ಇದು ಜಿಬ್ಬಿ ಆಟದ ಒಂದು ಭಾಗ. ಇಷ್ಟನ್ನೇ ಒಂದು ಆಟಬಾಗಿ ಆಡುತ್ತಾರೆ. ನಾಲ್ಕು ಚಿಪ್ಪಿಗಳು, ಚಿಪ್ಪಿಗಳನ್ನು ಕೆಳಕ್ಕೆ ಚೆಲ್ಲಿದಾಗ ನಾಲ್ಕು ಚಿಪ್ಪಿಗಳು ಮೇಲ್ಮುಖವಾಗಿ ಬಿದ್ದರೆ ನಾಲ್ಕು ಅಂಕ. ಕೆಳಮುಖವಾಗಿ ಬಿದ್ದರೆ ಎಂಟು. ಒಂದು ಕವಚಿ ಬಿದ್ದರೆ ಮುಕ್ಕುಂಜಿ (ಚಿ) : ಆಟ ಹೋಯಿತು. ಎರಡು ಕವಚಿ ಎರಡು ಹದಾರನೆ ಬಿದ್ದರೆ ಜಿಬ್ಬಿ ಆಟದಂತೆ ಒಂದಕ್ಕೆ ಇನ್ನೊಂದು ಹೊಡೆದು ಅಂಕ ಗಳಿಸಬೇಕು. ಒಂದು ಹಂಡಿಗೆ ಎಷ್ಟು ಅಂಕ ಎಂಬುವದನ್ನು ಮೊದಲೇ ನಿರ್ಧರಿಸಿಕೊಳ್ಳುತ್ತಾರೆ. ಪ್ರತಿ ಆಟದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸುತ್ತ ಹಂಡಿ ಆಗುವವರೆಗೆ ಆಡುತ್ತಾರೆ.