ಡಾ. ಚಂದ್ರಶೇಖರ ಕಂಬಾರರ ಮೊದಲ ನಾಟಕ ‘ಋಷ್ಯಶೃಂಗ’ ಮನೋಹರ ಗ್ರಂಥ ಮಾಲೆಯಲ್ಲಿ ೧೯೭೧ರಲ್ಲಿ ಪ್ರಕಟವಾಗಿತ್ತು. ಈಗ ನಾಟಕದ ಪ್ರತಿಗಳೆಲ್ಲ ಮುಗಿದು ಹೋಗಿ ಹಲವು ವರ್ಷಗಳಾದವು. ಡಾ| ಚಂದ್ರಶೇಖರ ಕಂಬಾರರಿಗೆ ಮಧ್ಯಪ್ರದೇಶದ ಪ್ರತಿಷ್ಠಿತ ‘ಕಬೀರ ಸಮ್ಮಾನ’ ದೊರಕಿದ ಸಂದರ್ಭದಲ್ಲಿ ಅವರ ‘ಹದ್ದಿನ ಕಣ್ಣು’ ಮೂರು ಕೃತಿಗಳ ಸಂಗ್ರಹ ಸೇರಿಸಿ ಪ್ರಕಟಿಸುತ್ತಿದ್ದೇವೆ. ಡಾ. ಕಂಬಾರರ ‘ಹೇಳತೇನ ಕೇಳ’ ‘ಋಷ್ಯಶೃಂಗ’ ಹಾಗೂ ‘ಹುಲಿಯ ನೆರಳು’ ಮೂರು ಕೃತಿಗಳು ಒಂದೇ ವಸ್ತುವನ್ನು ಒಳಗೊಂಡವುಗಳು. ಹೀಗಾಗಿ ಅವು ಮೂರನ್ನು ಸೇರಿಸಿ ಒಂದೇ ಸಂಗ್ರಹದಲ್ಲಿ ಪ್ರಕಟಿಸಿದರೆ ಸಾಹಿತ್ಯಾಸಕ್ತರಿಗೆ ಅಭ್ಯಸಿಸಲು ಅನುಕೂಲವಾಗುವದೆಂದು ಭಾವಿಸಿ ಈ ಸಂಗ್ರಹ ಹೊರತರುತ್ತಿದ್ದೇವೆ. ಈ ಗ್ರಂಥವನ್ನು ಪ್ರಕಟಿಸಲು ಅನುಮತಿಯಿತ್ತ ಕಂಬಾರರಿಗೆ, ನಮ್ಮ ವಂದನೆಗಳು.

ರಮಾಕಾಂತ ಜೋಶಿ