ಪ್ರಸ್ತಾವನೆ

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟವಾದ ಸ್ಥಾನವಿದೆ. ಈ ವಿಶಿಷ್ಟತೆಯು ಕೇವಲ ಭೌಗೋಳಿಕ, ಭಾಷೆ, ಸಾಹಿತ್ಯ, ಹವಾಮಾನ ಮುಂತಾದ ವಿಷಯಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅದು ಅನೇಕ ವಿಶಿಷ್ಟತೆಗಳನ್ನು ಮೆರೆದಿದೆ. ಇದನ್ನು ಕರ್ನಾಟಕದ ಆರ್ಥಿಕತೆ, ಸಮಾಜ, ರಾಜಕಾರಣಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಸಮಾಜ ವಿಜ್ಞಾನಿಗಳು ಗುರುತಿಸಿದ್ದಾರೆ (ಜೇಮ್ಸ್‌ಮೇನರ್‌೧೯೮೯, ಶ್ರೀನಿವಾಸ್ ಎಂ.ಎನ್. ೧೯೮೪, ವಿನೋದ್ ವ್ಯಾಸುಲು, ೧೯೯೭). ಕರ್ನಾಟಕವು ಒಂದು ಆಧುನಿಕ ರಾಜಕೀಯ ವ್ಯವಸ್ಥೆಯಾಗಿ ರೂಪುಗೊಂಡು ೨೦೦೬ಕ್ಕೆ ೫೦ ವರ್ಷಗಳಾದವು. ಕರ್ನಾಟಕವು ೨೦೦೬ನೆಯ ಸಾಲನ್ನು ‘ಸುವರ್ಣ ಕರ್ನಾಟಕ ವರ್ಷ’ವೆಂದು ಆಚರಿಸಿತು. ಒಂದು ದೇಶ / ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ೫೦ ವರ್ಷವು ದೀರ್ಘಾವಧಿಯೂ ಅಲ್ಲ ಅಥವಾ ಅಲ್ಪಾವಧಿಯೂ ಅಲ್ಲ. ಅದೊಂದು ಸಂಧಿಕಾಲ. ಅದೊಂದು ಆತ್ಮಾವಲೋಕನ ನಡೆಸುವ ಸಂದರ್ಭ. ಪ್ರಸ್ತುತ ಪ್ರಬಂಧದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅದರ ವಿಶಿಷ್ಟತೆಗಳನ್ನು ಹಾಗೂ ಕಳೆದ ೫೦ ವರ್ಷಗಳ ಅದರ ಅಭಿವೃದ್ಧಿ ಯೋಜನೆಗಳ ಅನುಭವಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ.

ಎಂ.ಎನ್. ಶ್ರೀನಿವಾಸರ ಪ್ರಮೇಯ

ಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ ಅವರು ಕರ್ನಾಟಕದ ಆರ್ಥಿಕತೆ, ರಾಜಕಾರಣ ಹಾಗೂ ಸಮಾಜ ಕುರಿತಂತೆ ಒಂದು ಪ್ರಸಿದ್ಧ ಪ್ರಮೇಯವನ್ನು ರೂಪಿಸಿದ್ದಾರೆ. ಅವರ (೧೯೮೪) “ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡುಗಳು ಅನುಭವಿಸುತ್ತಿರುವ ‘ಉಗ್ರ’ ಸ್ವರೂಪದ ಅಂದರೆ ಮೂಲಭೂತವೆನ್ನಬಹುದಾದ ಬದಲಾವಣೆಗಳಿಗೆ ಭಿನ್ನವಾದ ರೀತಿಯಲ್ಲಿ ಒಂದು ರೀತಿಯಲ್ಲಿ ಮೇಲ್ಪದರದ ‘ರಾಜಿ’ ಸ್ವರೂಪದ ಬದಲಾವಣೆಗಳನ್ನು ಕರ್ನಾಟಕವು ಅನುಭವಿಸುತ್ತಿದೆ” ಎಂಬುದು ಅವರ ಪ್ರಮೇಯದ ಸ್ಥೂಲ ರೂಪವಾಗಿದೆ. ಎಡಪಂಥೀಯ ಸಾಮಾಜಿಕ ಚಿಂತನೆಯು, ಚಳುವಳಿಯು, ಅಭಿವೃದ್ಧಿಯು ಕರ್ನಾಟಕದಲ್ಲಿ ಸಂಭವಿಸಲೇ ಇಲ್ಲ ಎಂಬ ಮಾತನ್ನು ಶ್ರೀನಿವಾಸ್ ತಮ್ಮ ಪ್ರಬಂಧದಲ್ಲಿ ಹೇಳುತ್ತಾರೆ.

ಕರ್ನಾಟಕವನ್ನು ಕುರಿತಂತೆ ಅನೇಕ ದಶಕಗಳಿಂದ ಅಧ್ಯಯನ ನಡೆಸಿಕೊಂಡು ಬಂದಿರುವ ಜೇಮ್ಸ್‌ಮೇನರ್ ಇದನ್ನು ‘ಕೊಹೆಸಿವ್ ಸಮಾಜ’ವೆಂದು ಕರೆದಿದ್ದಾರೆ (೧೯೮೯). ವಿನೋದ್ ವ್ಯಾಸುಲು ಅದನ್ನು ‘ಮಧ್ಯಮಗತಿ ಆರ್ಥಿಕತೆ’ಯೆಂದು ಕರೆದಿದ್ದಾರೆ (೧೯೯೭). ಅಂದರೆ ಕರ್ನಾಟಕವು ‘ಬದಲಾವಣೆ’ಗಳನ್ನೇ ಕಾಣದ ‘ಜಡ’, ‘ಯಥಾ ಸ್ಥಿತಿ’ಯ ಸಮಾಜವೇನಲ್ಲ. ಆದರೆ ಅದಕ್ಕೆ ‘ಉಗ್ರ’ ರೂಪದ ಬದಲಾವಣೆಗಳನ್ನು ಹುಟ್ಟು ಹಾಕುವುದು ಸಾಧ್ಯವಾಗಿಲ್ಲವೆಂಬುದು ನಿಜ. ಒಂದು ರೀತಿಯಲ್ಲಿ ಕರ್ನಾಟಕದ ಸಮಾಜ – ಆರ್ಥಿಕತೆ – ರಾಜಕಾರಣವು ‘ಯಥಾಸ್ಥಿತಿ’ ಮತ್ತು ‘ಗತಿಸ್ಥಿತಿ’ಗಳ ನಡುವೆ ತೂಗುಯ್ಯಾಲೆಯಾಡುತ್ತಾ ನಡೆದಿದೆಯೆಂದು ಹೇಳಬಹುದು. ಇಲ್ಲಿ ಬದಲಾವಣೆಗಳಾಗುತ್ತಿವೆ, ಅಭಿವೃದ್ಧಿಗಳಾಗಿವೆ.

ಇದಕ್ಕೆ ನಿದರ್ಶನವಾಗಿ ಕರ್ನಾಟಕದ ಕೃಷಿ ವ್ಯವಸ್ಥೆಯನ್ನು ನೋಡಬಹುದು. (ವಿವರಗಳಿಗೆ ನೋಡಿ : ಕರ್ನಾಟಕ ಡೆವಲಪ್‌ಮೆಂಟ್ ರಿಪೋರ್ಟ್‌: ೨೦೦೭ : ೫೬೭ – ೬೧೫). ಕರ್ನಾಟಕವು ಮೂಲತಃ ಒಣಭೂಮಿಯನ್ನು ವ್ಯಾಪಕವಾಗಿ ಹೊಂದಿರುವ ರಾಜ್ಯ. ಈ ರಾಜ್ಯದ ನಿವ್ವಳ ಬಿತ್ತನೆ ಪ್ರದೇಶವು ಸರಿಸುಮಾರು ೧೦೦ ಲಕ್ಷ ಹೆಕ್ಟೇರುಗಳ ಆಸುಪಾಸಿನಲ್ಲಿದೆ. ಕಳೆದ ೫೦ ವರ್ಷಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ತುಂಬಾ ಬದಲಾವಣೆಯಾಗಿಲ್ಲ. ಈ ಬಿತ್ತೆ ಪ್ರದೇಶದಲ್ಲಿ ನೀರಾವರಿ ಪ್ರದೇಶವು ೧೯೬೦ ರಲ್ಲಿ ೮ ಲಕ್ಷ ಹೆಕ್ಟೇರರಷ್ಟಿದ್ದುದು ೨೦೦೫ – ೦೬ ರಲ್ಲಿ ೩೨ ಲಕ್ಷ ಹೆಕ್ಟೇರುಗಳೆಂದು ಅಂದಾಉ ಮಾಡಲಾಗಿದೆ. ಇಡೀ ದೇಶದಲ್ಲಿ ಒಣಭೂಮಿ ಬೇಸಾಯವನ್ನು ಅತಿ ಹೆಚ್ಚಾಗಿ ಪಡೆಸಿರುವ ಮೂರನೆಯ ರಾಜ್ಯ ಕರ್ನಾಟಕ (ವಿವರಗಳಿಗೆ ನೋಡಿ : ಮಿಹಿರ್ ಶಹಾ ಮತ್ತು ಇತರರು ೧೯೯೮). ನೈಸರ್ಗಿಕ ಸಂಪನ್ಮೂಲಗಳ ದೃಷ್ಟಿಯಿಂದ ಕರ್ನಾಟಕವು ಅನುಕೂಲಕರ ಸ್ಥಿತಿಯಲ್ಲೇನು ಇಲ್ಲ. ಇಷ್ಟಾದರೂ ಅದು ಆಹಾರ ಉತ್ಪನ್ನದಲ್ಲಿ ಸ್ವಯಂಪೂರ್ಣತೆಯನ್ನು ಸಾಧಿಸಿಕೊಂಡಿದೆ. ಬರಗಾಲವನ್ನು ಅದು ಸ್ವಸಾಮರ್ಥ್ಯದ ಮೇಲೆ ನಿರ್ವಹಿಸುವ ಸ್ಥಿತಿಯಲ್ಲಿದೆ.

ಕರ್ನಾಟಕದ ಅಭಿವೃದ್ದಿ ಸಾಧನೆಯು ಕಣ್ಣುಕೋರೈಸುವಂತಹದಲ್ಲ. ಆದರೆ ಅದು ಅಲ್ಲಗಳೆಯವಂತಹದ್ದೂ ಅಲ್ಲ. ಕರ್ನಾಟಕದ ಅಭಿವೃದ್ಧಿಯನ್ನು ಪಂಚವಾರ್ಷಿಕ ಯೋಜನೆಗಳಿಗೆ ಸಂಬಂಧಿಸಿದಂತೆ ಅದರ ಅನುಭವಗಳನ್ನು ಕುರಿತಂತೆ ಚರ್ಚಿಸುವಾಗ

ಭಾರತದ ಒಕ್ಕೂಟದಲ್ಲಿ ಮಧ್ಯಮ ಸ್ಥಾನದಲ್ಲಿ ಕರ್ನಾಟಕ

ಕೋಷ್ಟಕ

ಆಯ್ದ ಅಭಿವೃದ್ಧಿ ಸೂಚಿಗಳು ಮುಂದುವರಿದ ರಾಜ್ಯಗಳು ಕರ್ನಾಟಕ ಹಿಂದುಳಿದ ರಾಜ್ಯಗಳು
ಪಂಜಾಬ್ ಮಹಾರಾಷ್ಟ್ರ ತಮಿಳುನಾಡು ಕೇರಳ ಬಿಹಾರ .ಪ್ರದೇಶ .ಪ್ರದೇಶ ರಾಜಸ್ಥಾನ
ಲಿಂಗ ಪರಿಮಾಣ: ೨೦೦೧ ೮೭೪ ೯೨೨ ೧೮೬ ೧೦೫೮ ೯೬೪ ೯೨೧ ೯೨೦ ೮೯೮ ೯೨೨
ಸಾಕ್ಷರತೆ: ೨೦೦೧ ೬೯.೬೫ ೭೭.೨೭ ೭೩.೪೭ ೯೦.೯೨ ೬೭.೦೪ ೪೭.೫೩ ೬೪.೧೧ ೫೭.೩೬ ೬೧.೦೨
ಜೀವನಾಯುಷ್ಯ: ೨೦೦೧ – ೦೬
ಪುರುಷರು ೬೯.೭೮ ೬೬.೭೫ ೬೭.೦೦ ೭೧.೬೭ ೬೨.೪೩ ೬೫.೬೬ ೫೯.೧೯ ೬೩.೫೪ ೬೨.೭೭
ಮಹಿಳೆಯರು ೭೨.೦೦ ೬೯.೭೬ ೬೯.೭೫ ೭೫.೦೦ ೬೬.೪೪ ೬೪.೪೯ ೫೮.೦೧ ೬೪.೦೯ ೬೨.೮೦
ಜನಸಂಖ್ಯೆಯ ಬೆಳವಣಿಗೆ ಪ್ರಮಾಣ
೧೯೯೧ – ೨೦೦೧ ೧೯.೭೬ ೨೨.೫೭ ೧೧.೧೯ ೯.೪೨ ೧೭.೨೫ ೨೮.೪೩ ೨೪.೩೪ ೨೫.೦೩ ೨೮.೩೩
ತಲಾವರಮಾನ ೨೦೦೩ – ೦೪ (ಶೇ) ಚಾಲ್ತಿಬೆಲೆಗಳಲ್ಲಿ (ರೂ.ಗಳಲ್ಲಿ) ೨೭೮೫೧ ೨೯೨೦೪ ೨೩೩೫೮ ೨೪೪೯೨ ೨೩೮೫೯ ೫೭೮೦ ೧೪೦೧೧ ೧೦೮೧೭ ೧೫೪೮೬
ಶಿಶುಮರಣ ಪ್ರಮಾಣ – ೨೦೦೩ ೪೯ ೪೨ ೪೩ ೧೧ ೫೨ ೬೦ ೮೨ ೭೬ ೭೫
ಪ್ರತಿ ಲಕ್ಷ ಜನರಿಗೆ ವಾಹನಗಳ ಸಂಖ್ಯೆ ೨೦೦೨ ೧೨೭೩೯ ೭೬೫೨ ೯೦೬೭ ೭೨೭೨ ೬೮೭೯ ೧೨೩೫ ೫೨೫೮ ೩೧೧೧ ೫೬೫೭
ತಲಾ ಬ್ಯಾಂಕ್ ಠೇವಣಿ ೨೦೦೪ (ರೂ.ಗಳಲ್ಲಿ) ೨೫೨೫೯ ೩೪೦೧೦ ೧೫೫೦೮ ೧೯೯೯೦ ೧೭೦೧೩ ೩೩೬೫ ೫೧೮೦ ೬೪೦೬ ೬೭೭೬
ಕೃಷಿಯನ್ನು ಅವಲಂಬಿಸಿ ಕೊಂಡಿರುವವರ ಪ್ರಮಾಣ ೨೦೦೧(ಶೇ) ೩೯.೩೬ ೫೫.೪೧ ೪೯.೫೫ ೨೩.೨೬ ೫೫.೮೯ ೭೭.೩೫ ೭೧.೫೯ ೬೬.೦೩ ೬೬.೦೦

ಮೂಲ : ಕರ್ನಾಟಕ ಸರ್ಕಾರ ೨೦೦೬ ಆರ್ಥಿಕ ಸಮೀಕ್ಷೆ : ೨೦೦೫೦೬, ಪು. ಎ೮ ರಿಂದ ಎ೧೯

 

ಅಧ್ಯಯನದ ವಿನ್ಯಾಸ

ಈ ಅಧ್ಯಯನದಲ್ಲಿ ಪ್ರಸ್ತಾವನೆ ಹಾಗೂ ಸಂಗ್ರಹ ಭಾಗಗಳನ್ನು ಬಿಟ್ಟು ಒಟ್ಟು ನಾಲ್ಕು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಕರ್ನಾಟಕದ ಜನಸಂಖ್ಯೆಗೆ ಸಂಬಂಧಿಸಿದ ಹಾಗೂ ಕೃಷಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಚರ್ಚಿಸಲಾಗಿದೆ. ಎರಡನೆಯ ಭಾಗದಲ್ಲಿ ವರಮಾನದ ವರ್ಧನೆ – ಬೆಳವಣಿಗೆಯನ್ನು ಸ್ಥೂಲವಾಗಿ ಚರ್ಚಿಸಲಾಗಿದೆ. ಮೂರನೆಯ ಭಾಗದಲ್ಲಿ ಪಂಚವಾರ್ಷಿಕ ಯೋಜನೆಗಳ ವಿವರಗಳನ್ನು ನೀಡಲಾಗಿದೆ. ನಾಲ್ಕನೆಯ ಭಾಗದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಮೂರು ಮುಖ್ಯ ವೈಫಲ್ಯದ ಸಂಗತಿಗಳನ್ನು ಚರ್ಚಿಸಲಾಗಿದೆ. (ಪ್ರಾದೇಶಿಕ ಅಸಮಾನತೆ, ಮಾನವ ಅಭಿವೃದ್ಧಿ ಮತ್ತು ಲಿಂಗ ಸಂಬಂಧಗಳು) ಕೊನೆಯ ಸಂಗ್ರಹದಲ್ಲಿ ಅಧ್ಯಯನದ ತಥ್ಯಗಳನ್ನು ಸಾರಾಂಶ ರೂಪದಲ್ಲಿ ನೀಡಲಾಗಿದೆ ಹಾಗೂ ಅಭಿವೃದ್ಧಿಯ ಮುಂದಿನ ದಿಶೆಗತಿಯನ್ನು ಕುರಿತು ಕೆಲವು ಸೂಚನೆಗಳನ್ನು ನೀಡಲಾಗಿದೆ.

ಭಾಗ
ಜನಸಂಖ್ಯೆ ಮತ್ತು ಕೃಷಿ ಅವಲಂಬನೆ

ಕೋಷ್ಟಕ – ೨ರಲ್ಲಿ ಕರ್ನಾಟಕ ಜನಸಂಖ್ಯೆಯ ಬೆಳವಣಿಗೆಯ ಗಣಶೀಲ ಸ್ವರೂಪವನ್ನು ತೋರಿಸಲಾಗಿದೆ. ಅತ್ಯಂತ ಅಭಿನಂದಾರ್ಹ ಸಂಗತಿಯೆಂದರೆ ಕರ್ನಾಟಕದ ಜನಸಂಖ್ಯೆ ಒಟ್ಟು ಪರಿಮಾಣದಲ್ಲಿ ಏರಿಕೆಯಾಗುತ್ತಾ ನಡೆದಿದ್ದರೂ ಅದರ ಏರಿಕೆಯ ಗತಿ ೧೯೫೧ – ೬೧ರ ದಶಕದಲ್ಲಿ ಶೇ.೨೧.೫೫ ರಷ್ಟಿದ್ದುದು ೧೯೭೧ – ೮೧ರಲ್ಲಿ ಶೇ.೨೬.೮ಕ್ಕೆ ಏರಿಕೆಯಾಯಿತು. ಆದರೆ ೧೯೮೧ರ ನಂತರ ಅದು ಕಡಿಮೆಯಾಗತೊಡಗಿತು. ಜನಸಂಖ್ಯೆಯು ೧೯೮೧ – ೯೧ರ ದಶಕದಲ್ಲಿ ಶೇ. ೨೧.೧ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ೧೯೭೧ – ೮೧ರ ದಶಕದಲ್ಲಿ ಏರಿಕೆಗಿಂತ ಶೆ. ೫.೭ ಅಂಶಗಳಷ್ಟು ಕಡಿಮೆಯಾಗಿದೆ. ಕಳೆದ ೧೯೯೧ – ೨೦೦೧ ದಶಕದಲ್ಲಿ ಅದರ ದಶಕವಾರು ಬೆಳವಣಿಗೆ ಪ್ರಮಾಣ ಶೇ. ೧೭.೨೫. ಲಿಂಗ ಅನುಪಾತವು ೧೯೯೧ರಲ್ಲಿ ೯೬೦ ಇದ್ದುದು ೨೦೦೧ರಲ್ಲಿ ಅದು ೯೬೪ಕ್ಕೇರಿದೆ. ಜನನ ಪ್ರಮಾಣ ಹಾಗೂ ಶಿಶು ಮರಣ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಜನಸಂಖ್ಯೆಯ ಗುಣವನ್ನು ಸೂಚಿಸುವ ಸಾಕ್ಷರತಾ ಪ್ರಮಾಣವು ೧೯೬೧ರಲ್ಲಿ ಶೇ. ೨೯.೮೦ರಷ್ಟಿದ್ದುದು ೨೦೦೧ರಲ್ಲಿ ಶೇ. ೬೭.೦೪ಕ್ಕೇರಿದೆ. ಮಹಿಳೆಯರ ಸಾಕ್ಷರತೆಯು ಶೇ. ೧೬.೭೦ ರಿಂದ ಶೇ. ೪೫ಕ್ಕೇರಿದೆ.

ಒಟ್ಟಾರೆ ಜನಸಂಖ್ಯಾ ಪರಿವರ್ತನಾ ಸಿದ್ಧಾಂತದಲ್ಲಿ ಗುರುತಿಸಲಾಗುವ ಕೆಳಮಟ್ಟದ ಜನನ ಪ್ರಮಾಣ ಮತ್ತು ಕೆಳಮಟ್ಟದ ಮರಣ ಪ್ರಮಾಣಗಳನ್ನು ಪ್ರತಿನಿಧಿಸುವ ಮೂರನೆಯ ಹಂತವನ್ನು ಕರ್ನಾಟಕವು ಪ್ರವೇಶಿಸಿದೆ. ಕರ್ನಾಟಕದ ಸಂದರ್ಭದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ಒಂದು ಸಮಸ್ಯೆಯನ್ನಾಗಿ ಪರಿಗಣಿಸುವ ಸ್ಥಿತಿ ಇಂದು ಇಲ್ಲ. ಇಂದು ಸೈದ್ಧಾಂತಕವಾಗಿ ಜನಸಂಖ್ಯೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ನೆಲೆಯ ಚರ್ಚೆ ಮುಂಚೂಣಿಗೆ ಬಂದಿದೆ. ಈ ಮುಂದೆ ಭಾಗ ನಾಲ್ಕರಲ್ಲಿ ವಿವರವಾಗಿ ಇದನ್ನು ಚರ್ಚಿಸಲಾಗಿದೆ.

ಜನಸಂಖ್ಯಾ ಬೆಳವಣಿಗೆಯ ಗತಿಶೀಲ ಸ್ವರೂಪಕರ್ನಾಟಕ : ೧೯೭೧೨೦೦೧

ಕೋಷ್ಟಕ

ಸೂಚಿಗಳು ೧೯೭೧ ೧೯೮೧ ೧೯೯೧ ೨೦೦೧
ಜನಸಂಖ್ಯೆ (ಲಕ್ಷಗಳಲ್ಲಿ) ೨೯೨.೯೯ ೩೭೧.೩೬ ೪೪೯.೭೭ ೫೨೭.೩೪
ಜನಸಂಖ್ಯೆಯ ದಶಕವಾರು ಬೆಳವಣಿಗೆ ಪ್ರಮಾಣ (ಶೇ.) ೨೪.೨ ೨೬.೮ ೨೧.೧ ೧೭.೨೫
ಜನಸಾಂದ್ರತೆ (ಪ್ರತಿ ಚ.ಕಿ.ಮೀ.ನಲ್ಲಿ ವಾಸಿಸುವ ಜನ) ೧೫೩ ೧೯೪ ೨೩೫ ೨೭೫
ನಗರವಾಸಿಗಳ ಪ್ರಮಾಣ (ಶೇ.) ೨೪.೩ ೨೮.೯ ೩೦.೯ ೩೩.೯೮
ಲಿಂಗ ಅನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು) ೯೫೭ ೯೬೩ ೯೬೦ ೯೬೪
ಸಾಕ್ಷರತೆ ಒಟ್ಟು ೩೧.೫ ೩೮.೫ ೫೬.೦೪ ೬೭.೦೪
ಪುರುಷರು ೪೧.೬ ೪೮.೮ ೬೭.೩ ೭೬.೨೯
ಮಹಿಳೆಯರು ೨೧.೦೦ ೨೭.೭೦ ೪೪.೩೦ ೫೭.೪೫
ಜನನ ಪ್ರಮಾಣ ೩೧.೭ ೨೮.೩ ೨೬.೨ ೨೨.೨
ಮರಣ ಪ್ರಮಾಣ ೧೨.೧ ೯.೧ ೮.೫ ೭.೬
ಒಟ್ಟು ಸಂತಾನೋತ್ಪತ್ತಿ ಪ್ರಮಾಣ ೪.೪ ೩.೬ ೩.೧ ೨.೫
ಶಿಶು ಮರಣ ಪ್ರಮಾಣ ೯೫ ೬೯ ೭೩ ೫೮
ಜನನ ವೇಳೆ ಆಯುಷ್ಯ (ವರ್ಷಗಳಲ್ಲಿ) ಪುರುಷರು ೬೦.೨ ೬೨.೧ ೬೨.೪೩
ಮಹಿಳೆಯರು ೬೧.೧ ೬೩.೩ ೬೬.೪೪

ಮೂಲ : ನ್ಯಾಷನಲ್ಪ್ಯಾಮಿಲಿ ಹೆಲ್ಥ್ಸರ್ವೆ. ಕರ್ನಾಟಕ : ೧೯೯೨೯೩ ಪಿ.ಆರ್.ಸಿ. ಬೆಂಗಳೂರು ಮತ್ತು ಐಐಪಿವಿಎಸ್, ಮುಂಬೈ, ೧೯೯೫, ಪು.. ಕರ್ನಾಟಕ ಸರ್ಕಾರ, ೨೦೦೪, ಆರ್ಥಿಕ ಸಮೀಕ್ಷೆ : ೨೦೦೩ – ೦೪, ಪು.ಎ೮ ರಿಂದ ಎ೧೦.

ಕೃಷಿಯಲ್ಲಿ ಬೆಳವಣಿಗೆ

ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಕೃಷಿ ಮೇಲೆ ತೊಡಗಿಸಿದ ಹಣಕಾಸ ಪ್ರಮಾಣದ ವಿವರವನ್ನು ಕೋಷ್ಟಕ – ೩ರಲ್ಲಿ ನೀಡಿದೆ.

 

೧೯೬೦ – ೬೧ ರಲ್ಲಿ ಶೇ. ೬೧ರಷ್ಟಿದ್ದುದು ೨೦೦೦ – ೦೧ ರಲ್ಲಿ ಅದು ಶೇ. ೨೮.೯೭ಕ್ಕೆ ಇಳಿದಿದೆ. ಆದರೆ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣವು ಅದೇ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ. (ವಿವರಗಳಿಗೆ ನೋಡಿ: ಕೋಷ್ಟಕ ೫ ಮತ್ತು ಕೋಷ್ಟಕ ೬) ಈ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿದ್ದವರ ಪ್ರಮಾಣ ೧೯೬೦ – ೬೧ರಲ್ಲಿ ಶೇ. ೭೦.೨೫ ರಷ್ಟಿದ್ದುದು ೨೦೦೦ – ೦೧ರಲ್ಲಿ ಅದು ಕೇವಲ ಶೇ. ೫೫.೮೯ಕ್ಕೆ ಇಳಿದಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ಭೂರಹಿತ ದಿನಗೂಲಿಗಳನ್ನು ಇತರೆ ವಲಯಕ್ಕೆ ವರ್ಗಾಯಿಸುವ ಕಾರ್ಯಕ್ರಮ ರೂಪಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಇಂದು ಕರ್ನಾಟಕದಲ್ಲಿ ೬೨ ಲಕ್ಷ ಭೂ ರಹಿತ ಕೃಷಿಕೂಲಿಕಾರರಿದ್ದಾರೆ (೨೦೦೧). ಈ ಹಿನ್ನೆಲೆಯಲ್ಲಿ ನಾವು ಮುಂದಿನ ಅಭಿವೃದ್ಧಿ ಯೋಜನೆಗಳ ಸ್ವರೂಪದ ಬಗ್ಗೆ ಯೋಚಿಸಬೇಕಾಗುತ್ತದೆ. ಕೃಷಿ ವಲಯವನ್ನು ಆಧುನೀಕರಿಸುವ ಹಾಗೂ ಅದರ ಬೆಳೆ ಪದ್ಧತಿಯನ್ನು ವೈವಿಧ್ಯಪಡಿಸುವ ದಿಶೆಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ತೋಟಗಾರಿಕೆ ಬೆಳಗಳಗೆ, ಮುಖ್ಯವಾಗಿ ಹಣ್ಣು, ತರಕಾರಿ, ಹೂವುಗಳ ಕೃಷಿಯನ್ನು ವಿಸ್ತೃತವಾಗಿ ಬೆಳಸಬೇಕಾಗಿದೆ. ಮುಂದಿನ ಪಂಚವಾಷಿಕ ಯೋಜನೆಗಳಲ್ಲಿ ಕೃಷಿಯ ಬೆಳವಣಿಗೆ ಬಗ್ಗೆ ಹೆಚ್ಚಿನ ಸಂಪನ್ಮೂಲ ಹಾಗೂ ಗಮನ ನೀಡುವ ಅಗತ್ಯವಿದೆ. ನೇರವಾಗಿ ಇಂದು ೧೩೧ ಲಕ್ಷ ಜನರು ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ.

ವರಮಾನದ ವಲಯವಾರು ಪ್ರಮಾಣ : ಕರ್ನಾಟಕ

ಕೋಷ್ಟಕ

ವರ್ಷಗಳು ವಲಯವಾರು ಪಾಲು
ಪ್ರಾ.. ದ್ವಿ. ತೃ.. ಒಟ್ಟು
೧೯೬೦ – ೬೧ ೬೧.೦೬ ೧೩.೩೯ ೨೫.೫೫ ೧೦೦.೦೦
೧೯೭೦ – ೭೧ ೫೨.೭೩ ೨೦.೭೩ ೨೬.೫೪ ೧೦೦.೦೦
೧೯೮೦ – ೮೧ ೪೬.೦೮ ೨೦.೭೬ ೩೩.೧೮ ೧೦೦.೦೦
೧೯೯೦ – ೯೧ ೩೭.೧೧ ೨೩.೦೩ ೩೯.೮೫ ೧೦೦.೦೦
೨೦೦೦ – ೦೧ ೨೮.೯೭ ೨೪.೫೬ ೪೬.೪೭ ೧೦೦.೦೦

ಮೂಲ : ವಿವಿಧ ದಶಕಗಳ ಜನಗಣತಿ ವರದಿಗಳು

ಪ್ರಾ.ವ : ಪ್ರಾಥಮಿಕ ವಲಯ, ದ್ವಿ.ವ : ದ್ವಿತೀಯ ವಲಯ,

ತೃ.ವ : ತೃತೀಯ ವಲಯ

ಕರ್ನಾಟಕದಲ್ಲಿ ಕೃಷಿಯ ಅವಲಂಬನೆ

ಕೋಷ್ಟಕ      (ಲಕ್ಷಗಳಲ್ಲಿ)

ವರ್ಷಗಳು

ಸಾಗುವಳಿದಾರರು

ಭೂರಹಿತ ಒಟ್ಟು ಕೃಷಿ ಒಟ್ಟು

ದಿನಗೂಲಿಗಳು

ಅವಲಂಬಿತರು ದುಡಿಮೆಗಾರರು
೧೯೬೦ – ೬೧ ೫೮.೦೬ ೧೭.೬೧ ೭೫.೬೭ ೧೦೭.೭೨
೧೯೮೦ – ೮೧ ೫೨.೨೨ ೩೬.೫೫ ೮೮.೭೭ ೧೪೯.೪೪
೧೯೯೦ – ೯೧ ೫೯.೧೫ ೪೯.೯೯ ೧೦೯.೧೪ ೧೮೮.೮೬
೨೦೦೦ – ೦೧ ೬೯.೩೬ ೬೨.೦೯ ೧೩೧.೪೫ ೨೩೫.೨೧

ಮೂಲ : ವಿವಿಧ ದಶಕಗಳ ಜನಗಣತಿ ವರದಿಗಳು

ಕರ್ನಾಟಕ ಡೆವಲಪ್‌ಮೆಂಟ್ ರಿಪೋರ್ಟ್‌(೨೦೦೭) ದಲ್ಲಿ ಸ್ಪಷ್ಟವಾಗಿ ಗುರುತಿಸಿರುವಂತೆ ಕರ್ನಾಟಕದಲ್ಲಿ ಅಂತರಿಕ ಉತ್ಪನ್ನದ ಏರಿಕೆಯು ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಅವಲಂಬಿಸಿದೆ. ಕರ್ನಾಟಕದಲ್ಲಿ ಆಹಾರ ಬೆಳೆಗಳಿಗೆ ಸಂಬಂಧಿಸಿದಂತೆ ಇಳುವರಿಯಲ್ಲಿ ಸರಿಸುಮಾರು ಗರಿಷ್ಠಮಟ್ಟ ತಲುಪಲಾಗಿದೆ. ಆದ್ದರಿಂದ ಇನ್ನು ಮುಂದೆ ಆಹಾರೇತರ ಬೆಳೆಗಳಿಗೆ ಅಂದರೆ ತೋಟಗಾರಿಕೆ ಬೆಳೆಗಳು, ಎಣ್ಣೆಬೀಜ, ಬೇಳೆಕಾಳು, ಮೀನು, ಹೈನುಗಾರಿಕೆ ಮುಂತಾದ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸುವ ಅಗತ್ಯವಿದೆ. ಒಣಭೂಮಿ ಬೇಸಾಯವನ್ನು ಆದ್ಯತೆಯ ಮೇಲೆ ಅಭಿವೃದ್ಧಿಪಡಿಸದಿದ್ದರೆ ಕರ್ನಾಟಕದ ಕೃಷಿರಂಗವು ಕುಸಿತಕ್ಕೆ ಒಳಗಾಗುವುದು ಖಂಡಿತ. ಈ ವಲಯದಲ್ಲಿರುವ ಪ್ರಾದೇಶಿಕ ಅಸಮಾನತೆ ಕುಸಿತಕ್ಕೆ ಒಳಗಾಗುವುದು ಖಂಡಿತ. ಈ ವಲಯದಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ದಿಶೆಯಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಭಾಗ
ವರಮಾನ ಮತ್ತು ತಲಾ ವರಮಾನ

ಅಭಿವೃದ್ಧಿ ಯೋಜನೆಗಳ ಮುಖ್ಯ ಉದ್ದೇಶವೆಂದರೆ ಜನರ ವರಮಾನದ ಮಟ್ಟವನ್ನು ಅಧಿಕಗೊಳಿಸುವುದು. ಅಭಿವೃದ್ಧಿಯನ್ನು ವರಮಾನದ ವರ್ಧನೆಯ ನೆಲೆಯಲ್ಲೇ ಪಂಚ ವಾರ್ಷಿಕ ಯೋಜನೆಗಳಲ್ಲಿ ಪರಿಭಾವಿಸಿಕೊಂಡು ಬರಲಾಗಿದೆ. ಪಂಚವಾರ್ಷಿಕ ಯೋಜನೆಗಳ ಸಾಫಲ್ಯ – ವೈಫಲ್ಯವನ್ನು ವರಮಾನದ ವಾರ್ಷಿಕ ಬೆಳವಣಿಗೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೋಷ್ಟಕ – ೮ರಲ್ಲಿ ಕರ್ನಾಟಕ ರಾಜ್ಯದ ವರಮಾನದ ವಾರ್ಷಿಕ ಬೆಳವಣಿಗೆ ಪ್ರಮಾಣವನ್ನು ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ.

ಈ ಕೋಷ್ಟಕದಲ್ಲಿ ತೋರಿಸಿರುವಂತೆ ೧೯೭೫ರವರೆಗೆ ರಾಜ್ಯದ ವರಮಾನದ ಬೆಳವಣಿಗೆ ಪ್ರಮಾಣವು ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣಕ್ಕಿಂತ ಅಧಿಕವಾಗಿತ್ತು.

 

ಸಂಗತಿಗಳನ್ನು ಚರ್ಚೆ ಮಾಡಬಹುದು. ಈಗಾಗಲೇ ಗುರುತಿಸಿರುವಂತೆ ಭಾರತ ಅದರಂತೆ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ವರಮಾನದ ವರ್ಧನೆಯ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಭಿವೃದ್ಧಿಯನ್ನು ವರಮಾನ ಹಾಗೂ ತಲಾವರಮಾನಗಳು ವರ್ಧನೆಯೆಂದು ನಿರ್ವಚಿಸಿಕೊಳ್ಳಲಾಗಿತ್ತು. ಬಹಳ ಕುತೂಹಲದ ಸಂಗತಿಯೆಂದರೆ ಅಭಿವೃದ್ಧಿಯ ಚೌಕಟ್ಟಿನೊಳಗೆ ಭೌತಿಕ ಸರಕುಗಳ ಜೊತೆಗೆ ಸೇವಾ ಚಟುವಟಿಕೆಗಳಾದ ಶಿಕ್ಷಣ, ಆರೋಗ್ಯ ಮತ್ತು ಆಡಳಿತದ ಸಂಗತಿಗಳನ್ನು ಸೇರಿಸಲಾಗಿತ್ತು. ಕರ್ನಾಟಕ ಸರ್ಕಾರವು ೧೯೭೦ರಲ್ಲಿ ಪ್ರಕಟಿಸಿರುವ ಅಭಿವೃದ್ಧಿ ಕುರಿತ ಅಧಿಕೃತ ಕೃತಿಯಲ್ಲಿ ಅಭಿವೃದ್ಧಿಯನ್ನು ಹೀಗೆ ನಿರ್ವಚಿಸಲಾಗಿದೆ.

ಆರ್ಥಿಕ ಅಭಿವೃದ್ಧಿಯ ಮುಖ್ಯ ಗುರಿಯೆಂದರೆ ಭೌತಿಕ ಹಾಗೂ
ಭೌತಿಕೇತರ ಸರಕುಗಳ ತಲಾ ಅನುಭೋಗದಲ್ಲಿ
ಸಾಧಿಸುವ ಸಾಮಾನ್ಯ ವರ್ಧನೆಯಾಗಿದೆ.” (೧೯೭೦: ಪು : ೨೧)

ಭೌತಿಕ ಸರಕುಗಳಲ್ಲಿ ಅನುಭೋಗಿ ಸರಕುಗಳು, ಆಹಾರ, ಬಾಳಿಕೆ ಬರುವ ಹಾಗೂ ತಕ್ಷಣಕ್ಕೆ ಉಪಯೋಗಿಸುವ ಸರಕುಗಳನ್ನು ಸೇರಿಸಿದ್ದರೆ ಭೌತಿಕೇತರ ಸರಕುಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಆಡಳಿತಗಳನ್ನು ಸೇರಿಸಲಾಗಿದೆ. ಮೊದಲನೆಯ ಪ್ರಕಾರವನ್ನು ‘ವರಮಾನ ಅಭಿವೃದ್ಧಿ’ಯೆಂದೂ ಎರಡನೆಯ ಪ್ರಕಾರವನ್ನು ಸ್ಥೂಲವಾಗಿ ‘ಮಾನವ ಅಭಿವೃದ್ಧಿ’ಯೆಂದೂ ಹೇಳಬಹುದು. ಅಖಿಲ ಭಾರತ ಮಟ್ಟದಲ್ಲೂ ಆರ್ಥಿಕ ಅಭಿವೃದ್ಧಿಯನ್ನು ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಂಡಿರುವುದು ಕಂಡುಬರುತ್ತದೆ. ಎರಡನೆಯ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ ಅಭಿವೃದ್ಧಿಯನ್ನು ಹೀಗೆ ನಿರ್ವಚಿಸಲಾಗಿದೆ.

“ಅಭಿವೃದ್ಧಿಯು ಸಮುದಾಯದ ಬದುಕಿನ ಎಲ್ಲ ಅಂಶಗಳನ್ನು ಒಳಗೊಳ್ಳುತ್ತದೆ. ಅದನ್ನು ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಆರ್ಥಿಕ ಯೋಜನೆಯೆಂಬುದು ಆರ್ಥಿಕೇತರ ಸಂಗತಿಗಳಾದ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಒಳಗೊಳ್ಳುವ ಒಂದು ಸಂಗತಿಯಾಗಿದೆ” (ಕೇಂದ್ರದ ಎರಡನೆಯ ಪಂಚವಾರ್ಷಿಕ ಯೋಜನೆ ಕರಡು: ೧೯೫೬, ಪು. ೧).

ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಗಳ ಪಾತ್ರವನ್ನು ಕುರಿತಂತೆ ಇಂದು ಹೆಚ್ಚಿನ ಚರ್ಚೆಗಳಾಗುತ್ತವೆ. ಅಮರ್ತ್ಯಸೆನ್ ಅವರ ಮಾನವ ಅಭಿವೃದ್ಧಿ ಪರಿಭಾವನೆಯು ಇಂತಹ ಚರ್ಚೆಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿದೆ. ಆದರೆ ನಮ್ಮ ಯೋಜನೆಗಳನ್ನು ಪರಿಭಾವಿಸಿಕೊಳ್ಳುವಾಗ ಅವುಗಳನ್ನು ಅತ್ಯಂತ ವಿಸ್ತೃತವಾದ ನೆಲೆಯಲ್ಲಿ, ಅಂದರೆ ಶಿಕ್ಷಣ ಮತ್ತು ಆರೋಗ್ಯವನ್ನು ಒಳಗೊಳ್ಳುವ ರೀತಿಯಲ್ಲಿ ಪರಿಭಾವಿಸಿಕೊಳ್ಳಲಾಗಿತ್ತು ಎಂಬುದು ಬಹಳಮುಖ್ಯವಾದ ಸಂಗತಿಯಾಗಿದೆ. ಈ ಬಗ್ಗೆ ಪ್ರಬಂಧದ ನಾಲ್ಕನೆಯ ಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಅಭಿವೃದ್ಧಿ ಯೋಜನೆಗಳು ಭಾರತದಲ್ಲಿ ಆರಂಭಗೊಂಡ ಬಗ್ಗೆ, ಅವುಗಳ ಉಗಮದ ಬಗ್ಗೆ ಅನೇಕ ತಪ್ಪು ಅಭಿಪ್ರಾಯಗಳಿವೆ. ಪಂಚವಾರ್ಷಿಕ ಯೋಜನೆಗಳಿಗೆ ಪ್ರೇರಣೆ ಭಾರತದ ಒಳಗಿನಿಂದಲೂ ಬಂದಿವೆ ಮತ್ತು ಬಾಹ್ಯವಾಗಿಯೂ ಬಂದಿವೆ. ಸೋವಿಯಟ್ ರಷ್ಯಾದಿಂದ ಪ್ರೇರಣೆ ಪಡೆದು ಯೋಜನೆಗಳನ್ನು ರೂಪಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವಿರಬಹುದು. ಆದರೆ ಕರ್ನಾಟಕವನ್ನೇ ತೆಗೆದುಕೊಂಡರೂ ಯೋಜಿತ ಅಭಿವೃದ್ಧಿ ಬಗ್ಗೆ ಪ್ರಯತ್ನಗಳು ಸ್ವಾತಂತ್ರ್ಯಪೂರ್ವದಲ್ಲೇ ಆರಂಭಗೊಂಡಿದ್ದು ಕಂಡುಬರುತ್ತದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು ೧೯೧೦ರಲ್ಲಿ ‘ಮೈಸೂರು ಆರ್ಥಿಕ ಸಮಾವೇಶ’ವನ್ನು ನಡೆಸಿದರು. ಅಲ್ಲಿ ಎರಡು ಸಂಗತಿಗಳ ಬಗ್ಗೆ ಚರ್ಚೆ ನಡೆದವು.

೧. ರಾಜ್ಯದಲ್ಲಿನ ಆರ್ಥಿಕ ಬದುಕನ್ನು ಕುರಿತಂತೆ ಅಧ್ಯಯನ.

೨. ರಾಜ್ಯವನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬ ಅಧ್ಯಯನ.

ಈ ಸಮಾವೇಶದಲ್ಲಿ ಶಿಕ್ಷಣ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಪ್ರತಿನಿಧಿಗಳು ಭಾಗವಹಿಸಿದ್ದರು. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ವಿವಿಧ ಮಂಡಳಿಗಳ ಮೂಲಕ ಅವುಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು. ಅಂದ ಮೇಲೆ ಮೈಸೂರು ರಾಜ್ಯದಲ್ಲಿ ಯೋಜಿತ ಅಭಿವೃದ್ಧಿ ಪ್ರಕ್ರಿಯೆಯು ೨೦ನೆಯ ಶತಮಾನದ ಆದಿಭಾಗದಲ್ಲೇ ಆರಂಭಗೊಂಡಿತೆಂದು ಹೇಳಬಹುದು.

ಪಂಚವಾರ್ಷಿಕ ಯೋಜನೆಗಳಲ್ಲಿ ತೊಡಗಿಸಿದ ಹಣಕಾಸು ಮೊತ್ತ

ಕೋಷ್ಟಕ

ಯೋಜನೆಗಳು ವರ್ಷಗಳು ಕೋಟಿ ರೂ.ಗಳಲ್ಲಿ
೧. ಮೊದಲನೆಯ ಯೋಜನೆ ೧೯೫೧ – ೫೬ ರೂ. ೪೦.೫೧ ಕೋಟಿ
೨. ಎರಡನೆಯ ಯೋಜನೆ ೧೯೫೬ – ೬೧ ರೂ. ೧೪೨.೫೮ ಕೋಟಿ
೩. ಮೂರನೆಯ ಯೋಜನೆ ೧೯೬೧ – ೬೬ ರೂ. ೨೬೪.೧೩ ಕೋಟಿ
೪. ವಾರ್ಷಿಕ ಯೋಜನೆಗಳು ೧೯೬೬ – ೬೯ ರೂ. ೧೯೫.೫೧ ಕೋಟಿ
೫. ನಾಲ್ಕನೆಯ ಯೋಜನೆ ೧೯೬೯ – ೭೪ ರೂ. ೩೫೯.೮೫ ಕೋಟಿ
೬. ಐದನೆಯ ಯೋಜನೆ ೧೯೭೮ – ೭೮ ರೂ. ೮೫೨.೩೯ ಕೋಟಿ
೭. ವಾರ್ಷಿಕ ಯೋಜನೆಗಳು ೧೯೭೮ – ೮೦ ರೂ. ೬೪೭.೦೫ ಕೋಟಿ
೮. ಆರನೆಯ ಯೋಜನೆ ೧೯೮೦ – ೮೫ ರೂ. ೨೫೦೦ ಕೋಟಿ
೯. ಏಳನೆಯ ಯೋಜನೆ ೧೯೮೫ – ೯೦ ರೂ. ೪೦೪೫.೭೦ ಕೋಟಿ
೧೦. ವಾರ್ಷಿಕ ಯೋಜನೆಗಳು ೧೯೯೦ – ೯೨ ರೂ. ೩೦೫೯.೭೦ ಕೋಟಿ
೧೧. ಎಂಟನೆಯ ಯೋಜನೆ ೧೯೯೨ – ೯೭ ರೂ. ೧೪೮೯೪.೦೮ ಕೋಟಿ
೧೨. ಒಂಬತ್ತನೆಯ ಯೋಜನೆ ೧೯೯೭ – ೨೦೦೨ ರೂ. ೨೩೪೦೦.೦೦ ಕೋಟಿ

 

 

ಈ ಯೋಜನೆಯ ಉದ್ದೇಶಗಳು ಹೀಗಿವೆ.

೧. ಹಿಂದಿನ ಎರಡು ಯೋಜನೆಗಳಲ್ಲಿ ಆರಂಭಿಸಿದ ಅಭಿವೃದ್ಧಿ ಕಾರ್ಯಕ್ರಮ ಪ್ರಯತ್ನಗಳ ವೇಗವನ್ನು ಹೆಚ್ಚಿಸುವುದು.

೨. ಕೈಗಾರಿಕಾ ರಂಗದಲ್ಲಿನ ಬೆಳವಣಿಗೆಗೆ ಅನುಗುಣವಾಗಿ ಕೃಷಿ ಅಭಿವೃದ್ಧಿಯನ್ನು ತೀವ್ರಗೊಳಿಸುವುದು.

೩. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಮಟ್ಟದ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು.

೪. ಮಾಜಿಕ ಮತ್ತು ಆರ್ಥಿಕ ಅಸಮತೋಲನದ ನಿವಾರಣೆಗಾಗಿ ಭೂಸುಧಾರಣೆಯಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.

೫. ಸಾಮಾನವ ಸಂಪನ್ಮೂಲದ ಪೂರ್ಣ ಬಳಕೆಗಾಗಿ ಮಾರ್ಗೋಪಾಯಗಳನ್ನು ಕಂಡುಹಿಡಿಯುವುದು.

೬. ರಾಜ್ಯದಲ್ಲಿ ೬ ರಿಂದ ೧೧ ವಯೋಮಾನದ ಮಕ್ಕಳಿಗೆಲ್ಲ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವುದು.

ಮೂರನೆಯ (೧೯೬೧ – ೧೯೬೬) ಯೋಜನೆಗೆ ನಿಗದಿಪಡಿಸಿದ್ದ ಹಣಕಾಸು ಸಂಪನ್ಮೂಲ ರೂ. ೨೪೬.೨೧ ಕೋಟಿ. ಆದರೆ ಖರ್ಚಾದ ಹಣ ರೂ. ೨೬೪.೧೩ ಕೋಟಿ.

ವಲಯವಾರು ಸಂಪನ್ಮೂಲ ಹಂಚಿಕೆ: ೧೯೫೧೧೯೬೬

ಮೊದಲ ಮೂರು ಯೋಜನೆಗಳ ವಲಯವಾರು ಹಣಕಾಸು ವಿನಿಯೋಗದ ವಿವರಗಳನ್ನು ಕೋಷ್ಟಕ ೧೦, ೧೧ ಮತ್ತು ೧೨ರಲ್ಲಿ ನೀಡಲಾಗಿದೆ. ಕೋಷ್ಟಕದಲ್ಲಿನ ಮೊದಲ ಮೂರು ಬಾಬ್ತುಗಳನ್ನು ‘ಕೃಷಿ’ಯೆಂದು ಪರಿಗಣಿಸಿದರೆ ಅದಕ್ಕೆ ಮೊದಲ ಯೋಜನೆಯಲ್ಲಿ ಮೀಸಲಿಟ್ಟ ಹಣದ ಪ್ರಮಾಣ ಶೇ. ೪೮.೪ ಎರಡನೆಯ ಯೋಜನೆಯಲ್ಲಿ ಅದೇ ಮೂರು ಬಾಬತ್ತುಗಳಿಗೆ ತೆಗೆದಿಟ್ಟ ಹಣದ ಪ್ರಮಾಣ ಶೇ. ೪೩.೬ ಮೂರನೆಯ ಯೋಜನೆಯಲ್ಲಿ ಮೊದಲ ಮೂರು ಬಾಬತ್ತುಗಳಿಗೆ ಪ್ರಮಾಣ ಶೇ. ೪೦.೬. ಇಂಧನ ಮತ್ತು ಸಾರಿಗೆ ಸೇರಿ ಮೂರು ಯೋಜನೆಗಳಲ್ಲಿ ತೆಗೆದಿಟ್ಟ ಹಣದ ಪ್ರಮಾಣ ಕ್ರಮವಾಗಿ ಶೇ. ೩೯.೪, ಶೇ. ೨೫.೭ ಮತ್ತು ಶೇ. ೩೩.೨.

ಒಂದು ರೀತಿಯಲ್ಲಿ ಯೋಜಿತ ಅಭಿವೃದ್ಧಿಗೆ ಅಗತ್ಯವಾದ ಅಡಿಪಾಯವನ್ನು ಮೊದಲೆರಡು ಯೋಜನೆಗಳಲ್ಲಿ ಸಿದ್ಧಪಡಿಸಲಾಯಿತು. ಮೂರನೆಯ ಯೋಜನೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರ್ದಿಷ್ಟ ಉದ್ದೇಶದೊಡನೆ ಅಳವಡಿಸಿಕೊಳ್ಳಲಾಯಿತು. ಆಹಾರ ಉತ್ಪಾದನೆಯು ೧೯೫೬ – ೫೭ರಲ್ಲಿ ೩೩.೩೧ ಲಕ್ಷ ಟನ್ ಇದ್ದುದು ೧೯೬೮ – ೬೯ರಲ್ಲಿ ಅದು ೪೪.೯೪ ಟನ್‌ಗೇರಿತು. ನೀರಾವರಿ ಪ್ರದೇಶದ ವಿಸ್ತೀರ್ಣವು ೧೯೫೬ – ೫೭ರಲ್ಲಿ ೭.೪ ಲಕ್ಷ ಹೆಕ್ಟೇರಷ್ಟಿದ್ದುದು ೧೯೬೬ – ೬೭ರಲ್ಲಿ ಅದು ೧೦.೨೧ ಲಕ್ಷ ಹೆಕ್ಟೇರಿಗೇರಿತು. ಕೈಗಾರಿಕಾ ಕ್ಷೇತ್ರದಲ್ಲಿ ಗಣನೀಯವಾದ ಪ್ರಗತಿ ಸಾಧಿಸಿಕೊಳ್ಳಲಾಯಿತು.