ಇದನ್ನು ಗುಲಗಂಜಿ ಅಥವಾ ಚೆನ್ನೆಕಾಳಿನಿಂದ ಆಡಬಹುದು. ಪ್ರತಿಯೊಬ್ಬರು ಸರಿ ಸರಿ ಕಾಳನ್ನು ಅಂಗಿಯಲ್ಲಿ ಮುಚ್ಚಿಟ್ಟುಕೊಂಡಿರುತ್ತಾರೆ. ಆಟ ಪ್ರಾರಂಭವಾದ ಮೇಲೆ ಒಬ್ಬೊಬ್ಬರಾಗಿ ತಮ್ಮ ಅಂಗಿಯಲ್ಲಿ ಎರಡೂ ಕೈ ಮುಚ್ಚಿಕೊಂಡು, ಒಂದೊಂದು ಮುಷ್ಟಿಯಲ್ಲಿ ತಮಗೆ ಇಷ್ಟ ಕಂಡಷ್ಟು ಕಾಳು ಹಿಡಿದು ಎದುರಾಳಿಯ ಮುಂದೆ ಕತ್ತರಿಯಾಗಿ ಕೈ ಹಿಡಿದುಕೊಂಡು ಸರ‍್ಯೋ ಮಿಗ್ಲೋ ಕೇಳುತ್ತಾರೆ. ಎರಡೂ ಕೈಯೊಳಗಿನ ಕಾಳುಗಳ ಮೊತ್ತ ಎದುರಾಳಿ ಹೇಳಿದಂತೆ ಇದ್ದರೆ ಆ ಕಾಳನ್ನು ಎದುರಾಲಿಗೆ ಬಿಟ್ಟು ಕೊಡಬೇಕು. ಎದುರಾಳಿ ತಪ್ಪು ಹೇಳಿದರೆ ಕೈಯಲ್ಲಿರುವ ಕಾಳಿನಷ್ಟೇ ಕಾಳನ್ನು ತನ್ನ ಅಂಗಿಯಿಂದ ತೆಗೆದು ಆಡಿದವನಿಗೆ ಕೊಡಬೇಕು. ನಂತರ ಎದುರಾಳಿ ಕೇಳುವವನಾಗುತ್ತಾನೆ. ಹೀಗೆ ಆಡುತ್ತ ಹೆಚ್ಚು ಕಾಳು ಪಡೆದವನೇ ಗೆದ್ದಂತೆ.