ಚಿತ್ರ ೧ ರಂತೆ ಯಾವುದಾದರೊಂದು ರೀತಿಯಲ್ಲಿ ನೆಲದ ಮೇಲೆ ಮನೆ ತಯಾರಿಸಿ ಕೊಳ್ಳಬೇಕು. ಪಾಟಿಯನ್ನು ಉಪಯೋಗಿಸುವುದೇ ಹೆಚ್ಚು, ಇಬ್ಬರೂ ಆಟಗಾರರು ತಮಗೆ ಬೇಕಾದದ್ದೊಂದು ಚಿಹ್ನೆಯನ್ನು ಆರಿಸಿಕೊಳ್ಳಬೇಕು. ಒಬ್ಬರ ನಮತರ ಇನ್ನೊಬ್ಬರು ಚಿಹ್ನೆ ಹಾಕಬೇಕು. ಒಬ್ಬನು ಇನ್ನೊಬ್ಬನ ಚಿಹ್ನೆಗಳು ಒಂದೇ ಸಾಲಿನಲ್ಲಿ ಬರದಂತೆಯೂ, ತನ್ನ ಚಿಹ್ನೆಗಳು ಒಂದೇ ಸಾಲಿನಲ್ಲಿ ಬರುವಂತೆಯೂ ನೋಡಿಕೊಳ್ಳುತ್ತಾನೆ. ಒಂದೇ ಸರಳರೇಖೆಯ ಮೇಲೆ  ಮೂರು ಚಿಹ್ನೆಗಳು ಬಂದರೆ ಆ ಚಿಹ್ನೆಯವನಿಗೆ ಒಂದು ಅಂಕ ದೊರೆಯಿತು. ಹೀಗೆ ಹೆಚ್ಚು ರೇಖೆಗಳನ್ನು ಎಳೆಯಲು ಸಾಧ್ಯವಾದವನು ಗೆಲ್ಲುತ್ತಾನೆ. ಎರಡು ಚಿನ್ನೆಗಳ ಬದಲಿಗೆ ಎರಡು ಬಗೆಯ ಹರಳುಗಳನ್ನು ಉಪಯೋಗಿಸಿಯೂ ಈ ಆಟ ಆಡುವುದುಂಟು