ಇಬ್ಬರು  ಆಟಗಾರರು ಬೆಕು. ಮೂರು ದೊಡ್ಡ ಕಲ್ಲು ಹರಳು ಆನೆ, ಹದಿಮೂರು ಸಣ್ಣ ಹರಳುಗಳು ನಾಯಿಗಳು. ಅವುಗಳನ್ನು ನೆಲದ ಮೇಲಾಗಲೀ, ಪಾಟಿಯ ಮೇಲಾಗಲೀ ಮೇಲಿನಂತೆ ಮನೆ ಎಳೆದು ಆಯಾ ಸ್ಥಾನದಲ್ಲಿಡಬೇಕು. ಆನೆಗಳನ್ನು ಒಬ್ಬರು ನಾಯಿಗಳನ್ನು ಇನ್ನೊಬ್ಬರು ನಡೆಸಬೇಕು. ಅನೆಯಾಗಲಿ ನಾಯಿಯಾಗಲೀ ತಾವಿರುವ ರೇಖೆಯ ಮೇಲೆಯೇ ನಡೆಯಬೇಕು. ನಾಯಿ ಹಾರಲಾರದು. ಅಂದರೆ ತಾನಿರುವ ಸ್ಥಳದಿಂದ  ಮುರನೆಯ ಸ್ಥಾನಕ್ಕೆ ಹೋಗಲಾರದು. ಆದರೆ ಆನೆ ಹಾರಲೂ ಬಹುದು. ನಡೆಯಲೂ ಬಹುದು. ಆನೆ ಹಾರುವಾಗ ನಡುವೆ ಒಂದಕ್ಕಿಂತ ಹೆಚ್ಚು ಸ್ಥಾನಬಿಟ್ಟು ಹಾರಬಾರದು. ಆನೆ ನಾಯಿಯನ್ನು ಹಾರಿದರೆ ನಾಯಿ ಆನೆಗೆ ಸೇರುತ್ತದೆ. ಆದ್ದರಿಂದ ಆನೆ ನಾಯಿಯನ್ನು ಹಾರಲು ಶಕ್ಯವಾಗದ ರೀತಿಯಲ್ಲಿಟ್ಟು, ಆನೆಯ ದಾರಿಯನ್ನು ಕಟ್ಟಬೇಕು. ಎಲ್ಲ ನ ಆಯಿಗಳು ಆನೆಯ ಪಾಲಾದರೆ ನಾಯಿಯವನೂ  ಆನೆಯ ದಾರಿ ಕಟ್ಟಿದರೆ ಆನೆಯವನೂ ಸೋಲುತ್ತಾನೆ. ಮೇಲಿನ ಚಿತ್ರದಲ್ಲಿ ಆನೆ ಯಾವ ನಾಯಿಯನ್ನೂ ಹಾರಲಾರದು. ’ಆ’ದ ನಾಯಿಯನ್ನು ’ಬ’ಕ್ಕೆ ಸರಿಸಿದರೆ ಆನೆ ’ಬ’ದಲ್ಲಿಯ ನಾಯಿಯನ್ನು ಹಾರಿ ’ಆ’ಕ್ಕೆ  ಹೋಗುವದು.