ಎಂಟು ಹತ್ತು ಬೇರೆ ಬೇರೆ ಬಣ್ಣದ ಬಳೆಯ ತುಂಡುಗಳು ಕವಡೆ ಅತವಾ ಕಲ್ಲುಹರಳುಗಳು ಈ ಆಟಕ್ಕೆ ಸಾಕು, ಬಳೆಯ ಓಡು (ತುಂಡು)ಗಳಾದರೆ ’ದೇವರನ್ನು” ನೆನಪಿಟ್ಟುಕೊಳ್ಳುವುದು ಸುಲಭ.

ಆಟಗಾರ್ತಿಯರು ವರ್ತುಳಾಕಾರವಾಗಿ ಕುಳಿತುಕೊಳ್ಳುವರು. ಅವರಲ್ಲೊಬ್ಬಳು ಬಳೆ ಓಡುಗಳನ್ನು ಅಂಗೈಯಲ್ಲಿಟ್ಟು ತುಸು ಮೇಲಕ್ಕೆ ಹಾರಿಸಿ, ಬೆಂಗಯಯಲ್ಲಿ ಹಿಡಿಯುವಳು. ಆಗ ಸಮೀಪದಲ್ಲಿದ್ದ ಆಟಗಾರ್ತಿ ಬೆಂಗೈ ಮೇಲಿದ್ದ  ಬಳಿ ಓಡುಗಳಲ್ಲೊಂದನ್ನು ತೋರಿಸಿ ಅದನ್ನು ’ದೇವರು’ ಎಂದು ಕರೆಯುವಳು. ಆಗ ಆಡುತ್ತಿರುವವಳು ದೇವರನ್ನೊಂದನ್ನು ಮಾತ್ರ ಬೆಂಗೈ ಮೇಲೆಯೇ ಇರಗೊಟ್ಟು ಬೆರಳುಗಳನ್ನು ತುಸು ಅಗಲಿಸಿಯೋ ಬೆಂಗಯಯನ್ನು ತುಸು ತುಸು ಅತ್ತಿತ್ತ ಎತ್ತಿಯೋ ಉಳಿದೆಲ್ಲ ಬಳೆ ಓಡುಗಳನ್ನು ನೆಲಕ್ಕೆ ಬೀಳಿಸುವಳು. ಆ ಸ್ಥಿತಿಯಲ್ಲಿಯೇ ಅಂದರೆ ದೇವರು ಬೆಂಗೈ ಮೇಲೆ ಇರುವಗಲೇ ಸಾವಾಕಾಶವಾಗಿ ನೆಲಕ್ಕೆ  ಬೀಳಿಸಿದ ಬಳೆಯ ಓಡುಗಳನ್ನು ಅದೇ ಕೈಯಿಂದ  ಒಂದೊಂದಾಗಿ ಹೆಕ್ಕಿ ಎಡಗೈ ಯಲ್ಲಿಟ್ಟುಕೊಳ್ಳಬೇಕು. ಹೀಗೆ ಎಲ್ಲಾ ಓಡುಗಳನ್ನು ಹೆಕ್ಕಿಕೊಂಡಾದಮೇಲೆ  ‘ದೇವರು ’ಆಡಿದವಳ ಆಸ್ತಿಯಾಗುತ್ತದೆ. ಮತ್ತೆ ಮರು ಆಟ ಮೇಲಿನಂತೆಯೇ ಪ್ರಾರಂಭವಾಗುತ್ತದೆ.

ದೇವರನ್ನು ಬೆಂಗಯ ಮೇಲೆ ಇಟ್ಟು ಊಳಿದ ಓಡುಗಳನ್ನು ಕೆಳಕ್ಕೆ ಬೀಳಿಸುವಾಗ, ಅಥವಾ ಬೀಳಿಸಿದವುಗಳನ್ನು ಹೆಕ್ಕುವಾಗ, ದೇವರು ಕೆಳಕ್ಕೆ ಬಿದ್ದರೆ ಆಡುವವಳು ಸೋತಳು. ಸೋತವಳ ನಂತರ ಅವಳ ಎಡಕ್ಕೆ ಇರುವವಳು ಆಟ ಆರಂಭಿಸುತ್ತಾಳೆ. ಗೆದ್ದ ‘ದೇವರು’ಗಳು ಮಾತ್ರ ಅವರವರ ಹತ್ತರವೇ ಇರುತ್ತವೆ. ಗೆದ್ದ ದೇವರ ಸಂಖ್ಯೆಯಿಂದಲ್ಲೇ ಆಟಗಾರರ ಪಾಂಡಿತ್ಯವನ್ನು ಅಳೆಯುವರು. ಆಡುವಾಗ ಜಾಣ್ಮೆ, ತಾಳ್ಮೆಗಳೆರಡೂ ಬೇಕು.