ಬ್ರಹ್ಮೋಪದೇಶವಾಯಿತಮ್ಮ | ನಿರ್ಗುಣ ಪರ
ಬ್ರಹ್ಮೋಪದೇಶವಾಯಿತಮ್ಮ |
ಕರ್ಮದ ಕತ್ತಲೆ ಮೂಲವಕೆಡಿಸಿ ನಿರ್ಮಲ ಜ್ಞಾನದ ಜೋತಿಯ
ನಿಲಿಸಿ | ಹಮ್ಮಿನ ತನುಗುಣನೆಲ್ಲವ ಬಿಡಿಸಿದ
ಚಿನ್ಮಯ ರೂಪನು ಗುರುಮುಖದಿಂದ || ಬ್ರಹ್ಮೋ ||

ಗುರುವೇ ಬ್ರಹ್ಮನು ಶ್ರೀವಿಷ್ಣು ಮಹೇಶ್ವರ
ನಿಜಗುರು ದೈವ ವೆಂದಯುತಾ | ಹರುಷದೊಳು ಅಷ್ಟಾಂಗದಿ
ಚತುರ್ವಿದ ಗುರುವಿನ ಸೇವೆಯಗೈಯುತಲಿರಲು
ಪರಿಪರಿ ಸಂಶಯನೆಲ್ಲವ ಬಿಡಿಸಿದ ಚಿನ್ಮಯ
ರೂಪನು ಗುರುಮುಖದಿಂದ || ಬ್ರಹ್ಮೋ ||

ಪುತ್ರಾಕ ಮೇಶ್ರೀ ವೃತದಿಂದ ಉತ್ತಮನಾದನು
ಪಂಚಾಮುದ್ರೆಯಿಡಿಸಿದ ರಹಸ್ಯವಾಗಿ ಷಡಾಕ್ಷರಿ
ಮಂತ್ರವ ಭೋದಿಸಿದ ಪಂಚಾಬ್ರಹ್ಮವ ಕರದೊಳು
ಪೂಜಿಸಿದ ಪಂಚಾಮೃತ ನೈವೇದ್ಯವ ಮೂಡಿಸಿದ
ಪಂಚಸೂತಕವನೆಲ್ಲ ಬಿಡಿಸಿದ
ಸಂಚಿತ ಕರ್ಮವ ನಳಿಸಿದ ಗುರುವು | ಹತ್ತು
ವಿಷಯಾಡಿ ಕೂಡಿರುವ ಈ ಮನಕೆ | ಸತ್ತು
ಚಿತ್ತಾದಂದದೊಳು ಬೆರಸಿ ನಿತ್ಯ ಸುಖಿಯೆಂದು
ಭೋದಿಸಿದ ಸತ್ತು ಹುಟ್ಟುವ ಸಂಕಟಕೆಡಿಸಿ || ಬ್ರಹ್ಮೋ ||

ಮಂತ್ರನ ಪಡೆದರ್ತಿಯಿಂದ | ಉತ್ತಮ ಸ್ವರ್ಗಕೆ
ಪೋಗಲು ಪುನರಪಿ | ಮರ್ತ್ಯಕೆ ಬೀಳುವೆ ಅದರಿಂ
ಸಂಚಿಯೇ | ಸ್ವಾರ್ಥಜ್ಞಾನದ ಸುಪುತ್ರನ ಪಡೆದರೆ
ಮುಕ್ತಿಯು ಲಭಿಸುವುದೆಂದನು ಗುರುವು || ಬ್ರಹ್ಮೋ ||

ಮೃತ್ಯು ಭಯವ ಪರಿಹರಿಸಿದ ಗುರುವು | ಸ್ವಾಮೀ
ರೂಪಿಗೆ ಮೋಹಿಸಿದೆ ಮನದೊಳಗಾತ್ಮರಾಮನು ತಾನೆಂದರಿಯುತ
ತಾಮಸ ಗುಣದೊಳು | ತಾಮಸ ಗುಣದೊಳು ಚರೆಯದಿರೆಂದಿಗು
ಪಾಮರ ಸಂಗವ ಮಾಡದೆ ಸಂತತಿ | ನೇಮದಿ
ಬ್ರಹ್ಮಾನಂದದೊಳ್ ಸುಚಿಸೆಂದು | ಸ್ವಾಮಿ ಶ್ರೀಗುರು
ಮಹಲಿಂಗನರುಪಿದ || ಬ್ರಹ್ಮೋ ||