ಆಟವೆಲ್ಲ ಮೇಲಿನಂತೆಯೇ ತಾರಾ ತಿನ್ನುವುದು ಇದರಲ್ಲಿದೆ. ಹೆಗ್ಗೆ ತಿಂಬಾಟದಲ್ಲಿ ಹರಳು ಮುಗದ ಮುಂದಿನ ಮನೆ ಖಾಲಿಯಿದ್ದರೆ ಖಾಲಿ ಮನೆಯ ಮುಂದಿನ ಮನೆ ಹಾಗೂ ಅದರ ಎದುರಿನ ಮನೆಗಳಲ್ಲಿಯ ಕಾಳನ್ನು ಎತ್ತಿ ಇಟ್ಟುಕೊಳ್ಳಬೇಕು. ಹೆಗ್ಗೆಯ ಮನೆಗಳಲ್ಲಿ  ಒಂದು ಆಟಗಾರನ ಮನೆ; ಇನ್ನೊಂದು ಎದುರಾಳಿಯ ಮನೆ. ಹೆಗ್ಗೆ ತಿಂದರೆ ಆಟ ಬಿಡಬೇಕು. ನಡುವೆ ಎರಡು ಮನೆ ಖಾಲಿಯಿದ್ದರೆ ಆಟ ಬಿಡಬೇಕು ಹೆಗ್ಗೆ ಇಲ್ಲ.