ವಾರ್ಷಿಕ ಯೋಜನೆಗಳು ೧೯೯೦೯೨

ಕೋಷ್ಟಕ೨೦                            (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಶೇಕಡ ಮೊತ್ತ ಮಾಡಿದ ವೆಚ್ಚ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ಹಾಗೂ ಸಹಕಾರ ೨೫೨.೪೮ ೨೪೪.೩೭
ಗ್ರಾಮೀಣ ಅಭಿವೃದ್ಧಿ ೧೯೭.೬೧ ೧೫೬.೫೬
ನೀರಾವರಿ ಮತ್ತು ಪ್ರವಾಹ ನಿಯಂತ್ರಣ ೪೫೯.೪೪ ೪೭೧.೫೯
ಇಂಧನ ೬೪೭.೪೬ ೮೪೮.೮೮
ಕೈಗಾರಿಕೆ ಮತ್ತು ಗಣಿಗಾರಿಕೆ ೧೮೪.೦೯ ೨೨೩.೯೬
ಸಾರಿಗೆ ೧೫೨.೮೬ ೧೯೩.೨೮
ಸಾಮಾಜಿಕ ಸೇವೆಗಳು ೬೨೮.೭೪ ೭೩೭.೯೧
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ೩.೦೩ ೨.೯೬
ಸಾಮಾನ್ಯ ಆರ್ಥಿಕ ಸೇವೆಗಳು ೧೩೮.೨೪ ೧೪೨.೨೩
ಸಾಮಾನ್ಯ ಸೇವೆಗಳು ೩೮.೮೫ ೩೭.೯೬
ಒಟ್ಟು ೨೭೦೨.೮೦ ೩೦೫೯.೭೦

ಮೂಲ : ಗೌವರ್ನ್‌‌ಮೆಂಟ್ ಆಫ್ ಕರ್ನಾಟಕ : ೧೯೮೦

ಎಂಟನೆಯ ಪಂಚವಾರ್ಷಿಕ ಯೋಜನೆ ೧೯೯೨೯೭

ಕೋಷ್ಟಕ೨೧                                                    (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಮಾಡಿದ ವೆಚ್ಚ
. ಆರ್ಥಿಕ ಸೇವೆಗಳು
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ೯೦೨.೦೦ (೭.೩೩) ೯೩೭.೭೮ (೬.೩೦)
ಗ್ರಾಮೀಣ ಅಭಿವೃದ್ಧಿ ೪೩೩.೦೦ (೩.೫೨) ೮೪೩.೦೬ (೫.೬೬)
ವಿಶೇಷ ಪ್ರದೇಶ ಅಭಿವೃದ್ಧಿ ೫೭೫.೦೦ (೪.೬೭) ೪೦೪.೮೭ (೨.೭೨)
ನೀರಾವರಿ ಮತ್ತು ಪ್ರವಾಹ ನಿಯಂತ್ರಣ ೨೩೮೪.೦೦ (೧೯.೩೮) ೩೩೦೦.೯೧ (೨೨.೧೬)
ಇಂಧನ ೩೦೪೧.೦೦ (೨೪.೭೨) ೩೦೩೧.೭೮ (೨೦.೩೬)
ಕೈಗಾರಿಕೆ ಮತ್ತು ಗಣಿಗಾರಿಕೆ ೯೮೪.೦೦ (೮.೦೦) ೮೦೯.೦೪ (೫.೪೩)
ಸಾರಿಗೆ ೪೪೮.೦೦ (೩.೬೪) ೮೬೬.೧೭ (೫.೩೨)
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ೧೧.೦೦ (೦.೦೭) ೧೯.೯೮ (೦.೧೩)
ಸಾಮಾನ್ಯ ಆರ್ಥಿಕ ಸೇವೆಗಳು ೧೦೧.೦೬ (೦.೮೨) ೩೫.೩೧ (೦.೨೪)
ಒಟ್ಟು ೮೮೭೯.೦೬ (೭೨.೧೯) ೧೦೨೪೮.೯೦ (೬೮.೮೧)
. ಸಾಮಾಜಿಕ ಸೇವೆಗಳು
ಶಿಕ್ಷಣ ಕಲೆ, ಕ್ರೀಡೆ ಮತ್ತು ಸಂಸ್ಕೃತಿ ೧೦೨೬.೬೫ (೮.೩೫) ೧೨೨೪.೧೨ (೮.೨೨)
ಆರೋಗ್ಯ ೩೪೨.೦೦ (೨.೭೮) ೪೬೧.೯೨ (೩.೧೦)
ನೀರು ಸರಬರಾಜು ೬೨೫.೦೦ (೫.೦೮) ೮೧೫.೯೩ (೫.೪೮)
ವಸತಿ ೬೯೯.೬೦ (೫.೬೯) ೬೪೩.೭೧ (೪.೩೨)
ನಗರಾಭಿವೃದ್ಧಿ ೮೩.೦೦ (೦.೬೭) ೩೨೩.೮೩ (೨.೧೭)
ಮಾಹಿತಿ ಮತ್ತು ಪ್ರಚಾರ ೧೪.೦೦ (೦.೧೧) ೧೮.೩೭ (೦.೧೨)
ಪ.ಜಾ.ಪ.ಪಂ. ಹಾಗೂ ಹಿಂದುಳಿದವರ ಅಭಿವೃದ್ಧಿ ೨೫.೦೦ (೨.೦೩) ೭೫೨.೧೫ (೫.೦೫)
ಕಾರ್ಮಿಕರು ಮತ್ತು ಕಾರ್ಮಿಕ ಕಲ್ಯಾಣ ೩೭.೦೦ (೦.೩೦) ೩೦.೨೧ (೦.೨೦)
ಸಾಮಾಜಿಕ ಕಲ್ಯಾಣ ಮತ್ತು ಪೌಷ್ಟಿಕತೆ ೧೯೨.೨೯ (೧.೫೬) ೨೨೯.೩೧ (೧.೫೪)
ಒಟ್ಟು ೩೨೬೯.೫೪ (೨೬.೫೮) ೪೪೯೯.೫೫ (೩೦.೨೧)
. ಸಾಮಾನ್ಯ ಸೇವೆಗಳು ೧೫೧.೪೦ (೧.೨೩) ೧೪೮೯೦.೦೮ (೧೦೦.೦೦)

ಟಿಪ್ಪಣಿ : ಆವರಣದಲ್ಲಿ ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ನೀಡಲಾಗಿದೆ.

ಮೂಲ : ಗೌವರ್ನಮೆಂಟ್ಆಫ್ಕರ್ನಾಟಕ ೧೯೯೦

ಒಂಬತ್ತನೆಯ ಪಂಚವಾರ್ಷಿಕ ಯೋಜನೆ ೧೯೯೭೨೦೦೨

ಕೋಷ್ಟಕ೨೨                            (ಕೋಟಿ ರೂಪಾಯಿಗಳಲ್ಲಿ)

ವಲಯಗಳು ನಿಗದಿಪಡಿಸಿದ ಮೊತ್ತ ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ಹಾಗೂ ಸಹಕಾರ ೧೧೧೪.೦೦ ೪.೭೬
ಗ್ರಾಮೀಣ ಅಭಿವೃದ್ಧಿ ೧೧೭೩.೯೭ ೫.೦೨
ವಿಶೇಷ ಪ್ರದೇಶ ಅಭಿವೃದ್ಧಿ ೫೫೫.೦೦ ೨.೩೭
ನೀರಾವರಿ ಮತ್ತು ಪ್ರವಾಹ ನಿಯಂತ್ರಣ ೬೧೭೦.೦೦ ೨೬.೩೭
ಇಂಧನ ೩೭೪೫.೦೦ ೧೬.೦೦
ಕೈಗಾರಿಕೆ ಮತ್ತು ಗಣಿಗಾರಿಕೆ ೧೦೨೬.೦೦ ೪.೩೮
ಸಾರಿಗೆ
ಸಂಪರ್ಕ, ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ೪೦.೦೦ ೦.೧೭
ಸಾಮಾನ್ಯ ಆರ್ಥಿಕ ಸೇವೆಗಳು ೧೦೫.೦೦ ೦.೪೫
ಸಾಮಾಜಿಕ ಸೇವೆಗಳು ೭೨೦೬.೦೩ ೩೦.೭೯
ಸಾಮಾನ್ಯ ಸೇವೆಗಳು ೧೭೫.೦೦ ೦.೭೫
ಅರಣ್ಯ ಮತ್ತು ವನ್ಯಜೀವಿಗಳು ೩೫೦.೦೦ ೧.೫೦
ಒಟ್ಟು ೨೩೪೦೦.೦೦ ೧೦೦.೦೦

ಮೂಲ : ಗೌವರ್ನ್‌‌ಮೆಂಟ್ ಆಫ್ ಕರ್ನಾಟಕ : ೧೯೯೭

ಈ ಯೋಜನೆಗಳ ಅವಧಿಯಲ್ಲಿ ಕೃಷಿಯ ಪಾಲು ಶೇ. ೫ ಕ್ಕೆ ಕುಸಿದಿದೆ. ಮೊದಲ ಏಳು ಯೋಜನೆಗಳ ಅವಧಿಯಲ್ಲಿ ಅದು ಶೇ. ೧೦ ರಷ್ಟಿತ್ತು. ಆದರೆ ಸಾಮಾಜಿಕ ಸೇವೆಗಳ ಪಾಲು ಮಾತ್ರ ಹಿಂದೆ ಶೇ. ೨೦ ಕ್ಕಿಂತ ಕಡಿಮೆಯಿತ್ತು. ಇದು ಎಂಟನೆಯ ಯೋಜನೆಯಲ್ಲಿ ಶೇ. ೨೬.೫೮ಕ್ಕೆ, ಒಂಬತ್ತನೆಯ ಯೋಜನೆಯಲ್ಲಿ ಶೇ ೩೦.೭೯ ಮತ್ತು ಹತ್ತನೆಯ ಯೋಜನೆಯಲ್ಲಿ ಶೇ. ೩೨.೫೦ ಕ್ಕೆ ಏರಿಕೆಯಾಗಿರುವುದು ಕಂಡುಬರುತ್ತದೆ.

ಸಾಮಾಜಿಕ ಸೇವೆಗಳು ಮಾನವ ಅಭಿವೃದ್ಧಿ ಸೂಚಿಗಳಾದ ಶಿಕ್ಷಣ ಮತ್ತು ಆರೋಗ್ಯವನ್ನು ಒಳಗೊಳ್ಳುತ್ತವೆ. ಹೀಗೆ ೧೯೯೦ರ ನಂತರ ಯೋಜನೆಗಳಲ್ಲಿ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿಗಳಿಗೆ ಹೆಚ್ಚಿನ ಒತ್ತನ್ನು ನೀಡಲು ತೊಡಗಿದ್ದು ಕಂಡುಬರುತ್ತದೆ.

ನೀರಾವರಿ ಮತ್ತು ಇಂಧನಗಳ ಪಾಲು ಇಲ್ಲಿನ ಮೂರು ಯೋಜನೆಗಳು ಅವಧಿಯಲ್ಲಿ ಕಡಿಮೆಯಾಗಿರುವುದು ಕಂಡುಬರುತ್ತದೆ. ಇವೆರಡೂ ವಲಯಗಳಿಗೆ ಎಂಟನೆಯ ಯೋಜನೆಯಲ್ಲಿ ಶೇ. ೪೪.೧ ರಷ್ಟು ಹಣವನ್ನು ಮೀಸಲಿಡಲಾಗಿತ್ತು.

ಹತ್ತನೆಯ ಪಂಚವಾರ್ಷಿಕ ಯೋಜನೆ : ೨೦೦೨೨೦೦೭

ಕೋಷ್ಟಕ೨೩

ವಲಯಗಳು ನಿಗದಿಪಡಿಸಿದ ಮೊತ್ತ (ಕೋಟಿ ರೂಪಾಯಿಗಳಲ್ಲಿ) ಶೇಕಡ
ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳು ೨೩೪೬.೯೪ ೫.೩೯
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ೨೨೨೭.೭೨ ೫.೧೧
ವಿಶೇಷ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳು ೬೪೦.೭೪ ೧.೪೭
ನೀರಾವರಿ ಮತ್ತು ಪ್ರವಾಹ ನಿಯಂತ್ರಣ ೧೪೧೭೬.೫೭ ೩೨.೫೫
ಇಂಧನ ೨೨೬೬.೯೫ ೫.೨೦
ಕೈಗಾರಿಕೆ ಮತ್ತು ಗಣಿಗಾರಿಕೆ ೧೪೫೨.೮೭ ೩.೩೪
ಸಾರಿಗೆ ೪೮೫೪.೪೪ ೧೧.೧೪
ಸಂಪರ್ಕ, ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ೨೫.೭೮ ೦.೬೬
ಸಾಮಾನ್ಯ ಆರ್ಥಿಕ ಸೇವೆಗಳು ೮೯೫.೬೩ ೨.೦೬
ಸಾಮಾಜಿಕ ಸೇವೆಗಳು ೧೪೧೮೨.೯೮ ೩೨.೫೬
ಸಾಮಾನ್ಯ ಸೇವೆಗಳು ೪೮೭.೬೦ ೧.೧೨
ಒಟ್ಟು ೪೩೫೫೮.೨೨ ೧೦೦.೦೦

ಮೂಲ : ಕರ್ನಾಟಕ ಸರ್ಕಾರ:೨೦೦೪, ಇಂಟರ್ಸ್ಟೇಟ್ಇಂಡಿಕೇಟರ್ಸ್‌ ಪ್ಲಾನಿಂಗ್ ಡಿಪಾರ್ಟ್‌‌ಮೆಂಟ್.

ಆದರೆ ಅದು ಒಂಬತ್ತನೆಯ ಯೋಜನೆಯಲ್ಲಿ ಶೇ. ೪೨.೩೭ಕ್ಕೆ ಮತ್ತು ಹತ್ತನೆಯ ಯೋಜನೆಯಲ್ಲಿ ಅದು ಶೇ. ೩೭.೭೫ ಕ್ಕೆ ಕಡಿಮೆಯಾಗಿದೆ.

ಕೃಷಿ ವಲಯದ ಬೆಳವಣಿಗೆ

ಕೋಷ್ಟಕ – ೨೪ ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಮುಖ್ಯ ಸೂಚಿಗಳ ವಿವರ ನೀಡಲಾಗಿದೆ.

ಕೃಷಿ ವಲಯದ ಬೆಳವಣಿಗೆ : ಆಯ್ದಸೂಚಿಗಳು : ೧೯೯೦೯೧ ರಿಂದ ೨೦೦೫೦೬

ಕೋಷ್ಟಕ೨೪

ವಿವರಗಳು ೧೯೯೧೯೨ ೧೯೯೫೯೬ ೨೦೦೦೦೧ ೨೦೦೫೦೬
ಏಕದಳ ಧಾನ್ಯಗಳ ಸಾಗುವಳಿ ಪ್ರದೇಶ (ಲಕ್ಷ ಹೆಕ್ಟೇರುಗಳಲ್ಲಿ) ೫೧.೩೭ ೫೩.೩೬ ೫೭.೫೭ ೫೫.೫೨
ದ್ವಿದಳ ಧಾನ್ಯಗಳ ಸಾಗುವಳಿ ಪ್ರದೇಶ (ಲಕ್ಷ ಹೆಕ್ಟೇರುಗಳಲ್ಲಿ) ೧೭.೮೭ ೧೫.೨೦ ೨೦.೪೬ ೧೮.೭೬
ಏಕದಳ ಧಾನ್ಯಗಳ ಉತ್ಪಾದನೆ (ಲಕ್ಷ ಟನ್‌ಗಳಲ್ಲಿ) ೭೨.೨೮ ೭೯.೫೬ ೧೦೦.೦೪ ೯೪.೯೯
ದ್ವಿದಳ ಧಾನ್ಯಗಳ ಉತ್ಪಾದನೆ (ಲಕ್ಷ ಟನ್‌ಗಳಲ್ಲಿ) ೬.೭೩ ೬.೮೮ ೯.೫೬ ೭.೦೩
ಆಹಾರ ಉತ್ಪಾದನೆ (ಲಕ್ಷ ಟನ್‌ಗಳಲ್ಲಿ) ೭೯.೦೧ ೮೬.೪೪ ೧೦೯.೬೦ ೧೦೨.೦೨
ಅಧಿಕ ಇಳುವಳಿ ತಳಿಗಳ ಬಿತ್ತನೆ ಪ್ರದೇಶ (ಲಕ್ಷ ಟನ್‌ಗಳಲ್ಲಿ) ೩೩.೪೪ ೩೬.೦೩ ೫೧.೦೫ ೫೨.೧೧
ರಾಸಾಯನಿಕ ಗೊಬ್ಬರಗಳ ಬಳಕೆ (ಎನ್‌.ಕೆ.ಪಿ.) (ಲಕ್ಷ ಟನ್‌ಗಳಲ್ಲಿ) ೯.೦೫ ೯.೩೬ ೧೨.೯೪ ೧೮.೦೬
ಹಣ್ಣು ಬೆಳೆಗಳ ಸಾಗುವಳಿ ಪ್ರದೇಶ (ಲಕ್ಷ ಹೆಕ್ಟೇರುಗಳಲ್ಲಿ) ೨.೫೧ ೨.೮೪ ೨.೬೧ ೨.೪೩
ಹಣ್ಣು ಬೆಳೆಗಳ ಉತ್ಪಾದನೆ (ಲಕ್ಷ ಟನ್‌ಗಳಲ್ಲಿ) ೪೩.೭೧ ೫೧.೩೩ ೪೧.೬೪ ೩೮.೪೧

ಮೂಲ : ಕರ್ನಾಟಕ ಸರ್ಕಾರ : ೨೦೦೬, ಆರ್ಥಿಕ ಸಮೀಕ್ಷೆ : ೨೦೦೫೦೬

ಈ ಅವಧಿಯಲ್ಲಿ ಆಹಾರದ ಉತ್ಪಾದನೆಯು ೧೦೦ ಲಕ್ಷ ಟನ್‌ಗಡಿ ದಾಟಿತು. ಆಹಾರ ಧಾನ್ಯ ಬೆಳೆಯುವ ನಿವ್ವಳ ಪ್ರದೇಶ ೬೯.೧೮ ಲಕ್ಷ ಹೆಕ್ಟೇರುಗಳಿಂದ ೭೪.೨೮ ಲಕ್ಷ ಹೆಕ್ಟೇರುಗಳಿಗೇರಿತು. ಅಧಿಕ ಇಳವರಿ ತಳಿಗಳ ಸಾಗುವಳಿ ಪ್ರದೇಶವು ೩೩.೪೪ ಲಕ್ಷ ಹೆಕ್ಟೇರುಗಳಿಂದ ೫೨.೧ ಲಕ್ಷ ಹೆಕ್ಟೇರುಗಳಿಗೇರಿತು. ಆದರೆ ಒಣಭೂಮಿ ಬೇಸಾಯಕ್ಕೆ ಸಂಬಂಧಿಸಿದಂತೆ ತೀವ್ರ ಬದಲಾವಣೆಗಳು ನಡೆಯಲಿಲ್ಲ. ಈ ಬಗ್ಗೆ ಮುಂದಿನ ಭಾಗದಲ್ಲಿ ಚರ್ಚೆ ಮಾಡಲಾಗಿದೆ.

ಕೈಗಾರಿಕಾ ವಲಯದ ಬೆಳವಣಿಗೆ

ಕೋಷ್ಟಕ – ೨೫ ರಲ್ಲಿ ೧೯೯೦ – ೯೧ ರಿಂದ ೨೦೦೫ – ೦೬ ರ ಅವಧಿಯಲ್ಲಿ ಕೈಗಾರಿಕಾ ವಲಯದಲ್ಲಿನ ಬೆಳವಣಿಗೆ ವಿವರಗಳನ್ನು ನೀಡಲಾಗಿದೆ.

ಕೈಗಾರಿಕಾ ವಲಯದ ಬೆಳವಣಿಗೆ : ೧೯೯೦೯೧ ರಿಂದ ೨೦೦೫೦೬

ಕೋಷ್ಟಕ – ೨೫

ವಿವರಗಳು ೧೯೯೦೯೧ ೨೦೦೦೦೧ ೨೦೦೪೦೫
ಗಣಿ ಕ್ಷೇತ್ರದ ಉತ್ಪಾದನೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ೯.೪೦ ೮.೦೩ ೨೪.೩೫
(೨೦೦೩ – ೦೪)
ತಯಾರಿಕಾ ವಲಯದ ಉತ್ಪಾದನೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ೬.೪೩ ೩.೭೭ ೭.೩೧
ವಿದ್ಯುಚ್ಛಕ್ತಿ ಉತ್ಪಾದನೆ ವಾರ್ಷಿಕ ಬೆಳವಣಿಗೆ ಪ್ರಮಾಣ ೮.೩೫ ೧೨.೩೮ ೩.೮೯
(೨೦೦೩ – ೦೪)
ಒಟ್ಟು ಕೈಗಾರಿಕಾ ವಲಯದ ವಾರ್ಷಿಕ ಬೆಳವಣಿಗೆ ಪ್ರಮಾಣ ೬.೪೯ ೪.೫೪ ೬.೩೯
ಮೂಲ ವಸ್ತುಗಳ ಉತ್ಪಾದನೆ ವಾರ್ಷಿಕ ಬೆಳವಣಿಗೆ ಪ್ರಮಾಣ ೨.೩೫ ೨.೬೯ ೮.೭೨
ಬಂಡವಾಳ ವಸ್ತುಗಳ ಉತ್ಪಾದನೆ ವಾರ್ಷಿಕ ಬೆಳವಣಿಗೆ ಪ್ರಮಾಣ ೫.೬೩ ೫.೭೬ ೭.೭
ಮಧ್ಯವರ್ತಿ ವಸ್ತುಗಳ ಉತ್ಪಾದನೆ ವಾರ್ಷಿಕ ಬೆಳವಣಿಗೆ ಪ್ರಮಾಣ ೧೦.೪೫ ೪.೮೧ ೩.೮೯
ಗ್ರಾಹಕ ವಸ್ತುಗಳ ಉತ್ಪಾದನೆ ವಾರ್ಷಿಕ ಬೆಳವಣಿಗೆ ಪ್ರಮಾಣ ೭.೧೭ ೨.೬೮ ೯.೧೫

ಮೂಲ : ಕರ್ನಾಟಕ ಸರ್ಕಾರ : ೨೦೦೬, ಆರ್ಥಿಕ ಸಮೀಕ್ಷೆ : ೨೦೦೫೦೬

ಕಳೆದ ೧೫ ವರ್ಷಗಳ ಅವಧಿಯಲ್ಲಿ ಕೈಗಾರಿಕಾ ವಲಯದ ವಾರ್ಷಿಕ ಸರಾಸರಿ ಅಭಿವೃದ್ಧಿ ಪ್ರಮಾಣವು ಶೇ. ೫ಕ್ಕಿಂತ ಅಧಿಕವಿದೆ. ಅದರಲ್ಲೂ ಮೂಲವಸ್ತುಗಳ ಮತ್ತು ಬಂಡವಾಳ ವಸ್ತುಗಳ ಉತ್ಪಾದನೆಯ ವಾರ್ಷಿಕ ಬೆಳವಣಿಗೆ ಪ್ರಮಾಣವು ಶೇ. ೭ ದಾಟಿದೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದ ವರಮಾನವು ಉನ್ನತ ಮಟ್ಟಕ್ಕೇರಿದೆ.

ಹತ್ತನೆಯ ಯೋಜನೆಯಲ್ಲಿ ಯೋಜನಾ ಆಯೋಗವು ವರಮಾನದ ಬೆಳವಣಿಗೆಗೆ ನಿಗದಿಪಡಿಸಿದ್ದ ಗುರಿ ವಾರ್ಷಿಕ ಶೇ. ೧೦.೧ ರಾಜ್ಯದ ಒಟ್ಟು ದೇಶೀಯ ಉತ್ಪನ್ನವು ೨೦೦೪ – ೦೫ನೆಯ ಸಾಲಿನಲ್ಲಿ ಶೇ. ೧೦.೨ ರಷ್ಟು ಬೆಳವಣಿಗೆ ಸಾಧಿಸಿತ್ತು. ಆದರೆ ೨೦೦೫ – ೦೬ರಲ್ಲಿ ಅದು ಶೇ. ೮.೭ಕ್ಕೆ ಇಳಿದಿದೆ. ಸರ್ಕಾರದ ವರದಿ ಪ್ರಕಾರ ೧೯೯೩ – ೯೪ರ ಬೆಲೆಗಳಲ್ಲಿ ರಾಜ್ಯದ ವರಮಾನವು ೧೯೯೩ – ೯೪ ರಿಂದ ೨೦೦೩ – ೦೪ರ ಅವಧಿಯಲ್ಲಿ ಸಾಧಿಸಿಕೊಂಡ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ. ೬.೫ ಹಾಗೂ ಇದೇ ಅವಧಿಯಲ್ಲಿ ತಲಾ ವರಮಾನದ ಬೆಳವಣಿಗೆ ಪ್ರಮಾಣ ಶೇ.೪.೯.

ವಿಕೇಂದ್ರೀಕೃತ ಯೋಜನೆ: ರಾಜ್ಯದ ಸಾಧನೆ

ತಳಮಟ್ಟಕ್ಕೆ, ಅಂದರೆ ಗ್ರಾಮ ಮಟ್ಟಕ್ಕೆ ಅಧಿಕಾರವನ್ನು ಒಯ್ಯಬೇಕೆಂಬ ಉದ್ದೇಶದಿಂದ ವಿನೂತನವಾದ ಪಂಚಾಯತ್ ರಾಜ್ ವ್ಯವಸ್ಥೆ ಕರ್ನಾಟಕದಲ್ಲಿ ೦೧.೦೪.೧೯೮೭ರಲ್ಲಿ ಅಸ್ತಿತ್ವಕ್ಕೆ ಬಂದಿತು. ಜಿಲ್ಲಾ ಪರಿಷತ್‌ಗಳು ಮತ್ತು ಮಂಡಲ ಪಂಚಾಯಿತಿಗಳನ್ನು ಒಳಗೊಂಡ ವ್ಯವಸ್ಥೆ ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಯೋಜನಾ ಪ್ರಕ್ರಿಯೆಯ ಪ್ರಯತ್ನವು ೧೯೭೮ – ೭೯ರಲ್ಲೇ ಆರಂಭವಾಗಿತ್ತು. ಆದರೆ ಅಂದು ತಳಮಟ್ಟದಲ್ಲಿ ಚುನಾಯಿತ ಸಂಸ್ಥೆಗಳಿರಲಿಲ್ಲ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಪರಿಷತ್ತುಗಳು ಮತ್ತು ಮಂಡಲ ಪಂಚಾಯಿತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಲು ಅಗತ್ಯವಾದ ಹಣಕಾಸನ್ನು ಒಂದು ಮೊತ್ತದಲ್ಲಿ ನೀಡುವ ಕ್ರಮವು ಜಾರಿಗೆ ಬಂದಿತು. ಈ ವಿಧಾನದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲಾ ಪರಿಷತ್ತುಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿಗಳಿಗೆ ಹಣವನ್ನು ವಗಾðಯಿಸಲು ಒಂದು ಸೂತ್ರವನ್ನು ರೂಪಿಸಲಾಯಿತು. ಇದರಿಂದಾಗಿ ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚು ಹಣಕಾಸು ದೊರೆಯುವಂತಾಯಿತು. ಅದೇ ರೀತಿ ಮಂಡಲ ಪಂಚಾಯಿತಿಗಳಿಗೆ ಹಣಕಾಸು ಸಂಪನ್ಮೂಲ ಒದಗಿಸಲು ಒಂದು ಸೂತ್ರವನ್ನು ರೂಪಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಯೋಜನೆ ರೂಪಿಸುವ ಕಾರ್ಯದ ಮೇಲುಸ್ತುವಾರಿಯನ್ನು ರಾಜ್ಯ ಯೋಜನಾ ಇಲಾಖೆಗೆ ವಹಿಸಲಾಯಿತು.

ಜಿಲ್ಲಾ ಪರಿಷತ್ತುಗಳು ಹಾಗೂ ಮಂಡಲ ಪಂಚಾಯಿತಿಗಳಿಗೆ ಹಣಕಾಸು ವಿನಿಯೋಜನೆ ನಿರ್ಧರಿಸಲು ೧೯೮೯ರಲ್ಲಿ ಸರ್ಕಾರವು ಹಣಕಾಸು ಆಯೋಗವನ್ನು ನೇಮಿಸಿತು. ಈ ಆಯೋಗವು ಮಾರ್ಚ್‌೧೯೮೯ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಸರ್ಕಾರವು ವಿಕೇಂದ್ರೀಕೃತ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಳಲು ಡಾ. ಕೃಷ್ಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿತು. ಸಮಿತಿಯು ಅತ್ಯಂತ ಉತ್ತಮವಾದ ರೀತಿಯಲ್ಲಿ ಜಿಲ್ಲಾ ಪರಿಷತ್ತುಗಳು ಮತ್ತು ಮಂಡಲ ಪಂಚಾಯಿತಿಗಳು ಕಾರ್ಯ ಮಾಡುತ್ತಿರುವ ರೀತಿಯನ್ನು ಗುರುತಿಸಿತು.

ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅಭಿವೃದ್ಧಿ ಯೋಜನೆಗಳು

ಸಂವಿಧಾನದ ೭೩ನೆಯ ತಿದ್ದುಪಡಿಯನ್ವಯ ಕರ್ನಾಟಕ ಪಂಚಾಯತ್ ಅಧಿನಿಯಮ ೧೯೯೩ರ ಅನುಷ್ಠಾಣದ ಮೂಲಕ ವಿಕೇಂದ್ರೀಕೃತ ಆಡಳಿತ ಮತ್ತು ಅಭಿವೃದ್ಧಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ನಮ್ಮಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯು ಅಸ್ತಿತ್ವದಲ್ಲಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ನಿಯಮ ೩೦೯ರನ್ವಯ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ನಿಯಮ ೩೧೦ರನ್ವಯ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಯೋಜನಾ ಸಮಿತಿಗಳನ್ನು ರಚಿಸಲಾಗಿದೆ (ಹೊಸ ಜಿಲ್ಲೆಗಳಲ್ಲಿ ಅವುಗಳನ್ನು ರಚಿಸಬೇಕಾಗಿದೆ).

ಈ ಯೋಜನಾ ಸಮಿತಿಗಳು ತಮ್ಮ ತಮ್ಮ ಜಿಲ್ಲೆಗಳಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ. ಅದಕ್ಕೆ ಸಂಬಂಧಿಸಿದ ಮಾರ್ಗ ಸೂಚಿಗಳನ್ನು ಹನ್ನೊಂದನೆಯ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ನೀಡಲಾಗಿದೆ. ನಮ್ಮ ರಾಜ್ಯದ ಜಿಲ್ಲಾ ಯೋಜನೆಗಳಿಗೆ ೧೯೯೦ – ೯೧ರಿಂದ ೨೦೦೯ – ೧೦ರ ವರಗಿನ ಅವಧಿಯಲ್ಲಿ ಒದಗಿಸಿದ ಅನುದಾನದ ವಿವರಗಳನ್ನು ಕೋಷ್ಟಕ ೨೬ರಲ್ಲಿ ನೀಡಲಾಗಿದೆ.

ಪಂಚಾಯತ್ರಾಜ್ ಸಂಸ್ಥೆಗಳ ಯೋಜನಾ ಅನುದಾನ :೧೯೯೦೯೧ ರಿಂದ ೨೦೦೯೧೦

ಕೋಷ್ಟಕ ೨೬                                           (ಕೋಟಿ ರೂಪಾಯಿಗಳಲ್ಲಿ)

ವರ್ಷಗಳು
ರಾಜ್ಯದ ಒಟ್ಟು ಯೋಜನಾ ವೆಚ್ಚ ಜಿಲ್ಲಾ ಯೋಜನಾ ವೆಚ್ಚ ರಾಜ್ಯ ಯೋಜನಾ ವೆಚ್ಚದಲ್ಲಿ ಜಿಲ್ಲಾ ಯೋಜನಾ ವೆಚ್ಚದ ಪಾಲು (ಶೇ)
೧೯೯೦ – ೯೧ ೧೧೩೬ ೫೪೫ ಶೇ. ೪೦
೧೯೯೨ – ೯೩ ೨೬೨೫ ೬೭೦ ಶೇ. ೨೫
೧೯೯೪ – ೯೫ ೪೧೭೫ ೯೭೩ ಶೇ. ೨೩
೧೯೯೬ – ೯೭ ೫೩೧೧ ೧೨೭೩ ಶೇ. ೨೪
೧೯೯೮ – ೯೯ ೬೫೧೩ ೧೪೪೭ ಶೇ. ೨೨
೨೦೦೦ – ೦೧ ೮೫೦೬ ೧೬೯೭ ಶೇ. ೨೦
೨೦೦೨ – ೦೩ ೯೫೨೨ ೧೨೪೧ ಶೇ. ೧೩
೨೦೦೪ – ೦೫ ೧೩೩೧೧ ೧೬೬೮ ಶೇ. ೧೩
೨೦೦೬ – ೦೭ ೧೭೮೦೬ ೩೪೩೨ ಶೇ. ೧೯
೨೦೦೯ – ೧೦ ೩೧೫೨೦ ೪೭೩೭ ಶೇ. ೧೫

ಮೂಲ : ಕರ್ನಾಟಕ ಸರ್ಕಾರ ೨೦೧೦, ಆರ್ಥಿಕ ಸಮೀಕ್ಷೆ ೨೦೦೯೧೦, ಪು..೮೪

ಟಿಪ್ಪಣಿ : ರಾಜ್ಯ ವಲಯ ಮತ್ತು ಕೇಂದ್ರ ವಲಯಗಳನ್ನು ಕೂಡಿಸಿ ಮೊತ್ತವನ್ನು ನೀಡಲಾಗಿದೆ.

ಈ ಕೋಷ್ಟಕದಲ್ಲಿ (೨೬) ತೋರಿಸಿರುವಂತೆ ರಾಜ್ಯ ಒಟ್ಟು ಯೋಜನಾ ವೆಚ್ಚದಲ್ಲಿ ಜಿಲ್ಲಾ ವಲಯದ ಪಾಲು ೧೯೯೦ – ೯೧ ರಲ್ಲಿ ಶೇ.೪೦ ರಷ್ಟಿದ್ದುದು ೨೦೦೯ – ೨೦೧೦ರಲ್ಲಿ ಅದು ಶೇ.೧೫ ಕ್ಕಿಳಿದಿದೆ. ರಾಜ್ಯ ಯೋಜನಾ ವೆಚ್ಚವು ೧೯೯೦ – ೧೯ ರಿಂದ ೨೦೦೯ – ೧೦ರ ಅವಧಿಯಲ್ಲಿ ವಾರ್ಷಿಕ ಶೇ. ೧೩೩.೭೩ ರಷ್ಟು ಬೆಳವಣಿಗೆಯಾಗಿದ್ದರೆ ಜಿಲ್ಲಾ ವಲಯದ ಯೋಜನಾ ವೆಚ್ಚವು ಇದೇ ಅವಧಿಯಲ್ಲಿ ವಾರ್ಷಿಕ ಶೇ. ೩೮.೪೬ ಬೆಳವಣಿಗೆ ಸಾಧಿಸಿಕೊಂಡಿದೆ. ಜಿಲ್ಲಾ ವಲಯಕ್ಕೆ ರಾಜ್ಯವು ಎಷ್ಟು ಅನುದಾನವನ್ನು ವರ್ಗಾಯಿಸಬೇಕಾಗಿತ್ತೋ ಅಷ್ಟನ್ನು ಇಲ್ಲಿ ವರ್ಗಾಯಿಸಲು ಸಾಧ್ಯವಾಗಿಲ್ಲ. ಒಂದು ಸೂಚಿಯ ಪ್ರಕಾರ ರಾಜ್ಯದ ಒಟ್ಟು ಯೋಜನಾ ವೆಚ್ಚದ ಶೇ. ೪೦ ರಷ್ಟನ್ನು ಜಿಲ್ಲಾ ವಲಯಕ್ಕೆ ವರ್ಗಾಯಿಸಬೇಕು. ಅದು ಇಲ್ಲಿ ಸಾಧ್ಯವಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ಯೋಜನೆ ಯನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಕಾರ್ಯಕ್ಕೆ ಸರ್ಕಾರವು ಒತ್ತಾಸೆ ನೀಡುತ್ತಿಲ್ಲ. ಜಿಲ್ಲಾ ವಲಯವು ರಾಜ್ಯ ಸರ್ಕಾರದ ಯಜಮಾನ್ಯದಿಂದಾಗಿ ಸೊರಗುತ್ತಿದೆ.

ತಲಾ ಯೋಜನಾ ವೆಚ್ಚ

ಪ್ರಸ್ತುತ ಅಧ್ಯಯನಕ್ಕಾಗಿ ಕರ್ನಾಟಕದ ರಾಜ್ಯ ಯೋಜನಾ ವೆಚ್ಚಕ್ಕೆ ಸಂಬಂಧಿಸಿದಂತೆ ಎರಡು ಕಾಲಘಟ್ಟಕ್ಕೆ ತಲಾ ಯೋಜನಾ ವೆಚ್ಚವನ್ನು ಲೆಕ್ಕ ಹಾಕಲಾಗಿದೆ. ಅದೇ ರೀತಿಯಲ್ಲಿ ಜಲಿಲಾ ವಲಯದ ಯೋಜನಾ ವೆಚ್ಚಕ್ಕೂ ತಲಾ ಯೋಜನಾ ವೆಚ್ಚವನ್ನು ಎರಡು ಕಾಲಘಟ್ಟಕ್ಕೆ ಲೆಕ್ಕ ಹಾಕಲಾಗಿದೆ. ಈ ಲೆಕ್ಕಾಚಾರವನ್ನು ಸಂಬಂಧಿಸಿದ ವರ್ಷದ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿದೆ. ರಾಜ್ಯ ಮಟ್ಟಕ್ಕೆ ಸಂಬಂಧಿಸಿದಂತೆ ೧೯೯೦ – ೯೧ ರಲ್ಲಿ ತಲಾ ಯೋಜನಾ ವೆಚ್ಚವು ರೂ. ೧೬೦೭ ರಷ್ಟಿದ್ದುದು ೨೦೦೯ – ೧೦ ರಲ್ಲಿ ರೂ. ೫೨೦೯ ಕ್ಕೇರಿದೆ. ಇಲ್ಲಿನ ಬೆಳವಣಿಗೆ ಪ್ರಮಾಣ ಶೇ. ೨೨೪.೦೧. ಆದರೆ ಜಿಲ್ಲಾ ವಲಯಕ್ಕೆ ಸಂಬಂಧಿಸಿದಂತೆ ೧೯೯೦ – ೯೧ರಲ್ಲಿ ತಲಾ ಯೋಜನಾ ವೆಚ್ಚ ರೂ. ೩೨೦.೭೯ ರಷ್ಟಿದ್ದುದು ೨೦೦೯ – ೧೦ರಲ್ಲಿ ಅದು ರೂ. ೭೮೨.೯೭ ರಷ್ಟಾಗಿದೆ. ರಾಜ್ಯಮಟ್ಟದಲ್ಲಿ ಯೋಜನಾ ವೆಚ್ಚವು ಈ ೨೦ ವರ್ಷಗಳ ಅವಧಿಯಲ್ಲಿ ಶೇ. ೨೨೪.೦೧ ರಷ್ಟು ಏರಿಕೆಯಾಗಿದ್ದರೆ ಜಿಲ್ಲಾ ವಲಯದಲ್ಲಿ ಅದರ ಏರಿಕೆ ಪ್ರಮಾಣ ಶೇ. ೧೪೪.೦೭. ಈ ಲೆಕ್ಕಾಚಾರವು ಏನನ್ನು ತೋರಿಸುತ್ತಿದೆ? ರಾಜ್ಯ ಮಟ್ಟದಲ್ಲಿ ಯೋಜನಾ ವೆಚ್ಚವು ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆಯೋ ಆ ಗತಿಯಲ್ಲಿ ಜಿಲ್ಲಾ ವಲಯದ ಯೋಜನಾ ವೆಚ್ಚವು ಏರಿಕೆಯಾಗುತ್ತಿಲ್ಲ. ಇದು ಆತಂಕಕಾರಿಯಾದ ಸಂಗತಿಯಾಗಿದೆ. ತಳಮಟ್ಟದ ಯೋಜನೆ, ವಿಕೇಂದ್ರೀಕೃತ ಯೋಜನೆ, ಕೆಳಗಿನಿಂದ ಮೇಲೆ ಹರಿಯುವ ಯೋಜನೆ ಎಂಬ ಮಾತುಗಳೆಲ್ಲ ಅರ್ಥ ಕಳೆದು ಕೊಳ್ಳುತ್ತಿವೆ. ರಾಜ್ಯ ಸರ್ಕಾರಗಳು ಮತ್ತು ಅಲ್ಲಿನ ಜನಪ್ರತಿನಿಧಿಗಳು ಯೋಜನೆಗೆ ಸಂಬಂಧಿಸಿದಂತೆ ತಮ್ಮ ಅಧಿಕಾರವನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ಪಂಚಾಯತ್‌ರಾಜ್ ಸಂಸ್ಥೆಗಳು ಸ್ವಾಯತ್ತವಾಗಿ ಮತ್ತು ಸ್ವತಂತ್ರವಾಗಿ ತಳಮಟ್ಟದ ಯೋಜನೆಯನ್ನು ನಿರ್ಮಿಸುವ ಮತ್ತು ಅನುಷ್ಠಾನಗೊಳಿಸುವ ಅಧಿಕಾರದಿಂದ ವಂಚಿತವಾಗಿವೆ. ‘ಜಿಲ್ಲಾ ಉಸ್ತುವಾರಿ ಸಚಿವರು’ ಎಂಬ ವ್ಯವಸ್ಥೆಯು ಪಂಚಾಯತ್‌ರಾಜ್ ವ್ಯವಸ್ಥೆಯು ದುರ್ಬಲವಾಗಲು ಪ್ರಮುಖ ಕಾರಣವಾಗಿದೆ. ಜಿಲ್ಲಾ ವಲಯದ ಯೋಜನೆಯನ್ನು ಕಳೆದ ೨೦ – ೨೪ ವರ್ಷಗಳಿಂದ ಸಬಲಗೊಳಿಸಲು ನಮಗೆ ಸಾಧ್ಯವಾಗಿಲ್ಲ.

ಈ ಸಮಸ್ಯೆಯನ್ನು ನಾವು ಶೀಘ್ರವಾಗಿ ನಿವಾರಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯು ಕುಸಿದು ಹೋಗುತ್ತದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.