ಇಬ್ಬರು ಆಟಗಾರರು : ಎರಡು ಬಗೆಯ  ಕಾಳು ಬೇಕು. ಅವು ಪ್ರತಿಯೊಬ್ಬನಿಗೆ ಒಂಬತ್ತು ಇರಬೇಕು. ಕಾಳಿನ ಬದಲಿಗೆ ಕಡ್ಡಿ, ಕಲ್ಲು ಚೂರುಗಳನ್ನೂ ಉಪಯೋಗಿಸಬಹುದು. ಒಬ್ಬನ ಹತ್ತರ ಒಂದು ಬಗೆಯ ವಸ್ತು, ಇನ್ನೊಬ್ಬನ ಹತ್ತರ ಇನ್ನೊಂದು ಬಗೆಯ ವಸ್ತು ಇರುತ್ತದೆ. ಒಬ್ಬರ ನಂತರ ಇನ್ನೊಬ್ಬನು ಆಟವಾಡಬೇಕು. ಪ್ರತಿಯೊಬ್ಬನ್ನು ತನ್ನ ಮೂರು ಕಾಳು ಒಂದೇ ಸಾಲಿನಲ್ಲಿ ಬರುವಂತೆ ಪ್ರಯತ್ನಿಸುತ್ತಾನೆ ಹಾಗೂ ಇನ್ನೊಬ್ಬನ ಕಾಳು ಒಂದೇ ಸಾಲಿನಲ್ಲಿ ಬರದಂತೆ ತನ್ನಕಾಳೊಂದನ್ನು ಜೋಡಿಸಿ ಬಿಡುತ್ತಾನೆ. ಕಾಳನ್ನು ಒಂದೇ ಸಾಲಿನಲ್ಲಿ ತಂದವರು ಪಗ್ಗ ಗೆದ್ದಂತೆ. ಮುರು ಕಾಳಿನ ಜಾಣ್ಮೆಯಿಂದ ಎತ್ತಿಕೊಳ್ಳುತ್ತಾರೆ. ತಮ್ಮ ಕಯಯಲ್ಲಿಯ ಕಾಳು ತೀರುವ ವರೆಗೆ ಮನೆಯ ಕಾಳುನ್ನು ನಡೆಸಬಾರದು. ಕೈಯಲ್ಲಿದ್ದ ಕಾಳುಗಳೆಲ್ಲ ತೀರಿದ ಮೇಲೆ ಮನೆಯ ಕಾಳುಗಳನ್ನು ನಡೆಸಬೇಕು. ಕಾಳು ಮನೆಯಿಂದ ಮನೆಗೆ ನಡೆಯಬೇಕು. ಒಮ್ಮೆಲೆ ಎರಡು ಮನೆ ನಡೆಯಬಾರದು.. ಬೇರೆಯವರ ಕಾಳನ್ನು ಹಾರಬಾರದು, ಹೊಡೆಯ ಬಾರದು. ಗೆರೆಯ ಮೇಲೆಯೇ ಚಲಿಸಬೇಕು. ಪಗ್ಗವಾದ ಕಾಳುಗಳನ್ನು ಎತ್ತಿಕೊಳ್ಳಬಾರದು. ಚೌಕದ ಮೂಲೆಗಳು ಹಾಗೂ ನಾಲ್ಕು ಕಂಬಗಳು ಕೂಡಿದ ಸ್ಥಳಗಳು ಮನೆಗಳಾಗಿವೆ. ಒಟ್ಟಿಗೆ ೨೪ ಮನೆಗಳಿವೆ. ೧೬ ಪಗ್ಗದ ಸಾಲುಗಳಿವೆ. ಪಗ್ಗ ಮಾಡಿದವರಿಗೆ ಆಡಲು ಇನ್ನೊಂದು ಅವಕಾಶವಿರುತ್ತದೆ. ಒಂದೊಂದೇ ಮನೆಯನ್ನು ದಾಟುತ್ತ ಕಂಬದ ಮೂಲದ ಕೆಳಗಿನ ಸಾಲಿನ ಕಾಳು ಮೇಲೇರಬಹುದು. ತನ್ನ ಕಾಳನ್ನು ಚಲಿಸಲಾಗದಂತೆ ಬೇರೆಯವರ ಕಾಳುಗಳು ಇದ್ದರೆ ಆಟ ಬಿಡಬೇಕು.