ತಾರಾತಿಂಬಾಟದಂತೆಯೇ ಈ ಆಟ. ಆದರೆ ಪ್ರತಿಯೊಬ್ಬನೂ ತನ್ನ ಬದಿಯ ಮೂಲೆಯಿಂದ ಹರಳು ಮುರಿದು (ಎತ್ತಿ) ಆಡಬೇಕು. ಇಬ್ಬರೂ ತಮ್ಮ ತಮ್ಮ ಮೂಲೆಯಿಂದಲೂ ಒಂದೇ ಬಾರಿಗೆ ಆಟ ಪ್ರಾರಂಭಿಸಲೂ ಬಹುದು. ಮೂಲೆಯಲ್ಲಿ ನಾಲ್ಕು ಹರಳು ಮಾಡಿದಾಗ ಅದು ಇನ್ನೊಬ್ಬನ ಮನೆಯಾದರೂ ಆಟಗಾರನಿಗೆ ಸಲ್ಲುತ್ತದೆ. ಅದಕ್ಕೆ ಕಟ್ಟಿದ ಮನೆಯೆನ್ನುತ್ತಾರೆ. ಕಟ್ಟಿದ ಮನೆಗೆ ಯಾರೂ ಹರಳು ಹಾಕಬಾರದು, ಮುರಿಯಬಾರದು, ಹೀಗೆ ನಾಲ್ಕೂ ಮೂಲೆಗಳಲ್ಲಿ ಮನೆ ಕಟ್ಟುವ ವರೆಗೆ ಆಟ ಮುಂದುವರಿಯುತ್ತದೆ. ಹೆಚ್ಚು ಮನೆ ಕಟ್ಟಿದವನು ಗೆಲ್ಲುತ್ತಾನೆ.