ಉತ್ತರ ಕರ್ನಾಟಕ ಭಾಗಕ್ಕೆ ಭರತನಾಟ್ಯದ ಸವಿಯನ್ನುಣಿಸಿದ ಕೀರ್ತಿ ಹಂಸಭೂಮಿಯ ಶ್ರೀನಿವಾಸ ಕುಲಕರ್ಣಿಯವರಿಗೆ ಸಲ್ಲಬೇಕು. ಕಟೆ ಎಂದರೆ ಒಂದು ಯಾಗ, ಒಂದು ಯಜ್ಞವೆಂದು ಬಗೆದ ಶ್ರೀಯುತರು ಅದಕ್ಕಾಗಿಯೇ ತಮ್ಮ ಜೀವನವನ್ನು ತೇದವರು, ಅದರಿಂದ ಸಾರ್ಥಕಗಳಿಸಿದವರು.

ಹಾವೇರಿ ಜಿಲ್ಲೆಯ ಹಂಸಭೂಮಿಯಕೋನೇರ ರಾಮಚಂದ್ರ ಕುಲಕರ್ಣಿ ಮತ್ತು ಲಕ್ಷ್ಮೀಬಾಯಿ ಕೋನೇರ ಶ್ರೀನಿವಾಸರ ಮಾತಾಪಿತೃಗಳು. ಹುಟ್ಟೂರಾದ ಹಂಸ ಭಾವಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ವಿಧ್ಯಾಭ್ಯಾಸಕ್ಕಾಗಿ ತಮ್ಮ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಧಾರವಾಡದ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಮುಗಿಸಿದರು. ಮುಂದೆ ಕೊಲ್ಹಾಪುರದ ರಾಜಾರವರು ಕಾಲೇಜಿನಲ್ಲಿ ಇಂಟರ್ ಮುಗಿಸಿ, ಬಿ.ಎ.ಸಲುವಾಗಿ ಸಪತ್ರಿಕರಾಗಿ ರಥ ಏರಿಬಂದ ಶ್ರೀನಿವಾಸರು, ಧಾರವಾಡದಲ್ಲಿ ’Learning while Learning’ ವಿಧಾನವನ್ನು ಅನುಸರಿಸಿದರು.

ಸಾಭಿನಯ, ಏಕಪಾತ್ರಭಿನಯ, “ನಾನು ಬಡವಿ ಆತ ಬಡವ ಒಲುವೇ ನಮ್ಮ ಬದುಕು” ಎಂಬ ಬೇಂದ್ರೆಯವರ ಸಾಲನ್ನು ನೆನಪಿಗೆ ತರುವಂತಹ ಸಂಸಾರ ೧೯೩೩ರಲ್ಲಿ ಕಾಲೇಜಿನ ಕರ್ನಾಟಕ ಸಂಘದ ವಾರ್ಷಿಕೋತ್ಸವದಲ್ಲಿ ಶ್ರೀನಿವಾಸರ ಪ್ರಪ್ರಥಮ ನೃತ್ಯ ಪ್ರದರ್ಶನ, ಮೂಕಾಭಿನಯ, ಯಾವ ಗುರುವಿನ ಬಳಿಯೂ ಶಿಷ್ಯ ವೃತ್ತಿ ಮಾಡದೇ ನೋಡಿ ತನಗೆ ತಾನು ಕಲಿತ ವಿದ್ಯೆ ಅದು. ಜನರ ಮೆಚ್ಚುಗೆ ಪಡೆಯಿತು.