ಮೊದಲನೆಯ ಪಂಚವಾರ್ಷಿಕ ಯೋಜನೆ ೧೯೫೧೫೬

ಕೋಷ್ಟಕ೧೦    (ಕೋಟಿ ರೂಪಾಯಿಗಳಲ್ಲಿ)

ವಲಯ

ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆ ೫.೦೩ ೧೦.೬ ೪.೨೨
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ೧.೯೧ ೪.೦ ೧.೫೬
ನೀರಾವರಿ ೧೬.೧೦ ೩೩.೮ ೧೫.೩೮
ಇಂಧನ ೧೩.೭೯ ೨೯.೦ ೧೦.೪೦
ಸಾರಿಗೆ ೪.೯೩ ೧೦.೪ ೪.೮೦
ಕೈಗಾರಿಕೆ ೨.೦೬ ೪.೩ ೧.೩೦
ಸಾಮಾಜಿಕ ಸೇವೆಗಳು ೩.೭೩ ೭.೯ ೨.೮೫
ಒಟ್ಟು ೪೭.೫೮ ೧೦೦.೦೦ ೪೦.೫೧

ಮೂಲ : ಗೌವರ್ನಮೆಂಟ್ ಆಫ್ ಮೈಸೂರು : ೧೯೭೦

ಎರಡನೆಯ ಪಂಚವಾರ್ಷಿಕ ಯೋಜನೆ ೧೯೫೬೬೧

ಕೋಷ್ಟಕ೧೧    (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗ ೧೯.೯೯ ೧೧.೫ ೧೮.೩೫
ಸಮುದಾಯ ಅಭಿವೃದ್ದಿ ಮತ್ತು ಸಹಕಾರ ೧೩.೬೧ ೯.೪ ೧೧.೦೮
ನೀರಾವರಿ ೩೩.೯೯ ೨೨.೭ ೨೭.೧೦
ಇಂಧನ ೨೭.೨೮ ೧೮.೮ ೨೬.೫೬
ಸಾರಿಗೆ ಮತ್ತು ಸಂಪರ್ಕ ೧೦.೦೨ ೬.೯ ೧೪.೬೯
ಕೈಗಾರಿಕೆ ಮತ್ತು ಗಣಿಗಾರಿಕೆ ೧೧.೭೯ ೮.೧ ೧೨.೧೦
ಸಾಮಾಜಿಕ ಸೇವೆಗಳು ೩೨.೩೯ ೨೨.೩ ೩೦.೦೬
ಇತರೆ ೦.೩೬ ೦.೩ ೦.೧೦
ಒಟ್ಟು ೧೪೫.೧೩ ೧೦೦.೦೦ ೧೪೨.೫೮

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೭೦

ಮೂರನೆಯ ಪಂಚವಾರ್ಷಿಕ ಯೋಜನೆ ೧೯೬೧೬೬

ಕೋಷ್ಟಕ೧೨    (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆ ೪೫.೪೪ ೧೮.೫ ೬೬.೬೯
ಸಮುದಾಯ ಅಭಿವೃದ್ದಿ ಮತ್ತು ಸಹಕಾರ ೨೧.೨೨ ೮.೬ ೧೭.೬೮
ನೀರಾವರಿ ೩೩.೧೦ ೧೩.೫ ೩೦.೮೬
ಇಂಧನ ೬೮.೯೮ ೨೮.೦ ೬೯.೩೫
ಸಾರಿಗೆ ಮತ್ತು ಸಂಪರ್ಕ ೧೨.೯೦ ೫.೨ ೨೨.೪೭
ಕೈಗಾರಿಕೆ ಮತ್ತು ಗಣಿಗಾರಿಕೆ ೧೫.೭೪ ೬.೪ ೧೫.೪೮
ಸಾಮಾಜಿಕ ಸೇವೆಗಳು ೪೮.೨೮ ೧೯.೬ ೪೧.೦೯
ಇತರೆ ೦.೫೫ ೦.೨ ೦.೫೧
ಒಟ್ಟು ೨೪೬.೨೧ ೧೦೦.೦೦ ೨೬೪.೧೩

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೭೦

ವಾರ್ಷಿಕ ಯೋಜನೆ ೧೯೬೬೬೯

ಕೋಷ್ಟಕ೧೩    (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆ ೪೩.೮೯ ೨೬.೬೫ ೪೬.೬೬
ಸಮುದಾಯ ಅಭಿವೃದ್ದಿ ಮತ್ತು ಸಹಕಾರ ೭.೯೧ ೪.೮೦ ೮.೪೪
ನೀರಾವರಿ ೨೩.೩೨ ೧೪.೧೬ ೩೩.೫೭
ಇಂಧನ ೪೮.೭೬ ೨೯.೬೧ ೫೫.೫೮
ಸಾರಿಗೆ ಮತ್ತು ಸಂಪರ್ಕ ೧೦.೫೪ ೬.೪೧ ೧೨.೯೮
ಕೈಗಾರಿಕೆ ಮತ್ತು ಗಣಿಗಾರಿಕೆ ೬.೬೫ ೪.೦೪ ೮.೯೦
ಸಾಮಾಜಿಕ ಸೇವೆಗಳು ೨೨.೮೭ ೧೩.೮೯ ೨೨.೬೯
ಇತರೆ ೦.೭೩ ೦.೪೪ ೦.೯೦
ಒಟ್ಟು ೧೬೪.೬೭ ೧೦೦.೦೦ ೧೯೫.೫೧

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೭೦

ಯೋಜನಾ ಪ್ರಕ್ರಿಯೆಯಲ್ಲಿ ವ್ಯತ್ಯಯ

ರಾಷ್ಟ್ರಮಟ್ಟದಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ಮೂರನೆಯ ಯೋಜನೆ ಮುಗಿದ ಮೇಲೆ ನಾಲ್ಕನೆಯ ಯೋಜನೆಯನ್ನು ೧೯೬೬ – ೬೭ರಲ್ಲಿ ಆರಂಭಿಸುವುದು ಸಾಧ್ಯವಾಗಲಿಲ್ಲ. ನಾಲ್ಕನೆಯ ಯೋಜನೆಯನ್ನು ಮುಂದೂಡಲಾಯಿತು. ಇದರಿಂದಾಗಿ ರಾಜ್ಯದಲ್ಲಿ ೧೯೬೬ – ೬೭, ೧೯೬೭ – ೬೮ ಮತ್ತು ೧೯೬೮ – ೬೯ ಹೀಗೆ ಮುರು ವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಹೀಗೆ ನಾಲ್ಕನೆಯಯ ಯೋಜನೆಯನ್ನು ಮೂರು ವರ್ಷ ಮುಂದೂಡಲು ಕಾರಣವಾದ ಎರಡು ಸಂಗತಿಗಳು ಹೀಗಿದ್ದವು.

೧. ಚೀನಾ ಮತ್ತು ಪಾಕೀಸ್ಥಾನಗಳ ಜೊತೆ ಭಾರತವು ೧೯೬೨ರಲ್ಲಿ ಮತ್ತೆ ೧೯೬೫ರಲ್ಲಿ ಯುದ್ಧ ನಡೆಸಬೇಕಾಯಿತು. ಇದರಿಂದಾಗಿ ಸಂಪನ್ಮೂಲವನ್ನು ರಕ್ಷಣಾ ಉದ್ದಿಮೆಗೆ ವರ್ಗಾಯಿಸಬೇಕಾಯಿತು.

೨. ರಾಷ್ಟ್ರವು ೧೯೬೫ – ೬೬ ಮತ್ತು ೧೯೬೬ – ೬೭ರಲ್ಲಿ ತೀವ್ರ ಸ್ವರೂಪದ ಕ್ಷಾಮವನ್ನು ಎದುರಿಸಬೇಕಾಯಿತು. ಇದರ ಪರಿಣಾಮವಾಗಿ ೧೯೬೦ – ೬೧ರಲ್ಲಿ ೩೯.೩೦ ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯು ೧೯೬೫ – ೬೬ರಲ್ಲಿ ೩೫.೪೫ ಲಕ್ಷ ಟನ್‌ಗಳಿಗೆ ಕುಸಿಯಿತು.

ವಾರ್ಷಿಕ ಯೋಜನೆಗಳು ೧೯೬೬೬೭ರಿಂದ ೧೯೬೮೬೯

ಕೋಷ್ಟಕ – ೧೩ರಲ್ಲಿ ವಾರ್ಷಿಕ ಯೋಜನೆಗಳ ವಿವರವನ್ನು ನೀಡಲಾಗಿದೆ. ಕೋಷ್ಟಕದಲ್ಲಿ ತೋರಿಸಿರುವಂತೆ ಮೂರು ವರ್ಷದ ಒಟ್ಟು ಸಂಪನ್ಮೂಲದ ವಿನಿಯೋಜನೆಯಲ್ಲಿ ಅತ್ಯಧಿಕ ಶೇ. ೨೯.೬೧ ಇಂಧನ ಕ್ಷೇತ್ರಕ್ಕೆ ಮೀಸಲಾಗಿರಿಸಲಾಗಿತ್ತು. ಕೃಷಿ ಮತ್ತು ತತ್ಸಂಬಂಧಿ ಕ್ಷೇತ್ರಕ್ಕೆ ಶೇ. ೨೬.೬೫ ರಷ್ಟು ಸಂಪನ್ಮೂಲ ವಿನಿಯೋಗಿಸಲಾಯಿತು. ಒಟ್ಟು ಮೂರು ಯೋಜನೆಗಳ ಅವಧಿಯಲ್ಲಿ ವಿನಿಯೋಗಿಸಿದ ಮೊತ್ತ ರೂ. ೧೬೪.೬೭ ಕೋಟಿ. ವಾಸ್ತವವಾಗಿ ವೆಚ್ಚ ಮಾಡಿದ ಮೊತ್ತ ರೂ. ೧೯೫.೫೧ ಕೋಟಿ. ಯುದ್ಧ, ಕ್ಷಾಮ, ವಿದೇಶಿ ನೆರವಿನ ಕಡಿತ ಮುಂತಾದ ಕಾರಣಗಳಿಂದಾಗಿ ಯೋಜನೆಯ ವೆಚ್ಚದಲ್ಲಿ ತೀವ್ರ ಏರುಪೇರು ಉಂಟಾಯಿತು.

ಕೃಷಿ ಕ್ಷೇತ್ರದಲ್ಲಿ ಉತ್ಪಾದನೆಯನ್ನು ತೀವ್ರ ತರದಲ್ಲಿ ಏರಿಸಲಾಯಿತು. ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ೧೯೬೫ – ೬೬ರಲ್ಲಿ ೩೫.೪೫ ಲಕ್ಷ ಟನ್‌ಗಳಷ್ಟಿದ್ದುದು ೧೯೬೮ – ೬೯ರಲ್ಲಿ ಅದು ೪೬.೯೪ ಲಕ್ಷ ಟನ್‌ಗಳಿಗೇರಿತು. ಆರ್ಥಿಕತೆಯಲ್ಲಿ ಒಂದು ಬಗೆಯ ದೃಢತೆಯನ್ನು ಸಾಧಿಸಲಾಯಿತು. ಈ ಕಾರಣದಿಂದಾಗಿ ರಾಜ್ಯಕ್ಕೆ ನಾಲ್ಕನೆಯ ಯೋಜನೆಯನ್ನು ೧೯೬೯ರಲ್ಲಿ ಆರಂಭಿಸುವುದು ಸಾಧ್ಯವಾಯಿತು.

ನಾಲ್ಕನೆಯ ಪಂಚವಾರ್ಷಿಕ ಯೋಜನೆ : ೧೯೬೯೭೪

ಯೋಜನಾ ಪ್ರಕ್ರಿಯೆಯಲ್ಲಿ ಉಂಟಾದ ವ್ಯತ್ಯಯವು ೬೦ರ ದಶಕದ ಕೊನೆಯ ಹೊತ್ತಿಗೆ ಸರಿಹೋಯಿತು. ಮೂರು ವರ್ಷಗಳ ವಾರ್ಷಿಕ ಯೋಜನೆ (೧೯೬೬ – ೧೯೬೯)ಗಳ ಮೂಲಕ ಆರ್ಥಿಕತೆಯಲ್ಲಿ ಒಂದು ಬಗೆಯ ದೃಢತೆಯನ್ನು ಮರುಸ್ಥಾಪಿಸಲಾಯಿತು. ವಾಸ್ತವವಾಗಿ ಆಹಾರ ಉತ್ಪಾದನೆಯು ಕ್ರಾಂತಿಕಾರಕ ರೀತಿಯಲ್ಲಿ ೧೯೭೦ರ ಹೊತ್ತಿಗೆ ಏರಿಕೆ ಅನುಭವಿಸಿತು. ಹೊಸ ಕೃಷಿ ನೀತಿಯಿಂದಾಗಿ ರಾಷ್ಟ್ರದಲ್ಲಿ ಹಸಿರುಕ್ರಾಂತಿಗೆ ಅಂದು ನಾಂದಿ ಹಾಡಲಾಯಿತು. ಸಂಕಷ್ಟಗಳಿಂದ ಹೊರಬಂದ ಭಾರತವು ೧೯೬೯ರಲ್ಲಿ ನಾಲ್ಕನೆಯ ಯೋಜನೆಯನ್ನು ಆರಂಭಿಸಿತು.

ಕರ್ನಾಟಕದ ನಾಲ್ಕನೆಯ ಯೋಜನೆಯ ವಲಯವಾರು ವಿನಿಯೋಜನೆಯ ವಿವರವನ್ನು ಕೋಷ್ಟಕ – ೧೪ರಲ್ಲಿ ನೀಡಲಾಗಿದೆ. ಬಹಳ ಕುತೂಹಲಕಾರಿಯಾದ ಸಂಗತಿಯೆಂದರೆ ಇಲ್ಲಿ ಕೃಷಿಯ ಮೇಲಿನ ವಿನಿಯೋಜನೆಯನ್ನು ತೀವ್ರ ಏರಿಸಲಾಯಿತು. ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳ ಮೇಲಿನ ವಿನಿಯೋಜನೆಯು ಇಲ್ಲಿ ಶೇ. ೨.೯೭ರಷ್ಟಿದೆ. ಜಲಸಂಪನ್ಮೂಲ ಹಾಗೂ ಇಂಧನದ ಮೇಲಿನ ವಿನಿಯೋಜನೆ ಪ್ರಮಾಣವು ಶೇ. ೪೭.೦೭ರಷ್ಟಿದೆ. ಕೃಷಿ, ಸಹಕಾರ, ನೀರಾವರಿ ಮತ್ತು ಇಂಧನಗಳಿಗೆ ಸದರಿ ಯೋಜನೆಯಲ್ಲಿ ಶೇ. ೭೩.೯ರಷ್ಟು ಸಂಪನ್ಮೂಲವನ್ನು ಮೀಸಲಿಡಲಾಗಿತ್ತು. ಮುಂದಿನ ಯೋಜನೆಗಳಲ್ಲಿ ನಾವು ನೋಡುವಂತೆ ಕೃಷಿ ಮೇಲಿನ ವಿನಿಯೋಜನೆಯ ಶೇ. ೧೦ ದಾಟುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕನೆಯ ಯೋಜನೆಯಲ್ಲಿ ಕೃಷಿಗೆ ಯೋಜನೆಯ ಶೇ. ೨೩.೯೭ರಷ್ಟನ್ನು ಮೀಸಲಿಟ್ಟಿರುವುದು ವಿಶಿಷ್ಟವಾದ ಸಂಗತಿಯಾಗಿದೆ. ಈ ಕಾರಣದಿಂದಾಗಿ ನಾಲ್ಕನೆಯ ಯೋಜನೆಯಲ್ಲಿ ಕೃಷಿಕ್ಷೇತ್ರದ ವಾರ್ಷಿಕ ಅಭಿವೃದ್ಧಿ ಪ್ರಮಾಣ ಶೇ. ೩.೬೬ರಷ್ಟಿತ್ತು. ಇಡೀ ದೇಶದಲ್ಲಿ ಕೃಷಿಯ ವಾರ್ಷಿಕ ಅಭಿವೃದ್ಧಿ ಪ್ರಮಾಣ ನಾಲ್ಕನೆಯ ಯೋಜನೆ ಅವಧಿಯಲ್ಲಿ (೧೯೬೯ – ೧೯೭೪) ಶೇ. ೩.೯೨ರಷ್ಟಿದ್ದರೆ ಕರ್ನಾಟಕದಲ್ಲಿ ಅದು ಶೇ. ೩.೬೬ರಷ್ಟಿತ್ತು. ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳನ್ನು ತೆಗೆದುಕೊಂಡರೆ ಅಭಿವೃದ್ಧಿಯ ವಾರ್ಷಿಕ ಪ್ರಮಾಣ ಪ್ರಮಾಣ ಶೇ. ೩.೨೪. ಇದು ರಾಷ್ಟ್ರಮಟ್ಟದ ಅಭಿವೃದ್ಧಿ ಪ್ರಮಾಣವಾದ ಶೇ. ೨.೭೪ಕ್ಕಿಂತ ಅಧಿಕವಿದೆ (ವಿವರಗಳಿಗೆ ನೋಡಿ: ಸತೀಶ್ ಚಂದ್ರನ್, ಕರ್ನಾಟಕ ಅಗ್ರಿಕಲ್ಚರ್: ಪ್ರಾಬ್ಲಮ್ಸ್ ಅಂಡ್ ಪ್ರಾಸ್ಪೆಕ್ಟ್‌ಸ್). ಕೈಗಾರಿಕಾ ಕ್ಷೇತ್ರದಲ್ಲೂ ಕರ್ನಾಟಕವು ನಾಲ್ಕನೆಯ ಯೋಜನೆಯಲ್ಲಿ ಸಾಧಾರಣ ಬೆಳವಣಿಗೆ ಸಾಧಿಸಿಕೊಂಡಿತು.

ನಾಲ್ಕನೆಯ ಪಂಚವಾರ್ಷಿಕ ಯೋಜನೆ ೧೯೬೯೭೪

ಕೋಷ್ಟಕ೧೪                                                                            (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆ ೮೩.೯೦ ೨೩.೯೭ ೭೫.೭೭ ೨೧.೦೬
ಸಹಕಾರ ೧೦.೦೦ ೨.೮೬ ೧೮.೮೮ ೫.೨೫
ಜಲಸಂಪನ್ಮೂಲ ಮತ್ತು ಇಂಧನ ೧೬೪.೭೫ ೪೭.೦೭ ೧೪೭.೭೦ ೪೧.೦೪
ಕೈಗಾರಿಕೆ ಮತ್ತು ಗಣಿಗಾರಿಕೆ ೧೪.೭೫ ೪.೨೧ ೧೫.೭೨ ೪.೩೭
ಸಾರಿಗೆ ಮತ್ತು ಸಂಪರ್ಕ ೧೪.೫೦ ೪.೧೪ ೨೫.೧೯ ೭.೦೦
ಸಾಮಾಜಿಕ ಮತ್ತು ಸಮುದಾಯ ಸೇವೆ ೬೧.೦೦ ೧೭.೪೩ ೭೫.೪೮ ೨೦.೯೮
ಆರ್ಥಿಕ ಸೇವೆ ಮತ್ತು ಸಾಮಾನ್ಯ ಸೇವೆ ೧.೧೦ ೦.೩೧ ೧.೧೧ ೦.೩೧
ಒಟ್ಟು ೩೫೦.೦೦ ೧೦೦.೦೦ ೩೫೯.೮೫ ೧೦೦.೦೦

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೮೦

ಈ ಯೋಜನೆಯ ಗಾತ್ರವು (ರೂ. .೩೫೦ ಕೋಟಿ) ಮೂರನೆಯ ಯೋಜನೆಯ ವಿನಿಯೋಜನೆಗಿಂತ ಶೇ. ೪೨.೧೫ರಷ್ಟು ಅಧಿಕವಾಗಿತ್ತು. ನಿಗದಿಪಡಿಸಿದ ಮೊತ್ತಕ್ಕಿಂತ ವೆಚ್ಚ ಮಾಡಿದ ಮೊತ್ತವು ಅಧಿಕವಾಗಿತ್ತು. ಈ ಯೋಜನೆಗೆ ನಿಗದಿಪಡಿಸಿದ್ದ ಮೊತ್ತ ರೂ. ೩೫೦ ಕೋಟಿ. ಆದರೆ ವಾಸ್ತವವಾಗಿ ಖರ್ಚು ಮಾಡಿದ ಮೊತ್ತ ರೂ. ೩೫೯.೮೫ ಕೋಟಿ.

ಎರಡನೆಯ ಮತ್ತು ಮೂರನೆಯ ಯೋಜನೆಗಳಲ್ಲಿ ಕೈಗಾರಿಕೆ ಮತ್ತು ಗಣಿಗಾರಿಕೆಗೆ ಮೀಸಲಿಟ್ಟ ಪ್ರಮಾಣ ಶೇ. ೧೦ಕ್ಕಿಂತ ಅಧಿಕವಿತ್ತು. ಆದರೆ ನಾಲ್ಕನೆಯ ಯೋಜನೆಯಲ್ಲಿ ಕೈಗಾರಿಕೆ ಮತ್ತು ಗಣಿಗಾರಿಕೆ ಮೇಲೆ ವಿನಿಯೋಗಿಸಿದ ಪ್ರಮಾಣವು ಕೇವಲ ಶೇ. ೪.೨೧.

ಐದು, ಆರು ಮತ್ತು ಏಳನೆ ಯೋಜನೆಗಳು : ೧೯೭೪ ರಿಂದ ೧೯೯೦

ಕೋಷ್ಟಕ – ೧೫, ೧೬, ೧೭ ಮತ್ತು ೧೮ರಲ್ಲಿ ಐದು, ಆರು ಮತ್ತು ಏಳನೆಯ ಯೋಜನೆಗಳು ವಲಯವಾರು ವಿನಿಯೋಜನೆ ವಿವರಗಳನ್ನು ನೀಡಲಾಗಿದೆ. ಈ ಯೋಜನಾ ಅವಧಿಯಲ್ಲಿ ೧೯೭೮ – ೮೦ರಲ್ಲಿ ವಾರ್ಷಿಕ ಯೋಜನೆಗಳನ್ನು ಅನುಷ್ಟಾನಗೊಳಿಸಲಾಯಿತು. (ನೋಡಿ: ಕೋಷ್ಟಿಕ – ೧೬). ವಾಸ್ತವವಾಗಿ ಐದನೆಯ ಯೋಜನೆಯು ತನ್ನ ಪೂರ್ಣಾವಧಿಯಾದ ಐದು ವರ್ಷಗಳನ್ನು ಪೂರೈಸಲಿಲ್ಲ. ಒಂದು ವರ್ಷ ಮೊದಲೇ ಅದನ್ನು ರದ್ದುಪಡಿಸಲಾಯಿತು. ಅದು ೧೯೭೯ಕ್ಕೆ ಕೊನೆಗೊಳ್ಳುವುದಕ್ಕೆ ಪ್ರತಿಯಾಗಿ ೧೯೭೮ಕ್ಕೆ ಕೊನೆಗೊಂಡಿತು. ಐದು ಮತ್ತು ಆರನೆಯ ಯೋಜನೆಗಳ ನಡುವೆ ಎರಡು ವರ್ಷಗಳ ಅಂತರ ಇದರಿಂದ ಉಂಟಾಯಿತು. ಅದರ ವಿವರವನ್ನು ಕೋಷ್ಟಕ – ೧೬ರಲ್ಲಿ ನೀಡಲಾಗಿದೆ.

ಐದನೆಯ ಪಂಚವಾರ್ಷಿಕ ಯೋಜನೆ ೧೯೭೪೭೯

ಕೋಷ್ಟಕ೧೫                                                                            (ಕೋಟಿ ರೂಪಾಯಿಗಳಲ್ಲಿ)

ವಲಯಗಳು

ನಿಗದಿಪಡಿಸಿದ ಮೊತ್ತ (೧೯೭೪೭೮) ಶೇಕಡ ಮಾಡಿದ ವೆಚ್ಚ (೧೯೭೪೭೯) ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ೧೬೧.೪೪ ೧೫.೦೦ ೧೨೭.೯೩ ೧೫.೦೧
ಸಹಕಾರ ೨೪.೭೦ ೨.೨೯ ೨೭.೦೭ ೩.೧೮
ಜಲಸಂಪನ್ಮೂಲ ಮತ್ತು ಇಂಧನ ೫೭೪.೯೩ ೫೩.೪೨ ೪೫೦.೮೦ ೫೨.೮೯
ಕೈಗಾರಿಕೆ ಮತ್ತು ಗಣಿಗಾರಿಕೆ ೪೨.೬೯ ೩.೯೭ ೪೩.೩೭ ೫.೦೯
ಸಾರಿಗೆ ಮತ್ತು ಸಂಪರ್ಕ ೬೪.೦೪ ೫.೯೫ ೪೫.೭೪ ೫.೩೭
ಸಾಮಾಜಿಕ ಮತ್ತು ಸಮುದಾಯ ಸೇವೆ ೧೮೭.೯೭ ೧೭.೪೬ ೧೫೩.೨೯ ೧೭.೯೮
ಆರ್ಥಿಕ ಸೇವೆ ಮತ್ತು ಸಾಮಾನ್ಯ ಸೇವೆ ೪.೨೦ ೦.೩೯ ೩.೬೬ ೦.೪೩
ಒಟ್ಟು ೧೦೭೬.೩೩ ೧೦೦.೦೦ ೮೫೨.೩೯ ೧೦೦.೦೦

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೮೦

ವಾರ್ಷಿಕ ಯೋಜನೆ ೧೯೭೮೮೦

ಕೋಷ್ಟಕ೧೬                                                                            (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ೯೫.೯೩ ೧೩.೧೩ ೯೨.೩೬ ೧೪.೨೭
ಸಹಕಾರ ೧೪.೮೨ ೨.೦೩ ೧೫.೨೭ ೨.೩೬
ಜಲಸಂಪನ್ಮೂಲ ಮತ್ತು ಇಂಧನ ೩೯೧.೯೭ ೫೩.೬೪ ೩೧೯.೭೧ ೪೯.೪೧
ಕೈಗಾರಿಕೆ ಮತ್ತು ಗಣಿಗಾರಿಕೆ ೪೪.೩೪ ೬.೦೭ ೪೮.೪೫ ೭.೪೯
ಸಾರಿಗೆ ಮತ್ತು ಸಂಪರ್ಕ ೩೭.೮೮ ೫.೧೮ ೪೩.೧೮ ೬.೬೭
ಸಾಮಾಜಿಕ ಮತ್ತು ಸಮುದಾಯ ಸೇವೆ ೧೪೩.೦೭ ೧೯.೫೮ ೧೨೩.೯೮ ೧೯.೧೬
ಆರ್ಥಿಕ ಸೇವೆ ೧.೦೨ ೦.೧೪ ೦.೪೯ ೦.೦೮
ಸಾಮಾಜಿಕ ಸೇವೆ ೧.೬೩ ೦.೨೨ ೩.೬೩ ೦.೫೬
ಒಟ್ಟು ೭೩೦.೬೬ ೧೦೦.೦೦ ೬೪೭.೦೫ ೧೦೦.೦೦

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೮೦

ಆರನೆಯ ವಾರ್ಷಿಕ ಯೋಜನೆ ೧೯೮೦೮೫

ಕೋಷ್ಟಕ೧೭                                        (ಕೋಟಿ ರೂಪಾಯಿಗಳಲ್ಲಿ)

ವಲಯಗಳು

ನಿಗದಿಪಡಿಸಿದ ಮೊತ್ತ ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ೨೬೬.೫೦ ೧೦.೬೬
ಸಹಕಾರ ೫೦.೦೦ ೨.೦೦
ಜಲಸಂಪನ್ಮೂಲ ಮತ್ತು ಇಂಧನ ೧೧೧೪.೫೫ ೪೪.೫೮
ಕೈಗಾರಿಕೆ ಮತ್ತು ಗಣಿಗಾರಿಕೆ ೧೬೪.೦೦ ೬.೫೬
ಸಾರಿಗೆ ಮತ್ತು ಸಂಪರ್ಕ ೧೫೦.೦೦ ೬.೦೦
ಸಾಮಾಜಿಕ ಮತ್ತು ಸಮುದಾಯ ಸೇವೆ ೬೧೨.೦೦ ೨೪.೪೮
ಆರ್ಥಿಕ ಸೇವೆಗಳು ೪.೬೫ ೦.೧೯
ಸಾಮಾನ್ಯ ಸೇವೆ ೩.೩೦ ೦.೧೩
ಒಟ್ಟು ೨೩೬೫.೦೦  – –
+ ೧೩೫೦೦ ೫.೪೦
೨೫೦೦.೦೦ ೧೦೦.೦೦

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೮೦

ಏಳನೆಯ ಪಂಚವಾರ್ಷಿಕ ಯೋಜನೆ ೧೯೮೫೯೦

ಕೋಷ್ಟಕ೧೮                                                                (ಕೋಟಿ ರೂಪಾಯಿಗಳಲ್ಲಿ)

ವಲಯಗಳು

ನಿಗದಿಪಡಿಸಿದ ಮೊತ್ತ ಶೇಕಡ ಮಾಡಿದ ವೆಚ್ಚ ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ಹಾಗೂ ಸಹಕಾರ ೩೦೧.೮೦ ೮.೪೪ ೩೩೧.೫೬ ೮.೧೯
ಗ್ರಾಮೀಣ ಅಭಿವೃದ್ಧಿ ೧೬೯.೧೨ ೪.೭೩ ೩೮೪.೫೫ ೯.೫೦
ನೀರಾವರಿ ಮತ್ತು ಪ್ರವಾಹ ನಿಯಂತ್ರಣ ೭೪೬.೦೦ ೨೦.೮೭ ೭೬೯.೫೮ ೧೯.೦೨
ಇಂಧನ ೮೦೦.೪೮ ೨೨.೩೯ ೮೨೮.೮೬ ೨೦.೪೮
ಕೈಗಾರಿಕೆ ಮತ್ತು ಗಣಿಗಾರಿಕೆ ೨೪೧.೦೮ ೬.೭೪ ೩೩೮.೧೦ ೮.೩೫
ಸಾರಿಗೆ ೨೪೩.೦೦ ೬.೮೦ ೨೦೩.೫೬ ೫.೦೩
ಸಾಮಾಜಿಕ ಸೇವೆಗಳು ೧೦೧೨.೪೫ ೨೮.೩೨ ೧೧೬೮.೨೬ ೨೮.೮೭
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ೪.೦೦ ೦.೧೧ ೩.೬೫ ೦.೦೯
ಸಾಮಾನ್ಯ ಆರ್ಥಿಕ ಸೇವೆಗಳು ೨೯.೦೭ ೦.೮೧ ೭.೨೭ ೦.೧೭
ಸಾಮಾನ್ಯ ಸೇವೆಗಳು ೨೮.೦೦ ೦.೭೮ ೪೯.೧೮ ೧.೨೧
ವಿಶೇಷ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ  –  –
ಒಟ್ಟು ೩೫೭೫.೦೦ ೧೦೦.೦೦ ೪೦೪೫.೭೦ ೧೦೦.೦೦

ಮೂಲ : ಗೌವರ್ನ್‌‌ಮೆಂಟ್ ಆಫ್ ಮೈಸೂರು : ೧೯೯೦

ಕೋಷ್ಟಕ – ೧೯ ರಲ್ಲಿ ಕರ್ನಾಟಕದ ಕೃಷಿರಂಗದ ಬೆಳವಣಿಗೆ ಪ್ರಮಾಣದ ವಿವರವನ್ನು ನೀಡಲಾಗಿದೆ.

ವಾರ್ಷಿಕ ಬೆಳವಣಿಗೆ ಪ್ರಮಾಣ (ನೈಜ ವರಮಾನ)

ಕೋಷ್ಟಕ೧೯

ಅವಧಿ ಕರ್ನಾಟಕ ಭಾರತ
ಕೃಷಿ ಕೃಷಿ ಮತ್ತು ಇತರೆ ಚಟುವಟಿಕೆಗಳು ಕೃಷಿ ಕೃಷಿ ಮತ್ತು ಇತರೆ ಚಟುವಟಿಕೆಗಳು
ನಾಲ್ಕನೆಯ ಯೋಜನೆ ೧೯೬೯ – ೭೪ ೩.೬೬ ೩.೨೪ ೩.೯೨ ೨.೭೪
ಐದನೆಯ ಯೋಜನೆ ೧೯೭೪ – ೭೮ ೩.೨೧ ೨.೯೬ ೪.೪೮ ೩.೮೯
ಆರನೆಯ ಯೋಜನೆ ೧೯೮೦ – ೮೫ ೩.೭೧ ೩.೫೩ ೬.೩೪ ೫.೭೮
ಏಳನೆಯ ಯೋಜನೆ ೧೯೮೫ – ೮೯ ೧.೮೯ ೧.೭೧ ೪.೦೬ ೩.೭೫

ಆಕರ : ಸತೀಶ್ಚಂದ್ರನ್ಟಿ.ಆರ್., ಕರ್ನಾಟಕ ಅಗ್ರಿಕಲ್ಚರ್: ಪ್ರಾಬ್ಲಮ್ಸ್ಆಂಡ್ ಪ್ರಾಸ್ಟೆಕ್ಷ್

ಈ ನಾಲ್ಕು ಯೋಜನೆಗಳ ಅವಧಿಯಲ್ಲಿ (೧೯೭೪ – ೧೯೯೦) ಕೃಷಿ ವಲಯದ ಬೆಳವಣಿಗೆ ಪ್ರಮಾಣವು ಅತ್ಯಂತ ಕೆಳಮಟ್ಟ ತಲುಪಿಬಿಟ್ಟಿತು. ಅನೇಕ ಬಗೆಯ ಸಂಕಷ್ಟವನ್ನು ಕೃಷಿ ಎದುರಿಸಬೇಕಾಯಿತು. ಈ ನಾಲ್ಕು ಯೋಜನೆಗಳ ಅವಧಿಯಲ್ಲಿ ರಾಜ್ಯದ ಕೃಷಿಯ ಬೆಳವಣಿಗೆ ಪ್ರಮಾಣವು ದೇಶದ ಕೃಷಿ ಬೆಳವಣಿಗೆ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿತ್ತು. ಕೃಷಿಯ ಬೆಳವಣಿಗೆ ಪ್ರಮಾಣವು ಏಳನೆಯ ಯೋಜನಾವಧಿಯಲ್ಲಿ ಅತ್ಯಂತ ಕೆಳಮಟ್ಟವನ್ನು (ಶೇ. ೧.೮೯) ತಲುಪಿರುವುದು ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

ಯೋಜನೆಯ ಗಾತ್ರವು ಐದನೆಯ ಯೋಜನೆಯಲ್ಲಿ ರೂ. ೧೦೭೬.೩೩ ಕೋಟಿಯಷ್ಟಿದ್ದುದು ಏಳನೆಯ ಯೋಜನೆಯಲ್ಲಿ ಅದು ರೂ. ೩೫೭೫ ಕೋಟಿಯಷ್ಟಾಗಿದೆ. ಈ ಯೋಜನೆಗಳ ಅವಧಿಯಲ್ಲಿ ಸಾಮಾಜಿಕ ಸೇವೆಗಳಿಗೆ ಮೀಸಲಿಟ್ಟ ಪ್ರಮಾಣವು ಪ್ರಮಾಣ ಶೇ. ೧೭.೪೬ರಷ್ಟಿತ್ತು. ಆದರೆ ಆರನೆಯ ಯೋಜನೆಯಲ್ಲಿ ಅದು ಶೇ. ೨೪.೪೮ಕ್ಕೆ ಮತ್ತು ಏಳನೆಯ ಯೋಜನೆಯಲ್ಲಿ ಅದು ಶೇ. ೨೮.೩೨ಕ್ಕೆ ಏರಿಕೆಯಾಗಿದೆ. ಈ ವಲಯದ ಎರಡು ಮುಖ್ಯ ಭಾಗಗಳೆಂದರೆ ಶಿಕ್ಷಣ ಮತ್ತು ಆರೋಗ್ಯ ಯೋಜನಾ ಪ್ರಕ್ರಿಯೆಯಲ್ಲಿ ಉಂಟಾದ ಬಹುಮುಖ್ಯ ಬದಲಾವಣೆ ಇದಾಗಿದೆ. ಮುಂದೆ ನೋಡುವಂತೆ ಹತ್ತನೆಯ ಯೋಜನೆಯಲ್ಲಿ ಅದರ ಪಾಲು ಶೇ. ೩೨.೫೬ಕ್ಕೇರುತ್ತದೆ.

ಈ ಯೋಜನೆಗಳ ಅವಧಿಯಲ್ಲಿ (೧೯೭೫ – ೧೯೯೦) ದೇಶವು ಅನೇಕ ಬಗೆಯ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಅನುಭವಿಸಿತು. ಅಭಿವೃದ್ಧಿಯು ತುಂಬಾ ಕುಂಟಿತಗೊಂಡಿತು. ಅತ್ಯಂತ ಆತಂಕಕಾರಿಯಾದ ಸಂಗತಿಯೆಂದರೆ ಆಹಾರದ ಉತ್ಪಾದನೆಯು ೧೯೮೦ – ೮೧ರಲ್ಲಿ ೬೨ ಲಕ್ಷ ಟನ್‌ಗಳಿಷ್ಟಿದ್ದುದು ೧೯೯೦ – ೯೧ರಲ್ಲೂ ಅದು ೬೨ ಲಕ್ಷ ಟನ್‌ಗಳಲ್ಲೇ ಸ್ಥಿರಗೊಂಡಿತ್ತು. ಹೀಗೆ ಎಂಬತ್ತರ ದಶಕವು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಂದಗತಿಯ ಅವಧಿಯಾಗಿತ್ತು.

ಎಂಟು, ಒಂಬತ್ತು ಮತ್ತು ಹತ್ತನೆಯ ಯೋಜನೆಗಳು: ೧೯೯೦೯೧ ರಿಂದ ೨೦೦೬೦೭

ಅನೇಕ ಆರ್ಥಿಕ – ರಾಜಕೀಯ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ದೇಶದಲ್ಲಿ ಏಳನೆಯ ಯೋಜನೆಯ ಮುಗಿದ ಮೇಲೆ, ಅಂದರೆ ೧೯೯೦ – ೯೧ರಲ್ಲಿ ಎಂಟನೆಯ ಯೋಜನೆಯನ್ನು ಆರಂಭಿಸುವುದು ಸಾಧ್ಯವಾಗಲಿಲ್ಲ. ಏಳನೆಯ ಮತ್ತು ಎಂಟನೆಯ ಯೋಜನೆಗಳ ಮಧ್ಯೆ (೧೯೯೦ – ೯೧ ಮತ್ತು ೧೯೯೧ – ೯೨) ವಾರ್ಷಿಕ ಯೋಜನೆಗಳನ್ನು ಅನುಷ್ಟಾನಗೊಳಿಸಲಾಯಿತು.

ಕೋಷ್ಟಕ – ೧೦,೨೧,೨೨ ಮತ್ತು ೨೩ ರಲ್ಲಿ ಕ್ರಮವಾಗಿ ವಾರ್ಷಿಯ ಯೋಜನೆಗಳು (೧೯೯೦ – ೯೨) ಎಂಟನೆಯ ಯೋಜನೆ (೧೯೯೨ – ೧೯೯೭), ಒಂಬತ್ತನೆಯ ಯೋಜನೆ (೧೯೯೭ – ೨೦೦೨) ಮತ್ತು ಹತ್ತನೆಯ ಯೋಜನೆ (೨೦೦೨ – ೨೦೦೭) ಗಳ ವಲಯವಾರು ವಿನಿಯೋಜನೆಯ ವಿವರಗಳನ್ನು ನೀಡಲಾಗಿದೆ.