ತನ್ನ ಯಾವುದೇ  ಮನೆಯ ಹರಳೆತ್ತಿ (ಮುರಿದು) ಒಂದೊಂದನ್ನೇ ಒಂದೊಂದು ಮನೆ (ಕುಳಿ)ಯೊಳಗೆ ಇಡುತ್ತ ಎಡದಿಂದ ಬಲಕ್ಕೆ (ಅಪ್ರದಕ್ಷಿಣವಾಗಿ)ಸಾಗಬೇಕು. ಹರಳು ಮುಗದ ಮನೆಯ ಹರಳನ್ನೆಲ್ಲ ಎತ್ತಿ, ಮುಂದೆ ಸಾಗಬೇಕು. ಹೀಗೆ ಆಡುತ್ತ ಖಾಲಿ ಮನೆಗೆ ಹೋದಾಗ ಒಂದೇ ಹರಳು ಕೈಯಲ್ಲಿದ್ದರೆ ಖಾಲಿ ಮನೆಯಲ್ಲಿ ಆ ಹರಳಿಟ್ಟು ಆಟ ಬಿಡಬೇಕು. ಆಡುವಾಗ ಮೂರು ಹರಳಿದ್ದರೆ ಖಾಲಿ ಮನೆಯಲ್ಲಿ ಆ ಹರಳಿಟ್ಟು ಆಟ ಬಿಡಬೇಕು. ಆಡುವಾಗ ಮುರು ಹರಳಿದ್ದಲ್ಲಿ ನಾಲ್ಕನೆಯ ಹರಳು ಹಾಕಿದರೆ ಅದಕ್ಕೆ ’ಕರು’ ಎನ್ನುವರು. ಕರ ಯಾರ ಮನೆಯಲ್ಲಿದ್ದರೂ ಎತ್ತಿಕೊಳ್ಳಬಹುದು. ಆದರೆ ಕರು ಆದಾಗ ಕೈಯಲ್ಲಿ ಹರಳಿಲ್ಲದಿದ್ದರೆ ಕರುವನ್ನೆತ್ತಿಕೊಂಡು ಮುಂದಿನವನಿಗೆ ಆಟ ಕೊಡಬೆಕು. ಒಂದೆ ಸವನೆ ಹರಳು ಹಾಕುವ  ಗಡಿಬಿಡಿಯಲ್ಲಿ ಕರು ಅದದ್ದನ್ನು ಎತ್ತಿಕೊಳ್ಳದೆ ಇನ್ನೊಂದು ಹರಳು ಹಾಕಿಬಿಟ್ಟರೆ ’ಕರು’ ಕೊಳೆತು ಹೋಗುತ್ತದೆ. ಇದನ್ನು ಯಾರೂ ಎತ್ತಿಕೊಳ್ಳಬಾರದು. ಕರು ಆದದ್ದನ್ನು ನೋಡಿಯೂ ಎದುರಾಳಿ ಸುಮ್ಮನಿದ್ದುಬಿಡುವನು. ಎಲ್ಲ ಹರಳು ಮುಗದ ಮೇಲೆ  ತಮ್ಮ ತಮ್ಮ ಮನೆಗಳಿಗೆ ಹರಳು ತುಂಬುವರು. ಕಡಿಮೆ ಕರುವನ್ನು ಪಡೆದವನ ಮನೆ ಹಾಗೆಯೇ ಉಳಿಯುವುದು. ಮುಂದಿನ ಆಟದಲ್ಲಿ ಹೆಚ್ಚು ಕರು ಪಡೆದರೆ ಬಿಟ್ಟ ಮನೆಗಳನ್ನು ಸೇರಿಸಿಕೊಳ್ಳಬಹುದು.