ಇಬ್ಬರು ಆಟಗಾರರು. ಒಬ್ಬನಿಗೆ ಎರಡು ಹುಲಿ. ಇನ್ನೊಬ್ಬನಿಗೆ ಇಪ್ಪತ್ತನಾಲ್ಕೂ ಕವಿಲೆಗಳು. ನೆಲದ ಮೇಲೆ ಮನೆ ಎಳೆದು ನಡುವೆ ಒಂದು ಹುಲಿ ಇಡಬೇಕು. ಅದರ ಸುತ್ತ ಎಂಟು ಕವಿಲೆಗಳು. ಇನ್ನೊಂದು ಹುಲಿಯನ್ನು  ಬೇಕಾದಲ್ಲಿ ಇಡಬಹುದು. ಇಷ್ಟಾದ ಮೇಲೆ ಹುಲಿಯನ್ನು ಹಾರಿಸಬೇಕು. ಹುಲಿ ಕವಿಲೆಗಳನ್ನು ತಿಂದಂತೆ ಒಂದೊಂದೇ ಕವಿಲೆ ಒಳಗೆ ಬರುತ್ತದೆ. ಹೊರಗಿನ ಕವಿಲೆಗಳೆಲ್ಲ ಒಳಗೆ ಬಂದಮೇಲೆ ಒಳಗಿನ ಕವಿಲೆಗಳನ್ನೇ ನಡೆಸಬೇಕು.

ಹುಲಿ ಹಾರಬಹುದು. ನಡೆಯಬಹುದು, ಆದರೆ ಕವಿಲೆ ನಡೆಯಬೇಕು ಹಾರಬಾರದು. ಹುಲಿ ಹಾರಲು ಕವಿಲೆಯ ಆಚೆಯ ಸ್ಥಾನ ಖಾಲಿಯಾಗಿರಬೇಕು. ಹುಲಿ ಕವಿಲೆಗಳ ನಡುವೆ ಒಂದೋ ಎರಡೋ ಮನೆ ಖಾಲಿಯಿದ್ದರೆ ಹುಲಿ ನಡೆದು ಕವಿಲೆಯ ಸಮೀಪ ಬರುತ್ತದೆ. ಎರಡು ಕವಿಲೆಗಳನ್ನು ಹುಲಿ ಹಾರಲಾರದು. ಅ,ಬ,ಕ,ಡ ಇವು ಕೊಟ್ಟಿಗೆಗಳು  ಇಲ್ಲಿ ಹುಲಿಯನ್ನು ಬಂಧಿಸಬಹುದು. ಒಂದು ಹುಲಿ  ಬಂಧಿತವಾದರೆ ಇನ್ನೊಂದು ಸಹಾಯಕ್ಕೆ ಬರುತ್ತದೆ. ಬಿಡುಗಡೆಗೆ ಪ್ರಯತ್ನಿಸುತ್ತದೆ. ಒಂದೇ ಹುಲಿಯನ್ನು ಅನುಕ್ರಮವಾಗಿ ಮೂರಕ್ಕಿಂತ ಹೆಚ್ಚು ಸಾರೆ ಉಪಯೋಗಿಸಕೂಡದು.