ಮೂಲೆಯ ನಾಲ್ಕು ಮನೆಗಳಿಗೆ ಕಟ್ಟೆ ಎನ್ನುವರು. ಪ್ರತಿ ಮನೆಯಲ್ಲಿಯೂ ನಾಲ್ಕು ನಾಲ್ಕು ಹರಳು ಹಾಕುವರು. ಕಟ್ಟಿಯಿಂದಲೇ ಆಟ ಪ್ರಾರಂಭಿಸುವದು ಹೆಚ್ಚು ರೂಢಿ, ಹರಳು ಎತಿ ಇಡುತ್ತಾ ಹೋದಂತೆ ಎತ್ತಿದ ಮೂಲೆಮನೆಯಲ್ಲಿ ನಾಲ್ಕು ಹರಳಾದಾಗ ಕಟ್ಟೆ ಕಟ್ಟಿದಂತಾಯ್ತು. ಇನ್ನೊಬ್ನ ಮೂಲೆ ಮನೆಯಲ್ಲೂ ಕಟ್ಟೆಯನ್ನು ಕಟ್ಟಬಹುದು. ಕೈಯಲ್ಲಿ ಹರಳಿದ್ದರೆ  ಮಾತ್ರ ಆಟ ಮುಂದುವರಿಸಿಕೊಂಡು ಹೋಗಬೇಕು. ಹರಳು ಮುಗದ ಮನೆಯ ಹರಳನ್ನೇ ಎತ್ತಬೇಕು. ನಡುವೆ ಕರುವಾದರೆ ಎತ್ತಿಕೊಳ್ಳಬಾರದು. ಆಡುವವನು ತಾನು ಕಟ್ಟಿದ ಕಟ್ಟೆಗೂ ಹರಳು ಹಾಕುವನು. ಎದುರಾಳಿ ಹಾಕುವುದಿಲ್ಲ. ತಪ್ಪಿ ಹಾಕಿದರೆ ಪ್ರತಿ ಸುತ್ತಿನಲ್ಲಿಯೂ ಆ ಕಟ್ಟಚೇಮನೆಗೆ ಹರಳು ಹಾಕಬೇಕು. ಹರಳುಗಳೆಲ್ಲ ಕಟ್ಟೆಯಲ್ಲಿ ರಾಶಿಯಾಗುವವು. ತಮ್ಮ ತಮ್ಮ  ರಾಶಿಗಳಿಂದ ಹರಳು ತೆಗೆದು ತಮ್ಮ ಮನೆಗೆ ಹಾಕುವರು. ಇಬ್ಬರ ಹರಳು ಅವರ ಎಲ್ಲ ಮನೆಗೂ ಸರಿಯಾದರೆ ಆಟ ಮೊದಲಿನಂತೆ ಮುಂದುವರಿಸುವರು. ಒಬ್ಬನಿಗೆ ಕೆಲವು ಮನೆಗಳಿಗೆ ಹರಳು ಕಡಿಮೆಯಾದರೆ ಆ ಮನೆಗಳನ್ನು ಬಿಟ್ಟು ಆಡುವರು. ಒಬ್ಬನ ಹತ್ತರ ಎರಡು ಹರಳು  ಹೆಚ್ಚಿದ್ದರೆ ಇನ್ನೊಬ್ಬನ ಹತ್ತರವೂ ಎರಡು ಹೆಚ್ಚಿರ ಬೇಕಾಯಿತಷ್ಟೇ ! “ಆ ನಾಲ್ಕು  ಹರಳನ್ನು ಒಬ್ಬನು ತೆಗೆದುಕೊಂಡು ಒಂದರಲ್ಲಿ  ಮೂರು, ಇನ್ನೊಂದರಲ್ಲಿ ಒಂದು ಹಿಡಿದು ಕತ್ತರಿಯಾಗಿ ಕೈಹಿಡಿದು, ಇನ್ನೊಬ್ಬನ ಹತ್ತರ ಯಾವುದು ಬೇಕು ಎಂದು ಕೇಳಿವನು. ಆಗ ಒಂದು ಇದ್ದ ಕೈಯನ್ನು  ಆರಿಸಿಕೊಂಡವನು ಸೀನ್ಯಾ ; ಮತ್ತೊಬ್ಬ ಮುಕ್ಯಾ ಆಗುತ್ತಾನೆ. ಮೊದಲೇ ಒಬ್ಬನಿಗೆ ಒಂದು ಇನ್ನೊಬ್ಬನಿಗೆ ಮುರು ಬರುವುದೂ ಇದೆ. ಮುಕ್ಕಯಾ ಬಂದವನು ತನ್ನ ಒಂದು ಮನೆಯಲ್ಲಿ ಅದನ್ನಿಟ್ಟುಕೊಳ್ಳುತ್ತಾನೆ.  ಮುಕ್ಯಾ ಇಡಲು ಸ್ಥಳವಿಲ್ಲದಿದ್ದರೆ ಒಂದು ಮನೆಯ ಹರಳನ್ನು ತೆಗೆದು ಬದಿಯಲ್ಲಿ ಕಾದಿರಿಸಿಕೊಳ್ಳುತ್ತಾನೆ. ’ಮುಕ್ಯಾವನ್ನು ಕಟ್ಟೆಯಲ್ಲಿಡಬಾರದು. ಮನೆಯ ಮಧ್ಯದಲ್ಲಿದ್ದರೂ ’ಮುಕ್ಯಾ’ ಅವನ ಪಾಲಿಗೆ ಒಂದು ಕಟ್ಟಯಿದ್ದಂತೆ, ಎದುರಿನವ ’ಮುಕ್ಯಾ’ನಿಗೆ ಹರಳು  ಹಾಕಬಾರದು. ಒಂದು ವೇಳೆ ಹಾಕಿದರೆ ಪ್ರತಿ ಸುತ್ತಿನಲ್ಲಿಯೂ ಹರಳು ಹಾಕಬೇಕು. ಸೀನ್ಯಾ ಇದ್ದವನು ಹರಳನ್ನು ಎತ್ತಿಕೊಳ್ಳುವಾಗ (ಮುರಿಯುವಾಗ) ಒಂದು ಹರಳನ್ನು ತನ್ನಲ್ಲಿಟ್ಟುಕೊಳ್ಳುತ್ತಾನೆ. ಹೀಗಾಗಿ ಸೀನ್ಯಾ  ಇದ್ದವನಿಗೆ ಬೇಗನೆ ಹರಳು ಸಂಗ್ರಹ ಬೆಳೆಯುತ್ತದೆ.  ಕರು ಬರುವ ಆಟದಂತೆಯೆ ಇಲ್ಲಿಯೂ ಆಟ ಬಿಡುವ ನಿಯಮವಿರುತ್ತದೆ.