ಆಹಾರ ಪದಾರ್ಥಗಳ ಸಂರಕ್ಷಣೆ ಅನಾದಿಕಾಲದಿಂದಲೂ ಎಲ್ಲೆಡೆ ಒಂದಲ್ಲ ಒಂದು ರೀತಿಯಲ್ಲಿ ಆಚರಣೆಯಲ್ಲಿದೆ. ಅಭಾವದ, ತುರ್ತುಪರಿಸ್ಥಿತಿಯ ಕಾಲದಲ್ಲಿ ತಕ್ಷಣದ ಬಳಕೆಗೆ ಬೇಕಾದ ಪದಾರ್ಥಗಳ ಮಹತ್ವ ಎಲ್ಲರಿಗೂ ತಿಳಿದುದೇ. ಇದರಿಂದಾಗಿಯೇ ಆಹಾರ ಪದಾರ್ಥಗಳ ಮತ್ತು ಹಣ್ಣು ತರಕಾರಿಗಳ ಸಂರಕ್ಷಣೆ ಪ್ರಾಮುಖ್ಯತೆ ಗಳಿಸಿದ್ದು, ಇಂದು ವೈಜ್ಞಾನಿಕವಾಗಿ ಅವುಗಳ ಸಂಸ್ಕರಣೆ ಹಾಗೂ ಸಂರಕ್ಷಣೆ ಒಂದು ಪ್ರತ್ಯೇಕ  ಉದ್ಯಮವಾಗಿಯೇ ಬೆಳೆದಿದೆ. ಸಾಮಾನ್ಯ ಜನತೆಯ ಉಪಯೋಗಕ್ಕೆಂದು ಈ ವಿಚಾರಗಳನ್ನು ಪರಿಚಯಿಸುವ ಪುಸ್ತಕವೊಂದನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಪ್ರಕಟಿಸಿದ್ದು ಅದರ ಕನ್ನಡಾನುವಾದವನ್ನು ೧೯೭೯ರಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಿಂದ ಪ್ರಕಟಿಸಲಾಗಿತ್ತು.

ಈ ಪುಸ್ತಕಗಳು ವಿಚಾರವಂತಿಕೆಯಿಂದ ಕೂಡಿ ಜನಪ್ರಿಯವಾಗಿದ್ದು ಎಲ್ಲ ಪ್ರತಿಗಳೂ ಮುಗಿದುಹೋಗಿದ್ದರಿಂದಾಗಿ, ಇದರ ಪ್ರಾಮುಖ್ಯತೆಯನ್ನು ಪರಿಗಣಿಸಿ ಇದೀಗ ಈ ಪುಸ್ತಕವನ್ನು ಪುನರ್ಮುದ್ರಣ ಮಾಡಿ ಹೊರತರಲಾಗುತ್ತಿದೆ.

ಈ ಪುಸ್ತಕ ಮುಖ್ಯವಾಗಿ ಗೃಹವಿಜ್ಞಾನ, ತೋಟಗಾರಿಕೆ ವಿದ್ಯಾರ್ಥಿಗಳು, ಗೃಹಿಣಿಯರು, ಆಹಾರೋದ್ಯಮಿಗಳು, ವಿಸ್ತರಣಾ ಕಾರ್ಯಕರ್ತರು ಹಾಗೂ ಮತ್ತಿತರ ಆಸಕ್ತರಿಗೆಲ್ಲ ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ. ಬಿ.ಎಸ್. ಸಿದ್ಧರಾಮಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳು
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಬೆಂಗಳೂರು – ೫೬೦ ೦೨೪