ಮೆಟ್ಟಿಲು ನಾಲ್ಕು ದಿಕ್ಕಿನ ಮೆಟ್ಟಿಲುಗಳು
೧೨
೨೦
೨೮
೩೬
  ಒಟ್ಟು ೧೦೦

ಮೆಟ್ಟಿಲು ಪುಷ್ಕರಣಿಯ ಪ್ರತಿ ಹಂತದ ಆಳವು ಸುಮಾರು ೧.೦೫ ಮೀಟರ್‌ಇದ್ದು ಒಟ್ಟು ಆಳವು ೬.೬೫ ಮೀಟರ್‌ಇದೆ. ಪುಷ್ಕರಣಿಯ ತಳಭಾಗದಲ್ಲಿ ಕಲ್ಲುಗಳನ್ನು ಹಾಸಿದ್ದು ಅದರ ಕೆಳಗಡೆ ಮರಗಳನ್ನು ಒದಗಿಸಲಾಗಿದೆ. ಮರಳಿನ ಕವಚದಿಂದ ತಿಳಿನೀರು (ಶುದ್ಧ ನೀರು) ಮಾತ್ರ ಕೊಳದೊಳಗೆ ಬರಲು ಸಹಕಾರಿಯಾಗಿದೆ. ಮೆಟ್ಟಿಲು ಪುಷ್ಕರಣಿಯು ಪೂರ್ವನಿಯೋಜಿತ ಕಟ್ಟಡವಾಗಿದ್ದು, ಇದಕ್ಕೆ ಸಂಬಂಧಿಸಿದ ಕಲ್ಲುಗಳನ್ನು ಮೊದಲೇ ಸಿದ್ಧಪಡಿಸಲಾಗಿತ್ತೆಂದು ಕಂಡುಬರುತ್ತದೆ. ಏಕೆಂದರೆ, ಪ್ರತಿಯೊಂದು ಕಲ್ಲಿನ ಮೇಲೆ ಸಂಖ್ಯೆ, ಚಿಹ್ನೆ ಮತ್ತು ಅಕ್ಷರಗಳು ಇವೆ. ಇದರ ನಿರ್ಮಾಣ ತಾಂತ್ರಿಕತೆಯನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು.

೧. ಅಕ್ಷರಗಳು: ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳನ್ನು ಆಯಾದಿಕ್ಕಿನ ಮೊದಲ ಅಕ್ಷರವನ್ನು ಬರೆದು ಸೂಚಿಸಲಾಗಿದೆ. ಅವು ಕ್ರಮವಾಗಿ ಉ, ದ, ತು ಮತ್ತು ಪ ಎಂದು ಸೂಚಿಸಲಾಗಿದೆ. ದಕ್ಷಿಣ ದಿಕ್ಕಿನ ಕೆಲವು ಕಲ್ಲುಗಳ ಮೆಲೆ ತೆಕ ಎಂದು ಸೂಚಿಸಲಾಗಿದೆ. ಇದು ತೆಂಕಣ(ದಕ್ಷಿಣ) ಪದದ ಸಂಕ್ಷಿಪ್ತ ರೂಪವಾಗಿದೆ. ಪೂರ್ವದಿಕ್ಕಿನ ಕಲ್ಲುಗಳ ಮೆಲೆ ಪು ಬದಲಾಗಿ ತು ಎಂದು ಬರೆಯಲಾಗಿದೆ. ತೆಲುಗಿನಲ್ಲಿ ಪೂರ್ವದಿಕ್ಕನ್ನು ತೂರ್ಪು ಎಂದು ಕರೆಯುತ್ತಾರೆ. ಆದ್ದರಿಂದ ತು ತೆಲುಗು ತೂರ್ಪು ಪದದ ಸಂಕ್ಷಿಪ್ತ ರೂಪವಾಗಿದೆ.

ಐದು ಹಂತಗಳಲ್ಲಿ ಒಟ್ಟು ೩೬೬ ಮೆಟ್ಟಿಲುಗಳಿವೆ. ಪ್ರತಿ ಮೆಟ್ಟಿಲಿಗೂ ಒಂದು ಕನ್ನಡದ ವರ್ಣಮಾಲೆಯನ್ನು ಬಳಸಲಾಗಿದೆ. ಐದನೇಯ ಹಂತದ ಮೇಲೆ ಸುತ್ತಲೂ ಸಣ್ಣ ಒರಗು ದಿಂಬಿನಾಕಾರದ ಕಲ್ಲುಗಳಿವೆ. ಇದಕ್ಕೆ ಠ ಅಕ್ಷರವನ್ನು ಬಳಸಲಾಗಿದೆ. ನಾವು ಪುಷ್ಕರಣಿಯ ಆಳಕ್ಕೆ ಇಳಿಯುತ್ತಾ ಹೋದಂತೆ, ಪ್ರತಿ ಮೆಟ್ಟಿಲಿಗೆ ವರ್ಣಮಾಲೆ ಠ ನಂತರದ ಅಕ್ಷರಗಳನ್ನು ಕ್ರಮವಾಗಿ ಬಳಸಲಾಗಿದೆ. ಇದನ್ನು ಕೋಷ್ಟಕ ರೂಪದಲ್ಲಿ ಹೀಗೆ ಕೊಡಬಹದು.

ಪುಷ್ಕರಣಿಯ ಹಂತ ಮೆಟ್ಟಿಲು ಹಂತ ಮೆಟ್ಟಿಲು ಸಂಖ್ಯೆ ಕನ್ನಡ ಅಕ್ಷರ
ಆರನೇ ಹಂತ ಒರಗು ದಿಂಬು
  ಒಂದನೇ ಮೆಟ್ಟಿಲು
  ಎರಡನೇ ಮೆಟ್ಟಿಲು
  ಮೂರನೇ ಮೆಟ್ಟಿಲು
  ನಾಲ್ಕನೇ ಮೆಟ್ಟಿಲು
  ಐದನೇ   ಮೆಟ್ಟಿಲು
  ಆರನೇ   ಮೆಟ್ಟಿಲು
ನಾಲ್ಕನೇ ಹಂತ ಒಂದನೇ ಮೆಟ್ಟಿಲು
  ಎರಡನೇ ಮೆಟ್ಟಿಲು
  ಮೂರನೇ ಮೆಟ್ಟಿಲು ೧೦
  ನಾಲ್ಕನೇ ಮೆಟ್ಟಿಲು ೧೧
  ಐದನೇ   ಮೆಟ್ಟಿಲು ೧೨
  ಆರನೇ   ಮೆಟ್ಟಿಲು ೧೩
ಮೂರನೇ ಹಂತ ಒಂದನೇ ಮೆಟ್ಟಿಲು ೧೪
  ಎರಡನೇ ಮೆಟ್ಟಿಲು ೧೫
  ಮೂರನೇ ಮೆಟ್ಟಿಲು ೧೬
  ನಾಲ್ಕನೇ ಮೆಟ್ಟಿಲು ೧೭
  ಐದನೇ   ಮೆಟ್ಟಿಲು ೧೮
  ಆರನೇ   ಮೆಟ್ಟಿಲು ೧೯
ಎರಡನೇ ಹಂತ ಒಂದನೇ ಮೆಟ್ಟಿಲು ೨೦
  ಎರಡನೇ ಮೆಟ್ಟಿಲು ೨೧
  ಮೂರನೇ ಮೆಟ್ಟಿಲು ೨೨
  ನಾಲ್ಕನೇ ಮೆಟ್ಟಿಲು ೨೩ ಕ್ಷ
  ಐದನೇ   ಮೆಟ್ಟಿಲು ೨೪ ಜ್ಞ
ಮೊದಲನೇ ಹಂತ ಆರನೇ   ಮೆಟ್ಟಿಲು ೨೫ ತಿ

೨. ಚಿಹ್ನೆಗಳು: ಈಗಾಗಲೇ ಪುಷ್ಕರಣಿಯು ಐದು ಹಂತಗಳಲ್ಲಿ ಇರುವುದನ್ನು ಮೇಲೆ ತಿಳಿಸಲಾಗಿದೆ. ಪ್ರತಿ ಹಂತದ, ಪ್ರತಿ ಕಲ್ಲಿನ ಮೇಲೂ ವಿವಿಧ ಚಿಹ್ನೆಗಳಿವೆ. ಇವು ಕೂಡಾ ಒಂದೊಂದು ದಿಕ್ಕಿಗೆ ಮತ್ತು ಹಂತಕ್ಕೆ ಬೇರೆ ಬೇರೆಯಾಗಿವೆ. ಮೂರನೇ ಹಂತದಲ್ಲಿ ಶಂಕ, ನಕ್ಷತ್ರ ಮತ್ತು ಸ್ವಸ್ತಿಕ ಚಿಹ್ನೆಗಳಿವೆ. ನಾಲ್ಕನೇ ಹಂತದಲ್ಲಿ ವೃತ್ತದ ವಿವಿಧ ರೂಪಗಳಾಗಿ, ವೃತ್ತ, ಅರ್ಧ, ವೃತ್ತ, ಹೊರಗಡೆ ಸರಳ ರೇಖೆ ಇರುವ ವೃತ್ತ ಮತ್ತು ಪರಸ್ಪರ ಲಂಭಗಳನ್ನುಳ್ಳ ವೃತ್ತಗಳು ಇವೆ. ಐದನೇ ಹಂತದಲ್ಲಿ ಸರಳ ರೇಖೆಯ ವಿವಿಧ ರೂಪಗಳಾಗಿ, ಎರಡು ಸಮನಾಂತರ ಸರಳ ರೇಖೆಗಳು, ಎರಡು ಸಮನಾಂತರ ರೇಖೆಗಳನ್ನು ವಿಭಜಿಸಿದ ಅಡ್ಡರೇಖೆ, ಪರಸ್ಪರ ಲಂಭವಾಗಿರುವ ಎರಡು ರೇಖೆಗಳು ಮತ್ತು ತ್ರಿಕೋಣಾಕಾರದ ಚಿಹ್ನೆಗಳಿವೆ. ಹಂತ, ದಿಕ್ಕು ಮತ್ತು ಚಿಹ್ನೆಗಳನ್ನು ಕೋಷ್ಟಕ ರೂಪದಲ್ಲಿ ಹೀಗೆ ನೀಡಬಹುದು.

ಹಂತ ಉತ್ತರ ದಕ್ಷಿಣ ಪೂರ್ವ ಪಶ್ಚಿಮ
ಐದನೇ ಹಂತ        
ನಾಲ್ಕನೇ ಹಂತ        
ಮೂರನೇ ಹಂತ        
ಎರಡನೇ ಹಂತ        
ಮೊದಲನೇ ಹಂತ        

೩. ಪಿರಮಿಡ್‌ಆಕಾರದ ಮೆಟ್ಟಿಲುಗಳು: ಪುಷ್ಕರಣಿಯಲ್ಲಿ ಪಿರಮಿಡ್‌ಆಕಾರದ ನೂರು ಮೆಟ್ಟಿಲುಗಳ ಸಮೂಹವಿದೆ. ಪ್ರತಿ ಸಮೂಹದಲ್ಲಿ ಆರು ಮೆಟ್ಟಿಲುಗಳು ಮತ್ತು ಪ್ರತ್ಯೇಕ ಗುರುತಿನ ಸಂಖ್ಯೆ ಇದೆ. ಎರಡನೇ ಹಂತದಲ್ಲಿ ಮೂರು ಪಿರಮಿಡ್‌ಆಕಾರದ ಮೆಟ್ಟಿಲುಗಳ ಸಮೂಹವಿದ್ದು, ಎಡದಿಂದ ಬಲಕ್ಕೆ ಅವುಗಳ ಸಂಖ್ಯೆಯನ್ನು ನೀಡಲಾಗಿದೆ. ಇದೇ ಕ್ರಮವನ್ನು ಮೂರು, ನಾಲ್ಕು ಮತ್ತು ಐದನೇ ಹಂತದ ಮೆಟ್ಟಿಲುಗಳ ಸಮೂಹಕ್ಕೆ ಅಳವಡಿಸಲಾಗಿದೆ.

ನೂರು ಮೀಟರ್‌ಆಕಾರದ ಮೆಟ್ಟಿಲುಗಳಲ್ಲಿ ನಾಲ್ಕು ದಿಕ್ಕಿನ ಮಧ್ಯದ ಮೆಟ್ಟಿಲುಗಳ ಸಮೂಹ ಹೆಚ್ಚು ಅಲಂಕಾರಿಕವಾಗಿದೆ. ಇವು ಪಕ್ಕದ ಮೆಟ್ಟಿಲುಗಳ ಸಮೂಹಕ್ಕೆ ಹೋಲಿಸಿದಾಗ ಸ್ವಲ್ಪ ಅಗಲದಲ್ಲಿಯೂ ಮತ್ತು ಉದ್ದದಲ್ಲಿಯೂ ಹೆಚ್ಚು ಅಳತೆ ಹೊಂದಿದೆ. ಪ್ರತಿ ಮೆಟ್ಟಿಲಿನ ಮೂಲೆಯ ಸ್ವಲ್ಪ ಒಳ ಬಂದಂತೆ (Recessed Corner) ಇದೆ. ಮೆಟ್ಟಿಲು ಒಂದೇ ಕಲ್ಲಿನಿಂದ ಕೂಡಿದ್ದರೆ ಅದರ ಸಂಖ್ಯೆಯನ್ನು ಒಂದು ಎಂದು ನೀಡಲಾಗಿದೆ. ಮೂರು, ನಾಲ್ಕು ಮತ್ತು ಐದನೇ ಮೆಟ್ಟಿಲುಗಳ ಅಗಲ ಜಾಸ್ತಿ ಇದ್ದು ಇವು ಎರಡು, ಮೂರು ಕಲ್ಲುಗಳಿಂದ ಕೂಡಿರುತ್ತದೆ. ಆಗ ಕ್ರಮಸಂಖ್ಯೆಯನ್ನು ಎಡದಿಂದ ಬಲಕ್ಕೆ ೧, ೨, ೩ ಎಂದು ಬಳಸಿ ಜೋಡಣೆಯ ಕ್ರಮವನ್ನು ತಿಳಿಸಲಾಗಿದೆ. ಪೂರ್ವ ದಿಕ್ಕಿನ ನಾಲ್ಕನೇ ಹಂತದ ಮಧ್ಯದ ನಾಲ್ಕನೇ ಪಿರಮಿಡ್‌ಮೆಟ್ಟಿಲಿನ ಸಮೂಹದ ಕ್ರಮಸಂಖ್ಯೆ (ಪು.೧೨೬) ಗಳು ಹೀಗಿವೆ.

೪. ಅಳತೆ ಗುರುತುಗಳು ಎರಡನೇ ಮತ್ತು ಐದನೆ ಹಂತದ ಕಲ್ಲುಗಳ ಮೇಲೆ ಅಳತೆ ಗುರುತುಗಳಿವೆ. ಗುರುತುಗಳನ್ನು ತ್ರಿಶೂಲಾಕಾರವಾಗಿದ್ದು, ಮಧ್ಯದ ಗೆರೆಯನ್ನು ಕಲ್ಲಿನ ಲಂಭ ಭಾಗದಲ್ಲೂ ಮೂಡಿಸಲಾಗಿದೆ. ಈ ಗುರುತುಗಳು ಪುಷ್ಕರಣಿಯ ಮಧ್ಯಭಾಗದಲ್ಲಿ ಮತ್ತು ಪ್ರತಿ ಹಂತವು ಕೊನೆಗೊಳ್ಳುವಿಕೆಯನ್ನು ಸೂಚಿಸಲು ಬಳಸಲಾಗಿದೆ. ಈ ಗುರುತುಗಳು ೨.೩೦ ಮೀಟರ್‌ಅಂತರದಲ್ಲಿವೆ. ಐದನೇ ಹಂತದ ಉತ್ತರ ದಿಕ್ಕಿನ ಗುರುತುಗಳು ಮಧ್ಯಭಾಗದಿಂದ ಎಡ ಮತ್ತು ಬಲಗಳಲ್ಲಿ ಕ್ರಮವಾಗಿ ೪.೬೦ ಮೀ. ೬.೯೦ ಮೀ. ಮತ್ತು ೯.೨೦ ಮೀ. ದೂರದಲ್ಲಿವೆ. ಐದನೇ ಹಂತದ ಪೂರ್ವ ದಿಕ್ಕಿನ ಅಳತೆಗಳು ಮಧ್ಯಭಾಗದಿಂದ ಎಡ ಮತ್ತು ಬಲಗಳಲ್ಲಿ ಕ್ರಮವಾಗಿ ೪.೬೦ ಮೀ. ೬.೯೦ ಮೀ. ಮತ್ತು ೯.೨೦ ಮೀ. ದೂರದಲ್ಲಿದೆ. ಐದನೇ ಹಂತದ ಪೂರ್ವ ದಿಕ್ಕಿನ ಅಳತೆಗಳು ಮಧ್ಯಭಾಗದಿಂದ ಎಡಕ್ಕೆ ೨.೩೦ ಮೀ. ೪.೬೦ ಮೀ. ೯.೨೦ ಮೀ. ಹಾಗೂ ಬಲಭಾಗದಲ್ಲಿ ೪.೬೦ ಮೀ. ೬.೯೦ ಮೀ. ಮತ್ತು ೯.೨೦. ದೂರದಲ್ಲಿದೆ. ಐದನೇ ಹಂತದ ಪೂರ್ವ ದಿಕ್ಕಿನ ಅಳತೆಗಳು ಮಧ್ಯಭಾಗದಿಂದ ಎಡಕ್ಕೆ ೨.೩೦ ಮೀ. ೪.೬೦ ಮೀ. ೬.೨೦ ಮೀ. ಹಾಗೂ ಬಲಭಾಗದಲ್ಲಿ ೪.೬೦ ಮೀ. ೬.೯೦ ಮೀ. ಮತ್ತು ೯.೨೦. ದೂರದಲ್ಲಿದೆ. ಇದೇ ರೀತಿಯಾಗಿ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲೂ ಹಾಗೂ ಎರಡನೇ ಹಂತದ ನಾಲ್ಕೂ ದಿಕ್ಕುಗಳಲ್ಲಿ ಅಳತೆ ಗುರುತುಗಳು ಇವೆ.

ನೆಲ ಮಟ್ಟದಲ್ಲಿ ಈ ಗುರುತಗಳನ್ನು ಅನುಸರಿಸಿ ಅಡ್ಡ ಮತ್ತು ಉದ್ದ ದಾರಗಳನ್ನು ಕಟ್ಟಿದರೆ ಅವುಗಳಿಂದ ತೂಗು ಗುಂಡು ಬಿಟ್ಟು (Plumb Line) ಪ್ರತಿ ಹಂತವು ಸರಿಯಾದ ಸ್ಥಳದಲ್ಲಿಯೇ ಎಂದು ಪರೀಕ್ಷಿಸಬಹುದು.

ಈ ರೀತಿಯ ಅಳತೆ ಗುರುತುಗಳನ್ನು ನಾವು ದೇವಾಲಯಗಳಲ್ಲಿನ ಅಳತೆ ಪಟ್ಟಿಗಳಲ್ಲೂ ಕಾಣುತ್ತೇವೆ. ಗದಗ ಜಿಲ್ಲೆ, ಡಂಬಳದಲ್ಲಿನ ಸೋಮೇಶ್ವರ ದೇವಾಲಯ (ಡಬ್ಬಗುಡಿ) ಕಕ್ಷಾಸನದಲ್ಲಿ ಕಾಣಬಹುದು. ಮಾದವೇಶ್ವರ ದೇವರ ಗಡಿಂಬ ಎಂದು ಬರೆಯಲಾಗಿರುವ ಶಾಸನದ ಅಕ್ಕ ಪಕ್ಕದಲ್ಲಿ ೨೩ ಅಡಿ ದೂರದಲ್ಲಿ ತ್ರಿಶೂಲಾಕಾರದ ಗುರುತುಗಳಿವೆ. ಪ್ರಸ್ತುತದಲ್ಲಿ ಪುಷ್ಕರಣಿಯ ಅಳತೆ ಗುರುತುಗಳು ೨.೩೦ ಮೀ. ಅಂತರದಲ್ಲಿದ್ದು ಇದರ ಎರಡು, ಮೂರು, ಮತ್ತು ನಾಲ್ಕರ ಗುಣಾಕಾರದಲ್ಲಿ ಅಳತೆ ಗುರುತುಗಳನ್ನು ನಾವು ಕಾಣಬಹುದು.

೫. ನಿರ್ಮಾಣ ತಾಂತ್ರಿಕತೆ ಸಂಪೂರ್ಣ ತಾಂತ್ರಿಕ ವಿವರಗಳನ್ನುಳ್ಳ ಸುಂದರ ಮೆಟ್ಟಿಲು ಪುಷ್ಕರಣಿ ಇದಾಗಿದೆ. ಪ್ರತಿ ದಿಕ್ಕೂ, ಹಂತ, ಮೆಟ್ಟಿಲುಗಳಿಗೆ ಅಕ್ಷರ ಚಿಹ್ನೆ ಮತ್ತು ಸಂಖ್ಯೆಗಳನ್ನು ಬಳಸಲಾಗಿದೆ. ಅದರ ಸ್ಥಳ ಮತ್ತು ಹಂತವನ್ನು ಮೊದಲೇ ನಿರ್ಧರಿಸಿ ಕೆಲಸವನ್ನು ಬೇರೆಡೆಯಲ್ಲಿ ನೆಲದ ಮೇಲೆ ಮಾಡಲಾಗಿದೆ. ಪ್ರತಿ ಹಂತವನ್ನು ಕರಾರುವಕ್ಕಾಗಿ ಮೊದಲೇ ನಿರ್ಧರಿಸಲಾಗಿದೆ. ನಕ್ಷೆ ಮತ್ತು ವಿನ್ಯಾಸ ಹಾಗೂ ಶಿಲ್ಪಿಗಳ ಕುಶಲತೆ ಒಂದುಗೂಡಿದಾಗ ಸುಂದರ ನಿರ್ಮಾಣ ಸಾಧ್ಯವೆಂದು ರೂಪಿಸಲು ಈ ಮೆಟ್ಟಿಲು ಪುಷ್ಕರಣಿಯೂ ಸಾಕ್ಷಿಯಾಗಿದೆ.

ಲಕ್ಕುಂಡಿಯ ಮಾಣಿಕೇಶ್ವರ ದೇವಾಲಯದ ಮುಂದೆ ಇರುವ ಮಾಣಿಕೇಶ್ವರ ಕುಂಡದ ಪುಷ್ಕರಣಿ ಮಧ್ಯದ ಹಂತದಲ್ಲಿ ಕೆಲವು ದೇವರ ಗೂಡುಗಳಿವೆ. ಹೊಯ್ಸಳರ ಕಾಲದ ಹಳೇಬೀಡಿನ ಬಳಿಯ ಪುಷ್ಕರಣಿಯಲ್ಲಿ ೨೭ ದೇವರ ಗೂಡುಗಳಿದ್ದವು. ಇವುಗಳ ೨೭ ನಕ್ಷತ್ರಗಳನ್ನು ಸೂಚಿಸುತ್ತಿರಬಹುದು ಎಂದು ವಿದ್ವಾಂಸರು ಊಹಿಸಿದ್ದಾರೆ. ಹುಂಚ ಬಳಿಯ ಬಿಲ್ಲೇಶ್ವರ ಬೆಟ್ಟದಲ್ಲಿ ಕುಮದ್ವತಿ ನದಿಯು ಉಗಮವಾಗುತ್ತದೆ. ಉಗಮ ಸ್ಥಳದಲ್ಲಿರುವ ಬಿಲ್ಲೇಶ್ವರ ತೀರ್ಥದಲ್ಲಿ ಮೆಟ್ಟಿಲಿನ ಕಲ್ಲಿನ ತೊಟ್ಟಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಕೂಡಾ ಮಧ್ಯದ ಹಂತದಲ್ಲಿ ಮೆಟ್ಟಿಲುಗಳ ಮುಂಚಾಚು ಇದೆ.

ಹಂಪಿಯ ಮೆಟ್ಟಿಲು ಪುಷ್ಕರಣಿಯ ದಕ್ಷಿಣ ದಿಕ್ಕಿಗೆ ಒಂದು ದೇವಾಲಯವಿದೆ. ಇದು ಯಾವುದೆಂಬುದು ತಿಳಿದಿಲ್ಲ. ಈ ಪುಷ್ಕರಣಿಯನ್ನು ನಿರ್ಮಿಸಿದ ನಂತರ ಕಲ್ಲಿನ ತೊಟ್ಟಿಲು ಕಾಲುವೆಗಳ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಮೆಟ್ಟಿಲು ಪುಷ್ಕರಣಿ ವರ್ಷ ಪೂತಿð ಬಳಕೆಯಲ್ಲಿತ್ತೆಂದು ತೋರುತ್ತದೆ. ಋತುಮಾನಕ್ಕೆ ಅನುಸಾರವಾಗಿ ನೀರಿನ ಮಟ್ಟ ಕಡಿಮೆಯಾದಾಗ ಈ ಮೆಟ್ಟಿಲುಗಳು ನೀರಿನ ಹಂತವನ್ನು ತಲುಪಲು ಸಹಾಯಕವಾಗಿದ್ದವು ನೆಲ ಮಟ್ಟದಲ್ಲಿ ಒರಗು ದಿಂಬು ಕಲ್ಲು ಇರುವುದು ಈ ಪುಷ್ಕರಣಿಯಲ್ಲಿ ದೇವರ ತೆಪ್ಪೋತ್ಸವ ಇತ್ಯಾದಿ ಆಚರಣೆಗಳನ್ನು ವೀಕ್ಷಿಸಲು ಮಾಡಿದ ಅನುಕೂಲವಿರಬಹುದೆಂದು ಊಹಿಸಬಹುದು.

ಟಿಪ್ಪಣಿಗಳು

೧.   ಈ ಪ್ರಬಂಧವನ್ನು ಸಿದ್ಧಪಡಿಸಲು ಅಗತ್ಯ ಮಾಹಿತಿ ಪ್ರೋತ್ಸಾಹವನ್ನು ನೀಡಿದ ಡಾ.ಚೆನ್ನಬಸಪ್ಪ ಎಸ್‌.ಪಾಟೀಲ್ ಅವರಿಗೆ ನನ್ನ ಕೃತಜ್ಞತೆಗಳು

೨.   ಸ್ಥಳ ವೀಕ್ಷಣೆಗೆ ಮತ್ತು ಫೋಟೋ ಪಡೆಯಲು ಅನುಮತಿ ನೀಡಿದ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು

೩.   Indian Archaeology 1984-85, A Review

೪.   B. Narasimhaiah, A Decade of E x cavation at Vijayangara (Hampi, Early Vijayanagara Studies in its History and Culture, Edited by G.S. Dikshit, B.M.S. Memorial foundation, Bangalore – 19 (Proceedings of S. SrikantayaCentenary Seminar) 1988, pp-191-207.

ಆಕರ
ವಿಜಯನಗರ ಅಧ್ಯಯನ, ಸಂ.೭, ೨೦೦೩, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು.೧೨೪-೧೩೧