ಕರು ಬರುವ ಆಟದಂತೆಯೇ ಇದನ್ನು ಆಡುತ್ತಾರೆ. ಆದರೆ ಇಲ್ಲಿ ಹರಳು ಮುಗಿದ ಮನೆ ಬಿಟ್ಟು ಮುಂದಿನ ಮನೆಯ ಹರಳು ಎತ್ತಿಕೊಳ್ಳಬೇಕು. ಹರಳೆತ್ತಿದ ಮನೆಯಲ್ಲಿ ಒಂದು ಹರಳಾದಾಗ ಒಕ್ಕಳ್ಳು, ಎರಡಾದಾಗ ಇಕ್ಕಳ್ಳು, ಮೂರಾದಾಗ ಮುಕ್ಕಳ್ಳು, ನಾಲ್ಕಾದಾಗ ’ತಾರಾ’ ಎನ್ನುವರು. ಯಾರ ಮನೆಯಲ್ಲಿ ತಾರ ಅದು ಆಡುವವನು ಎತ್ತಿಕೊಳ್ಲಬೆಕು. ನಾಲ್ಕಕ್ಕಿಂತ ಹೆಚ್ಚು ಹರಳಾದರೆ ಅದು ಕೊಳೆತು ಹೋಗುತ್ತದೆ. ಒಂದೇ ಮನೆಯಲ್ಲಿ ಹರಳು ರಾಶಿಯಾಗಿ ಕಾಣುತ್ತಿದ್ದರೆ, ‘ಹೆಗ್ಗಣ ಗುತ್ರಿ’ ಎನ್ನುವರು. ಹರಳು ಮುಗಿದ ಮನೆಯಾಚೆ ಖಾಲಿ ಇದ್ದರೆ ಆಟ ಬಿಡಬೇಕು. ತಾರಾ ಎತ್ತಿಕೊಂಡು ಕೈಯಲ್ಲಿ ಹರಳಿದ್ದರೆ ಮಾತ್ರ ಮುಂದುವರಿಸಬಹುದು.

ಆಟ ಮುಗಿದ ಮೇಲೆ ನಾಲ್ಕು ನಾಲ್ಕರಂತೆ ಕಾಳು ಹಾಕಿ ಮನೆ ತುಂಬುವರು. ಇಬ್ಬರ ಕಾಳು ಸರಿಯಾದರೆ ಸುರ್ಮನೆ ಎನ್ನುವರು. ಹೆಚ್ಚು ಗೆದ್ದವರು ಪೋಕಿಣಿ (ದಿವಾಣಿ)ಯಾದವರಿಗೆ ಕಾಳು ಕೊಡುವರು. ಇನ್ನೊಮ್ಮೆ ಆಟ ಪ್ರಾರಂಭ