ಶಾಲೆಯಾಟದಂತೆ ‘ಐದ್ಹಳ್ಹಿಡಿಯಾಕ’ದಿಂದ ನಾಲ್ಕ್ಹಳ್ಳಿಡಿಯಾಕದವರೆಗೆ ಆಡಬೇಕು.

ಕೋಳ್ಗಂಬ:

ಶಾಲೆಯಾಟದ ಮೇಲಿನ ಹೊಜ್ಯದಂತೆ, ನಂತರ ನಾಲ್ಕು ಹರಳು ಬದಿಗಿರಿಸಿ ಒಂದೇ ಹರಳಿನಿಂದ ಆಡಬೇಕು.

ತಿರ್ಪ್ಯಾ:

ಶಾಲೆಯಾಟದ ಮೇಲಿನ ತಿರ್ಪ್ಯಾದಂತೆಯೇ ಈ ಆಟ. ಆದರೆ ಇಲ್ಲಿ ಒಂದೇ ಹರಳು ಸಾಕು.

ದಪ್ಯಾ:

ಒಂದು ಹರಳನ್ನು ಮೇಲೆ ಹಾರಿಸಿ, ಅಂಗೈಯನ್ನು  ನೆಲಕ್ಕೆ ಅಪ್ಪಳಿಸಿ ಹಾರಿಸಿದ ಹರಳನ್ನು ಹಿಡಿಯಬೇಕು

ಅಪ್ಪಪ್ :

ಮೇಲಿನಂತೆಯೇ ಅಂಗೈಯನ್ನು ಕೆಳಗೆ ಎರಡು ಸಾರೆ ಬಡಿದು ಹಾರಿಸಿದ ಹರಳನ್ನು ಹಿಡಿಯಬೇಕು.

ಅಂಗಳ ಗುಡಿಸುವುದು:

ಬೆರಳನ್ನು ಹಿಡಿಯಂತೆ ಮಾಡಿ, ಗುಡಿಸಿದಂತೆ ನಟಿಸುತ್ತ ಹಾರಿಸಿದ ಹರಳನ್ನು ಹಿಡಿಯುವುದು.

ಹೀಗೆಯೇ ಕೃಷಿಕರ ಮನೆಯಲ್ಲಿ ಮುಂಜಾನೆ ಮಾಡುವ ಕೆಲಸಗಳನ್ನೆಲ್ಲ ನಟಿಸುತ್ತ ಆಡುತ್ತಾರೆ. ಅವುಗಳಲ್ಲಿ ಕೆಲಸವನ್ನು ಹೆಸರಿಸಬಹುದು. ಬಟ್ಟಲ ತಿಕ್ಕುವದು, ಒಲೆ ಬೂದಿ ತೆಗೆಯುವದು, ದನ ಬಿಡುವದು, ಹುಲ್ಲು ಕೊಯ್ಯುವದು, ಸೊಪ್ಪು ಕೊಯ್ಯುವದು, ಸೊಪ್ಪುಕೊಯ್ಯುವದು, ಸೊಪ್ಪು ಹರಗುವದು ಇತ್ಯಾದಿ, ಕೊನೆಗೆ ಒಂದು ಹರಳಿನಿಂದಲೇ ೨೫ ಅಥವಾ ೫೦ ತಿರ್ಪ್ಯಾ ಆಡಿ ಆಟ ಮುಗಿಸುವರು. ಹರಲು ಬಿದ್ದರೆ ಒಂದಕ್ಕೊಂದು ತಾಗಿದರೆ ಆಟ ಬಿಡಬೇಕು. ಶಾಲೆಯಾಟಕ್ಕಿಂತ ಸುಲಭವಾದ್ದರಿಂದ ಈ ಹಳ್ಳಾಟವನ್ನು ಆಟ ಕಲಿಯುವ ಮಕ್ಕಳು ಆಡುತ್ತಾರೆ.

ಊರಿಗೊಂದು, ಜಾತಿಗೊಂದೊಂದು  ಬಗೆಯ ಆಟಗಳಿದ್ದು ಪಾಠಾಂತರಗಳೊಂದಿಗೆ ಇಂತಹ ಆಟಗಳು ಸಾಕಷ್ಟು ದೊರೆಯುತ್ತವೆ.